Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವು ಈ ರೀತಿಯಾಗಿ ಮಾಡಿದರೆ ಎಷ್ಟೇ ಭಯಂಕರ ತಲೆನೋವು ಆದರೂ ಕ್ಷಣದಲ್ಲಿ ಕಡಿಮೆಯಾಗುತ್ತದೆ!!!!

ನಮಸ್ಕಾರ ಸ್ನೇಹಿತರೆ.. ತಲೆನೋವು ಎನ್ನುವಂಥದ್ದು ಸಾಮಾನ್ಯವಾಗಿ ಎಲ್ಲರಿಗೂ ಕಾಡುವಂತಹ ಸಮಸ್ಯೆ. ಈ ಸಮಸ್ಯೆ ನಾನಾ ರೀತಿಯ ಕಾರಣಗಳಿಂದ ಬರುತ್ತದೆ.ತಲೆನೋವು ಬಂದಾಗ ಕೆಲವರು ಮೆಡಿಕಲ್ ಗಳಲ್ಲಿ ಸಿಗುವಂತಹ ಮಾತ್ರೆಗಳನ್ನು ತೆಗೆದುಕೊಂಡು ತಮ್ಮ ತಲೆನೋವನ್ನು ಪರಿಹಾರ ಮಾಡಿಕೊಳ್ಳುತ್ತಾರೆ.

ಹೌದು ಸ್ನೇಹಿತರೆ ತಲೆನೋವು ಬಂದಾಗ ಮೆಡಿಕಲ್ ಗಳಲ್ಲಿ ಸಿಗುವಂತಹ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ನೈಸರ್ಗಿಕವಾಗಿ ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ನಿಮ್ಮ ತಲೆನೋವನ್ನು ಕ್ಷಣಮಾತ್ರದಲ್ಲಿ ಹೋಗಲಾಡಿಸಿ ಕೊಳ್ಳಬಹುದು.

ಇಂದಿನ ದಿನಮಾನಗಳಲ್ಲಿ ಸಾಮಾನ್ಯವಾಗಿ ಜನರು ಮಾತ್ರೆಗಳ ಮೊರೆಹೋಗುತ್ತಾರೆ ಆದರೆ ಅವರಿಗೆ ಅದರ ಅಪಾಯಗಳ ಬಗ್ಗೆ ಮಾಹಿತಿ ಇರುವುದಿಲ್ಲ ಹಾಗಾಗಿ ತಲೆನೋವು ಬಂದ ತಕ್ಷಣ  ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ.

ಹೀಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಜೀವಕ್ಕೆ ಅಪಾಯ ಎಂದು ಹೇಳಬಹುದು.ಸ್ನೇಹಿತರೆ ನೈಸರ್ಗಿಕವಾಗಿ ಕ್ಷಣದಲ್ಲಿ ತಲೆ ನೋವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನಾನು ಇಂದಿನ ಮಾಹಿತಿಯನ್ನು ತಿಳಿಸಿಕೊಡುತ್ತೇನೆ.

ಈ ತಲೆನೋವು ಎನ್ನುವುದು ನಾನಾ ಕಾರಣಗಳಿಂದ ಬರುತ್ತದೆ. ಮಾನಸಿಕ ಒತ್ತಡ ಹಾಗೂ ನಿಮಗೆ ಯಾವುದೇ ರೀತಿಯ ನೆಗಡಿ, ಕೆಮ್ಮು ,ಶೀತ ಆಗಿದ್ದಲ್ಲಿ ಕೂಡ ತಲೆನೋವು ಕಂಡುಬರುತ್ತದೆ.

ಈ ತಲೆನೋವು ಬಂತೆಂದರೆ ಸಾಕು ಯಾವುದೇ ಕೆಲಸವನ್ನು ಮಾಡಲು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ.ಹಾಗಾಗಿ ಈ ತಲೆ ನೋವನ್ನು ಹೋಗಲಾಡಿಸಲು ನಾವು ಮನೆಯಲ್ಲಿರುವ ಪದಾರ್ಥಗಳಿಂದ ಅದನ್ನು ಕಡಿಮೆ ಮಾಡಿಕೊಳ್ಳಬಹುದು ಸ್ನೇಹಿತರೆ.

ಈ ತಲೆನೋವು ನಿವಾರಣೆಗೆ ಶುಂಠಿ ಒಳ್ಳೆ ರೀತಿಯಲ್ಲಿ ಸಹಾಯಕವಾಗುತ್ತದೆ .ಸ್ವಲ್ಪ ಶುಂಠಿ ರಸವನ್ನು ಹಣೆಮೇಲೆ ಹಚ್ಚಬೇಕು. ಶುಂಠಿಯಲ್ಲಿ ಹಲವಾರು ನೋವುನಿವಾರಕ ಅಂಶಗಳಿರುವುದರಿಂದ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ತಲೆನೋವನ್ನು ಕ್ಷಣಮಾತ್ರದಲ್ಲಿ ಕಡಿಮೆ ಮಾಡಿಕೊಳ್ಳಬಹುದು.

ಇನ್ನೊಂದು ಮನೆಮದ್ದು ಯಾವುದೆಂದರೆ ಶುಂಠಿಯ ರಸವನ್ನು ಅಂದರೆ ಒಂದು ಚಮಚ ಶುಂಠಿಯ ರಸ ಜೊತೆಗೆ ಜೇನುತುಪ್ಪವನ್ನು ಸೇರಿಸಿ ತೆಗೆದುಕೊಳ್ಳುವುದರಿಂದ ಕ್ಷಣಮಾತ್ರದಲ್ಲಿ ತಲೆನೋವನ್ನು ಹೋಗಲಾಡಿಸಿ ಕೊಳ್ಳಬಹುದು.

ಅದಲ್ಲದೆ ತುಳಸಿ ಎಲೆಗಳನ್ನು ನೀರಿನೊಂದಿಗೆ ಕುದಿಸಿ ಅದನ್ನು ಉಗುರು ಬೆಚ್ಚಗೆ ಮಾಡಿ ಅದರ ಜೊತೆಗೆ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು ಹೀಗೆ ಮಾಡಿದರೆ ನೋವು ಬೇಗನೆ ಉಪಶಮನವಾಗುತ್ತದೆ.

ಇನ್ನು  ಕೆಲವರಿಗೆ ಬೆಳಗ್ಗೆ ಎದ್ದಾಗಲೇ ತಲೆನೋವಿನ ಸಮಸ್ಯೆ ಇರುತ್ತದೆ. ಅಂತವರಿಗೆ ಸೇಬು ಹಣ್ಣಿನ ಮೇಲೆ ಸ್ವಲ್ಪ ಉಪ್ಪನ್ನು ಹಾಕಿ ನಂತರ ನೀರು ಕುಡಿಯುವುದರಿಂದ ಅವರ ತಲೆನೋವು ಪರಿಹಾರವಾಗುತ್ತದೆ.

ಹತ್ತು ಅಥವಾ ಹದಿನೈದು ಪುದೀನಾ ಎಲೆಗಳನ್ನು ಒಂದು ಲೋಟ ನೀರಿನೊಂದಿಗೆ ಕುದಿಸಿ ಅದನ್ನು ಕುಡಿಯುವುದರಿಂದ ತಲೆನೋವು ಕೆಲವೇ ಕೆಲವು ಕ್ಷಣಗಳಲ್ಲಿ ಉಪಶಮನವಾಗುತ್ತದೆ.

ಇನ್ನೂ ವಿಳೆದೆಲೆ ಉಪಯೋಗಿಸಿಕೊಂಡು ತಲೆನೋವನ್ನು ನಿವಾರಣೆ ಮಾಡಿಕೊಳ್ಳಬಹುದು.ನೋವಿನಿಂದ ಬಳಲುತ್ತಿರುವ ಆಗ ಎರಡು ಅಥವಾ ಮೂರು ಎಲೆಗಳನ್ನು ಉಪಯೋಗಿಸಿಕೊಂಡು ಅಂದರೆ ಎಲೆಗಳನ್ನು ಬಾಯಿಗೆ ಹಾಕಿಕೊಂಡು ಜಗಿದು ನುಂಗಿದರೆ ತಲೆನೋವು ಉಪಶಮನವಾಗುತ್ತದೆ.

ಇಲ್ಲವಾದಲ್ಲಿ ವೀಳ್ಯದೆಲೆಯ ಪೇಸ್ಟ್ ಮಾಡಿ ಹಚ್ಚುವುದರಿಂದ ಬೇಗನೆ ತಲೆನೋವನ್ನು ನಿವಾರಣೆ ಮಾಡಿಕೊಳ್ಳಬಹುದು.ತಲೆನೋವಿನಿಂದ ಬಳಲುತ್ತಿರುವಾಗ ನೈಸರ್ಗಿಕವಾಗಿ ತಲೆನೋವನ್ನು  ಉಪಶಮನ ಮಾಡಿಕೊಳ್ಳಬೇಕೇ ಹೊರತು ಇದಕ್ಕೆ ಮಾತ್ರೆಗಳ ಮೊರೆ ಹೋಗಬಾರದು ಸ್ನೇಹಿತರೆ ಇದರಿಂದ ಅಪಾಯವೇ ಹೆಚ್ಚು.

ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ. ಹಾಗೆಯೇ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *