ಹಸುವನ್ನು ಗೋಮಾತೆ ಎಂದು ಕರೆಯಲಾಗುತ್ತದೆ ಈ ರೀತಿ ಯಾಕೆ ಹೇಳುತ್ತಾರೆ ಅಂದರೆ ಸಾಕಷ್ಟು ಪುರಾಣಗಳಲ್ಲಿ ನೀವು ನೋಡಿರಬಹುದು ಹಸುಗಳನ್ನು ದೇವರು ಎಂದು ಪೂಜಿಸುತ್ತಾರೆ.
ಹಾಗೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬದಲ್ಲಿಯೂ ಕೂಡ ಹಾಗೂ ಮಂಗಳವಾರದಂದು ಶುಕ್ರವಾರದಂದು ಗೋಮಾತೆಯನ್ನು ಕರೆಸಿ ಪೂಜೆ ಮಾಡಿ ಅದಕ್ಕೆ ಅಕ್ಕಿ ಬೆಲ್ಲವನ್ನು ತಿನ್ನಿಸಿ ಕಳುಹಿಸುತ್ತಾರೆ .
ಹೀಗೆ ಯಾಕೆ ಪದ್ಧತಿಯನ್ನು ಪಾಲಿಸಿಕೊಂಡು ಬರಲಾಗಿದೆ ಅಂದರೆ ಗೋ ಮಾತೆಯಲ್ಲಿ ಮೂರು ಕೋಟಿ ದೇವಾನು ದೇವತೆಗಳು ನೆಲೆಸಿರುತ್ತಾರೆ ಎಂಬ ಕಾರಣದಿಂದಾಗಿ .ಹಾಗೆಯೇ ಈ ಗೋ ಮಾತೆಯಲ್ಲಿ ಇರುವಂತಹ ಪ್ರತಿಯೊಂದು ಭಾಗವೂ ಕೂಡ ಒಂದೊಂದು ದೇವರನ್ನು ಬಿಂಬಿಸುತ್ತದೆ ಮತ್ತು ಹಸುವನ್ನು ಲಕ್ಷ್ಮಿಯ ಸ್ವರೂಪ ಅಂತ ಕೂಡ ಕರೆಯಲಾಗುತ್ತದೆ.
ಆದ್ದರಿಂದಲೇ ಮನೆಯ ಗೃಹ ಪ್ರವೇಶದ ಸಮಾರಂಭಗಳಲ್ಲಿ ಗೋಮಾತೆಯನ್ನು ಮನೆಗೆ ಬಲಗಾಲನ್ನು ಇಡಿಸಿ ಕರೆದುಕೊಂಡು ಬರಲಾಗುತ್ತದೆ .ಇನ್ನು ಭೂಲೋಕದ ಅವೃತವಾಗಿರುವ ತಹ ಹಾಲನ್ನು ನೀಡುವ ಗೋಮಾತೆಯ ನಿಜಕ್ಕೂ ದೇವರ ಸ್ವರೂಪವೇ ಹೌದು , ನಾವು ಈ ದಿನದ ಮಾಹಿತಿಯಲ್ಲಿ ಹೇಳಲು ಹೊರಟಿರುವ ವಿಚಾರವೂ ಕೂಡ ಈ ಗೋಮಾತೆಯ ಬಗ್ಗೆಯೇ .
ನಲವತ್ತ ನಾಲ್ಕು ಜನ ಸೈನಿಕರ ಪ್ರಾಣವನ್ನು ಉಳಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡಿದ ಗೋ ಮಾತೆ ನಿಜಕ್ಕೂ ದೇವರ ಸ್ವರೂಪವೇ ಹೌದು ಅದು ಹೇಗೆ ಅಂತ ಹೇಳ್ತೀವಿ ಈ ಪೂರ್ತಿ ಕಥೆಯನ್ನು ಓದಿರಿ . ಛತ್ತೀಸ್ ಘರ್ ನ ಬಿಜಾಪುರದಲ್ಲಿ ನಲವತ್ತ ನಾಲ್ಕು ಸಿಆರ್ ಪಿಎಫ್ ಪೊಲೀಸ್ ಗಳು ಬಸ್ ನಲ್ಲಿ ಹೋಗುತ್ತಿರುತ್ತಾರೆ ಈ ರೀತಿಯಾಗಿ ಈ ಪೊಲೀಸರು ಹೋಗುವಂತಹ ದಾರಿಯಲ್ಲಿ ಅಡ್ಡವಾಗಿ ಒಂದು ಗೋಮಾತೆ ಬಂದು ನಿಲ್ಲುತ್ತದೆ .
ನಂತರ ಬಸ್ ಅನ್ನು ಚಲಾಯಿಸುತ್ತಿದ್ದಂತಹ ಡ್ರೈವರ್ ಎಷ್ಟೇ ಹಾರ್ನ್ ಮಾಡಿದರೂ ಕೂಡ ಗೋಮಾತೆ ಅಲ್ಲಿಂದ ಜಾಗವನ್ನು ಕೂಡ ಕದಲುವುದಿಲ್ಲ , ಇನ್ನು ಹಾರ್ ಮಾಡುತ್ತಿದ್ದ ಡ್ರೈವರ್ ಗೋಮಾತೆ ಬದಿಗೇ ಹೋಗುತ್ತಿದ್ದ ಹಾಗೆ ಅಲ್ಲೊಂದು ಬಾಂಬ್ ಬ್ಲಾಸ್ಟ್ ಆಗುತ್ತದೆ .
ಹೌದು ಸ್ನೇಹಿತರೆ ಛತಿಸ್ಘರದಲ್ಲಿ ಮೊದಲೇ ನಕ್ಸಲಿಸಂ ಹೆಚ್ಚು ಈ ನಕ್ಸಲೆಟ್ ಗಳ ಕೃತ್ಯದಿಂದಾಗಿ ಒಂದು ಮೂಕ ಪ್ರಾಣಿ ಪ್ರಾಣವನ್ನು ತ್ಯಾಗ ಮಾಡಬೇಕಾಯಿತು ಆದರೆ ಗೋಮಾತೆ ತನ್ನ ಪ್ರಾಣವನ್ನು ತ್ಯಾಗ ಮಾಡಿಯೇ ಸುಮಾರು ನಲವತ್ತು ನಾಲ್ಕು ಸೈನಿಕರ ಪ್ರಾಣವನ್ನು ಉಳಿಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯೇ ಹೌದು .
ಛತಿಸ್ಘರದಲ್ಲಿ ಬಾಂಬ್ ಬ್ಲಾಸ್ಟ್ ಆಗುವ ಪ್ರಕರಣಗಳು ಸಾಮಾನ್ಯವೆ ಆದರೆ ಇದೀಗ ಗೋ ಮಾತೆ ನಲವತ್ತ ನಾಲ್ಕು ಸೈನಿಕರ ಪ್ರಾಣವನ್ನು ಉಳಿಸಲು ತನ್ನ ಪ್ರಾಣವನ್ನು ತ್ಯಾಗ ಮಾಡಿತು . ನಕ್ಸಲರು ಸಿಆರ್ ಪಿಎಫ್ ಪೊಲೀಸರು ಬರುತ್ತಿದ್ದಂತಹ ರಸ್ತೆಯಲ್ಲಿ ಪ್ರೆಶರ್ ಬಾಂಬ್ ಅನ್ನು ಇಟ್ಟಿದ್ದರು ಆ ಪ್ರೆಶರ್ ಬಾಂಬ್ ಮೇಲೆ ಸಿಆರ್ ಪಿಎಫ್ ಪೊಲೀಸರು ಹೋಗುತ್ತಿದ್ದಂತೆ ಬಸ್ ಹರಿದು ಹೋಗಿದ್ದರೆ ಆ ಬಾಂಬ್ ಅಲ್ಲೇ ಬ್ಲಾಸ್ಟ್ ಆಗಿ ಅದರಲ್ಲಿ ಇದ್ದಂತಹ ನಲವತ್ನಾಲ್ಕು ಸೈನಿಕರು ಪ್ರಾಣವನ್ನು ತ್ಯಾಗ ಮಾಡಬೇಕಾಗಿತ್ತು .
ಅದೇನೇ ಆಗಲಿ ಗೋಮಾತೆ ನಲವತ್ನಾಲ್ಕು ಸೈನಿಕರ ಪ್ರಾಣವನ್ನು ಕಾಪಾಡಿ ಇಡೀ ದೇಶದ ಗಮನವನ್ನು ಸೆಳೆದಿದೆ ಆ ಒಂದು ಮೂಕ ಪ್ರಾಣಿಯ ಆತ್ಮಕ್ಕೆ ಶಾಂತಿ ಸಿಗಲೆಂದು ನಾವು ಕೇಳಿಕೊಳ್ಳೋಣ ಹಾಗೂ ನಮ್ಮ ಭಾರತ ದೇಶವನ್ನು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ಕಾಯುವ ಸೈನಿಕರಿಗೂ ಕೂಡ ಒಂದು ಸಲಾಂ ಹೇಳೋಣ .ನೀವು ಕೂಡ ಗೋ ಮಾತೆಯನ್ನು ದೇವರೆಂದು ಪೂರೈಸುವುದಾದರೆ ತಪ್ಪದೇ ಜೈ ಗೋ ಮಾತೆ ಎಂದು ಕಮೆಂಟ್ ಮಾಡಿ ಜೈ ಜವಾನ್ ಜೈಕಿಸಾನ್ .