ಹಲ್ಲಿ ಶಕುನ ಎಂದರೇನು..? ಹಲ್ಲಿ ಮೈ ಮೇಲೆ ಬಿದ್ದರೆ ಏನ್ ಅರ್ಥ..?

345

ಹಲ್ಲಿ ಎಂದ ಕೊಳಲೇ ಸ್ವಲ್ಪ ಮಟ್ಟಿಗೆ ನಾವು ಮುಜುಗರ, ಭಯ ಹಾಗು ಜೊತೆಯಲ್ಲಿ ನಿರ್ಲಕ್ಷ್ಯ ಮಾಡುವುದು ಉಂಟು, ಏನಾದರೂ ಮಾತನಾದ ಬೇಕಾದರೆ ಹಲ್ಲಿ ಏನಾದರೂ ಶಬ್ದ ಮಾಡಿದರೆ ಸಾಕು ನಾನು ಹೇಳುವುದು ನಿಜ.

ಅನ್ನೋ ಮಾತನ್ನ ಹೇಳಿಯೂ ಇರ್ತೀರ ಹಾಗೆ ಕೇಳಿಯೂ ಇರ್ತೀರ ಆದರೆ ನಾನು ನಿಮಗೆ ಕೇಳುವ ಪ್ರೆಶ್ನೆ ಹೌದ ಅದು ನಿಜಾನಾ, ನಿಜಾ ಅಂದರೆ ಅದರ ಜೊತೆಯಲ್ಲಿ ಇನ್ನು ಹಲವು ವಿಷ್ಯಗಳಿದ್ದು ಒಮ್ಮೆ ಅದನ್ನು ತಿಳಿದುಕೊಂಡುಬಿಡಿ.

ಹಿಂದೂ ಪುರಾಣಗಳಲ್ಲಿ ವಿವಿಧ ಪ್ರಾಣಿಗಳಿಗೆ ವಿವಿಧ ಪಾತ್ರಗಳನ್ನು ನೀಡಲಾಗಿದೆ. ಆದರೆ ಅತಿ ನಿಕೃಷ್ಟವಾಗಿ ಕಂಡುಬಂದ ಜೀವಿಯೆಂದರೆ ಹಲ್ಲಿ. ಪುರಾಣದ ಪ್ರಕಾರ ಅಮೃತಮಂಥನದ ಸಮಯದಲ್ಲಿ ಅಮೃತವನ್ನು ಕುಡಿದ ಸ್ವರ್ಣಬಾಹು ಎಂಬ ರಾಕ್ಷಸನನ್ನು ಮೋಹಿನಿಯ ಅವತಾರದ ಮಹಾವಿಷ್ಣು ಸಂಹರಿಸಿದ್ದನಂತೆ. ರುಂಡವಿಲ್ಲದ ಮುಂಡಕ್ಕೆ ಕೇತು ಎಂದು ಕರೆಯಲಾಗುತ್ತದೆ ಹಾಗೂ ರುಂಡವನ್ನು ಒಂದು ಹಾವಿನ ದೇಹಕ್ಕೆ ಜೋಡಿಸಿ ರಾಹು ಎಂದು ಕರೆಯಲಾಗುತ್ತದೆ.

ಹಲ್ಲಿಯು ನಮ್ಮ ದೇಹದ ಮೇಲೆ ಎಲ್ಲೇ ಬಿದ್ದರು ಅದಕ್ಕೆ ಒಂದೊಂದು ಅರ್ಥವಿದೆ ಅದೇನು ಅಂತ ತಿಳಿಯೋಣ.

ತಲೆಯ ಮೇಲೆ ಬಿದ್ದರೆ ಕಲಹ, ಮುಖದ ಮೇಲೆ ಧನಾಗಮವು, ಕಣ್ಣುಗಳು ಮೇಲೆ ತೇಜಸ್ಸು, ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು, ಮೂಗಿನ ಮೇಲೆ ಸುಗಂಧವಸ್ತು ಪ್ರಾಪ್ತಿ, ಮೇಲಿನ ತುಟಿಯ ಮೇಲೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಧನಲಾಭ, ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ, ಎಡ ಕಿವಿಯ ಮೇಲೆ ವ್ಯಾಪಾರಲಾಭ.

ದವಡೆಯ ಮೇಲೆ ಸ್ತ್ರೀ ಸೌಖ್ಯ, ಎಡ ಭುಜದ ಮೇಲೆ ವ್ಯಥೆ, ಬಲ ತೋಳಿನ ಮೇಲೆ ಚೋರಭಯ, ಎಡತೋಳಿನ ಮೇಲೆ ಸುಖಪ್ರದ, ಬಲಗೈ ಮೇಲೆ ದ್ರವ್ಯಲಾಭ, ಬೆರಳುಗಳ ಮೇಲೆ ಶುಭ, ಎದೇಯ ಮೇಲೆ ಯಶಸ್ಸು, ಹೊಟ್ಟೆಯ ಮೇಲೆ ಧಾನ್ಯಲಾಭ, ಹೊಕ್ಕಳಿನ ಮೇಲೆ ಸೌಋ್ಯ, ಬಲ ಮೊಳಕಾಲಿನ ಮೇಲೆ ತೀರ್ಥಯಾತ್ರೆ, ಎಡಮೊಳಕಾಲಿನ ಮೇಲೆ ಕೆಲಸ ಸಿದ್ದಿ, ಕಾಲುಗಳ ಮೇಲೆ ಪ್ರಯಾಣವು, ಹೀಗೆ ಎಲ್ಲದಕ್ಕೂ ಶಾಸ್ತ್ರದಲ್ಲಿ ಒಂದೊಂದು ಅರ್ಥವಿದೆ, ಹಾಗು ಇದು ನಮ್ಮ ಭವಿಷ್ಯದ ಮುನ್ಸೂಚಕ ಅಂತಾನೂ ಹೇಳಲಾಗುತ್ತದೆ.

ಹಲ್ಲಿಯ ಶಕುನ : ಯಾವ ವಿಷಯವನ್ನಾದರೂ ಆಲೋಚಿಸುತ್ತ ಕುಳಿತ ಸಮಯದಲ್ಲಿ ಹಲ್ಲಿಯ 1 ಸಾರಿ ನುಡಿದರೆ ಮೃತ್ಯು ವಾರ್ತೆಯ ಶ್ರವಣವು, 2 ಸಾರಿ ನುಡಿದರೆ ಸುಖವು, 3 ಸಾರಿ ನುಡಿದರೆ ಗಮನವು, 4 ಸಾರಿ ನುಡಿದರೆ ಲಾಭವು, 5 ಸಾರಿ ನುಡಿದರೆ ಒಳ್ಳೆಯದು, 6 ಸಾರಿ ನುಡಿದರೆ ಕಲಹವು, 7 ಸಾರಿ ನುಡಿದರೆ ಬಂಧುಗಳು ಬರುವರು, 8 ಸಾರಿ ನುಡಿದರೆ ಮರಣಕ್ಕೆ ಸಮಾನವಾದ ಕಷ್ಟವು, 9 ಸಾರಿ ನುಡಿದರೆ ಫಲವನ್ನು ನೋಡಕೂಡದು, ಹಾಗಾಗಿ ಮಾತಾಡುವಾ ಹಲ್ಲಿ ಶಬ್ದ ಮಾಡಿದರೆ ನಾನು ಹೇಳಿದ ಮಾತು ನಿಜ ಅನ್ನುವವರಿಗೆ ಎಷ್ಟು ಸಲಿ ಶಬ್ದ ಮಾಡಿತು ಅಂತಾನೂ ಕೇಳಿ ಭವಿಷ್ಯ ನೀವೇ ಹೇಳಿಬಿಡಿ.

ಹಾಗೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here