43 ದೇವಸ್ಥಾನಗಳು ಒಂದು ಜಾಗದಲ್ಲಿ ಇದೆಯಂತೆ !!! ನಿಮಗೆ ಆಶ್ಚರ್ಯವಾದರೂ ಇದು ಸತ್ಯ !! ಇದರ ಕ್ಷೇತ್ರ ಇರುವುದು ನಮ್ಮ ರಾಜ್ಯದಲ್ಲಿ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ ….

285

ನಮ್ಮ ಕರ್ನಾಟಕದ ರಾಜ್ಯದಲ್ಲಿ ಇರುವಂತಹ ಮಂಡ್ಯ ಜಿಲ್ಲೆಯಲ್ಲಿ ಈ ತರದ ಒಂದು ದೇವಸ್ಥಾನ ನೀವು ಕಾಣಬಹುದು, ಈ ದೇವಸ್ಥಾನದಲ್ಲಿ ಬರೋಬ್ಬರಿ 43 ದೇವಸ್ಥಾನಗಳು ಇವೆ ಎಂದು  ಹೇಳಬಹುದು. ಈ ಸ್ಥಳವನ್ನು ಹೊಯ್ಸಳ ಕಾಲದಲ್ಲಿ ಕಟ್ಟಲಾಗಿದೆ ಎಂದು ನಂಬಿಕೆ ಇದೆ. ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಅದರ ಸಂಪೂರ್ಣ ಮಾಹಿತಿಯನ್ನು ನೀವು ಮುಂದೆ ಓದಿ ತಿಳಿದುಕೊಳ್ಳಿ.

ಈ ತರದ ದೇವ ಸ್ಥಾನ ಇರುವುದು ಮೇಲುಕೋಟೆಯಲ್ಲಿ , ಕರ್ನಾಟಕ ರಾಜ್ಯದ ಪಾಂಡವಪುರ ತಾಲೂಕಿನ ಒಂದು ಹಳ್ಳಿ ಇದು ಇವಾಗ ಒಂದು ಪ್ರಸಿದ್ಧವಾದ ಯಾತ್ರ ಸ್ಥಳಗಳಾಗಿ ಮಾಡಲಾಗಿದೆ. ಮೇಲುಕೋಟೆಯಿಂದ ಕೇವಲ 32 ಕಿಲೋ ಮೀಟರ್ ದೂರದಲ್ಲಿ ಇರುವಂತಹ ಇದು ಒಂದು ವೈಷ್ಣವ ಪಂಥದ ಒಂದು ಕ್ಷೇತ್ರವಾಗಿದೆ. ಇಲ್ಲಿರುವ ಈ ಬೆಟ್ಟದ ಮೇಲೆ ಯೋಗ ನರಸಿಂಹ ಸ್ವಾಮಿ ದೇವಸ್ಥಾನವಿದೆ.ಹಾಗೆ ಈ ಹಳ್ಳಿಯು ಕೂಡ ಸಂಸ್ಕೃತವನ್ನು ಹೇಳಿಕೊಳ್ಳುವಂತಹ ಒಂದು ಪಾಠ ಶಾಲೆ  ಕೂಡ ಆಗಿದೆ.

ನಿಮಗ ಆಶ್ಚರ್ಯವಾಗುವುದು ಈ ದೇವಸ್ಥಾನದಲ್ಲಿ ಬರೋಬ್ಬರಿ 43 ದೇವಸ್ಥಾನಗಳು ಹಾಕಿಕೊಂಡಿವೆ, ಈ ಮೇಲುಕೋಟೆಯ ಪ್ರದೇಶದಲ್ಲಿ ಇರುವಂತಹ 43 ದೇವಸ್ಥಾನಗಳಿಂದ ಪ್ರದೇಶ ಅತಿ ಹೆಚ್ಚು ಪ್ರಖ್ಯಾತಿಯನ್ನು ಹೊಂದಿದೆ. ನೀವು ಯಾವ ಯಾವ ದೇವಸ್ಥಾನಗಳು ಈ ಪ್ರದೇಶದಲ್ಲಿ ಇದೆ ಎನ್ನುವುದಕ್ಕೆ ಉತ್ತರ, ಚೆಲುವನಾರಾಯಣ ಸ್ವಾಮಿ ದೇವಸ್ಥಾನ, ಯೋಗನರಸಿಂಹ ದೇವಸ್ಥಾನ, ಬದರಿ ನಾರಾಯಣ ಸ್ವಾಮಿ ದೇವಸ್ಥಾನ, ಶಾಂಡಿಲ್ಯ ದೇವಸ್ಥಾನ, ಕುಲದೇವರ ದೇವಸ್ಥಾನ,  ಜಿಎಸ್ ದೇವಸ್ಥಾನ , ವೇದಾಂತದೇಶಿಕರ ದೇವಸ್ಥಾನ, ಕೇಶವ ದೇವರ ದೇವಸ್ಥಾನ, ಮಾರಮ್ಮನ ಸನ್ನಿಧಿ, ಕಂಜೀವರಂ ಸನ್ನಿಧಿ, ತಿರುಮಂಗೈ ಸನ್ನಿ, ಪೇಟೆ ಕೃಷ್ಣದೇವರ ಸನ್ನಿಧಿ, ಪೇಟೆ ಆಂಜನೇಯ ಸನ್ನಿಧಿ, ಸೀತಾ ಅರಣ್ಯ ಕ್ಷೇತ್ರ, ವೆಂಕಟೇಶ್ವರ ಗುಡಿ , ಅಹೋಬಲ ನರಸಿಂಹ ಸ್ವಾಮಿ ದೇವಸ್ಥಾನ, ಆದಿಶೇಷ ದೇವಸ್ಥಾನ, ಪಂಚ ಭಾಗವತ ದೇವಸ್ಥಾನ, ಪರಕಾಲ ಮಠ, ಕರಣಿಕ ನಾರಾಯಣ ದೇವಸ್ಥಾನ, ವರಾಹ ದೇವಸ್ಥಾನ, ಬಿಂದು ಮಾಧವ ದೇವಸ್ಥಾನ, ಹನುಮಾನ್ ದೇವಾಲಯ, ಹಯಗ್ರಿವ ದೇವಾಲಯ, ಲಕ್ಷ್ಮೀನಾರಾಯಣ ಸನ್ನಿಧಿ, ದತ್ತ ನಾರಾಯಣ ಗುಡಿ, ವರಸಿದ್ಧಿ ವಿನಾಯಕ ಗುಡಿ, ನಯನ ಕ್ಷೇತ್ರ, ಶನೇಶ್ವರ ಗುಡಿ, ಕವಿಗಳ ಆಂಜನೇಯನ ಗುಡಿ, ಕರ ಮೆಟ್ಟಿಲು ಆಂಜನೇಯನ ಗುಡಿ , ಮೂಡಬಾಗಿಲು ಆಂಜನೇಯನ ಗುಡಿ, ರಾಯರು ಗೋಪಾಲ ಆಂಜನೇಯನ ಗುಡಿ, ಶ್ರೀನಿವಾಸ ದೇವಾಲಯ, ಸುಗ್ರೀವ ದೇವಸ್ಥಾನ, ಕಾಳಮ್ಮನ ಗುಡಿ, ಗರುಡ ದೇವರ ಗುಡಿ, ಅಕ್ಕ-ತಂಗಿಯರ ಹೊಂಡ, ಹೊರ ತಮ್ಮ ನ ಗುಡಿ, ಶಿವನ ಗುಡಿ ಉಳ್ಳಿ ಬಾವಿ. ಹೀಗೆ 43 ದೇವಸ್ಥಾನಗಳು ಈ ಮೇಲುಕೋಟೆಯಲ್ಲಿ ಇವೆ.

ಅದೇ ಈ ಮೇಲುಕೋಟೆಯಲ್ಲಿ ಪ್ರಸಿದ್ಧ ಕವಿ ಪುತಿನ ಅವರು ಕೂಡ ಇಲ್ಲೇ ಹುಟ್ಟಿದ್ದು. ಈ ಲೇಖನ ನಿಮಗೇನಾದರೂ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿ. ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅದರ ಮೇಲೆ ನಿಮಗೆ ಕಾಣಿಸುತ್ತಿರುವ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮಗೆ ಪ್ರೋತ್ಸಾಹ ನೀಡಿ.

LEAVE A REPLY

Please enter your comment!
Please enter your name here