ಹೆಣ್ಣು ಮಕ್ಕಳು ಮನೆಯಲ್ಲಿ ಇಂತಹ ಕೆಲವೊಂದು ನಿಯಮಗಳನ್ನು ಪದ್ಧತಿಗಳನ್ನು ಪಾಲಿಸುತ್ತಾ ಬರುವುದರಿಂದ ಮನೆಯ ಯಜಮಾನನಿಗೆ ಅಥವಾ ಆಕೆಯ ಗಂಡನಿಗೆ ಸಿರಿಸಂಪತ್ತು ಅದೃಷ್ಟವೂ ಒಲಿದು ಬರಲಿದೆ ಎಂದು ಹಿರಿಯರು ಹೇಳುತ್ತಾರೆ.ಜೊತೆಗೆ ಶಾಸ್ತ್ರವೂ ಕೂಡ ಇದನ್ನೇ ತಿಳಿಸುತ್ತದೆ ಆದರೆ ಮನೆಯ ಹೆಣ್ಣು ಮಗಳಿಗೆ ಮಾತ್ರ ನಿಯಮಗಳ ಹಾಗಾದರೆ ಪುರುಷರಿಗೆ ನಿಯಮವೂ ಇರುವುದಿಲ್ಲವಾ ಅಂತ ಕೇಳುವುದಾದರೆ,ಮನೆಯಲ್ಲಿ ಹೆಣ್ಣು ಮಕ್ಕಳು ಲಕ್ಷ್ಮಿಗೆ ಸಮಾನ ಅದರಲ್ಲಿಯೂ ಸುಮಂಗಲಿಯರು ಮನೆಯಲ್ಲಿ ಕೆಲವೊಂದು ಪದ್ಧತಿಗಳನ್ನು ಪಾಲಿಸುವುದರಿಂದ ಅದು ಗಂಡನಿಗೆ ಶ್ರೇಯಸ್ಸು ತಂದು ಕೊಡುತ್ತದೆ ಎಂದು ನಂಬಲಾಗಿದೆ.
ನಮ್ಮ ಸಂಪ್ರದಾಯದಲ್ಲಿ ಹೆಣ್ಣುಮಕ್ಕಳು ಇಂತಹದ್ದೇ ಕೆಲವೊಂದು ಪದ್ಧತಿಯನ್ನು ಪಾಲಿಸಬೇಕು ಅಂತ ಇದೆ ಹಾಗೆ ನಮ್ಮ ಹೆಣ್ಣು ಮಕ್ಕಳು ಕೂಡ ಇರುತ್ತಿದ್ದರು. ಆದರೆ ಪಾಶ್ಚಾತ್ಯರ ಸಂಸ್ಕೃತಿಯ ಪ್ರಭಾವದಿಂದ ಇದೀಗ ನಮ್ಮ ಹೆಣ್ಣು ಮಕ್ಕಳು ನಮ್ಮ ಸಂಪ್ರದಾಯಗಳನ್ನು ಮರೆಯುತ್ತಾ ಬರುತ್ತಿದ್ದಾರೆ,ಮನೆಯಲ್ಲಿ ಸುಮಂಗಲಿಯರು ಹೇಗಿರಬೇಕು ಅಂದರೆ ಗಂಡನ ಶ್ರೇಯಸ್ಸಿಗಾಗಿ ಗಂಡನ ಏಳಿಗೆಗಾಗಿ ಸುಮಂಗಲಿಯರು ಮನೆಯಲ್ಲಿ ಅಲಂಕಾರ ಮಾಡಿಕೊಂಡು ಓಡಾಡಬೇಕು ಯಾಕೆ ಎಂದರೆ.ಈ ಮೊದಲೇ ಹೇಳಿದ ಹಾಗೆ ಸುಮಂಗಲಿಯರು ಲಕ್ಷ್ಮಿಗೆ ಸಮಾನ ಮನೆಯಲ್ಲಿ ಹೆಣ್ಣು ಮಕ್ಕಳು ಹೇಗೆಂದರೆ ಹಾಗೆ ಇರುವುದರಿಂದ ಲಕ್ಷ್ಮೀ ಕೋಪಿಸಿಕೊಳ್ಳುತ್ತಾರೆ ಮತ್ತು ಕೂದಲು ಬಿಟ್ಟುಕೊಂಡು ಓಡಾಡುವುದರಿಂದ .
ಇದು ರಾಕ್ಷಸರ ಗುಣಕ್ಕೆ ಹೋಲುವ ಕಾರಣ ಹೆಣ್ಣು ಮಕ್ಕಳು ಮನೆಯಲ್ಲಿ ಕೂದಲನ್ನು ಜಡೆ ಕಟ್ಟಿರಬೇಕು ಮತ್ತು ಸುಮಂಗಲಿಯರು ತಮ್ಮ ಮುಡಿಗೆ ಯಾವುದಾದರೂ ಒಂದು ಹೂವನ್ನು ಮುಡಿದಿರಬೇಕು ಸುಮಂಗಲೆಯರು ತಮ್ಮ ಕೈಗಳಿಗೆ ಗಾಜಿನ ಬೆಳೆಯನ್ನೇ ತೊಡಬೇಕು ಯಾಕೆ ಅಂದರೆ ಈ ಗಾಜಿನ ಬಳೆಗಳು ಸೌಭಾಗ್ಯಕ್ಕೆ ಸಮಾನ ಆದ ಕಾರಣ ಯಾವುದೋ ಲೋಹದ ಬಳೆ ಅಥವಾ ಪ್ಲಾಸ್ಟಿಕ್ ಬಳೆಯನ್ನು ಧರಿಸುವುದರಿಂದ ಇದು ಗಂಡನಿಗೆ ಶ್ರೇಯಸ್ಸಲ್ಲ ಎಂದು ಹೇಳಲಾಗುತ್ತದೆ.ಮನೆಯಲ್ಲಿ ಸುಮಂಗಲಿಯರು ಕಾಲಿಗೆ ಅಂದರೆ ಪಾದಕ್ಕೆ ಅರಿಶಿನವನ್ನು ಹಚ್ಚಿ ಮನೆ ತುಂಬಾ ಓಡಾಡಬೇಕು ಇದರಿಂದ ಲಕ್ಷ್ಮಿಯ ಸಾನ್ನಿಧ್ಯ ಮನೆಯಲ್ಲಿ ಆಗುತ್ತದೆ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಹಾಗೆ ಈ ರೀತಿ ಸುಮಂಗಲಿಯರು ಮಾಡುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗಿ ಆರೋಗ್ಯ ಉತ್ತಮವಾಗಿರುತ್ತದೆ.
ಹೀಗೆ ನಮ್ಮ ಹಿರಿಯರು ಯಾವುದೇ ಒಂದು ಪದ್ಧತಿಯನ್ನು ಮಾಡಿದ್ದಾರೆ ಅಂದರೆ ಅದು ಸಕಾರಾತ್ಮಕವಾಗಿ ಇರುತ್ತದೆ, ಅದಕ್ಕೆ ಎರಡು ಕಾರಣಗಳಿದ್ದು ಎರಡೂ ಬದಿಯಿಂದಲೂ ಕೂಡ ಯೋಚಿಸಿದರೆ ಅದು ನಮಗೆ ಒಳಿತನ್ನು ಮಾಡಿರುತ್ತದೆ.ಇದೆಷ್ಟು ಸುಮಂಗಲಿಯರ ಅಲಂಕಾರಕ್ಕೆ ಸಂಬಂಧಪಟ್ಟ ವಿಚಾರ. ಮನೆಯಲ್ಲಿ ಸುಮಂಗಲಿಯರು ಸೂರ್ಯೋದಯಕ್ಕಿಂತ ಮೊದಲು ಎದ್ದು ಮನೆಯನ್ನು ಶುಚಿಗೊಳಿಸಿ ಮನೆಯ ಮುಂದೆ ರಂಗೋಲಿಯನ್ನು ಬಿಡಬೇಕು .ಮನೆಯ ಮುಂದೆ ಶುಚಿಯಾಗಿಡಬೇಕು ಮನೆಯ ಮುಂದೆ ಅಲಂಕಾರ ಮಾಡಬೇಕು ಯಾಕೆ ಎಂದರೆ ಮುಖ್ಯ ದ್ವಾರದಿಂದಲೇ ಲಕ್ಷ್ಮೀದೇವಿ ಮನೆಯೊಳಗೆ ಪ್ರವೇಶಿಸುವ ಕಾರಣ, ಈ ಜಾಗವು ಶುಚಿಯಾಗಿರಬೇಕು.
ಹಾಗೆ ಗೋಧೂಳಿಯ ಸಮಯದಲ್ಲಿ ಮನೆಯಲ್ಲಿ ಪ್ರತಿದಿನ ದೀಪವನ್ನು ಬೆಳಗಬೇಕು ಈ ರೀತಿ ಮಾಡುವುದರಿಂದ ಮನೆಗೆ ಸಕಾರಾತ್ಮಕತೆ ಹೆಚ್ಚುತ್ತದೆ. ಒಳ್ಳೆಯ ಶಕ್ತಿ ಮನೆಯಲ್ಲಿ ಪಸರಿಸುತ್ತದೆ ಇದರಿಂದ ಮನೆಯ ಸದಸ್ಯರು ಕೂಡ ಉಲ್ಲಾಸದಿಂದ ಇರುತ್ತಾರೆ ಜೊತೆಗೆ ಆರೋಗ್ಯವೂ ಕೂಡ ವೃದ್ಧಿಯಾಗುತ್ತದೆ.ಇನ್ನೂ ಹೇಳಬೇಕಾದರೆ ನಮ್ಮ ಹೆಣ್ಣು ಮಕ್ಕಳು ಇಂತಹ ಕೆಲವೊಂದು ಪದ್ಧತಿಯನ್ನು ಪಾಲಿಸಿಕೊಂಡು ಬರುವುದರಿಂದ ತಮಗೂ ಕೂಡ ಶ್ರೇಯಸ್ಸು ತಮ್ಮ ಪತಿಗೂ ಕೂಡ ಶ್ರೇಯಸ್ಸು ಆದ ಕಾರಣವೇ ಈ ಎಲ್ಲ ಸಂಪ್ರದಾಯಗಳನ್ನು ನಮ್ಮ ಹಿರಿಯರು ಕೂಡ ಪಾಲಿಸಿಕೊಂಡು ಬರುತ್ತಿದ್ದರೂ ಜೊತೆಗೆ ಈ ಪದ್ಧತಿಗಳು ಅವರಿಗೆ ಒಳಿತನ್ನೇ ಮಾಡಿವೆ.