ಹರಳೆಣ್ಣೆ ಉತ್ತಮ ರೋಚಕ ಗುಣವುಳ್ಳ ತೈಲ, ವಯಸ್ಸಿಗೆ ತಕ್ಕ ಪ್ರಮಾಣದಲ್ಲಿ ಹರಳೆಣ್ಣೆ ಸೇವಿಸುವುದರಿಂದ ಚೆನ್ನಾಗಿ ಬೇದಿ ಆಗುವುದು, ಮತ್ತು ದೇಹಕ್ಕೆ ಆರಾಮ ಸಿಗುವುದು.
ನಿಂಬೆ ರಸದೊಂದಿಗೆ ಹರಳೆಣ್ಣೆ ಸೇವಿಸುವುದರಿಂದ ಹೊಟ್ಟೆ ತೊಳಸುವಿಕೆ, ವಾಕರಿಕೆ, ಸಂಕಟ, ಉದರ ಬೇನೆ ಇತ್ಯಾದಿ ಉಪದ್ರವಗಳು ಪರಿಹಾರವಾಗಿ ದೇಹಕ್ಕೆ ಸುಖ ಉಂಟಾಗುವುದು.
ಕಣ್ಣು ಚುಚ್ಚುವಿಕೆ, ಕಣ್ಣು ಕೆಂಪಾಗುವುದು, ಕಣ್ಣುರಿ ಮತ್ತು ನೋವು ಕಂಡು ಬಂದಾಗ ಮೊಲೆಹಾಲಿನೊಂದಿಗೆ ಶುದ್ಧವಾದ ಹರಳೆಣ್ಣೆ ಚೆನ್ನಾಗಿ ಮಿಶ್ರ ಮಾಡಿ ಕಣ್ಣಿಗೆ ಹಾಕುವುದರಿಂದ ಶೀಘ್ರ ಗುಣ ಕಂಡು ಬರುವುದು.
ಅರಳೆಣ್ಣೆಯನ್ನು ಅಂಗಾಂಗಗಳಿಗೆ ಹಚ್ಚಿ ಚೆನ್ನಾಗಿ ಮಾಲೀಶು ಮಾಡಿದ ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೈ ಕೈ ನೋವು, ಕೀಲು ನೋವು ಬಿಟ್ಟುಹೋಗುವುದು, ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು, ಆಲಸ್ಯ ನಿವಾರಣೆಯಾಗುವುದು.
ಅಭ್ಯಂಜನ ಸ್ನಾನ ಕಣ್ಣಿಗೆ ತಂಪು ದೇಹಕ್ಕೆ ಸೋಂಪು, ವಾರಕ್ಕೊಮ್ಮೆ ಅಭ್ಯಂಜನ ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುವುದು, ಚರ್ಮ ಮೃದುವಾಗುವುದು, ದೇಹದಲ್ಲಿ ಲವಲವಿಕೆ ಉಂಟಾಗುವುದು.
ರಾತ್ರಿ ಮಲಗುವ ಮುಂಚೆ ಕಣ್ಣಿನ ರೆಪ್ಪೆಗಳಿಗೆ ಅಪ್ಪಟ ಶುದ್ಧ ಹರಳೆಣ್ಣೆ ಹಚ್ಚಿ ಮರುದಿನ ಬೆಳಗ್ಗೆ ಅಭ್ಯಂಜನ ಸ್ನಾನ ಮಾಡಿ, ದ್ರವ ರೂಪದ ಆಹಾರ ಸೇವಿಸಿ ಸಾಕಷ್ಟು ವಿಶ್ರಾಂತಿ ಪಡೆಯಿರಿ ಇದರಿಂದ ಚುಚ್ಚುವಿಕೆ, ಕಣ್ಣುರಿ ಗುಣವಾಗುವುದು.
ಚಿಟ್ಟ ಹರಳು ಬೀಜ ದ ವರ ಸಿಪ್ಪೆ ತೆಗೆದು, ಒಳಗಣ ಬಿಳುಪಾದ ಭಾಗ ವನ್ನು ಎದೆ ಹಾಲಿನಲ್ಲಿ ತೇದು, ಕಣ್ಣುಗಳಿಗೆ ಹಚ್ಚಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮೂರು ದಿನಗಳ ವರೆಗೆ ಈ ಚಿಕಿತ್ಸೆ ಮಾಡಿದಲ್ಲಿ ಕಣ್ಣು ಕೆಂಪಾಗಿದ್ದರೆ ಗುಣವಾಗುವುದು.
ಅರಳೆಣ್ಣೆ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ತಲೆಯಲ್ಲಿ ಹೊಟ್ಟು ಹೇಳುವುದಿಲ್ಲ.
ಗರ್ಭಿಣಿಯರು ದಿನಕ್ಕೊಮ್ಮೆ ಸ್ತನಕ್ಕೆ ಹರಳೆಣ್ಣೆ ಹಚ್ಚಿ ತೊಟ್ಟನ್ನು ಬೆರಳುಗಳಿಂದ ಹಿಡಿದು ಹೊರಮುಖವಾಗಿ ತೀಡುತ್ತಿದ್ದರೆ ಹೆರಿಗೆಯ ನಂತರ ಹಾಲುಣಿಸುವ ಕಾರ್ಯ ಸುಗಮವಾಗುವುದು.
ಹೆರಿಗೆಯ ನಂತರ ಸ್ತನಗಳಿಗೆ ಹರಳೆಣ್ಣೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡುವುದರಿಂದ ಗುದಗ್ರಂಥಿಗಳು ಉತ್ತೇಜನಗೊಂಡು ಹೆಚ್ಚು ಹಾಲು ಸ್ರವಿಸುವುದು.
ಅರಳೆಣ್ಣೆ ಸವರಿದ ವೀಳ್ಯದೆಲೆಯನ್ನು ದೀಪದ ಶಾಖಕ್ಕೆ ಹಿಡಿದು ಬಿಸಿ ಮಾಡಿದ ನಂತರ, ಎಲೆಯಿಂದ ಮಗುವಿನ ಹೊಟ್ಟೆಗೆ ಶಾಖ ಕೊಟ್ಟರೆ ಹೊಟ್ಟೆ ಉಬ್ಬರದಿಂದ ನೋವು ಅನುಭವಿಸುತ್ತಿರುವ ಮಗುವಿಗೆ ನೋವು ಪರಿಹಾರವಾಗುವುದು ಮತ್ತು ಹೊಟ್ಟೆ ಉಬ್ಬರ ಇಳಿಯುವುದು.
ಅರಳೆಣ್ಣೆ ಸವರಿ ಎಲೆಯನ್ನು ಎಣ್ಣೆಯ ದೀಪಕ್ಕೆ ಹಿಡಿದು ಬಿಸಿ ಮಾಡಿ ಊತವಿರುವ ಕೀಲುಗಳಿಗೆ ಕೊಟ್ಟರೆ ಇದು ನೋವು ಕಡಿಮೆಯಾಗುವುದು,
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ನಮ್ಮ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ .ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ .ಧನ್ಯವಾದ ಶುಭದಿನ