Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

108 ಹೆಸರುಗಳಿಂದ ಕರೆಸಿಕೊಳ್ಳುತ್ತಿರುವ ಈ ತಾಯಿ , ಕಷ್ಟ ಅಂತ ಬಂದವರಿಗೆ ಇಷ್ಟಾರ್ಥವನ್ನು ಸಿದ್ಧಿಸುವ ಶಕ್ತಿಯನ್ನು ಹೊಂದಿದ್ದಾಳೆಈ ತಾಯಿ .. ಈ ದೇವಿ ಯಾರು ಅಂತೀರ !! ಒಂದು ಸಾರಿಯಾದರೂ ಈ ದೇವಿಯ ದರ್ಶನವನ್ನು ಮಾಡಿ ಹಾಗೂ ಅವಳ ಬಗ್ಗೆ ತಿಳಿದುಕೊಳ್ಳಿ!!!

ಈ ಪ್ರದೇಶದಲ್ಲಿ ನೆಲೆಸಿರುವಅಂತಹ ಈ ದೇವಿಗೆ ಬರೋಬ್ಬರಿ ನೂರಾ ಎಂಟು ಹೆಸರಿನಿಂದ ಕರೆಯುತ್ತಾರೆ, ಉದಾಹರಣೆಗೆ ಬನಶಂಕರಿ, ಆದಿಶಕ್ತಿ, ಮಹದೇವಿ, ವನದೇವಿ,ಚಾಮುಂಡೇಶ್ವರಿ  ಮುಂತಾದ ಹೆಸರುಗಳಿಂದ ಈ ದೇವಿಯನ್ನು ಕರೆಯುತ್ತಾರೆ.ಈ ದೇವಿಯು ಚಾಲುಕ್ಯರ ಆರಾಧ್ಯ ದೈವವಾಗಿದ್ದರು. ಬಾದಾಮಿಯಲ್ಲಿ ಇರುವಂತಹ ಈ ಬನಶಂಕರಿಯ ಬಗ್ಗೆ ಹಾಗೂ ಅವಳ ಪವಾಡಗಳ ಬಗ್ಗೆ ಇವತ್ತು ನಾವು ನಿಮಗೆ ಕೆಲವೊಂದು ವಿಷಯಗಳನ್ನು ಹೇಳಲಿದ್ದೇವೆ ದಯವಿಟ್ಟು ಮುಂದೆ ಓದಿ.ಈ ಸ್ಥಳ ಇರೋದಾದ್ರೂ ಎಲ್ಲಿ ಇರುವ ಪ್ರಶ್ನೆಗೆ ಉತ್ತರ ಬಾಗಲಕೋಟೆ  ಜಿಲ್ಲೆಯ ಬಾದಾಮಿ ತಾಲೂಕಿನ ಬನಾಶು ಎನ್ನುವ ಒಂದು ಪುಟ್ಟ ಹಳ್ಳಿ. ಇಲ್ಲಿ ಈ ಬನಶಂಕರಿ ತಾಯಿ ಪ್ರತಿಷ್ಠಾಪನೆ ಕೊಂಡಿದ್ದಾಳೆ. ಈ ಗ್ರಾಮ  ಹಚ್ಚ ಹಸಿರಿನಿಂದ ಕೂಡಿದ್ದು ಈ ದೇವಿಗೆ ಬನದೇವಿ ಎಂದು ಕೂಡ ಕರೆಯುತ್ತಾರೆ. ಈ ದೇವಿಯು ಅಂದಿನ ಕಾಲದಲ್ಲಿ ಚಾಲುಕ್ಯರ ಅತಿ ಶ್ರೀಮಂತ ಹಾಗೂ ಶಕ್ತಿಯುತ ದೇವಿಯಾಗಿ ಇದ್ದಳು. ಭಾರತ ದೇಶದಲ್ಲಿ ಇರುವಂತಹ ಶಕ್ತಿಪೀಠಗಳಲ್ಲಿ ಇದೂ ಕೂಡ ಒಂದು ಶಕ್ತಿ ಪೀಠ ಅದು ಇರುವುದು ಬಾಗಲಕೋಟೆಯಲ್ಲಿ ಇರುವಂತಹ ಬಾದಾಮಿಯಲ್ಲಿ ಇರುವಂತಹ ಬನಶಂಕರಿ ಅಂತ ಹೇಳುವುದಕ್ಕೆ ನನಗೆ ನಿಜವಾಗಲೂ ಹೆಮ್ಮೆಯಾಗುತ್ತದೆ.ಸಾವಿರಾರು ವರ್ಷಗಳ ಹಿಂದೆಯೇ ಚಾಲುಕ್ಯರು ಕಷ್ಟದಲ್ಲಿರುವಾಗ ಅವರನ್ನು ಕಾಪಾಡಿದ ಅಂತಹ ದೇವರು ಇವಳು.  ಬಾದಾಮಿಯಲ್ಲಿ ಇರುವಂತಹ ಈ ಬನಶಂಕರಿ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.ಕ್ರಿಸ್ತಶಕ 2ನೇ ಶತಮಾನದಲ್ಲಿ ಈ ಪ್ರದೇಶದಲ್ಲಿ ಕೇವಲ ಕೋತಿಗಳು ಮಾತ್ರ ಇದ್ದವು.  ಅದಾದ ನಂತರ ಇಲ್ಲಿ ನೆಲೆಸಿದಾಗ ಈ ಜಾಗ ಬಾದಾಮಿ ಎಂದು ಬದಲಾವಣೆಯಾಯಿತು. ಅಗಸ್ತ್ಯ ಮಹರ್ಷಿಗಳು ಇಲ್ಲಿ ತಪಸ್ಸನ್ನು ಮಾಡಿದ ಪರಿಣಾಮವಾಗಿ ಇಲ್ಲಿ ದೇವಿ ಬಂದು ನೆಲೆಸಿದ್ದಾರೆ ಎಂದು ಕೆಲವು ಪುರಾಣಗಳು ಹೇಳುತ್ತವೆ. ಬಾದಾಮಿ ಇರುವಂತಹ ಈ ಬನಶಂಕರಿ  ದೇವಿಯ ಪುರಾಣ ಕಥೆ ಏನು  ಪವಾಡದ ಬಗ್ಗೆ ತಿಳಿದುಕೊಳ್ಳಿ ಪುರಾಣದ ಪ್ರಕಾರ ಪ್ರತಿ ಒಂದು ದೇವಸ್ಥಾನಕ್ಕೆ ಅಥವಾ  ಶಕ್ತಿ ದೇವತೆಯನ್ನು ಹೊಂದಿರುವಂತಹ ದೇವಿಗೆ ಹಲವಾರು ಪುರಾತನ ಕಥೆಗಳು ಇರುತ್ತವೆ. ಇಲ್ಲಿಯೂ ಕೂಡ ಒಂದು ಘಟನೆ ಬಾದಾಮಿಯಲ್ಲಿ ನಡೆಸಿರುವಂತಹ ಬನಶಂಕರಿಗೆ ಪೂರಕವಾಗುವಂತೆ ಇದೆ.  ಅದು ಏನಪ್ಪ ಅಂತೀರಾ… ಮುಂದೆ ಓದಿ..ನೂರಾರು ವರ್ಷಗಳ ಹಿಂದೆ ಗಣ ಘೋರವಾದ ಒಂದು ಬರಗಾಲ ಬಂದು ಬಿಡುತ್ತದೆ, ಸಕಲ ಜೀವರಾಶಿಗಳು ಹಸಿವಿನಿಂದ ತತ್ತರಿಸಿ ಹೋಗುತ್ತದೆ. ಈ ತರದ ಪರಿಸ್ಥಿತಿಯನ್ನು ಕಂಡಂತಹ ದೇವಾನುದೇವತೆಗಳು ಶಿವನಲ್ಲಿ ಬೇಡಿಕೊಳ್ಳುತ್ತವೆ. ಹೀಗೆ  ಬೇಡಿ ಕೊಂಡಂತಹ ದೇವಾನುದೇವತೆಗಳ ಆಗ್ನೇಯ ಮೇರೆಗೆ ಶಿವನು ಅತಿ ಹೆಚ್ಚು ಶಕ್ತಿಯನ್ನು ಹೊಂದಿರುವಂತಹ ಬನಶಂಕರಿ ಎಂದು ಕೇಳಿಕೊಳ್ಳುತ್ತಾನೆ. ಎಲ್ಲರ ಒತ್ತಾಯಕ್ಕೆ ಮಾಡಿದಂತಹ ಈ ದೇವಿಯು ತನ್ನ ದೇಹದಲ್ಲಿ ಇರುವಂತಹ ಉತ್ಪನ್ನಗಳ  ಶಾಖ ಆಹಾರದಿಂದ ಸರ್ವ ಜಗತ್ತನ್ನು ಕಾಪಾಡುತ್ತಾಳೆ.ಹಾಗೆ ಹಲವಾರು ಜೀವಜಂತುಗಳನ್ನು ಬದುಕುವಂತೆ ಮಾಡುತ್ತಾಳೆ. ಇವಳ ಕೃಪೆಯಿಂದಾಗಿ ಅಲ್ಲಿನ ಜಾಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಹಾಗೂ ಸಕಲ ಪ್ರಾಣಿ ಹಾಗೂ ಜೀವ ಜಂತುಗಳು ಹಸಿವನ್ನು ನೀಗಿಸಿ ಕೊಂಡು ಮತ್ತೆ ತಮ್ಮ ತಮ್ಮ ಕೆಲಸದಲ್ಲಿ ನಿರತ ವಾಗುತ್ತವೆ. ಅಂದಿನಿಂದ ಈಕೆಬನ ದೇವಿ ಹಾಗೂ ಶಾಖಾಂಬರಿ ಎಂದು ಕೂಡ ಪ್ರಸಿದ್ಧಿಯನ್ನು ಪಡೆದಿದ್ದಾಳೆ.ಈ ಶಾಕಾಂಬರಿ ಹಾಗೂ ಈ ಬನದೇವಿ ಹೆಸರಿಂದ ಖ್ಯಾತಿಯಾಗಿರುವ ಅಂತಹ ಈ ದೇವಿಯು, ಇಲ್ಲಿಗೆ ಬರುವಂತಹ ಭಕ್ತರಿಗೆ ಹಲವಾರು ತರನಾದ ಪವಾಡಗಳನ್ನು ಮಾಡಿದ್ದಾಳೆ. ನಿಮಗೇನಾದರೂ ಹಸಿವಿನ ಸಮಸ್ಯೆ ಅಂದರೆ ಕೆಲಸದಲ್ಲಿ ಸಮಸ್ಯೆ ಏನಾದರೂ ಇದ್ದಲ್ಲಿ ಈ ದೇವಿಯ ಮೊರೆ ಹೋದರೆ ನಿಮಗೆ ಒಳ್ಳೆಯದು ಆಗುತ್ತದೆ. ಈ ದೇವಸ್ಥಾನದ ಪಕ್ಕ ಒಂದು ಕಲ್ಯಾಣಿ ಎನ್ನುವ ಪ್ರದೇಶವಿದೆ ಈ ಕಲ್ಯಾಣಿಯಲ್ಲಿ ನೀವೇನಾದರೂ ಮುಳುಗಿ ಪ್ರಾರ್ಥನೆಯನ್ನು ಮಾಡಿಕೊಂಡರೆ ನಿಮಗೆ ಮಕ್ಕಳು ಆಗುತ್ತವೆ.ಹೀಗೆ ತನ್ನ ದೇಹದಲ್ಲಿ ಇರುವಂತಹ ಉತ್ಪನ್ನಗಳಿಂದ ಬರಡು ಭೂಮಿಯನ್ನು  ಹಚ್ಚ ಹಸಿರಿನಿಂದ ಕಂಗೊಳಿಸಿದ ದೇವಿಯನ್ನು ನೀವು ಪ್ರಾರ್ಥನೆ ಮಾಡಿ ಕೊಂಡರೆ ನಿಮ್ಮ ಜೀವನದಲ್ಲಿ ಯಾವುದೇ ತರದ ಹಸಿವು ಹಾಗೂ ಸಂಕಟದ ಬಗ್ಗೆ ಯೋಚನೆ ಮಾಡುವ ಸಂಗತಿ ಬರುವುದಿಲ್ಲ. ಜನರ ಹಸಿವನ್ನು ನೀಗಿಸಿ ರಾಕ್ಷಸರನ್ನು ಸಂಹಾರ ಮಾಡಿದ ಅಂತಹ ಈ ದೇವಿಗೆ ನಮ್ಮ ಕೋಟಿ ನಮನ.ನೀವು ಇನ್ನು ನಮ್ಮ ಪೇಜಿಗೆ ಇ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕೊಟ್ಟಿರುವಂತಹ ಪೇಜ್ ನ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಪ್ರೋತ್ಸಾಹ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿಯ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ