ಶ್ರೀ ಕೃಷ್ಣ ಹೇಳಿದ ಹಾಗೆ ನೀವೇನಾದ್ರು ರಾತ್ರಿ ಮಲಗುವ ಸಮಯದಲ್ಲಿ ನಿಮ್ಮ ಹತ್ತಿರ ಈ ವಸ್ತುಗಳು ಇದ್ದರೆ ನಿಮ್ಮ ಮನೆ ಯಾವಾಗಲೂ ಏಳಿಗೆ ಹೊಂದಲ್ಲ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ಶಾಸ್ತ್ರದ ಪ್ರಕಾರ ಮತ್ತು ಶ್ರೀಕೃಷ್ಣ ದೇವ ಹೇಳಿರುವ ಹಾಗೆ ವ್ಯಕ್ತಿ ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಆತ ಕೆಲವೊಂದು ವಿಚಾರಗಳನ್ನು ತಪ್ಪದೆ ಪಾಲಿಸಬೇಕಾಗುತ್ತದೆ ಎನ್ನುವ ಆತ ಯಶಸ್ಸು ಕಾಣಬೇಕೆಂದರೆ ಆತನ ಕೆಲವೊಂದು ಹವ್ಯಾಸಗಳು ಕೂಡ ಕಾರಣವಾಗುತ್ತದೆ ಇನ್ನೂ ಹಿಂದಿನ ಕಾಲದವರು ಯಾವುದೇ ಪದ್ಧತಿಗಳನ್ನ ಮಾಡಿದ್ದರೂ ಕೂಡ ಅವುಗಳಿಗೆ ವೈಜ್ಞಾನಿಕವಾದ ಕಾರಣಗಳು ಇರುತ್ತ ಇದ್ದವು.

ಆ ವೈಜ್ಞಾನಿಕ ವಿಚಾರಗಳನ್ನೆ ಕೆಲವೊಂದು ಪದ್ಧತಿಯನ್ನಾಗಿ ಮಾಡಿ, ನಮ್ಮ ಹಿರಿಯರು ಅದನ್ನು ರೂಢಿಸಿಕೊಂಡು ಬಂದಿದ್ದರು. ಇವತ್ತಿನ ಕಾಲದವರಿಗೆ ಅಂತಹ ಕೆಲವೊಂದು ಪದ್ಧತಿಗಳ ಬಗ್ಗೆ ತಿಳಿಸಿಕೊಡುವವರು ಯಾರಿಲ್ಲ. ಆದರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ಕೆಲವೊಂದು ವಿಚಾರಗಳನ್ನು ತಿಳಿಸಿಕೊಡುತ್ತದೆ ನೀವು ಕೂಡ ಮಲಗುವ ಕೋಣೆಯಲ್ಲಿ ಇಂತಹ ಕೆಲವೊಂದು ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಇದರಿಂದ ದಾರಿದ್ರ್ಯ ಉಂಟಾಗಬಹುದು, ವೈಜ್ಞಾನಿಕವಾಗಿ ಹೇಳುವುದಾದರೆ ನಿಮ್ಮ ಆರೋಗ್ಯ ಕ್ಷೀಣಿಸಬಹುದು.

ಮೊದಲನೆಯದಾಗಿ ಮಲಗುವ ಕೋಣೆಯಲ್ಲಿ ನೀವು ನಿಮ್ಮ ತಲೆಯ ಬಳಿ ನೀರನ್ನು ಇರಿಸಿ ಮಲಗಬಾರದು ಇದರಿಂದ ನಿಮಗೆ ದಾರಿದ್ರ್ಯ ಹೆಚ್ಚಾಗುತ್ತದೆ ಮತ್ತು ತಲೆಯ ಬಳಿ ಹಾಗೂ ಕಾಲಿನ ಬಳಿ ನೀರನ್ನು ಇರಿಸಿ ಮಲಗುವುದರಿಂದ ವೈಜ್ಞಾನಿಕವಾಗಿ ನಿಮ್ಮ ಮೆದುಳಿನ ಮೇಲೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದಕಾರಣ ತಪ್ಪದೆ ನೀರಿನ ತಂಬಿಗೆಯ ನೀರಿನ ಬಾಟಲ್ ಗಳನ್ನ ಆಗಲೇ ತಲೆಯ ಬಳಿ ಅಥವಾ ಕಾಲಿನ ಬಳಿ ಇರಿಸಿ ಮಲಗಬೇಡಿ ನಿಮ್ಮಿಂದ ಸ್ವಲ್ಪ ದೂರವಾಗಿ ಈ ನೀರಿನ ತಂಬಿಗೆ ಅಥವಾ ಬಾಟಲ್ ನ ಇರಿಸಿ ಮಲಗುವುದು ಒಳ್ಳೆಯದು.

ಎರಡನೆಯದಾಗಿ ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿಗೆ ಹಾಗೂ ದಕ್ಷಿಣ ದಿಕ್ಕಿಗೆ ನಿಮ್ಮ ಕಾಲುಗಳನ್ನು ಇರಿಸಿ ಮಲಗಬೇಡಿ ಮತ್ತು ಉತ್ತರ ಹಾಗೂ ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಈ ರೀತಿ ಮಾಡುವುದರಿಂದ ಕೂಡ ನಿಮಗೆ ಗ್ರಹಗಳ ಕೆಟ್ಟ ಪ್ರಭಾವದಿಂದಾಗಿ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ ಇದು ವೈಜ್ಞಾನಿಕವಾಗಿಯೂ ಕೂಡ ಈ ಕೆಲವೊಂದು ವಿಚಾರಗಳು ರುಜುವಾತು ಆಗಿದೆ ಕೂಡ.

ಮೂರನೆಯದಾಗಿ ನೀವು ಮಲಗುವ ಕೋಣೆಯಲ್ಲಿ ಚಪ್ಪಲಿ ಯಾಗಲಿ ಅಥವಾ ಶೂಗಳನ್ನು ಆಗಲಿ ಇರಿಸಿ ಮಲಗಬೇಡಿ ಈ ರೀತಿ ಮಾಡುವುದರಿಂದ ನಿಮಗೆ ದುರ್ಭಾಗ್ಯ ಉಂಟಾಗಬಹುದು ಹಾಗೇ ನೀವು ಮಲಗುವ ಕೋಣೆಯಲ್ಲಿ ಕನ್ನಡಿ ಅನ್ನೋ ಕೂಡ ಇರಿಸಬಾರದು ನೀವು ರಾತ್ರಿ ಮಲಗುವ ಮುನ್ನ ಈ ಕನ್ನಡಿಯನ್ನು ನೋಡಿ ಮಲಗುವುದರಿಂದ ನಿಮಗೆ ಕೆಟ್ಟ ಕನಸು ಬೀಳುವ ಸಾಧ್ಯತೆ ಇರುತ್ತದೆ.

ನೀವು ಮಲಗುವ ಕೋಣೆಯಲ್ಲಿ ಸುಗಂಧ ದ್ರವ್ಯ ಆಗಲಿ ಅಥವಾ ಸುಗಂಧ ಎಣ್ಣೆ ಯನ್ನಾಗಲಿ ಇರಿಸಿ ಮಲಗಬೇಡಿ ಇದರಿಂದ ನಿಮಗೆ ನಕಾರಾತ್ಮಕ ಶಕ್ತಿಯ ಪ್ರಭಾವ ಆಗುತ್ತದೆ. ಈ ರೀತಿ ಸುಗಂಧದ ಎಣ್ಣೆಯನ್ನ ಇರಿಸಿ ಮಲಗುವುದರಿಂದ ನಿಮ್ಮ ದೇಹ ನಕಾರಾತ್ಮಕತೆಯನ್ನು ಸೆಳೆದುಕೊಳ್ಳುತ್ತದೆ. ಆದ್ದರಿಂದ ಈ ಒಂದು ತಪ್ಪನ್ನು ಮಾಡಬೇಡಿ. ನಾಲ್ಕನೆಯದಾಗಿ ಪುಸ್ತಕವನ್ನು ಕೂಡ ತಲೆಯ ಬಳಿ ಇಟ್ಟುಕೊಂಡು ಮಲಗಬಾರದು ಹೌದು ಎಷ್ಟೋ ವಿದ್ಯಾರ್ಥಿಗಳು ಈ ತಪ್ಪನ್ನು ಮಾಡುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ನಿಮ್ಮ ರಾಶಿ ಕುಂಡಲಿಯಲ್ಲಿನ ಬುಧ ಗ್ರಹದ ಪ್ರಭಾವ ಕಡಿಮೆಯಾಗುತ್ತದೆ.

ಇನ್ನು ಕೊನೆಯದಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಲಗುವ ಕೋಣೆಯಲ್ಲಿ ಆಗಲಿ ಇನ್ನೂ ಯಾವುದೇ ಕೋಣೆಗಳ ಪೊರಕೆಯನ್ನ ನಿಲ್ಲಿಸಿ ಇಡಬಾರದು ಈ ರೀತಿ ಮಾಡುವುದರಿಂದ ಕೂಡ ಮನೆಗೆ ದಾರಿದ್ರ್ಯ ಉಂಟಾಗುತ್ತದೆ. ಇನ್ನು ಧನ ಅಂದರೆ ಹಣವನ್ನು ಕೂಡ ತಲೆಯ ಬಳಿ ಇರಿಸಿ ಮಲಗಬಾರದು. ಇದು ಲಕ್ಷ್ಮೀದೇವಿಗೆ ಅಗೌರವವನ್ನು ಸೂಚಿಸಿದ ಹಾಗೆ ಆಗುತ್ತದೆ, ಆದ್ದರಿಂದ ಈ ಧನವನ್ನು ಅಂದರೆ ಹಣವನ್ನು ಪ್ರತ್ಯೇಕವಾದ ಸ್ಥಳಗಳಲ್ಲಿ ಇರಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *