ಸೌತೆಕಾಯಿ ತಿರುಳನ್ನು ನಿಮ್ಮ ಅಂಗಾಲಿಗೆ ಇಟ್ಟು ಮಸಾಜ್ ಮಾಡಿದರೆ ಏನ್ ಆಗತ್ತೆ ಗೊತ್ತ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹಸಿರು ಸೌತೆಕಾಯಿ ಗಿಂತ ನಸು ಹಳದಿ ಬಣ್ಣ ಉಳ್ಳ ಸೌತೆಕಾಯಿ ಉತ್ತಮ, ಇದು ಸುಲಭವಾಗಿ ಜೀರ್ಣವಾಗುವ ಕಾಯಿಪಲ್ಲೆ, ಸೌತೆಕಾಯಿಯ ಸಿಪ್ಪೆ ತೆಗೆದು ಬಳಸುವುದು ಸರಿಯಲ್ಲ, ಸಿಪ್ಪೆ ಸಹಿತ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ, ಹಸಿ ಸೌತೆಕಾಯಿಯನ್ನು ಕಾಳುಮೆಣಸಿನ ಪುಡಿ ಮತ್ತು ಉಪ್ಪು ಸಹಿತ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುವುದು.

ಸೌತೆಕಾಯಿ ಹೆಚ್ಚಾಗಿ ಬಳ್ಳಿಯಲ್ಲಿ ಬೆಳೆಯುವಂತಹ ಸಸ್ಯವಾಗಿದೆ . ಈ ಒಂದು ಸಸ್ಯ ವ್ಯಾಪಕವಾಗಿ ಬೆಳೆಯುವಂತಹ ಸಸ್ಯವಾಗಿದೆ . ಸೌತೆಕಾಯಿ ಪ್ರಬೇಧಗಳು ಬೀಜವನ್ನು ಹೊಂದಿರುತ್ತವೆ . ಇವಕ್ಕೆ ಪರಾಗಸ್ಪರ್ಶ ಕ್ರಿಯೆ ಬೇಕಾಗುತ್ತದೆ

ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಮೊಸರಿನೊಂದಿಗೆ ಮಿಶ್ರ ಮಾಡಿ ರುಚಿಗೆ ತಕ್ಕಷ್ಟು ತೆಂಗಿನಕಾಯಿತುರಿ, ಹಸಿಮೆಣಸಿನಕಾಯಿ, ಹಸಿ ಕೊತ್ತಂಬರಿ ಸೊಪ್ಪು, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಊಟ ಮಾಡುವುದು ಸರ್ವೇಸಾಮಾನ್ಯ, ಇದರೊಂದಿಗೆ ಈರುಳ್ಳಿ ಟೊಮೆಟೋ ಹಣ್ಣು ಮತ್ತು ಕ್ಯಾರೆಟ್ ಸಣ್ಣಗೆ ಹೆಚ್ಚಿ ಮಿಶ್ರ ಮಾಡಿ ಸೇವಿಸುವುದು ಮತ್ತಷ್ಟು ಲಾಭಕರ, ಇದೊಂದು ಆರೋಗ್ಯಕರ ಸಲಾಡ್.

ಹೆಚ್ಚು ಬಾಯಾರಿಕೆ ಯಾಗುತ್ತಿರುವ ಆಗ ಸುಲಭವಾಗಿ ಜೀರ್ಣವಾಗದ ಆಹಾರ ಊಟ ಮಾಡಿದ ನಂತರ ಸೌತೆಕಾಯಿ ತಿನ್ನುವುದು ಉತ್ತಮ.ಮೂತ್ರ ಕಟ್ಟು, ಉರಿ ಮೂತ್ರ, ಮೂಲವ್ಯಾದಿ ಮತ್ತು ಪಿತ್ತವಿಕಾರಗಳು ಒಳ ರೋಗಿಗಳಿಗೆ ಸೌತೆಕಾಯಿ ಉತ್ತಮ ಆಹಾರ.

ಅತಿಸಾರ, ವಾಂತಿ ಈ ಕಾರಣಗಳಿಂದ ದೇಹದಲ್ಲಿ ಜಲದ ಕೊರತೆ ಉಂಟಾಗಿ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದು, ಈ ಸಂದರ್ಭದಲ್ಲಿ ಸೌತೆಕಾಯಿ ತುರಿದು ಬಟ್ಟೆಯಲ್ಲಿ ಗಂಟು ಕಟ್ಟಿ ಹಿಂಡಿ ರಸ ತೆಗೆಯಿರಿ, ಒಂದು ಬಟ್ಟಲು ರಸಕ್ಕೆ ಸ್ವಲ್ಪ ಗ್ಲೂಕೋಸ್ ಮತ್ತು ಒಂದು ಟೀ ಚಮಚ ನಿಂಬೆ ರಸ ಸೇರಿಸಿ ದಿನಕ್ಕೆ ಎರಡಾವರ್ತಿ ಸೇವಿಸಿರಿ, ಅತಿಯಾಗಿ ನೀರಡಿಕೆಯಾಗುತ್ತಿತ್ತು ಆಗ ಅಜ್ಜಿ ಗುಣವಾಗದಿದ್ದಾಗ ಈ ಪಾನೀಯ ಸೇವಿಸುವುದರಿಂದ ಗುಣ ಉಂಟು.

ಸೌತೆಕಾಯಿಯನ್ನು ಬಿಲ್ಲೆಯ ಆಕಾರದಲ್ಲಿ ಕತ್ತರಿಸಿ ಇಂತಹ ಒಂದು ಜಿಲ್ಲೆಯಿಂದ ಮುಖದ ಚರ್ಮವನ್ನು ಮೃದುವಾಗಿ ತಿಕ್ಕಿ ಈ ಅಭ್ಯಾಸ ಮುಂದುವರಿಸಿದಲ್ಲಿ ಮುಖ ಸ್ವಚ್ಛವಾಗುವುದು ಮತ್ತು ಕಾಂತಿಯುತವಾಗುವುದು.

ಸೌತೆಕಾಯಿ ಸಿಪ್ಪೆ ಮತ್ತು ನಿಂಬೆ ಹಣ್ಣಿನ ಸಿಪ್ಪೆ ನುಣ್ಣಗೆ ಅರೆದು ಚರ್ಮದ ಮೇಲೆ ಹಚ್ಚಿ ತಿಕ್ಕುವುದರಿಂದ ಚರ್ಮ ದೋಷದಿಂದ ಉಂಟಾಗಿರುವ ಕಪ್ಪು ಕಲೆಗಳ ಆಗಲೇ ಕಪ್ಪು ಛಾಯೆ ಗಳಾಗಲಿ ನಾಶವಾಗುವುದು ಮತ್ತು ಚರ್ಮದ ಬಣ್ಣ ಉತ್ತಮಗೊಳ್ಳುವುದು.

ಸೌತೆಕಾಯಿ ತಿರುಳಿನಿಂದ ಅಂಗಾಲು ಗಳನ್ನು ಚೆನ್ನಾಗಿ ತಿಕ್ಕಿದರೆ ಕಣ್ಣಿಗೆ ನಿದ್ದೆ ಚೆನ್ನಾಗಿ ಹತ್ತುವುದು ಅಂಗಾಲು ಉರಿ ಕಣ್ಣುರಿ ಶಾಂತವಾಗುವುದು.

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ನಮ್ಮ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ .ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ .ಧನ್ಯವಾದ ಶುಭದಿನ

Leave a Reply

Your email address will not be published. Required fields are marked *