23 ದಿನ ಕೊರೆಯುವ ಚಳಿಯಲ್ಲಿ ಈ ನಾಯಿ ತನ್ನ ಯಜಮಾನನಿಗಾಗಿ ಮಾಡಿದ್ದೇನು ಗೊತ್ತಾ…

187

ಸಾಮಾನ್ಯವಾಗಿ ಜೀವನದಲ್ಲಿ ವ್ಯಕ್ತಿಗಳು ವ್ಯಕ್ತಿಯನ್ನೇ ನಂಬುವುದು ಕಷ್ಟ ಆದರೆ ಹೆಚ್ಚಾಗಿ ವ್ಯಕ್ತಿಗಳು ಈಗಿನ ಕಾಲದಲ್ಲಿ ಪ್ರಾಣಿಗಳನ್ನು ನಂಬುತ್ತಾರೆ ಅದರಲ್ಲೂ ಕೂಡ ನಾಯಿಯನ್ನು ನಂಬುತ್ತಾರೆ ನಿಷ್ಠೆಗೆ ನಿಯತ್ತಿಗೆ ಮತ್ತೊಂದು ಹೆಸರು ನಾಯಿ ಎಂಬುದು ಎಲ್ಲರಿಗೂ ತಿಳಿದಿದೆ.

ಅಂಥದ್ದೇ ಒಂದು ಪ್ರಮುಖವಾದ ಘಟನೆಯನ್ನು ಈ ದಿನ ನಾನು ನಿಮಗೆ ನಾಯಿಯ ಬಗ್ಗೆ ತಿಳಿಸಿಕೊಡುತ್ತೇನೆ ಈ ಘಟನೆ ನಡೆದಿರುವುದು ಅರ್ಜೆಂಟೈನಾ ದೇಶದಲ್ಲಿ ಈ ಅರ್ಜೆಂಟೈನಾ ದೇಶದಲ್ಲಿ ಬರ್ನಾಡ್ ಲೆನಿಡಾನ್ ಎಂಬ ಒಬ್ಬ ವ್ಯಕ್ತಿಯು ಅವರ ಮನೆಯಲ್ಲಿ ಡೆಲರೇ ಜರ್ಮನ್ ಶಫರ್ಡ್ ಎಂಬ ನಾಯಿಯನ್ನು ಸಾಕಿರುತ್ತಾರೆ ಅವರು ಆ ನಾಯಿಯನ್ನು ತುಂಬಾ ಮುದ್ದಾಗಿ ಸಾಕಿರುತ್ತಾರೆ.

ನಾಯಿಯನ್ನು ಮುದ್ದಾಗಿ ಸಾಕಿದ್ದಾರೆ ಎಂಬುದರ ಜೊತೆಗೆ ನಾಯಿ ಎಂದರೇನೇ ನಿಯತ್ತಿಗೆ ಹೆಸರು ಈ ನಾಯಿ ಮಾಡಿರುವ ಕೆಲಸ ಏನು ಗೊತ್ತೇ ಈ ಬರ್ನಾಡ್ ಲೆನಿಡಾನ್ ಫ್ಯಾಮಿಲಿ ಅವರೆಲ್ಲಾ ಸೇರಿ ಜುಲೈ ತಿಂಗಳ ಮಧ್ಯದ ದಿನಗಳಲ್ಲಿ ಅವರ ಸಹೋದರನ ಮನೆಗೆ ತೆರಳಲು ಅರ್ಜೆಂಟೈನಾದ ದಕ್ಷಿಣ ಪ್ರದೇಶಕ್ಕೆ ತೆರಳುತ್ತಾರೆ.

ತೆರಳುತ್ತಿರುವಾಗ ಹಿಮ ಹೆಚ್ಚಾಗಿ ಅದರ ಜೊತೆಯಲ್ಲಿ ಬಿರುಗಾಳಿಯೂ ಹೆಚ್ಚಾಗಿ ಅವರ ಕಾರು ಹಿಮಪಾತಕ್ಕೆ ಸಿಲುಕುತ್ತದೆ ಅದಾದ ನಂತರ ಹೇಗೋ ಬರ್ನಾಡ್ ಅವರು ಅದರಿಂದ ತಪ್ಪಿಸಿಕೊಂಡು ಬರುತ್ತಾರೆ ಅವರ ಜೊತೆಯಲ್ಲಿ ಟೇಲರ್ ಜರ್ಮನ್ ಶಫರ್ಡ್ ಕೂಡ ತಪ್ಪಿಸಿಕೊಂಡು ಬರುತ್ತದೆ ಹೇಗಾದರೂ ಮಾಡಿ ತಮ್ಮ ಕುಟುಂಬದ ಸದಸ್ಯರಾದ ಹೆಂಡತಿ ಮಕ್ಕಳನ್ನು ರಕ್ಷಿಸಬೇಕೆಂದು ಬರ್ನಾಡ್ ಮತ್ತು ಈ ಟೇಲರ್ ಜರ್ಮನ್ ಶಫರ್ಡ್ ಸಹಾಯಕ್ಕಾಗಿ ಬೇರೆಯವರನ್ನು ಹುಡುಕಲು ಪ್ರಯತ್ನಿಸುತ್ತಾರೆ .

ಹೀಗೆ ಪ್ರಯತ್ನಿಸುತ್ತಾ ಅವರು ರಸ್ತೆಯಲ್ಲಿ ಓಡಾಡುತ್ತಿರುವಾಗ ಬರ್ನಾರ್ಡೊ ಅವರು ಕೂಡ ಬಿರುಗಾಳಿಯಿಂದ ಹಿಮಪಾತಕ್ಕೆ ಸಿಲುಕಿ ಮರಣವನ್ನು ಹೊಂದುತ್ತಾರೆ ಅವರು ಮರಣವನ್ನು ಹೊಂದಿದ ನಂತರ ಅವರ ಮೃತದೇಹವನ್ನು ಈ ನಾಯಿ ಇಪ್ಪತ್ತ್ ಮೂರು ದಿನ ಕಾದಿದೆ ಎಂದರೆ ನಂಬುತ್ತೀರಾ ಹೌದು ಸ್ನೇಹಿತರೆ ಇದು ನಿಜ ಘಟನೆ ಆ ನಾಯಿ ಅವರ ಕುಟುಂಬದ ಸದಸ್ಯರನ್ನು ರಕ್ಷಿಸಲು ಹೋಗದೆ ಯಾವುದಾದರೂ ಪ್ರಾಣಿ ಅಥವಾ ಪಕ್ಷಿಗಳು ತನ್ನ ಯಜಮಾನನ ದೇಹವನ್ನು ಎಲ್ಲಿ ತಿಂದುಬಿಡುತ್ತದೆ.

ಎಂಬ ಭಯದಿಂದಾಗಿ ಅವರು ಆ ನಾಯಿ ಆ ಯಜಮಾನನ ಮೃತದೇಹವನ್ನು ಬಿಟ್ಟು ಎಲ್ಲಿಯೂ ಕೂಡ ಹೋಗುವುದಿಲ್ಲ ಅದಾದ ನಂತರ ಪೊಲೀಸರಿಗೂ ಹೇಗೋ ಇವರ ಕುಟುಂಬ ಕಣ್ಮರೆಯಾಗುವುದು ತಿಳಿದಿರುತ್ತದೆ ಅವರು ಹುಡುಕುತ್ತಾ ಬಂದಾಗ ಆ ಕಾರು ಅವರಿಗೆ ಸಿಗುತ್ತದೆ ಅದಾದ ನಂತರ ಅವರ ಕುಟುಂಬದ ಸದಸ್ಯರು ಅಲ್ಲಿಯೇ ಹಣ್ಣುಗಳು ಮತ್ತು ಇದ್ದಂತಹ ಕೆಲವೊಂದು ಪದಾರ್ಥಗಳನ್ನು ತಿಂದುಕೊಂಡು ಬದುಕಿರುತ್ತಾರೆ. ಅವರಿಗೆ ಆಸ್ಪತ್ರೆಗೆ ಸೇರಿಸಿ ಅವರನ್ನು ರಕ್ಷಿಸುತ್ತಾರೆ .

ಅದಾದ ನಂತರ ಅಲ್ಲೆ ದೂರದಲ್ಲಿ ಇದ್ದಂತಹ ಆ ನಾಯಿಯನ್ನು ರಕ್ಷಣಾ ಪಡೆಯವರು ನೋಡುತ್ತಾರೆ ನೋಡಿ ಅನ್ಯಾಯ ಬಳಿ ಹೋದಾಗ ಆ ನಾಯಿ ಮೃತದೇಹದ ಮೇಲೆ ಮಲಗಿರುತ್ತದೆ ಮೃತದೇಹದ ಮೇಲೆ ಒಂದು ಚಿಕ್ಕ ಗೆರೆಯೂ ಮೂಡದ ರೀತಿಯಲ್ಲಿ ಮೃತದೇಹವನ್ನು ಕಾಪಾಡುವುದನ್ನು ನೋಡಿ ರಕ್ಷಣಾ ಪಡೆಯವರು ಕೂಡ ಆಶ್ಚರ್ಯವಾಗುತ್ತದೆ ಅದು ಒಂದಲ್ಲ ಎರಡಲ್ಲ ಇಪ್ಪತ್ತ್ ಮೂರು ದಿನಗಳ ಕಾಲ ಆ ನಾಯಿ ಯಜಮಾನ ಮೃತದೇಹವನ್ನು ರಕ್ಷಿಸುವುದನ್ನು ನೋಡಿ ಎಲ್ಲರೂ ಕೂಡ ಆ ನಾಯಿಗೆ ಧನ್ಯವಾದವನ್ನು ಹೇಳುತ್ತಾರೆ ಆದರೆ ನೋಡಿ ಸ್ನೇಹಿತರೇ ಈ ರೀತಿ ನಾಯಿಗೆ ಇರುವ ನಿಯತ್ತು ಮನುಷ್ಯನಿಗೂ ಕೂಡ ಇರುವುದಿಲ್ಲ ಹಾಕುವ ಒಂದು ತುತ್ತು ಅನ್ನಕ್ಕೆ ಅದು ಎಷ್ಟು ಬೆಲೆಯನ್ನು ನೀಡುತ್ತದೆ ಮತ್ತು ಅದಕ್ಕೆ ಎಷ್ಟು ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ.
ಧನ್ಯವಾದಗಳು .

LEAVE A REPLY

Please enter your comment!
Please enter your name here