ಯಾದಗಿರಿ ಜಿಲ್ಲೆಯಲ್ಲಿ ಇರುವಂತಹ ಈ ಮುನ್ನೂರು ವರ್ಷ ರೋಚಕ ಇತಿಹಾಸ ಉಳ್ಳಂತಹ ಈ ಪ್ರಸಿದ್ಧ ಕ್ಷೇತ್ರ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ 300 ವರ್ಷಗಳ ಇತಿಹಾಸವಿದ್ದು.
ಇಲ್ಲಿ ಕರ್ನಾಟಕ ಮಾತ್ರವೇ ಅಲ್ಲ ಹಲವಾರು ಬೇರೆ ರಾಜ್ಯಗಳಿಂದ ಜನರು ಕೂಡ ಬರುತ್ತಾರೆ ಅದರಲ್ಲೂ ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ತುಂಬಾ ಜನರು ಇಲ್ಲಿಗೆ ಬಂದು ಶ್ರೀ ವೇಣುಗೋಪಾಲ ಸ್ವಾಮಿ ಅವರ ದರ್ಶನವನ್ನು ಮಾಡಿ ಕೊಂಡು ಹೋಗುತ್ತಾರೆ.
ಪುರಾಣದ ಪ್ರಕಾರ ಸುರಪುರದಲ್ಲಿ ಇರುವಂತಹ ಶ್ರೀ ವೇಣುಗೋಪಾಲ ಸ್ವಾಮಿ ಹಾಗೂ ಶ್ರೀ ತಿರುಮಲ ಸ್ವಾಮಿ ತಿರುಪತಿಯಲ್ಲಿ ಇರುವಂತಹ ಶ್ರೀವೇಣುಗೋಪಾಲಸ್ವಾಮಿ ಸಂಬಂಧ ಇದೆ ಎಂದು ಪುರಾಣಗಳು ತ್ತವೆ. ಪುರಾಣದ ಪ್ರಕಾರ ತಿರುಪತಿಯನ್ನು ಕಟ್ಟಿಸಿದಂತ ಅರಸರು ಇಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಇರುವಂತಹ ಶ್ರೀ ವೇಣುಗೋಪಾಲ ಸ್ವಾಮಿಯ ದೇವಸ್ಥಾನ ಕಟ್ಟಿಸಿದ್ದಾರೆ ಎಂದು ಕೆಲವು ಉಲ್ಲೇಖಗಳು ಇವೆ.
ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನವನ್ನು 1972 ರಲ್ಲಿ ನಿರ್ಮಿಸಲಾಗಿದ್ದು. ಈ ದೇವಸ್ಥಾನದ ಕಟ್ಟಿಸುವುದಕ್ಕೆ ಒಂದು ರೋಚಕ ದ ಇತಿಹಾಸದ ಹಿನ್ನೆಲೆ ಇದೆ. ಬಿಜಾಪುರ ನಾಯಕರಾದಂತಹ ಪೀತಾಂಬರ ಎನ್ನುವ ರಾಜನಿಗೆ ಬಾದಶಾ ಎನ್ನುವ ಆ ರಾಜನಿಂದ ಜೀವ ಬೆದರಿಕೆ ಇರುತ್ತದೆ. ಒಂದು ದಿನ ಬಾದಶಾ ಎನ್ನುವ ನಿ ರಾಜನಿಂದ ಪೀತಾಂಬರ ಎನ್ನುವ ರಾಜನಿಗೆ ಕರೆ ಬರುತ್ತದೆ ಅವನನ್ನು ಭೇಟಿಯಾಗುವುದಕ್ಕೆ ಹೇಳುತ್ತಾರೆ.
ಆದರೆ ಪೀತಾಂಬರ ರಾಜನ ಪತ್ನಿಯು ಇದರಿಂದ ಭಯಭೀತಗೊಂಡು. ಶ್ರೀ ವೇಣುಗೋಪಾಲ ಸ್ವಾಮಿಯ ಮೊರೆಯನ್ನು ಹೋಗುತ್ತಾಳೆ, ನನ್ನ ಗಂಡ ಪೀತಾಂಬರ ರಾಜನ ಬಾಷಾ ಅವರನ್ನು ಭೇಟಿ ಮಾಡಿ ಮನೆಗೆ ವಾಪಸ್ ಆದರೆ ನಾನು ನಿನಗೆ ದೇವಸ್ಥಾನ ಕಟ್ಟಿಸುತ್ತೇನೆ ಎನ್ನುವ ಹರಕೆಯನ್ನು ಮಾಡಿಕೊಳ್ಳುತ್ತಾಳೆ.
ಹೀಗೆ ಬಾದಶ ಎನ್ನುವ ರಾಜನನ್ನು ಭೇಟಿ ಮಾಡಿ ಬಿಜಾಪುರದ ನಾಯಕ ಪೀತಾಂಬರ ವಾಪಸಾದಾಗ, ಅವನ ಹೆಂಡತಿ ಅವಳು ಮಾಡಿಕೊಂಡಿರುವ ಹರಕೆಯ ಪ್ರಕಾರ ಶ್ರೀ ವೇಣುಗೋಪಾಲ ಸ್ವಾಮಿಯ ದೇವಸ್ಥಾನ ವನ್ನು ಕಟ್ಟಿಸುತ್ತಾರೆ ಎನ್ನುವ ಉಲ್ಲೇಖ ಕೂಡ ಆ ಪುರಾಣದಲ್ಲಿ ನೋಡಬಹುದಾಗಿದೆ.
ಈ ದೇವಸ್ಥಾನದಲ್ಲಿ ಶಿಲ್ಪಕಲೆಗಳನ್ನು ಚೆನ್ನಾಗಿ ಕೆತ್ತನೆ ಮಾಡಲಾಗಿದ್ದು ನಿಜವಾಗಲೂ ಅದನ್ನು ನೋಡುವುದಕ್ಕೆ ನಿಮ್ಮ ಕಣ್ಣು ತುಂಬಿಕೊಳ್ಳುತ್ತ, ಈ ದೇವಸ್ಥಾನದಲ್ಲಿ ಇನ್ನೊಂದು ವಿಶೇಷತೆ ಏನಪ್ಪಾ ಅಂದರೆ ಈ ದೇವಸ್ಥಾನದ ಶಿಲೆಗಳಲ್ಲಿ ಕೆತ್ತನೆಗೆ ಅತಿ ಹೆಚ್ಚು ಕ್ರೀಡೆಗೆ ಸಂಬಂಧಪಟ್ಟಿದ್ದು ಎಲ್ಲಾ ಶಿಲೆಗಳಲ್ಲಿ ಕ್ರೀಡೆಯ ಕುರಿತಾಗಿ ಇರುವಂತಹ ಕೆತ್ತನೆ ನೋಡಬಹುದಾಗಿದೆ,
ಇಲ್ಲಿಗೆ ಬರುವಂತಹ ಜನರು ಸಂತಾನ ಉದ್ಯೋಗ ಹಾಗೂ ವ್ಯವಹಾರ ಕುರಿತಾದಂತಹ ತೊಂದರೆಯನ್ನು ಇಟ್ಟುಕೊಂಡು ಇಲ್ಲಿಗೆ ಬರುತ್ತಾರೆ ಹಾಗೆ ಬಂದಂತಹ ಜನರು ಶ್ರೀ ವೇಣುಗೋಪಾಲ ಸ್ವಾಮಿಯ ಹತ್ತಿರ ಹರಕೆಯನ್ನು ಮಾಡಿಕೊಳ್ಳುತ್ತಾರೆ. ಬೇಡಿ ಬಂದಂತಹ ಭಕ್ತರಿಗೆ ಕಾಮಧೇನುವಾಗಿ ಶ್ರೀ ವೇಣುಗೋಪಾಲ ಸ್ವಾಮಿ ಇವಾಗಲು ಕೂಡ ಅವರ ಇಷ್ಟಾರ್ಥಗಳನ್ನು ನೆರವೇರಿಸುತ್ತಿದ್ದಾರೆ.
ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ, ಇದನ್ನು ಶೇರ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ .