ನಮಗೆ ನಿಮಗೆ ಗೊತ್ತೇ ಇರುವಂತಹ ವಿಚಾರ ಏನಪ್ಪಾ ಅಂದರೆ ಈ ಕೊಳವೆ ಬಾವಿಗಳು ಅದರಲ್ಲೂ ಹಳ್ಳಿ ಕಡೆ, ಕೊಳವೆ ಬಾವಿಯನ್ನು ತೆಗೆದು ಅದನ್ನು ಮುಚ್ಚದೆ ಕೆಲವೊಬ್ಬರು ಹೋಗುತ್ತಾರೆ, ಇದರಿಂದ ಆಗುವಂತಹ ಹಲವಾರು ಅಪಘಾತಗಳು ಪ್ರದೇಶಗಳಲ್ಲಿ ನೋಡುತ್ತೇವೆ ಹಾಗೂ ಟಿವಿ ಚಾನೆಲ್ ಗಳಲ್ಲಿ ದಿನನಿತ್ಯ ನೋಡುತ್ತೇವೆ.
ಏಕೆಂದರೆ ಕೊಳವೆ ಬಾವಿಗಳು ಸಾವಿನ ಮನೆ ಆಗುತ್ತಾ ಇದೆ ತೆರೆದ ಕೊಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಆಚನಕ್ಕ್ಕಾಗಿ ಬೀಳುವುದು ಸಹಜ ಆಗೋಗಿದೆ. ಮಕ್ಕಳು ಕೊಳವೆಬಾವಿಗಳ ಒಳಗಡೆ ಹೋಗಿ ಸಿಕ್ಕಿಹಾಕಿಕೊಂಡು ವಂತಹ ಅವಕಾಶ ತುಂಬಾ ಇರುತ್ತದೆ. ಬನ್ನಿ ಇವತ್ತು ನಾವು ಒಂದು ಮಗು ಅರವತ್ತು ಅಡಿ ಕೊಳವೆ ಬಾವಿಯಾ ಒಳಗೆ ಬಿದ್ದು ಬದುಕಿಬಂದ ಒಂದು ವಿಚಿತ್ರವಾದ ಘಟನೆಯ ನಾನು ನಿಮಗೆ ಹೇಳುತ್ತೇನೆ.
ನಿಜವಾಗಲೂ ನಾವು ಘಟನೆ ನೆನಪಿಸಿಕೊಂಡರೆ ನಿಜವಾಗಲೂ ಒಂದು ಸಾರಿ ನಮ್ಮ ಮೈತುಂಬ ಜುಮ್ ಅಂತ ಆಗುತ್ತದೆ, ಏಕೆಂದರೆ ನಮ್ಮ ದೇಶದಲ್ಲಿ ಎಷ್ಟು ಸಾವಿರಾರು ಕಂದಮ್ಮಗಳು ಈ ಕೊಳವೆ ಬಾವಿಗಳ ಒಳಗಡೆ ಸಿಕ್ಕಿಹಾಕಿಕೊಂಡು ಎಷ್ಟು ಜನ ಬದುಕಿ ಬಂದಿದೆ ಹಾಗೂ ಕೆಲವೊಂದು ಚಿಕ್ಕ ಚಿಕ್ಕ ಮಕ್ಕಳು ಸಾವನ್ನಪ್ಪಿವೆ.
ಆದರೆ ಹರಿಯಾಣದಲ್ಲಿ ಇರುವಂತಹ ಒಂದು ಜಿಲ್ಲೆಯಲ್ಲಿ 18 ತಿಂಗಳ ಒಂದು ಮಗು ಕೊಳವೆಬಾವಿಯಲ್ಲಿ ಬಿದ್ದು ವಿಚಿತ್ರವಾದ ರೂಪದಲ್ಲಿಯೇ ಬದುಕಿ ಬಂದಿರುವಂತಹ ಒಂದು ಘಟನೆ ನಾವು ನೋಡುತ್ತಾ ಇದ್ದೇವೆ. ಈ ಮಗುವಿನ ತಂದೆ ಅಜೀಮ್ ಕಾಂ ಇವರು ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಅಂತಹ ಸಂದರ್ಭದಲ್ಲಿ ತಮ್ಮ ಮಗು ಅಂಬೆಗಾಲು ಇಡುತ್ತ ಕೊಳವೆಬಾವಿಗಳ ಒಳಗಡೆ ಹೋಗಿ ಸಿಕ್ಕಿ ಹಾಕಿಕೊಂಡು ಬಿಡುತ್ತೆ. ಆದರೆ ಇದನ್ನು ನೋಡುವುದಕ್ಕೆ ಅವರಪ್ಪ ಇರುವುದಿಲ್ಲ ಇದನ್ನು ಹೇಗೆ ಅಲ್ಲಿ ಹತ್ತಿರ ಇರುವಂತಹ ಜನರು ಈ ವಿಷಯವನ್ನ ಅಲ್ಲಿನ ಪೊಲೀಸರಿಗೆ ತಿಳಿಸಿದ್ದಾರೆ.
ಹೀಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬಂದು ಆ ಮಗು ಬಿದ್ದಂತಹ ಕೊಳವೆಬಾವಿಯನ್ನು ವಿಚಾರಣೆ ಮಾಡಿ ಹಾಗೂ ಕೊಳವೆ ಬಾವಿಯಲ್ಲಿ ಮಗು ಇನ್ನು ಬದುಕಿದೆಯಾ ಎನ್ನುವಂತಹ ಸುಳಿವನ್ನು ಪಡೆದಂತಹ ಅಗ್ನಿಶಾಮಕದಳದವರು, ಮಗು ಇನ್ನೂ ಬದುಕಿದೆ ಎನ್ನುವಂತಹ ವಿಚಾರವನ್ನು ಖಾತ್ರಿ ಪಡಿಸುತ್ತಾರೆ.
ಆದರೆ 60 ಅಡಿ ಕೊಳವೆ ಬಾವಿಯಿಂದ ಆ ಮಗುವನ್ನು ತಗೆಯುವುದು ಹೇಗ ಒಂದು ದೊಡ್ಡದಾದ ಸವಾಲು. ಅವರು ಮೊದಲು ಕೃತಕವಾಗಿ ಆಕ್ಸಿಜನ್ ಅನ್ನು ಕೊಳವೆ ಬಾವಿ ಒಳಗಡೆ ಬಿಡುತ್ತಾರೆ. ಹೀಗೆ ಈ ಮಗುವನ್ನು ಹೇಗೆ ಕಾಪಾಡಬೇಕು ಎನ್ನುವಂತಹ ಒಂದು ಪ್ಲ್ಯಾನಿಂಗ್ ನಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ವಿಶ್ಲೇಷಣೆ ಮಾಡುತ್ತಾರೆ.
ಇದಾದ ಬಳಿಕ ಅಗ್ನಿಶಾಮಕ ದಳದವರು ಕೊಳವೆ ಬಾವಿ ಇರುವಂತ ಎಪ್ಪತ್ತು ಎರಡು ಅಡಿಗಳ ಅಂತರದಲ್ಲಿ ದೊಡ್ಡದಾಗಿ ನೆಲವನ್ನು ಅಗೆಯಲು ಶುರು ಮಾಡುತ್ತಾರೆ, ಹೀಗೆ 48 ಗಂಟೆಗಳ ಕಾಲ ಸತತವಾಗಿ ನೆಲವನ್ನು ಅಗೆದು ಆ ಮಗುವನ್ನು ಕೊನೆಯದಾಗಿ ಅಗ್ನಿಶಾಮಕದಳದವರು ಹಾಗೂ ಪೊಲೀಸರು ಕಾಪಾಡುತ್ತಾರೆ.
ಹೀಗೆ ಅಗ್ನಿಶಾಮಕದಳದವರು ಹೊರ ತೆಗೆದಂತಹ ಆ ಮಗುವನ್ನು ವೈದ್ಯರ ತಪಾಸಣೆಗೆ ಕಳಿಸಿದ್ದು ವೈದ್ಯರು ಸದ್ಯಕ್ಕೆ ಯಾವುದೇ ರೀತಿಯ ಪ್ರಾಬ್ಲಮ್ ಇಲ್ಲ ಎನ್ನುವಂತಹ ವಿಚಾರವನ್ನು ಅವರ ಅಪ್ಪ ಹಾಗೂ ಅವರ ಮನೆಯವರಿಗೆ ಹೇಳಿದ್ದಾರೆ. ಕೆಲವೊಂದು ಬಾರಿ ನಮ್ಮ ಕಣ್ಣೆದುರೇ ಘಟನೆ ಒಂದು ಪವಾಡ ತರದ ಕೆಲವೊಂದು ಘಟನೆಗಳು ನಡೆದು ಹೋಗುತ್ತವೆ. ನಿಮಗೆ ಎಲ್ಲಾದರೂ ಕೊಳವೆ ಬಾವಿ ಕಾಣಿಸಿದರೆ ಮೇಲಿನ ಭಾಗ ಕಲ್ಲಿನಿಂದ ಮುಚ್ಚಿರಿ ಅಥವ ಸಂಭಂಧ ಪಟ್ಟ ವ್ಯಕ್ತಿಗಳಿಗೆ ಕೊಡಲೇ ತಿಳಿಸಿ ಒಂದು ಜೀವ ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ. ನಿಮಗೇನಾದರೂ ಈ ಲೇಖನವನ್ನು ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.