ಈ ರೀತಿಯಾಗಿ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮ ಬಳಿ ಸುಳಿಯುವುದಿಲ್ಲ ಒಮ್ಮೆ ಟ್ರೈ ಮಾಡಿ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಗ್ಯಾಸ್ಟ್ರಿಕ್ ಸಮಸ್ಯೆ ನಿಮ್ಮನ್ನು ಕಾಡ್ತಾ ಇದೆ ಹಾಗಾದರೆ ನಾವು ಹೇಳುವ ಈ ಸುಲಭ ಪರಿಹಾರವನ್ನು ಮನೆಯಲ್ಲಿಯೇ ಮಾಡಿ ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡುವ ಈ ಒಂದು ಡ್ರಿಂಕ್ ಅನ್ನು ಕುಡಿಯುತ್ತಾ ಬನ್ನಿ.

ನಿಮ್ಮ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ ಅನ್ನೋದನ್ನ ನೀವೇ ಕಣ್ಣಾರೆ ನೋಡಬಹುದು ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ಯಾವುದೇ ಆಸ್ಪತ್ರೆಗೆ ಹೋಗುವ ಅವಕಾಶಗಳು ಇರುವುದೇ ಇಲ್ಲ  ಹಾಗೆ ಮಾತ್ರೆ ತೆಗೆದುಕೊಳ್ಳಬೇಕು ಅನ್ನುವ ಜಂಜಾಟವೂ ಇರುವುದಿಲ್ಲ .

ಈ ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದು ಯಾಕೆ ಅಂದರೆ ಸರಿಯಾದ ಸಮಯಕ್ಕೆ ಊಟ ಮಾಡದೇ ಇದ್ದಾಗ ಗ್ಯಾಸ್ಟ್ರಿಕ್ ಸಮಸ್ಯೆ ಬರುವುದಕ್ಕೆ ಕಾರಣವೇನು ಎಂದರೆ ಹೆಚ್ಚು ಮಸಾಲೆಭರಿತ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಇನ್ನು ಕೆಲವರಲ್ಲಿ ಹೆಚ್ಚಾಗಿ ಕಾಫಿ ಕುಡಿಯುವುದರಿಂದ ಟೀ ಕುಡಿಯುವುದರಿಂದ ಕೂಡ ಈ ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ.

ಆದ ಕಾರಣ ಉತ್ತಮವಾದ ಆಹಾರ ಪದ್ಧತಿಯನ್ನು ಪಾಲಿಸಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದಾಗಿದೆ ಹಾಗೆ ಈ ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ನಮ್ಮಲ್ಲಿ ಕಾಣುವ ಲಕ್ಷಣಗಳೇನು ಹಾಗೆಯೇ ಇದಕ್ಕೆ ಪರಿಹಾರವೇನು ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ತಿಳಿಯೋಣ.

ಗ್ಯಾಸ್ಟ್ರಿಕ್ ಸಮಸ್ಯೆ ಬಂದಾಗ ಸಾಮಾನ್ಯವಾಗಿ ಎಲ್ಲರಿಗೂ ಹೊಟ್ಟೆ ಉಬ್ಬರ ವಾಗುತ್ತದೆ ಇಲ್ಲ ಕೆಲವರಿಗೆ ಹುಳಿ ತೇಗು ಬರುತ್ತದೆ ಇನ್ನು ಕೆಲವರಲ್ಲಿ ಎದೆ ಇರುವ ಮಧ್ಯ ಭಾಗದಲ್ಲಿ ನೋಯುತ್ತಾ ಇರುತ್ತದೆ, ಅಷ್ಟೇ ಅಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆಯ ಮತ್ತೊಂದು ಲಕ್ಷಣವೇನು ಅಂದರೆ ಊಟ ಸೇರದೇ ಇರುವುದು.

ಊಟವಾದ ಬಳಿಕ ಹೊಟ್ಟೆ ನೋಯುವುದು ಹೊಟ್ಟೆ ತುಂಬಿದ ಹಾಗೆ ಅನಿಸುವುದು ಊಟದ ಬಳಿಕ ವಾಂತಿ ಬರುವ ಹಾಗೆ ಆಗುವುದು ಕಿಬ್ಬೊಟ್ಟೆ ನೋಯುವುದು ಇವೆಲ್ಲ ಗ್ಯಾಸ್ಟ್ರಿಕ್ ಸಮಸ್ಯೆಯ ಲಕ್ಷಣಗಳಾಗಿವೆ.

ಈ ಮೇಲೆ ತಿಳಿಸಿರುವುದು ಗ್ಯಾಸ್ಟ್ರಿಕ್ ಸಮಸ್ಯೆಯ ಕಾರಣ ಮತ್ತು ಲಕ್ಷಣಗಳಾದರೆ ಇದಕ್ಕೆ ಪರಿಹಾರವೆಂದರೆ ಮನೆಯಲ್ಲಿಯೇ ಅಡುಗೆ ಕೋಣೆಯಲ್ಲಿ ಎದುರಿರುವ ಮೂರೇ ಪದಾರ್ಥದಿಂದ ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ ಅದು ಹೇಗೆ ಅಂದರೆ ಈ ಪರಿಹಾರವನ್ನು ಮಾಡಲು ಬೇಕಾಗಿರುವ ಪದಾರ್ಥಗಳು ಜೀರಿಗೆ ಅಜ್ವೈನ್ ದಾಲ್ಚಿನ್ನಿ ಮತ್ತು ಸೈಂಧವ ಲವಣ.

ಈ ಪದಾರ್ಥಗಳನ್ನು ಬಳಸಿ ಮಾಡುವ ಡ್ರಿಂಕ್ ಅನ್ನು ರಾತ್ರಿ ಊಟವಾದ ಬಳಿಕ ಕುಡಿಯುವುದರಿಂದ ಜೀರ್ಣಕ್ರಿಯೆ ಪವರ್ ಹೆಚ್ಚುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಅದು ಕೂಡ ಪರಿಹಾರಗೊಳ್ಳುತ್ತದೆ.

ಇನ್ನು ಸಣ್ಣಗಾಗಲು ಬಯಸುವವರು ಈ ಡ್ರಿಂಕ್ ಅನ್ನು ಕುಡಿಯುವುದರಿಂದ ಒಳ್ಳೆಯ ಫಲಿತಾಂಶ ಪಡೆದುಕೊಳ್ಳಬಹುದು, ಯಾರಿಗೆ ಗ್ಯಾಸ್ಟಿಕ್ ಸಮಸ್ಯೆ ಇರುವುದಿಲ್ಲವೋ ಅವರು ಕೂಡ ಈ ಡ್ರಿಂಕ್ ಅನ್ನು ಕುಡಿಯಬಹುದು ಇದರಿಂದ ಜೀರ್ಣ ಶಕ್ತಿ ಉತ್ತಮವಾಗಿರುತ್ತದೆ.

ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಜೀರಿಗೆ ಅಜ್ವಾನ ಮತ್ತು ದಾಲ್ಚಿನ್ನಿ ಚೆಕ್ಕೆಯನ್ನು ಒಂದು ಪ್ರಮಾಣದಲ್ಲಿ ಹಾಕಬೇಕು ಅಂದರೆ ಸ್ವಲ್ಪ ಕಡಿಮೆ ಕಡಿಮೆಯೇ ಹಾಕಿ ಆ ನೀರನ್ನು ಕುದಿಸಬೇಕು ನೀರು ಅರ್ಥವಾಗುವಷ್ಟು ಕುದಿಸಿ ನಂತರ ಅದಕ್ಕೆ ಸೈಂಧವ ಲವಣವನ್ನು ಬೆರೆಸಿಕೊಂಡು ಕುಡಿಯುವುದರಿಂದ ಗ್ಯಾಸ್ಟಿಕ್ ಸಮಸ್ಯೆ ಪರಿಹಾರಗೊಳ್ಳುವುದು.

ಈ ಒಂದು ಪರಿಹಾರವನ್ನು ನೀವು ರಾತ್ರಿ ಊಟವಾದ ಅರ್ಧ ಗಂಟೆಗಳ ಬಳಿಕ ಪಾಲಿಸಿ ಇದರಿಂದ ನಿಮ್ಮ ಗ್ಯಾಸ್ಟಿಕ್ ಸಮಸ್ಯೆ ಅಜೀರ್ಣ ಸಮಸ್ಯೆ ಹೊಟ್ಟೆ ಉಬ್ಬರದ ಸಮಸ್ಯೆ ಹೊಟ್ಟೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಯಾಗಲಿ ಅದು ಪರಿಹಾರಗೊಳ್ಳುವುದು. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *