Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸೀತೆ ವನವಾಸಕ್ಕೆ ಬಂದು ಅಲ್ಲಿ ಸೀತೆಗೆ ಬಾಯಾರಿಕೆ ಆದಾಗ ಸಾಕ್ಷಾತ್ ಶ್ರೀರಾಮನ ಒಂದೇ ಒಂದು ಬಿಟ್ಟ ಬಾಣದಿಂದ ಉಗಮವಾದ ನದಿ ಇದು ಹಾಗಾದ್ರೆ ಕರ್ನಾಟಕ ಭಾಗೀರಥಿ ಎಂದು ಕರೆಯಲ್ಪಡುವ ಆ ನದಿ ಯಾವುದು ಗೊತ್ತ !!!

ಜೋಗ ಜಲಪಾತ ಯಾರಿಗೆ ಗೊತ್ತಿಲ್ಲ ಹೇಳಿ ನಮ್ಮ ಭಾರತ ದೇಶದ ಎರಡನೇ ಎತ್ತರದ ಜಲಪಾತ ಎಂಬ ಹೆಸರಿಗೆ ಪಾತ್ರವಾಗಿರುವ ಈ ಜೋಗ ಜಲಪಾತದ ಉಗಮ ಯಾವುದು ಅಂದರೆ ಕೆಲವರಿಗೆ ತಿಳಿದಿರುವುದಿಲ್ಲ .ಹೌದು ಜೋಗ ಜಲಪಾತದ ಉಗಮ ಸ್ಥಳ ಶರಾವತಿ ನದಿ ಈ ಶರಾವತಿ ನದಿಯ ಉಗಮ ಎಲ್ಲಿ ಹಾಗೆ ಈ ಶರಾವತಿ ನದಿಯ ಉಗಮವನ್ನು ಕುರಿತು ಇಂದಿನ ಮಾಹಿತಿಯಲ್ಲಿ ಸ್ವಲ್ಪ ವಿಚಾರಗಳನ್ನು ತಿಳಿದುಕೊಳ್ಳೋಣ.ನೀವು ಕೂಡ ಪೂರ್ತಿ ಮಾಹಿತಿಯನ್ನು ತಿಳಿದು ಒಮ್ಮೆ ಈ ಜೋಗ ಜಲಪಾತಕ್ಕೆ ಭೇಟಿ ನೀಡಿ ಹಾಗೆ ಈಗಾಗಲೇ ನೀವು ಜೋಗ ಜಲಪಾತವನ್ನು ವೀಕ್ಷಿಸಿದ್ದರೆ ಅದನ್ನು ಕೂಡ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.ಜೋಗ ಜಲಪಾತವು ಉಗಮವಾಗುವ ಈ ಶರಾವತಿ ನದಿಯು ಉಗಮವಾಗುವುದು ಅಂಬುತೀರ್ಥದಲ್ಲಿ

ಹೌದು ಈ ಅಂಬುತೀರ್ಥ ಕೂಡ ಒಂದು ಪುಣ್ಯಕ್ಷೇತ್ರವಾಗಿದ್ದು ಇದಕ್ಕೂ ಕೂಡ ಒಂದು ಇತಿಹಾಸವಿದೆ ಅದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.ಜಗತ್ ವಿಖ್ಯಾತಿ ಯಾದ ಜೋಗ ಜಲಪಾತ ಶರಾವತಿಯಿಂದ ಜನಿಸಿದರೆ ಈ ಶರಾವತಿಯ ಜನನ ಅಂಬುತೀರ್ಥ ದಲ್ಲಿ ಹೌದು ಈ ಅಂಬುತೀರ್ಥ ಕ್ಷೇತ್ರಕ್ಕೆ ಪುರಾತನ ಕತೆಯಿದೆ.ಅದೇನೆಂದರೆ ರಾಮಾಯಣದಲ್ಲಿ ರಾಮ ಲಕ್ಷ್ಮಣ ಮತ್ತು ಸೀತೆಯರು ವನವಾಸಕ್ಕೆಂದು ತೆರಳಿದಾಗ ಕಾಡಿನಲ್ಲಿ ಸೀತೆಗೆ ಬಾಯಾರಿಕೆಯ ಕಾರಣ ಸುತ್ತಮುತ್ತ ನೀರು ಎಲ್ಲೂ ಸಿಗದೇ ಇರುವುದರಿಂದ ರಾಮನು ತನ್ನ ಬಿಲ್ಲಿ ನಿಂದ ಭೂಮಿಯೊಳಗೆ ನದಿಯನ್ನೇ ಸೃಷ್ಟಿಸುತ್ತಾರೆ .ಆ ನದಿಯೇ ಶರಾವತಿ ಈ ಕ್ಷೇತ್ರಕ್ಕೆ ಅಂಬುತೀರ್ಥ ಎಂದು ಕರೆಯಲಾಗುತ್ತದೆ.

ಅಂಬು ಎಂದರೆ ಬಾಣ ತೀರ್ಥ ಅಂದರೆ ನೀರು ಇಲ್ಲಿಂದ ಉಗಮವಾದ ನದಿಯೇ ಶರಾವತಿ, ಈ ನದಿ ಅಂಬುತೀರ್ಥ ದಲ್ಲಿ ಹುಟ್ಟಿ ನೂರಾ ಇಪ್ಪತ್ತೆಂಟು ಕಿಲೋಮೀಟರ್ ದೂರಕ್ಕೆ ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆ.ಅಂಬುತೀರ್ಥದಲ್ಲಿ ಹುಟ್ಟಿದ ಶರಾವತಿಯ ಹೊಸನಗರದ ಮೂಲಕ ಹರಿಯುತ್ತದೆ ಇಲ್ಲಿ ಅನೇಕ ಉಪನದಿಗಳು ಸೇರಿ ಈ ನದಿ ದೊಡ್ಡದಾಗಿ ಜೋಗ ಜಲಪಾತ ವಾಗಿ ಹರಿಯುತ್ತಿದೆ .ಶರಾವತಿ ನದಿ ಉಗಮಸ್ಥಾನ ಅಂಬುತೀರ್ಥ ತೀರ್ಥಹಳ್ಳಿಯ ತಾಲೂಕಿನಲ್ಲಿದೆ ಜೋಗ ಜಲಪಾತವನ್ನು ಸೃಷ್ಟಿಸಿದೆ ಹುಟ್ಟಿರುವ ಜಾಗದ ಸುತ್ತಮುತ್ತ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿದೆ. ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ ಇರೋದ್ರೊಳಗೆ ಒಂದು ಸಾರಿಯಾದರೂ ನೋಡು ಜೋಗದ ಗುಂಡಿ ಎನ್ನುವ ಪದ್ಯ ವಿಶ್ವವಿಖ್ಯಾತ ಜೋಗ ಜಲಪಾತ ನೋಡಿದಾಗೆಲ್ಲ ನೆನಪಾಗುತ್ತದೆ ಸ್ನೇಹಿತರೆ ಜೋಗದ ರಮಣೀಯ ಸೌಂದರ್ಯ ಇಂಥವರನ್ನು ಕೂಡ ಬೆರಗುಗೊಳಿಸುತ್ತದೆ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆ ಅದು ಸೃಷ್ಟಿಸುವ ಸೌಂದರ್ಯವನ್ನು ಬಣ್ಣಿಸಲು ಸಾಧ್ಯವಿಲ್ಲ ಜೋಗವನ್ನು ನಿರ್ಮಿಸಿರುವ ಅಂತಹ ನದಿಯ ಶರಾವತಿ ನದಿ

ಹೌದು ಕನ್ನಡನಾಡಿನ ಭಾಗಿರತಿ ಎಂದು ಕೂಡ ಒಂದು ನದಿಗೆ ಕರೆಯಲಾಗುತ್ತದೆ ನಾಡಿಗೆ ಬೆಳಕು ನೀಡುವ ನದಿಯೆಂದು ಕೂಡ ಪ್ರಸಿದ್ಧವಾಗಿದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಅರಬಿ ಸಮುದ್ರ ಸೇರುವ ಇದು ಹರಿಯುವ ಉದ್ದ ಸುಮಾರು 128 ಕಿಲೋಮೀಟರ್ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಇದೆ ತೀರ್ಥಹಳ್ಳಿಯಿಂದ ಹೊಸನಗರಕ್ಕೆ ತೆರಳುವ ಮಾರ್ಗದಲ್ಲಿ ಅಂಬುತೀರ್ಥ ಎನ್ನುವ ಹಳ್ಳಿಯ ಸಿಗುತ್ತದೆ ಇದು ತೀರ್ಥಹಳ್ಳಿಯಿಂದ 20 ಕಿಲೋಮೀಟರ್ ದೂರದಲ್ಲಿದೆ ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ಜೋಗಕ್ಕೆ ಬರುವ ಮಧ್ಯದಲ್ಲಿ ಸಣ್ಣ ಸಣ್ಣ ಉಪನದಿಗಳು ಸೇರಿ ದೊಡ್ಡ ನದಿಯಾಗಿ ರೂಪವನ್ನು ಪಡೆಯುತ್ತದೆ ಅಂಬುತೀರ್ಥದಲ್ಲಿ ಸಣ್ಣಗೆ ಜಿನುಗುವ ನೀರಿನ ಜರಿ ಸಮೀಪದ ಕಲ್ಯಾಣಿ ಗೆ ಸೇರುತ್ತದೆ

ಅಲ್ಲಿಂದ ಹೊಸನಗರ ಮೂಲಕ ಆಯೋಗವನ್ನು ತಲುಪುತ್ತದೆ. ಹೌದು ಒಂದು ನದಿಯ ಉಗಮ ವಾಗುವಂತಹ ಅಂಬುತೀರ್ಥ ಸ್ಥಳಕ್ಕೆ ಅದರದ್ದೇ ಆದ ಐತಿಹಾಸಿಕ ಮಹತ್ವವಿದೆ ಅರಣ್ಯ ವಾಸದಲ್ಲಿದ್ದಾಗ ಶ್ರೀರಾಮಚಂದ್ರ ಈ ಪ್ರದೇಶಕ್ಕೆ ಬಂದು ನೆಲೆಸಿದ್ದ ಸ್ನಾನ ಸಂಧ್ಯಾದಿ ಕಾರ್ಯಕ್ಕೆ ನೀರು ಬೇಕಾಗಿ ನೆಲವನ್ನು ಬಾಣವನ್ನು ಬಿಟ್ಟಾಗ ಹುಟ್ಟಿದ ಸ್ಥಳವೇ ಅಂಬುತೀರ್ಥ ಶ್ರೀರಾಮನ ಹಾರದಿಂದ ಹುಟ್ಟಿದ ನದಿ ಶರಾವತಿ ಆದ್ದರಿಂದ ಈ ನದಿಗೆ ಶರಾವತಿ ಎಂದು ಹೆಸರು ಬಂದಿದೆ ವನವಾಸದಲ್ಲಿದ್ದ ಬಾಯಾರಿಕೆಯಾದಾಗ ಶ್ರೀರಾಮ ಬಾಣವನ್ನು ಅಲ್ಲಿಂದ ತೀರ್ಥ ಚಿಮ್ಮಿತು

ಆದ್ದರಿಂದ ಒಂದು ಸ್ಥಳಕ್ಕೆ ಅಂಬುತೀರ್ಥ ಎಂದು ಕರೆಯಲಾಗುತ್ತದೆ ಎಂದು ಎಂದರೆ ಬಾಣ ಹೌದು ಒಂದು ನದಿಯು ಶಿವನಪಾದ ಹುಟ್ಟುತ್ತದೆ ಅಂಬುತೀರ್ಥದಲ್ಲಿ ರಾಮೇಶ್ವರ ದೇವಸ್ಥಾನ ಕೂಡ ಇದೆ.ಇಂದಿಗೂ ಕೂಡ ಪ್ರವಾಸಿಗರನ್ನು ಕಣ್ಮನ ಸೆಳೆಯುತ್ತಿರುವ ಈ ಜೋಗ ಜಲಪಾತದ ಮೂಲವೇ ಶರಾವತಿ ಶರಾವತಿಯ ಮೂಲವೇ ಅಂಬುತೀರ್ಥ. ಅಂಬುತೀರ್ಥ ಕ್ಷೇತ್ರದಲ್ಲಿ ಶಿವನ ಆಲಯವಿದೆ ಶಿವನ ಪದದಿಂದಲೇ. ಈ ನದಿ ಹುಟ್ಟಿದ ರಾಮಾಯಣ ಕಾಲದಲ್ಲಿ ರಾಮ ಮತ್ತು ಸೀತೆಯರು ವನ ವಾಸದ ಸಮಯದಲ್ಲಿ ಈ ದೇವಾಲಯದಲ್ಲಿ ಶಿವನ ಆರಾಧನೆ ಮಾಡಿದ್ದರು ಎಂದು ಕೂಡ ಹೇಳಲಾಗುತ್ತದೆ.ಈ ಅಂಬುತೀರ್ಥ ಸುತ್ತಮುತ್ತಲಿನಲ್ಲಿ ರಾಮಚಂದ್ರಾಪುರ ಮಠ ತೀರ್ಥಹಳ್ಳಿ ಹೊಸನಗರ ಎಂಬ ಪ್ರವಾಸಿಗರ ತಾಣವೂ ಕೂಡ ಇದ್ದು

ಈ ಶರಾವತಿ ನದಿಯು ಹರಿಯುವಾಗ ಒಂದು ಜರಿಯನ್ನು ಸೃಷ್ಟಿಸುತ್ತದೆ ಅದರ ಹೆಸರು ಹಚ್ಚು ಕನ್ಯೆ ಎಂದು ಈ ತಾಣವನ್ನು ವೀಕ್ಷಿಸಲು ಆಗಸ್ಟ್ ತಿಂಗಳಿ ನಿಂದ ಜನವರಿ ತಿಂಗಳಿನವರೆಗೂ ಸೂಕ್ತ ಸಮಯವಾಗಿದೆ.ಈ ಅಂಬುತೀರ್ಥದ ಜಿಲ್ಲಾಡಳಿತ ಕೇಂದ್ರವು ಶಿವಮೊಗ್ಗ ಜಿಲ್ಲೆಯಾಗಿದ್ದು ಇಲ್ಲಿಂದ ಸುಮಾರು ಎಂಬತ್ತು ಕಿಲೋಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ, ರಾಜಧಾನಿಯಿಂದ 332ಕಿಲೋಮೀಟರ್ ದೂರದಲ್ಲಿರುವ ಅಂಬು ತೀರ್ಥ ಕ್ಷೇತ್ರವೂ ನೋಡಲು ಬಹಳ ಸೊಗಸಾಗಿದೆ. ಮತ್ತು ಕಣ್ಮನಗಳನ್ನು ಸೆಳೆಯುವ ಈ ಪ್ರಕೃತಿ ತಾಣವು ಬಹಳಾನೆ ಮನಮೋಹಕವಾಗಿದೆ ಪರಿಸರ ಪ್ರೇಮಿಗಳಿಗಂತೂ ಈ ತಾಣ ಬಹಳ ಇಷ್ಟ ಆ್ಗುತ್ತದೆ ಅಂತ ಹೇಳಬಹುದಾಗಿದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ