ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ, ಅದರಂತೆಯೇ ಬೆಂಗಳೂರಿನಲ್ಲಿಯೂ ಸಹ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು ಮೈತ್ರಿಯನ್ನು ರಚಿಸಿಕೊಂಡು ಅಧಿಕಾರದ ಗದ್ದುಗೆ ಏರಿದ್ದಾರೆ. ಕೇವಲ ಕೆಲವು ದಿನಗಳ ಹಿಂದಷ್ಟೇ 180 ಕೋಟಿ ಹಗರಣ ಹೊರಗಡೆ ಬಂದಿತ್ತು, ಆ ಕಪ್ಪು ಚುಕ್ಕೆ ಮಾಸುವ ಮುನ್ನವೇ ಈಗ ಮೈತ್ರಿ ಸರ್ಕಾರದ 300 ಕೋಟಿ ಹಗರಣ ಹೊರಗೆ ಬಂದಿದೆ.

ರಾಜ್ಯ ಹೈಕೋರ್ಟಿನ ಬಳಿ ಚೀಮಾರಿ ಹಾಕಿಸಿಕೊಂಡಿದ್ದ ಕಂಪನಿಗೆ 180 ಕೋಟಿ ಟೆಂಡರ್ ಕೊಟ್ಟು ವಿವಾದ ಸೃಷ್ಟಿ ಮಾಡಿ ಕೊಂಡಿದ್ದ ಮೈತ್ರಿ ಸರ್ಕಾರವು ದಾಖಲೆಗಳ ಸಮೇತ ಈಗ 300 ಕೋಟಿ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಇಷ್ಟೆಲ್ಲಾ ಹೊರಗಡೆ ಬರುತ್ತಿದ್ದರು ಕುಮಾರಸ್ವಾಮಿರವರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಅಷ್ಟಕ್ಕೂ ಆ ಹಗರಣವೇನು ಗೊತ್ತಾ?

ಬಿಬಿಎಂಪಿ ವಿವಿಧ ವಿಭಾಗಗಳಲ್ಲಿ ಒಟ್ಟು 300 ಕೋಟಿ ಹಣ ಲೂಟಿ ಮಾಡಿದ್ದಾರೆ ನಮ್ಮ ಮೈತ್ರಿ ಸರ್ಕಾರದ ನಾಯಕರು. ಅದರ ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ, 40 ಲಕ್ಷ ರೂ ಮೇವಿನ ವೆಚ್ಚಕ್ಕೆ ಯಾವುದೇ ಬಿಲ್ ನೀಡದೆ ಖರ್ಚು ಮಾಡಲಾಗಿದೆ, 7 ಇಲಾಖೆಗಳಿಂದ ಬರೋಬ್ಬರಿ ನಾಲ್ಕು ಕೋಟಿ ತೆರಿಗೆ ಬಾಕಿ ಉಳಿದಿದೆ.

ಇಷ್ಟೇ ಅಲ್ಲದೆ ತೆರಿಗೆ ವಸೂಲಿ ಮಾಡುವಲ್ಲಿ ಹಲವಾರು ವಿಭಾಗಗಳಲ್ಲಿ ಕಡಿಮೆ ಹಣವನ್ನು ವಸೂಲಿ ಮಾಡಲಾಗಿದೆ. ಥಣಿಸಂದ್ರ ಉಪವಿಭಾಗದಲ್ಲಿ 79 ಕೋಟಿ ಕಡಿಮೆ ಹಣವನ್ನು ವಸೂಲಿ ಮಾಡಲಾಗಿತ್ತು, 42 ಕೋಟಿ ಕೆಂಗೇರಿ ಉಪ ವಿಭಾಗದಲ್ಲಿ, 66 ಕೋಟಿ ಮಾರತಳ್ಳಿ ವಿಭಾಗದಲ್ಲಿ, 31ಕೋಟಿ ಮಹದೇವಪುರ ವಿಭಾಗದಲ್ಲಿ ಮತ್ತು 19 ಕೋಟಿ ರಾಜರಾಜೇಶ್ವರಿ ನಗರದಲ್ಲಿ. ಹೀಗೆ ಹಲವಾರು ವಿಭಾಗಗಳಲ್ಲಿ ಕಡಿಮೆ ತೆರಿಗೆ ವಸೂಲಿಯನ್ನು ಮೈತ್ರಿ ಸರ್ಕಾರವು ಮಾಡಿದೆ.

ತೆರಿಗೆ ಹಣ ವಸೂಲಿ ಮಾಡಿಲ್ಲ ಎಂದರೆ ಪರವಾಗಿಲ್ಲ ಆದರೆ ವಸೂಲಿ ಮಾಡಿ ಸಹ ಕಡಿಮೆ ಹಣವನ್ನು ವಸೂಲಿ ಮಾಡಿರುವುದರಿಂದ ಇದರಲ್ಲಿ ಅಧಿಕಾರಿಗಳ ಕೈವಾಡವಿದೆ ಎಂದು ಬಿಜೆಪಿ ಪಕ್ಷವು ಆರೋಪಿಸಿದ್ದು ದಾಖಲೆಗಳ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದೆ.

Leave a Reply

Your email address will not be published. Required fields are marked *

%d bloggers like this: