ಯಕೃತ್ ಇದೊಂದು ಅತ್ಯಂತ ಮುಖ್ಯ ಅಂಗಾಂಗಗಳಲ್ಲಿ ಒಂದಾಗಿ ಇರುವಂತಹ ಒಂದು ಅಂಗ .ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾವು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.
ಯಕೃತ್ ನಮ್ಮ ದೇಹದ ಪಚನಕ್ರಿಯೆಯಲ್ಲಿ ಭಾಗವಹಿಸುವ ಒಂದು ಅಂಗಾಂಗವಾಗಿದ್ದು, ಈ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಹಾಗೆ ಯಕೃತ್ತಿನ ಆರೋಗ್ಯ ಕ್ಷೀಣಿಸು ವುದಕ್ಕೆ ಮುಖ್ಯ ಕಾರಣವೆಂದರೆ ಧೂಮಪಾನ, ಮದ್ಯಪಾನ ಮತ್ತು ಕೊಲೆಸ್ಟ್ರಾಲ್ ಅಂಶ ಹೆಚ್ಚಿರುವ ಪದಾರ್ಥವನ್ನು ಸೇವಿಸುವುದರಿಂದ, ಇದರ ಆರೋಗ್ಯ ಕ್ಷೀಣಿಸುತ್ತದೆ.
ಜೊತೆಗೆ ಇದರ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೂಡ ನಾವು ಕೆಲವೊಂದು ಆಹಾರ ಪದ್ಧತಿಯನ್ನು ಪಾಲಿಸಲೇಬೇಕು, ಇದರಿಂದ ಯಕೃತ್ತಿನ ಆರೋಗ್ಯವೂ ಉತ್ತಮವಾಗಿರುತ್ತದೆ ಜೊತೆಗೆ ನಮ್ಮ ದೇಹದಲ್ಲಿ ಪ್ರತಿಯೊಂದು ಕ್ರಿಯೆಯೂ ಸರಾಗವಾಗಿ ಜರುಗುತ್ತದೆ.
ಬೀಟ್ರೋಟ್ :
ಈ ಬೀಟ್ರೂಟ್ ನಲ್ಲಿ ಬೀಟಾ ಕ್ಯಾರೆಟಿನ ಫ್ಲಾವನಾಯ್ಡ್ಸ್ ನಂತಹ ಅಂಶವಿದ್ದು, ಈ ಬೀಟ್ರೂಟ್ ಅನ್ನು ಪ್ರತಿ ದಿನ ನಿಯಮಿತವಾಗಿ ಸೇವಿಸಬೇಕು ಅಥವಾ ಬೀಟ್ರೂಟ್ ಜ್ಯೂಸ್ ಅನ್ನು ಕುಡಿಯುವುದರಿಂದ ಕೂಡ ಲಿವರ್ನ ಆರೋಗ್ಯ ವೃದ್ಧಿಯಾಗುವುದಲ್ಲದೇ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ ತ್ವಚೆ ಕೂಡ ಕಾಂತಿಗೊಳ್ಳತ್ತದೆ.
ಲುಟಸ್ ಸ್ಪಿನಾಚ್ :
ಈ ಲುಟಸ್ ಮತ್ತು ಸ್ಪಿನಾಚ್ ನಲ್ಲಿ ಕ್ಲೋರೋಫಿಲ್ ಎಂಬ ಅಂಶವಿದ್ದು, ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಲು ಸಹಕರಿಸುವುದರ ಜೊತೆಗೆ, ಯಕೃತ್ತಿನ ಆರೋಗ್ಯವನ್ನು ಕೂಡ ಕಾಪಾಡುತ್ತದೆ ಹೇಗೆ ಎಂದರೆ ದೇಹದಲ್ಲಿರುವ ವಿಷಕಾರಿ ಅಂಶವು ದೇಹದಿಂದ ಆಚೆ ಹೋದರೆ ಲಿವರ್ನ ಆರೋಗ್ಯವು ಕೂಡ ಉತ್ತಮವಾಗಿರುತ್ತದೆ.
ಅವಕಾಡೊ :
ಅವಕಾಡೊ, ಬೆಣ್ಣೆಹಣ್ಣು ಈ ಬೆಣ್ಣೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ಗಳು ಹೇರಳವಾಗಿದೆ, ಇದು ಲಿವರ್ನ ಆರೋಗ್ಯ ಮಾತ್ರ ಕಾಪಾಡುವುದಲ್ಲದೆ ಆ್ಯಂಟಿ ಆಕ್ಸಿಡೆಂಟ್ಸ್ಗಳು ಮುಖದ ಮೇಲೆ ಆಗುವ ನೆರಿಗೆಗಳನ್ನು ನಿವಾರಿಸುತ್ತದೆ, ವಯಸ್ಸಾದ ನಂತರವೂ ಚರ್ಮದ ಸುಕ್ಕನ್ನು ಕೂಡ ಬಾರದಿರುವ ಹಾಗೆ ಇದು ಆರೋಗ್ಯವನ್ನು ಕಾಪಾಡುತ್ತದೆ.
ವಾಲ್ನಟ್ :
ವಾಲೆಟ್ನಲ್ಲಿ ಇರುವ ಗ್ಲುಟೊನಿಯಾನ್ ಅಂಶವು ಮತ್ತು ಒಮೆಗಾ ತ್ರಿ ಫ್ಯಾಟಿ ಆಸಿಡ್ಗಳು ಲಿವರ್ನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಒಮೆಗಾ ತ್ರಿ ಫ್ಯಾಟಿ ಆಸಿಡ್ಗಳು ಹೃದಯದ ಆರೋಗ್ಯವನ್ನು ಕೂಡ ಹೆಚ್ಚು ಮಾಡುವುದರಲ್ಲಿ ಸಹಾಯಕಾರಿಯಾಗಿರುತ್ತದೆ.
ಕ್ಯಾರೆಟ್ :
ಕ್ಯಾರೆಟ್ ನಲ್ಲಿ ಇರುವ ಗ್ಲುಟೊನಿಯಾನ್ ಫ್ಲಾವನಾಯ್ಡ್ಸ್ ಬೀಟಾಕೆರೋಟಿನ್ ಅಂಶವೂ ಇದ್ದು, ಇದು ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಲಿವರ್ ಆರೋಗ್ಯವನ್ನು ಸುಧಾರಿಸುವುದರಲ್ಲಿ ಸಹಕರಿಸುವುದರ ಜೊತೆಗೆ, ಕಣ್ಣಿನ ದೃಷ್ಟಿಯನ್ನು ವೃದ್ಧಿಸುತ್ತದೆ.
ಅರಿಶಿಣ :
ಮನೆಯ ಅಡುಗೆ ಮನೆಯಲ್ಲಿ ಇರುವ ಒಂದು ಸಿದ್ಧೌಷಧ ಈ ಅರಿಶಿಣ, ಇದರಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದು ದೇಹದ ಪ್ರತಿಯೊಂದು ಅಂಗಾಂಗಗಳ ಆರೋಗ್ಯವನ್ನು ಕಾಪಾಡುತ್ತದೆ.
ಇದರಲ್ಲಿ ಆಂಟಿ ಆಕ್ಸಿಡೆಂಟ್ ಆ್ಯಂಟಿ ಇನ್ಫ್ಲಮೇಟರಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿದ್ದು, ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ, ನಾವು ನಮ್ಮ ಬಗ್ಗೆ ಕಾಳಜಿ ಮಾಡದೇ ಇದ್ದರೆ ಬೇರೆಯವರ ಕಾಳಜಿ ಮಾಡುವುದಕ್ಕೆ ಹೇಗೆ ಸಾಧ್ಯ ಹೇಳಿ,
ಆದ ಕಾರಣ ಮೊದಲು ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ, ನಂತರ ಬೇರೆಯವರ ಕಾಳಜಿ ಮಾಡೋಣ. ಇಂದಿನ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.
ಇನ್ನು ಹೆಚ್ಚಿನ ವಿವರಗಳಿಗಾಗಿ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ನೋ ಪಾಲು ಮಾಡಿ ಶುಭ ದಿನ ಧನ್ಯವಾದ.