Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸೊಂಪಿನಿಂದ ಹೀಗೆ ಮಾಡಿದರೆ ಯಾರಾದ್ರೂ ಆಗಲಿ ಖಂಡಿತ ನಿಮ್ಮ ಮಾತನ್ನು ಕೇಳಬೇಕು ದೈವಬಲ ನಿಮ್ಮ ಮೇಲೆ ಆಗುತ್ತೆ !!!!

ಸ್ನೇಹಿತರೇ ಸಾಮಾನ್ಯವಾಗಿ ಕೆಲವೊಂದು ಪರಿಸ್ಥಿತಿಗಳನ್ನು ನಾವು ತುಂಬ ಕಠೋರವಾಗಿ ನಿಭಾಯಿಸಬೇಕಾಗುತ್ತದೆ ಏಕೆಂದರೆ ನಮ್ಮವರೇ ನಮ್ಮ ಮಾತುಗಳನ್ನು ಕೆಲವೊಂದು ಬಾರಿ ಕೇಳುತ್ತಿರುವುದಿಲ್ಲ,

ಅವರು ಕೆಟ್ಟ ಮಾರ್ಗದಲ್ಲಿ ಹೋಗುತ್ತಿದ್ದಾರೆ ಎಂದು ನಮ್ಮ ಅರಿವಿಗೆ ಬಂದರೂ ಕೂಡ, ಅದನ್ನು ಅವರಿಗೆ ತಿಳಿಸುವ ಪ್ರಯತ್ನ ನಾವು ಮಾಡಿದರೂ ಅದರಿಂದ ಯಾವುದೇ ರೀತಿಯಾದಂತಹ ಉಪಯೋಗ ಆಗುವುದಿಲ್ಲ.

ಕಾರಣ, ಅವರಿಗೆ ನಮ್ಮ ಮಾತುಗಳು ಅರ್ಥವಾಗುತ್ತಿಲ್ಲ ಅರ್ಥವಾದರೂ ಕೂಡ ಅವುಗಳನ್ನು ಕೇಳುವ ಮನಸ್ಥಿತಿ ಅವರಲ್ಲಿರುವುದಿಲ್ಲ. ಆದರೆ ಅದಕ್ಕೆ ನಾವು ಈ ದಿನ ಒಂದು ಸುಲಭವಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ,

ಈ ವಿಧಾನವೂ ಒಂದು ಸರಳವಾದಂತಹ ವಿಧಾನವಾಗಿದೆ ಇದನ್ನು ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಮಾಡಬಹುದು ನಿಮ್ಮವರು ನಿಮ್ಮ ಮಾತುಗಳನ್ನು ಕೇಳದೇ ಇರುವಂತಹ ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿಯೂ ಅವರು ನಿಮ್ಮ ಮಾತುಗಳನ್ನು ಕೇಳುವುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.

ಇದಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕತೆ ಕೂಡ ಬರುವುದಿಲ್ಲ ಮತ್ತು ಸಮಯದ ಅವಶ್ಯಕತೆ ಕೂಡ ಇರುವುದಿಲ್ಲ ಇದೊಂದು ಸರಳ ವಿಧಾನವಾಗಿ ರುವುದರಿಂದ ಯಾರು ಬೇಕಾದರೂ ಕೂಡ ಮನೆಯಲ್ಲಿಯೇ ಇದನ್ನು ಮಾಡಬಹುದು.

ಇದಕ್ಕೆ ಯಾವುದೇ ಪೂಜೆ ಪುನಸ್ಕಾರಗಳನ್ನು ಕೂಡ ಮಾಡುವ ಹಾಗೆ ಇಲ್ಲದೇ ಇರುವುದರಿಂದ ಎಲ್ಲರೂ ಕೂಡ ಇದನ್ನು ಮಾಡುವ ಪ್ರಯತ್ನವನ್ನು ಒಮ್ಮೆ ಮಾಡಿ ನೋಡಿ ಅದಾದ ನಂತರ ಇದರ ಪರಿಣಾಮ ನಿಮಗೇ ತಿಳಿಯುತ್ತದೆ.

ಸ್ನೇಹಿತರೇ ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಸುವಂತಹ ಒಂದು ಪದಾರ್ಥದಿಂದ ಈ ಪರಿಹಾರ ವಿಧಾನವನ್ನು ನಾವು ಮಾಡುತ್ತೇವೆ ಇದನ್ನು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ .

ಸಾಮಾನ್ಯವಾಗಿ ಎಲ್ಲರಿಗೂ ಕೂಡ ಸೋಂಪಿನ ಕಾಳು ತಿಳಿದಿರುತ್ತದೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಇದನ್ನು ಬಳಸುತ್ತಾರೆ ಏಕೆಂದರೆ ಇದನ್ನು ತಿಂದರೆ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿದೇ ಆದ್ದರಿಂದ ಎಲ್ಲರೂ ಕೂಡ ಇದನ್ನು ಮನೆಯಲ್ಲಿ ಬಳಸುತ್ತಾರೆ.

ಇದನ್ನು ಬಳಸಿ ಹೇಗೆ ನಮ್ಮ ಮಾತನ್ನು ಕೇಳುವ ರೀತಿ ಮಾಡಿಕೊಳ್ಳುವುದು ಎಂಬ ಸಂದೇಹ, ನಿಮಗೆ ಹುಟ್ಟುತ್ತಿದೆ ಅಲ್ಲವೇ ಇದರಲ್ಲಿ ಯಾವುದೇ ರೀತಿಯಾದಂತ ಸಂದೇಹ ಪಡುವ ಅವಶ್ಯಕತೆ ಇಲ್ಲ ಹೇಗೆ ಪರಿಹಾರ ಮಾಡುವುದು ಎಂಬ ಮಾಹಿತಿಯನ್ನು ಮುಂದೆ ನೋಡೋಣ ಒಂದು ಬಟ್ಟೆಗೆ ಅಥವಾ ಯಾವುದಾದರೂ ಒಂದು ಪೇಪರ್ ಗೆ ಎರಡರಿಂದ ಮೂರು ಚಮಚದಷ್ಟು ಸೋಂಪಿನ ಕಾಳನ್ನು ಹಾಕಿ,

ಅದನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟುಕೊಳ್ಳಿ ಈ ದಿಂಬನ್ನು ಬೇರೆ ಯಾರಿಗೂ ಯಾವುದೇ ಕಾರಣಕ್ಕೂ ಕೊಡಬಾರದು ಆ ರೀತಿ ಕೊಟ್ಟರೆ ಅದು ತಪ್ಪಾಗುತ್ತದೆ ಮತ್ತು ಈ ವಿಧಾನವು ಫಲಿಸುವುದಿಲ್ಲ.

ಹದಿನಾರು ದಿನಗಳ ಕಾಲ ಸತತವಾಗಿ ನೀವು ದಿಂಬಿನ ಮೇಲೆ ಮಲಗಬೇಕು ಮತ್ತು ಬೇರೆ ಯಾರೂ ಕೂಡ ದಿಂಬಿನ ಮೇಲೆ ಮಲಗಲು ಬಿಡಬಾರದು ಅದಾದ ನಂತರ ಹದಿನಾರನೇ ದಿನ,

ಇದನ್ನು ತೆಗೆದು ಯಾವುದಾದರೂ ಜ್ಯೂಸ್ ಪಾನೀಯವನ್ನು ಮಾಡಿ ಕುಡಿಯಬೇಕು ಇದನ್ನು ಘನರೂಪದಲ್ಲಿ ಸೇವಿಸಬಾರದು ದ್ರವ ರೂಪದಲ್ಲಿಯೇ ಸೇವಿಸುವುದು ಉತ್ತಮ ಆ ರೀತಿ ಮಾಡಿ ನೋಡಿ .

ನಿಮ್ಮವರು ನೀವು ಅಂದುಕೊಂಡಿರುವವರು,ನಿಮ್ಮ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಇದು ಸರಳ ವಿಧಾನವಾಗಿ ರುವುದರಿಂದ ಒಮ್ಮೆ ಪ್ರಯತ್ನ ಮಾಡುವುದರಲ್ಲಿ ಯಾವುದೇ ರೀತಿಯ ಆದಂತಹ ತಪ್ಪಿಲ್ಲ ನಂಬಿಕೆಯಿಟ್ಟು ಪ್ರಯತ್ನ ಮಾಡಿದರೆ ಎಲ್ಲವೂ ಕೂಡ ಒಳ್ಳೆಯದೇ ಆಗುತ್ತದೆ ಎಂದು ಭಾವಿಸೋಣ ಧನ್ಯವಾದಗಳು.

Leave a Reply

Your email address will not be published. Required fields are marked *