ಸಾಕ್ಷಾತ್ ಶ್ರೀರಾಮನ ಒಂದೇ ಒಂದು ಬಿಟ್ಟ ಬಾಣದಿಂದ ಉಗಮವಾದ ನದಿ ಇದು ಹಾಗಾದ್ರೆ ಕರ್ನಾಟಕ ಭಾಗೀರಥಿ ಎಂದು ಕರೆಯಲ್ಪಡುವ ಆ ನದಿ ಯಾವುದು !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಜೋಗ ಜಲಪಾತ ಯಾರಿಗೆ ಗೊತ್ತಿಲ್ಲ ಹೇಳಿ ನಮ್ಮ ಭಾರತ ದೇಶದ ಎರಡನೇ ಎತ್ತರದ ಜಲಪಾತ ಎಂಬ ಹೆಸರಿಗೆ ಪಾತ್ರವಾಗಿರುವ ಈ ಜೋಗ ಜಲಪಾತದ ಉಗಮ ಯಾವುದು ಅಂದರೆ ಕೆಲವರಿಗೆ ತಿಳಿದಿರುವುದಿಲ್ಲ .ಹೌದು ಜೋಗ ಜಲಪಾತದ ಉಗಮ ಸ್ಥಳ ಶರಾವತಿ ನದಿ ಈ ಶರಾವತಿ ನದಿಯ ಉಗಮ ಎಲ್ಲಿ ಹಾಗೆ ಈ ಶರಾವತಿ ನದಿಯ ಉಗಮವನ್ನು ಕುರಿತು ಇಂದಿನ ಮಾಹಿತಿಯಲ್ಲಿ ಸ್ವಲ್ಪ ವಿಚಾರಗಳನ್ನು ತಿಳಿದುಕೊಳ್ಳೋಣ.ನೀವು ಕೂಡ ಪೂರ್ತಿ ಮಾಹಿತಿಯನ್ನು ತಿಳಿದು ಒಮ್ಮೆ ಈ ಜೋಗ ಜಲಪಾತಕ್ಕೆ ಭೇಟಿ ನೀಡಿ ಹಾಗೆ ಈಗಾಗಲೇ ನೀವು ಜೋಗ ಜಲಪಾತವನ್ನು ವೀಕ್ಷಿಸಿದ್ದರೆ ಅದನ್ನು ಕೂಡ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ.ಜೋಗ ಜಲಪಾತವು ಉಗಮವಾಗುವ ಈ ಶರಾವತಿ ನದಿಯು ಉಗಮವಾಗುವುದು ಅಂಬುತೀರ್ಥದಲ್ಲಿ ಹೌದು ಈ ಅಂಬುತೀರ್ಥ ಕೂಡ ಒಂದು ಪುಣ್ಯಕ್ಷೇತ್ರವಾಗಿದ್ದು ಇದಕ್ಕೂ ಕೂಡ ಒಂದು ಇತಿಹಾಸವಿದೆ ಅದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಜಗತ್ ವಿಖ್ಯಾತಿ ಯಾದ ಜೋಗ ಜಲಪಾತ ಶರಾವತಿಯಿಂದ ಜನಿಸಿದರೆ ಈ ಶರಾವತಿಯ ಜನನ ಅಂಬುತೀರ್ಥ ದಲ್ಲಿ ಹೌದು ಈ ಅಂಬುತೀರ್ಥ ಕ್ಷೇತ್ರಕ್ಕೆ ಪುರಾತನ ಕತೆಯಿದೆ.ಅದೇನೆಂದರೆ ರಾಮಾಯಣದಲ್ಲಿ ರಾಮ ಲಕ್ಷ್ಮಣ ಮತ್ತು ಸೀತೆಯರು ವನವಾಸಕ್ಕೆಂದು ತೆರಳಿದಾಗ ಕಾಡಿನಲ್ಲಿ ಸೀತೆಗೆ ಬಾಯಾರಿಕೆಯ ಕಾರಣ ಸುತ್ತಮುತ್ತ ನೀರು ಎಲ್ಲೂ ಸಿಗದೇ ಇರುವುದರಿಂದ ರಾಮನು ತನ್ನ ಬಿಲ್ಲಿ ನಿಂದ ಭೂಮಿಯೊಳಗೆ ನದಿಯನ್ನೇ ಸೃಷ್ಟಿಸುತ್ತಾರೆ .ಆ ನದಿಯೇ ಶರಾವತಿ ಈ ಕ್ಷೇತ್ರಕ್ಕೆ ಅಂಬುತೀರ್ಥ ಎಂದು ಕರೆಯಲಾಗುತ್ತದೆ.ಅಂಬು ಎಂದರೆ ಬಾಣ ತೀರ್ಥ ಅಂದರೆ ನೀರು ಇಲ್ಲಿಂದ ಉಗಮವಾದ ನದಿಯೇ ಶರಾವತಿ, ಈ ನದಿ ಅಂಬುತೀರ್ಥ ದಲ್ಲಿ ಹುಟ್ಟಿ ನೂರಾ ಇಪ್ಪತ್ತೆಂಟು ಕಿಲೋಮೀಟರ್ ದೂರಕ್ಕೆ ಹರಿದು ಕೊನೆಗೆ ಸಮುದ್ರವನ್ನು ಸೇರುತ್ತದೆ.ಅಂಬುತೀರ್ಥದಲ್ಲಿ ಹುಟ್ಟಿದ ಶರಾವತಿಯ ಹೊಸನಗರದ ಮೂಲಕ ಹರಿಯುತ್ತದೆ ಇಲ್ಲಿ ಅನೇಕ ಉಪನದಿಗಳು ಸೇರಿ ಈ ನದಿ ದೊಡ್ಡದಾಗಿ ಜೋಗ ಜಲಪಾತ ವಾಗಿ ಹರಿಯುತ್ತಿದೆ .

ಇಂದಿಗೂ ಕೂಡ ಪ್ರವಾಸಿಗರನ್ನು ಕಣ್ಮನ ಸೆಳೆಯುತ್ತಿರುವ ಈ ಜೋಗ ಜಲಪಾತದ ಮೂಲವೇ ಶರಾವತಿ ಶರಾವತಿಯ ಮೂಲವೇ ಅಂಬುತೀರ್ಥ. ಅಂಬುತೀರ್ಥ ಕ್ಷೇತ್ರದಲ್ಲಿ ಶಿವನ ಆಲಯವಿದೆ ಶಿವನ ಪದದಿಂದಲೇ. ಈ ನದಿ ಹುಟ್ಟಿದ ರಾಮಾಯಣ ಕಾಲದಲ್ಲಿ ರಾಮ ಮತ್ತು ಸೀತೆಯರು ವನ ವಾಸದ ಸಮಯದಲ್ಲಿ ಈ ದೇವಾಲಯದಲ್ಲಿ ಶಿವನ ಆರಾಧನೆ ಮಾಡಿದ್ದರು ಎಂದು ಕೂಡ ಹೇಳಲಾಗುತ್ತದೆ.ಈ ಅಂಬುತೀರ್ಥ ಸುತ್ತಮುತ್ತಲಿನಲ್ಲಿ ರಾಮಚಂದ್ರಾಪುರ ಮಠ ತೀರ್ಥಹಳ್ಳಿ ಹೊಸನಗರ ಎಂಬ ಪ್ರವಾಸಿಗರ ತಾಣವೂ ಕೂಡ ಇದ್ದು ಈ ಶರಾವತಿ ನದಿಯು ಹರಿಯುವಾಗ ಒಂದು ಜರಿಯನ್ನು ಸೃಷ್ಟಿಸುತ್ತದೆ ಅದರ ಹೆಸರು ಹಚ್ಚು ಕನ್ಯೆ ಎಂದು ಈ ತಾಣವನ್ನು ವೀಕ್ಷಿಸಲು ಆಗಸ್ಟ್ ತಿಂಗಳಿ ನಿಂದ ಜನವರಿ ತಿಂಗಳಿನವರೆಗೂ ಸೂಕ್ತ ಸಮಯವಾಗಿದೆ.

ಈ ಅಂಬುತೀರ್ಥದ ಜಿಲ್ಲಾಡಳಿತ ಕೇಂದ್ರವು ಶಿವಮೊಗ್ಗ ಜಿಲ್ಲೆಯಾಗಿದ್ದು ಇಲ್ಲಿಂದ ಸುಮಾರು ಎಂಬತ್ತು ಕಿಲೋಮೀಟರ್ ದೂರದಲ್ಲಿ ಈ ಕ್ಷೇತ್ರವಿದೆ, ರಾಜಧಾನಿಯಿಂದ 332ಕಿಲೋಮೀಟರ್ ದೂರದಲ್ಲಿರುವ ಅಂಬು ತೀರ್ಥ ಕ್ಷೇತ್ರವೂ ನೋಡಲು ಬಹಳ ಸೊಗಸಾಗಿದೆ. ಮತ್ತು ಕಣ್ಮನಗಳನ್ನು ಸೆಳೆಯುವ ಈ ಪ್ರಕೃತಿ ತಾಣವು ಬಹಳಾನೆ ಮನಮೋಹಕವಾಗಿದೆ ಪರಿಸರ ಪ್ರೇಮಿಗಳಿಗಂತೂ ಈ ತಾಣ ಬಹಳ ಇಷ್ಟ ಆ್ಗುತ್ತದೆ ಅಂತ ಹೇಳಬಹುದಾಗಿದೆ.

Leave a Reply

Your email address will not be published. Required fields are marked *