ಹಲ್ಲು ನೋವಿನ ಸಮಸ್ಯೆಗೆ ನಾನಾ ತರಹದ ಮನೆಮದ್ದುಗಳನ್ನು ನೀವು ತಿಳಿದಿರುತ್ತೀರಿ ಹೌದು ಹಲ್ಲು ನೋವು ಬಂದ ಕೂಡಲೇ ಈ ಮನೆಮದ್ದುಗಳನ್ನು ಮಾಡಲು ಮುಂದಾಗುತ್ತೀರಾ ಅದರಲ್ಲಿ ಹಲ್ಲು ನೋವು ಬಂದ ಕೂಡಲೇ ನಾವು ಮಾಡುವ ಮೊದಲ ಕೆಲಸ ಅಂದರೆ ಲವಂಗವನ್ನು ತೆಗೆದುಕೊಂಡು ಹಲ್ಲು ನೋವು ಇರುವಂತಹ ಜಾಗಕ್ಕೆ ಇಟ್ಟುಕೊಳ್ಳುವುದು .
ಆದರೆ ಈ ಲವಂಗವನ್ನು ಹಳ್ಳಿಗೆ ಇಟ್ಟುಕೊಳ್ಳುವುದರಿಂದ ನೋವು ಸ್ವಲ್ಪ ಶಮನವಾಗುತ್ತದೆ ಹೊರತು ಹಲ್ಲು ನೋವು ಪೂರ್ತಿಯಾಗಿ ಹೋಗೋದಿಲ್ಲ ನಾವು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಹಲ್ಲು ನೋವನ್ನು ಕೂಡಲೇ ಪರಿಹರಿಸಿಕೊಳ್ಳುವುದಕ್ಕೆ ಯಾವ ಮನೆ ಮುತ್ತನ್ನು ಪಾಲಿಸಬೇಕು ಎಂದು .
ಸ್ನೇಹಿತರೆ ಯಾವುದೇ ಸಮಸ್ಯೆ ಬಂದರೂ ಕೂಡ ಅದಕ್ಕೆ ಮೊದಲು ಮಾತ್ರೆಗಳನ್ನು ತೆಗೆದುಕೊಳ್ಳಲು ಮುಂದಾಗುವುದು ತಪ್ಪು ಯಾಕೆಂದರೆ ಪ್ರತಿಯೊಂದು ಸಮಸ್ಯೆಗೂ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾದರೆ ನಾನಾ ತರಹದ ಸಮಸ್ಯೆಗಳು ಇನ್ನೂ ನಮ್ಮ ದೇಹದಲ್ಲಿ ಹುಟ್ಟು ಹಾಕಿಕೊಳ್ಳುತ್ತದೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನ ಕೂಡ ಕುಗ್ಗಿಸುತ್ತದೆ ಈ ಮಾತ್ರೆಗಳು .
ಆದ್ದರಿಂದ ಹಲ್ಲು ನೋವಿನಂತಹ ಸಮಸ್ಯೆ ಅಥವಾ ಶೀತ ಕೆಮ್ಮು ಇಂತಹ ಸಮಸ್ಯೆಗಳು ಎದುರಾದರೆ ಮೊದಲಿಗೆ ಮನೆಮದ್ದುಗಳನ್ನು ಮಾಡುವುದು ಒಳ್ಳೆಯ ಕೆಲಸ ಹಾಗೂ ಈ ಮನೆ ಮದ್ದುಗಳು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಮನೆ ಮದ್ದುಗಳನ್ನು ಪಾಲಿಸುವುದರಿಂದ ಆರೋಗ್ಯ ಕೂಡ ವೃದ್ಧಿಸುತ್ತದೆ ಇದರಿಂದ ಯಾವ ಕೆಟ್ಟ ಪರಿಣಾಮಗಳು ಆಗುವುದಿಲ್ಲ .
ನಾವು ಹೇಳುವಂತಹ ಈ ಮನೆ ಮೊದಲು ನೀವು ಒಮ್ಮೆ ಪಾಲಿಸಿ ನೋಡಿ ನಿಜಕ್ಕೂ ನಿಮ್ಮ ಹಲ್ಲು ನೋವಿನ ಸಮಸ್ಯೆಗೆ ಬೇಗನೇ ಶಮನವನ್ನು ಪಡೆದುಕೊಳ್ಳಬಹುದಾಗಿದೆ ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿ ನಾವು ಹೇಳುವ ಕ್ರಮವನ್ನು ಪಾಲಿಸಿ .
ಬೆಳ್ಳುಳ್ಳಿ ಮತ್ತು ಲವಂಗದ ಎಣ್ಣೆ …
ಬೆಳ್ಳುಳ್ಳಿಯನ್ನು ಜಜ್ಜಿ ರಸ ತೆಗೆದು ರಸವನ್ನು ಲವಂಗದ ಎಣ್ಣೆ ಜೊತೆ ಬೆರೆಸಬೇಕು ನಂತರ ಹತ್ತಿ ಉಂಡೆಯನ್ನು ತೆಗೆದುಕೊಂಡು ಈ ಎಣ್ಣೆಯನ್ನು ತೆಗೆದು ಹಲ್ಲು ನೋವು ಆಗಿರುವ ಜಾಗಕ್ಕೆ ಇಟ್ಟುಕೊಳ್ಳುವುದರಿಂದ ನೋವು ಶಮನವಾಗುತ್ತದೆ ಜೊತೆಗೆ ಹಲ್ಲುಗಳು ಬಲಗೊಳ್ಳುತ್ತವೆ .
ನಿಂಬೆ ಹಣ್ಣಿನ ರಸ ಮತ್ತು ಇಂಗು …
ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಯು ಇರುವ ಕಾರಣದಿಂದಾಗಿ ಈ ನಿಂಬೆಹಣ್ಣನ್ನು ಹಲ್ಲು ನೋವಿಗೆ ಬಳಸುವುದರಿಂದ ಸೋಂಕು ನಿವಾರಣೆಯಾಗುತ್ತದೆ ಜೊತೆಗೆ ನಿಂಬೆ ಹಣ್ಣಿನ ರಸ ಹಾಗೂ ಅದಕ್ಕೆ ಇಂಗನ್ನು ಬೆರೆಸಿ ಗೋವಾದಂತಹ ಜಾಗಕ್ಕೆ ಹಚ್ಚುವುದರಿಂದ ನೋವಿನ ಮೇಲೆ ಒಳ್ಳೆಯ ಕೆಲಸ ಮಾಡುತ್ತದೆ .
ಬೇವು ಮತ್ತು ಅಕೇಶಿಯಾ …
ಬೇವು ಮತ್ತು ಅಕೇಶಿಯಾ ಈ ಎರಡು ಸೊಪ್ಪನ್ನು ಅರೆದು ಇದರಲ್ಲಿ ರಸ ತೆಗೆದು ಹಚ್ಚುವುದರಿಂದ ನೋವು ಬೇಗನೆ ಮಾಯವಾಗುತ್ತದೆ .
ಕರಿಮೆಣಸು ಮತ್ತು ಕಲ್ಲುಪ್ಪು ….
ಕರಿಮೆಣಸನ್ನು ಆಯುರ್ವೇದದಲ್ಲಿ ಮರೀಚ ಎಂದು ಕರೆಯಲಾಗುತ್ತದೆ ಈ ಎರಡು ಪದಾರ್ಥಗಳ ಮಿಶ್ರಣವನ್ನು ಮಾಡಿ ಹಲ್ಲಿಗೆ ಹಚ್ಚುವುದರಿಂದ ಸೂಕ್ಷ್ಮ ಹಲ್ಲುಗಳ ನೋವಿಗೂ ಕೂಡ ಇದು ಶಮನವನ್ನು ನೀಡುತ್ತದೆ ಹಾಗೂ ಹಲ್ಲು ನೋವು ಕೂಡ ಬೇಗನೇ ಪರಿಹಾರವಾಗುತ್ತದೆ .
ಕೊಬ್ಬರಿ ಎಣ್ಣೆ ಮತ್ತು ಕಲ್ಲುಪ್ಪು ..
ಕೊಬ್ಬರಿ ಎಣ್ಣೆಯೊಂದಿಗೆ ಕಲ್ಲುಪ್ಪನ್ನು ಕರಗಿಸಿ ಈ ಎಣ್ಣೆಯನ್ನು ನೋವಾದಂತಹ ಜಾಗಕ್ಕೆ ಕಾಟನ್ ಬಾಲ್ ಸಹಾಯದಿಂದ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ ಅಥವಾ ಎಣ್ಣೆಯಲ್ಲಿ ಅದ್ದಿ ಹತ್ತಿಯ ಉಂಡೆಯನ್ನು ನೋವಾದ ಹಲ್ಲುಗಳಿಗೆ ಇಡುವುದರಿಂದ ನೋವು ಕಡಿಮೆಯಾಗುತ್ತದೆ .
ಉಪ್ಪು ಮತ್ತು ಕಾಳು ಮೆಣಸು …
ಕಾಳು ಮೆಣಸನ್ನು ಮತ್ತು ಉಪ್ಪನ್ನು ಪುಡಿ ಮಾಡಿ ಹಲ್ಲುಗಳಿಗೆ ಹಚ್ಚುವುದರಿಂದ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಇದು ಸಹಕರಿಸುತ್ತದೆ ಜೊತೆಗೆ ವಸಡಿನ ಸಮಸ್ಯೆಯನ್ನು ದೂರ ಮಾಡುತ್ತದೆ .