Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೆಣ್ಣು ಮಕ್ಕಳು ಬೆಳ್ಳಿಯ ಬದಲು ಚಿನ್ನದ ಕಾಲುಂಗುರ ಹಾಗು ಕಾಲ್ಗೆಜ್ಜೆಯನ್ನು ಧರಿಸಿದರೆ ಏನಾಗುತ್ತೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳಿಂದಲೇ ಸಾಕಷ್ಟು ಪದ್ಧತಿಯನ್ನು ನಮ್ಮ ಹಿರಿಯರು ಮಾಡಿದ್ದಾರೆ ಈ ಪದ್ಧತಿಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಲಂಕಾರಕ್ಕೆ ಶೃಂಗಾರಕ್ಕೆ ಸಂಬಂಧಪಟ್ಟಂತೆ ಹದಿನಾರು ವಿಧಿ ವಿಧಾನಗಳು ಇವೆ .

ಅದರಲ್ಲಿ ಒಂದಾಗಿರುವ ಕಾಲು ಬೆರಳಿಗೆ ಉಂಗುರ ಮತ್ತು ಕಾಲಿಗೆ ಕಾಲ್ಗೆಜ್ಜೆ ಹಾಕುವುದು ಕೂಡ ಒಂದಾಗಿದ್ದು ಯಾಕೆ ಈ ಕಾಲುಂಗುರ ಮತ್ತು ಕಾಲಿಗೆ ಬೆಳ್ಳಿ ಲೋಹದ್ದು ಇರುತ್ತದೆ ಯಾಕೆ ಬಂಗಾರದ ಲೋಹ ಮಾಡಿ ಹಾಕಿಕೊಳ್ಳುವುದಿಲ್ಲ.

ಎಂಬ ಪ್ರಶ್ನೆ ನಿಮ್ಮಲ್ಲಿ ಒಂದು ಬಾರಿಯಾದರೂ ಹುಟ್ಟಿದ್ದರೆ ಅದನ್ನು ನಾನು ಈ ಮಾಹಿತಿ ಮುಖಾಂತರ ಪರಿಹರಿಸುತ್ತೇನೆ, ತಪ್ಪದೇ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಈ ಒಂದು ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ.

ಅನಾದಿ ಕಾಲದಿಂದಲೂ ಹೆಣ್ಣು ಮಕ್ಕಳು ಕಾಲಿಗೆ ಕಾಲ್ಗೆಜ್ಜೆ ಕಾಲ್ಬೆರಳಿಗೆ ಕಾಲುಂಗುರವನ್ನು ಹಾಕಿಕೊಳ್ಳುವ ಪದ್ಧತಿಯಿದೆ ವಿವಾಹಿತ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಡ್ಡಾಯವಾಗಿದ್ದು ಇದಕ್ಕೂ ಕೂಡ ಕಾರಣವಿದೆ.

ಮತ್ತು ನಮ್ಮ ಪೂರ್ವಜರ ಕಾಲದಲ್ಲಿ ಹೆಣ್ಣು ಮಕ್ಕಳು ಕಾಲ್ಗೆಜ್ಜೆ ಯನ್ನು ಹಾಕದೇ ಇರುತ್ತಿರಲಿಲ್ಲ ಆದರೆ ಇಂದಿನ ದಿನಗಳಲ್ಲಿ ಹುಡುಗಿಯರು ಫ್ಯಾಷನ್ ಎಂದು ಕಾಲಿಗೆ ಕಾಲ್ಗೆಜ್ಜೆ ಹಾಕುವುದಿಲ್ಲ.

ಕಾಲ್ಗೆಜ್ಜೆ ಅನ್ನು ಹಾಕುವುದರಿಂದ ಅದರಲ್ಲಿಯು ಬೆಳ್ಳಿ ಕಾಲ್ಗೆಜ್ಜೆ ಅನ್ನು ಹಾಕುವುದರಿಂದ ಆರೋಗ್ಯದ ಮೇಲೆ ಅನೇಕ ಲಾಭಗಳಿವೆ ಅದೇನು ಎಂಬುದನ್ನು ಹೇಳುವುದಾದರೆ ಕಾಲ್ಗೆಜ್ಜೆ ಅನ್ನು ಧರಿಸುವುದರಿಂದ ಅದು ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ ಕಾಳ್ಗಿಚ್ಚನ್ನು ಹಾಕುವುದರಿಂದ ಮೂಳೆ ನೋವು ಸಂಧಿವಾತ ಸಮಸ್ಯೆ ಬೆನ್ನು ನೋವಿನ ಸಮಸ್ಯೆ ಬಾರದೇ ಇರುವ ಹಾಗೆ ಈ ಬೆಳ್ಳಿ ಲೋಹ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಇನ್ನು ಕಾಲುಂಗರದ ವಿಚಾರಕ್ಕೆ ಬಂದರೆ ಮದುವೆಯಾದ ಹೆಣ್ಣು ಮಕ್ಕಳು ಕಾಲು ಮರವನ್ನು ಧರಿಸುವುದು ಉತ್ತಮ ಇದರಿಂದ ಋತುಚಕ್ರದ ವೇಳೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದಿಲ್ಲ .

ಜೊತೆಗೆ ನರಮಂಡಲದ ಆರೋಗ್ಯವನ್ನು ಕಾಪಾಡುವುದಕ್ಕಾಗಿ ನರಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳನ್ನು ಬಾರದೇ ಇರುವ ಹಾಗೆ ನೋಡಿಕೊಳ್ಳುವುದಕ್ಕಾಗಿ ಬೆಳ್ಳಿಯ ಕಾಲುಂಗುರ ಸಹಾಯಕವಾಗಿದ್ದು ಬೆಳ್ಳಿ ಲೋಹದ ಕಾಲುಂಗುರವನ್ನು ಧರಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ.

ನಮ್ಮ ಹೆಣ್ಣುಮಕ್ಕಳು ಪೂರ್ವಜರ ಕಾಲದಲ್ಲಿ ಕಾಲ್ ಗೆಜ್ಜೆಯನ್ನು ಧರಿಸಲೇ ಬೇಕಾಗಿತ್ತು ಯಾಕೆ ಎಂದರೆ ಕಿರಿಯರಾಗಲಿ ಗಂಡು ಮಕ್ಕಳಾಗಲಿ ಮಾತನಾಡುತ್ತಾ ಕುಳಿತಾಗ ದೂರದಿಂದಲೇ ಹೆಣ್ಣುಮಕ್ಕಳ ಗೆಜ್ಜೆಯ ಸದ್ದು ಕೇಳಿಸಿದರೆ ಅವರಿಗೆ ಗೌರವ ಕೊಡಬೇಕು ಎಂಬ ಸೂಚನೆಯನ್ನು ನೀಡುತ್ತಿತ್ತು .

ಕಾಲ್ಗೆಜ್ಜೆಯ ಸದ್ದು ಮತ್ತು ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರವನ್ನು ಧರಿಸುವುದರಿಂದ ಆಕೆ ಮತ್ತೊಬ್ಬರ ಪತ್ನಿ ಎಂಬುದನ್ನು ಸಮಾಜದಲ್ಲಿ ಸಾರುತ್ತಿತ್ತು ಆಕೆ ಮತ್ತೊಬ್ಬರ ಸ್ವತ್ತು ಆಕೆಯ ಮೇಲೆ ಪರಪುರುಷರ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕಾಗಿ ಹಿರಿಯರು ಈ ರೀತಿಯ ಪದ್ಧತಿಯನ್ನು ಪಾಲಿಸುತ್ತಾ ಬಂದಿದ್ದಾರೆ.

ಹಾಗಾದರೆ ಬೆಳ್ಳಿ ಲೋಹದ ಕಾಲುಂಗುರ ಮತ್ತು ಕಾಲ್ಗೆಜ್ಜೆಯ ಬದಲು ಚಿನ್ನದ ಲೋಹದ ಕಾಲುಂಗುರ ಕಾಲ್ಗೆಜ್ಜೆ ಯನ್ನು ಯಾಕೆ ಬಳಸುವುದಿಲ್ಲ ಅಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಂಗಾರದ ಲೋಹಕ್ಕೆ ಲಕ್ಷ್ಮಿಯ ಸ್ಥಾನಮಾನವನ್ನು ನೀಡಲಾಗಿದೆ.

ಆದ ಕಾರಣವೇ ಶುಭ ಸಮಾರಂಭದಲ್ಲಿ ಚಿನ್ನಾಭರಣಗಳನ್ನು ಚಿನ್ನವನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ವಿಷ್ಣು ಮತ್ತು ಕುಬೇರನ ಸಂಕೇತವಾಗಿರುವ ಚಿನ್ನವನ್ನು ಯಾವುದೇ ಕಾರಣಕ್ಕೂ ಕಾಲಿಗೆ ಧರಿಸಬಾರದು ಇದರಿಂದ ಲಕ್ಷ್ಮಿಗೆ ಅಪಮಾನಗೊಳಿಸಿದ ಹಾಗೆ ಅಗೌರವವನ್ನು ನೀಡಿದ ಹಾಗೆ ಎಂದು ಹೇಳಲಾಗುತ್ತದೆ.

ಮತ್ತೊಂದು ಕಾರಣವೇನು ಅಂದರೆ ಬೆಳ್ಳಿ ಲೋಹವು ದೇಹದ ಉಷ್ಣಾಂಶವನ್ನು ಹೀರಿ ನಿಯಂತ್ರಣದಲ್ಲಿ ಇರಿಸಲು ಸಹಾಯ ಮಾಡುತ್ತದೆ ಆದರೆ ಚಿನ್ನದ ಲೋಹ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುವ ಕಾರಣ ಬೆಳ್ಳಿ ಲೋಹದ ಕಾಲುಂಗುರ ಮತ್ತು ಕಾಲ್ಗೆಜ್ಜೆಯನ್ನೇ ಬಳಸಲಾಗುವುದು.

Leave a Reply

Your email address will not be published. Required fields are marked *