ಶನಿ ದೇವರಿಗೆ ಯಾಕೆ ಎಳ್ಳು ಎಣ್ಣೆ ಸಿಕ್ಕಾಪಟ್ಟೆ ಇಷ್ಟ ಗೊತ್ತ … ಹಾಗೆ ಎಳ್ಳು ಎಣ್ಣೆ ಅರ್ಪಿಸಿದವರಿಗೆ ಒಲಿಯೊದು ಯಾಕೆ ಗೊತ್ತ …

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸುವ ಹಿಂದಿರುವ ಕಾರಣವೇನು ಶನಿದೇವನಿಗೆ ಯಾಕೆ ಈ ಎಳ್ಳೆಣ್ಣೆ ಪ್ರಿಯ ಎಳ್ಳೆಣ್ಣೆಯನ್ನು ಯಾಕೆ ಶನಿದೇವನಿಗೆ ಸಮರ್ಪಿಸುತ್ತಾರೆ ಹಾಗೆ ಶನಿವಾರದ ದಿವಸ ದಂತೆ ಯಾಕೆ ಎಳ್ಳೆಣ್ಣೆಯನ್ನು ಶನಿದೇವನ ದೇವಾಲಯಕ್ಕೆ ನೀಡಬೇಕು ಅನ್ನುವುದರ ಹಿಂದೆ ಇದೆ ಒಂದು ಮಹತ್ವಕರವಾದ ಕಾರಣ,ಅದನ್ನು ನಾನು ಹೇಳ್ತೇನೆ ನಿಮಗೆ ಇಂದಿನ ಈ ಮಾಹಿತಿಯಲ್ಲಿ. ಸಂಪೂರ್ಣ ಮಾಹಿತಿಯನ್ನು ತಿಳಿದು ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಈ ಮಾಹಿತಿ ಶೇರ್ ಮಾಡುವುದನ್ನು ಮರೆಯದಿರಿ.

ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸುವಂತಹ ಪದ್ಧತಿ ಅನಾದಿ ಕಾಲದಿಂದಲೂ ಕೂಡ ಇದೆ ಹಾಗೆ ಶನಿದೇವನಿಗೆ ಎಲ್ಲಿ ನೀನು ಅರ್ಪಿಸುವುದರಿಂದ ನಮ್ಮ ಕಷ್ಟ ನಷ್ಟಗಳು ಪರಿಹಾರ ಆಗುತ್ತದೆ ಶನಿದೇವನ ದೋಷ ಇದ್ದರೆ ಅದು ಕೂಡ ನಿವಾರಣೆಯಾಗುತ್ತದೆ ಅಂತ ಶಾಸ್ತ್ರಗಳು ಹೇಳುತ್ತದೆ ಹಾಗಾದರೆ ಈ ಹಲ್ಲೆ ಮೆನು ಅರ್ಪಿಸುವಂತಹ ಪದ್ಧತಿಯ ಹಿಂದೆ ಏನಿದೆ ಕಾರಣ ಅಂದರೆ, ಒಮ್ಮೆ ಆಂಜನೇಯನು ಮಗ್ನನಾಗಿ ಧ್ಯಾನದಲ್ಲಿ ಕುಳಿತಿರುತ್ತಾರೆ ತಮ್ಮ ಪ್ರಿಯವಾದ ದೇವನನ್ನು ಕುರಿತು ಜಪ ತಪ್ಪನ್ನು ಮಾಡುವಾಗ ಶನಿದೇವನು .

ಹನುಮಂತನ ಮುಂದೆ ಪ್ರತ್ಯಕ್ಷವಾಗಿ ಹನುಮಂತರ ತಾಪವನ್ನು ಭಂಗ ಮಾಡಲು ಮುಂದಾಗ್ತಾರೆ, ಇಡೀ ಪ್ರಪಂಚದಲ್ಲಿಯೆ ನಾನೇ ಶಕ್ತಿಶಾಲಿ ಅಂತ ತಿಳಿದಿದ್ದೆ ಆದರೆ ನೀನು ನನ್ನಷ್ಟೆ ಪರಾಕ್ರಮಿ ಅಂತ ಅನ್ನೊ ಒಂದು ವಿಚಾರ ತಿಳಿದೆ, ಈಗ ನೋಡೋಣ ನಮ್ಮಿಬ್ಬರಲ್ಲಿ ಯಾರೂ ಬಲಶಾಲಿ ಅಂತ ಹೇಳುತ್ತಾ ಹನುಮಂತನಿಗೆ ತಪಸ್ಸು ಮಾಡುವುದಕ್ಕೆ ಬಿಡುತ್ತಿರುವುದಿಲ್ಲ ಶನಿದೇವ.

ಆಗ ಹನುಮಂತನು ತನ್ನ ತಪಸ್ಸಿನಿಂದ ಆಚೆ ಬಂದು ಶನಿದೇವನಿಗೆ ಒಂದು ಮಾತನ್ನು ಹೇಳ್ತಾರೆ ನಾನೀಗ ನನ್ನ ಇಷ್ಟ ದೇವನ ತಪಸ್ಸಿನಲ್ಲಿ ಬದ್ಧನಾಗಿದ್ದೇನೆ ನನಗೆ ಈಗ ತೊಂದರೆ ನಾನು ನೀಡಬೇಡ ಅಂತಾ ಆದರೂ ಶನಿದೇವ ಹನುಮಂತನ ಮಾತುಗಳನ್ನು ಕೇಳುವುದೇ ಇಲ್ಲ ಶನಿದೇವನು ಹನುಮಂತನಿಗೆ ಪೀಡಿಸುತ್ತಲೇ ಇರುತ್ತಾಳೆ ಆಗ ಕೋಪಗೊಂಡ ಹನುಮಂತನು ತನ್ನ ತಪದಿಂದ ಆಚೆ ಬಂದು, ತನ್ನ ಬಾಲದಿಂದ ಶನಿದೇವನನ್ನು ಸುತ್ತಿ ಸುತ್ತಾಡಿಸುತ್ತಾರೆ. ಆಗ ಶನಿದೇವನ ದೇಹ ಲಂಕೆಯ ಸೇತುವೆಗೆ ತಗುಲಿ ಬೆನ್ನಿನಿಂದ ಬಹಳ ರಕ್ತಸ್ರಾವ ಆಗುತ್ತಾ ಇರುತ್ತದೆ.

ಶನಿದೇವನು ಬಹಳ ನೋವನ್ನು ಅನುಭವಿಸುತ್ತಿರುವುದನ್ನು ಕಂಡು ಆಂಜನೇಯ ಶನಿದೇವನ ಬಳಿ ಹೋಗ್ತಾರೆ ಆಗ ಶನಿದೇವ ತಪ್ಪಾಯಿತು ನೀನೇ ನನಗಿಂತ ಬಲಶಾಲಿ ತಪ್ಪನ್ನು ಒಪ್ಪಿಕೊಂಡೆ ಅಂತ ಶನಿದೇವ ಹೇಳಿಕೊಳ್ಳುತ್ತಾ ಆಂಜನೇಯ ಆ ಒಂದು ಮಾತನ್ನು ಹೇಳ್ತಾರೆ ಇನ್ನು ಮುಂದೆ ನೀನು ರಾಮ ಭಕ್ತರಿಗೆ ಯಾವತ್ತಿಗೂ ಶಾಪ ನೀಡಬಾರದು ಅದರಲ್ಲಿಯೂ ಯಾರೂ ರಾಮ ಭಕ್ತರಾಗಿರುತ್ತಾರೆ, ಅಂತಹವರ ಮೇಲೆ ನಿನ್ನ ವಕ್ರ ದೃಷ್ಟಿಯನ್ನು ಬೀರಬಾರದು ಅಂತ ವಚನವನ್ನು ತೆಗೆದುಕೊಳ್ತಾರೆ ಆಗ ಮಾತ್ರ ನಾನು ನನ್ನ ಕ್ಷಮಿಸುತ್ತೇನೆ ಅಂದಾಗ, ಶನಿದೇವನು ಆಯ್ತು ಹಾಗೇ ಆಗಲಿ ಎಂದು ತಮ್ಮ ತಪ್ಪನ್ನು ತಿಳಿದಾಗ ನನ್ನ ನೋವನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಯಾವುದಾದರೂ ಮದ್ದನ್ನು ನೀಡು ಅಂದಾಗ, ಆಂಜನೇಯನು ಶನಿ ದೇವನ ನೋವನ್ನು ನಿವಾರಣೆ ಮಾಡುವುದಕ್ಕಾಗಿ ಎಣ್ಣೆ ಒಂದನ್ನು ನೀಡುತ್ತಾರೆ.

ಅಂದಿನಿಂದಲೇ ಶುರುವಾದದ್ದು ಶನಿದೇವನಿಗೆ ಎಣ್ಣೆಯನ್ನು ಕೊಡುವಂತಹ ಪ್ರತೀತಿ ಆ ಎಣ್ಣೆಯ ಬಳಕೆಯಿಂದ ಶನಿದೇವನ ನೋವು ನಿವಾರಣೆ ಆಗುತ್ತದೆ. ಅಂದಿನಿಂದಲೂ ಶನಿದೇವನಿಗೆ ಯಾರೂ ಎಣ್ಣೆಯನ್ನು ಸಮರ್ಪಿಸುತ್ತಾರೆಯೊ, ಅಂಥಹವರ ಜೀವನದಲ್ಲಿ ಎದುರಾಗುವ ಕಷ್ಟಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *