Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಶತ್ರುಗಳು ನಿಮ್ಮ ಮೇಲೆ ಕೆಟ್ಟ ಕಣ್ಣನ್ನು ಹಾಕಿದ್ದಾರಾ … ಹಾಗಾದ್ರೆ ನಿಂಬೆಹಣ್ಣಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ಸಾಕು ನಿಮ್ಮ ಶತ್ರುಗಳು ನಾಶವಾಗುತ್ತಾರೆ ಹಾಗೆಯೇ ಯಾವುದೇ ಕೆಟ್ಟ ಕಣ್ಣು ಕೂಡ ನಿಮ್ಮ ಮೇಲೆ ಹಾಗೂ ನಿಮ್ಮ ಮನೆಯ ಮೇಲೆ ಬೀಳಲ್ಲ …!!!!

ನಿಂಬೆಹಣ್ಣಿನಿಂದ ಈ ತಂತ್ರಗಳನ್ನು ಮಾಡಿಕೊಂಡರೆ ನಿಮಗೆ ಎಂದಿಗೂ ಶತ್ರುಗಳ ಕಾಟ ಬರುವುದಿಲ್ಲ. ನರದೃಷ್ಟಿ ದೃಷ್ಟಿದೋಷ ಎಲ್ಲವುಗಳು ನಾಶವಾಗುತ್ತವೆ.
ಹಾಯ್ ಸ್ನೇಹಿತರೆ ಜೀವನದಲ್ಲಿ ನೆಮ್ಮದಿಯಿಂದ ಇದ್ದಾಗ ನಮ್ಮ ಹಿಂದೆ ಇರುವವರೇ ನಮಗೆ ಮೋಸ ಮಾಡುತ್ತಾರೆ ನಮ್ಮ ಜೊತೆ ಇದ್ದರೆ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ನಮ್ಮ ಏಳಿಗೆಯನ್ನು ಸಹಿಸದವರು ಇಂತಹ ಕೆಲಸಗಳನ್ನು ಮಾಡುತ್ತಾರೆ. ಶತ್ರುಗಳನ್ನು ಕಾಟ ನಿಮಗೆ ಹೆಚ್ಚಾಗಿದ್ದರೆ ಈ ಒಂದು ಪರಿಹಾರವನ್ನು ಮಾಡಿ. ನಿಂಬೆಹಣ್ಣು ಕೇವಲ ಆರೋಗ್ಯಕ್ಕೆ ಸೀಮಿತವಲ್ಲ ನಮ್ಮ ಸಂಪ್ರದಾಯ ಹಾಗೂ ಆಧ್ಯಾತ್ಮಿಕ ಭಾಗದಲ್ಲೂ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ. ಶತ್ರುಗಳು ನಮ್ಮನ್ನು ಸೋಲಿಸಲು ಅಥವಾ ಸಾಯಿಸಲು ಪ್ರಯತ್ನಿಸುತ್ತಿದ್ದರೆ ಮಾತ್ರ ಈ ಒಂದು ತಂತ್ರವನ್ನು ನೀವು ಅವರಿಗೆ ಉಪಯೋಗಿಸಬೇಕು.

ಇಲ್ಲವಾದರೆ ಇದು ನಿಮಗೆ ಹಿಂದಿರುಗಬಹುದು. ಸ್ನೇಹಿತರೆ ಅವರು ನಿಮಗೆ ಮಾಟ-ಮಂತ್ರಗಳನ್ನು ಮಾಡಿಸಿದ್ದಾರೆ ಇದರಿಂದ ನಿಮಗೆ ಆರೋಗ್ಯ ಚೆನ್ನಾಗಿರುವುದಿಲ್ಲ ಮತ್ತು ಮನೆಯಲ್ಲಿ ಸಾಕಷ್ಟು ತೊಂದರೆಗಳು ಎದುರಾಗುತ್ತದೆ ಇಂತಹ ತೊಂದರೆಗಳನ್ನು ಎದುರಿಸುವ ಬದಲು ನಿಮಗೆ ತಿಳಿದ ತಕ್ಷಣ ಒಂದು ತಂತ್ರವನ್ನು ಅವರ ಮೇಲೆ ಮಾಡಿ. ನಿಂಬೆಹಣ್ಣು ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡುವ ಒಂದು ವಿಶೇಷವಾದ ಗುಣವನ್ನು ಹೊಂದಿದೆ. ಅದಕ್ಕಾಗಿ ಇದನ್ನು ಎಲ್ಲರೂ ಪೂಜೆಯಲ್ಲಿ ಬಳಸುತ್ತಾರೆ. ಅದರಲ್ಲೂ ಅಮಾವಾಸ್ಯೆಯ ದಿನ ಎಲ್ಲರೂ ನಿಂಬೆಹಣ್ಣನ್ನು ಪೂಜೆಗೆ ಅಥವಾ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಲು ಉಪಯೋಗಿಸುತ್ತಾರೆ. ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾದರೆ ನೀವು ಮಾಡುವ ಕೆಲಸದಲ್ಲಿ ಯಶಸ್ಸು ಎಂಬುದು ಇರುವುದಿಲ್ಲ. ಹಾಗಾದರೆ ಸ್ನೇಹಿತರೆ ನಿಂಬೆಹಣ್ಣನ್ನು ಉಪಯೋಗಿಸಿ ಮಾಡುವ ತಂತ್ರದ ಬಗ್ಗೆ ತಿಳಿಯೋಣ.

ಒಂದು ನಿಂಬೆಹಣ್ಣಿನ ಮೇಲೆ ಶತ್ರುಗಳ ಹೆಸರು ಬರೆದು ಅರ್ಧಭಾಗ ಮಾಡಬೇಕು. ನಂತರ ಅದರ ಮೇಲೆ ಕರ್ಪೂರ ಅಥವಾ ಅಂಜನ ಹಾಕಬೇಕು ಇದು ಪೂರ್ತಿಯಾಗಿ ಸುಟ್ಟ ಮೇಲೆ ಈ ಬೂದಿಯನ್ನು ಹರಿಯುವ ನದಿಗೆ ಹಾಕಬೇಕು ಈ ರೀತಿಯಾಗಿ ಮಾಡುವುದರಿಂದ ನಿಮಗೆ ಶತ್ರು ದೋಷ ಅಥವಾ ಶತ್ರುಗಳ ತೊಂದರೆ ಆಗಿದ್ದರೆ ದೂರವಾಗುತ್ತದೆ ಅಂದರೆ ನಿವಾರಣೆಯಾಗುತ್ತದೆ. ಇನ್ನು ಎರಡನೆಯದಾಗಿ ನಿಮ್ಮ ಮನೆಯಲ್ಲಿ ಯಾರಾದರೂ ನಿಮಗೆ ಮಾಟ-ಮಂತ್ರಗಳನ್ನು ಮಾಡಿಸಿದ್ದರೆ ಒಂದು ನಿಂಬೆಹಣ್ಣಿನಲ್ಲಿ ಹೆಸರು ಬರೆದು 4 ಭಾಗವಾಗಿ ಕತ್ತರಿಸಬೇಕು ಪೂರ್ತಿಯಾಗಿ ಕತ್ತರಿಸಬಾರದು ನಂತರ ಅದರಲ್ಲಿ ಸ್ವಲ್ಪ ಉಪ್ಪು ತುಂಬಿ ಆಕಳು ಅಥವಾ ಎಮ್ಮೆಯ ಸಗಣಿಯಲ್ಲಿ ಅದನ್ನು ಇಟ್ಟು ಪೂರ್ತಿಯಾಗಿ ಸುಡಬೇಕು ನಂತರ ಇದನ್ನು ಹರಿವ ನದಿಗೆ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ನಿಮಗೆ ಬೇಗನೆ ಶತ್ರು ದೋಷ ನಿವಾರಣೆಯಾಗುತ್ತದೆ

ಹಾಗೂ ಅವರಿಗೆ ತೊಂದರೆಗಳು ಹೆಚ್ಚಾಗುತ್ತದೆ. ಸ್ನೇಹಿತರೇ ಇಂತಹ ತಂತ್ರಗಳನ್ನು ನಿಮ್ಮ ದ್ವೇಷಕ್ಕಾಗಿ ಬೇರೆಯವರ ಮೇಲೆ ಪ್ರಯೋಗ ಮಾಡಬಾರದು ಆದರೆ ಏನು ಅವರಿಂದ ನಿಮಗೇನಾದರೂ ತೊಂದರೆಗಳು ಆಗಿದ್ದರೆ ಮಾತ್ರ ಈ ರೀತಿಯಾಗಿ ಮಾಡಬೇಕು. ಇನ್ನು ನಿಮ್ಮ ಮನೆಗೆ ಅಥವಾ ನಿಮಗೆ ನರದೃಷ್ಟಿ ಅಥವಾ ದೃಷ್ಟಿ ದೋಷ ಆಗಿದ್ದರೆ ಅಮಾವಾಸ್ಯೆಯ ದಿನ ನಿಂಬೆಹಣ್ಣನ್ನು ಹಿರಿಯವರಿಂದ ದೃಷ್ಟಿಯನ್ನು ತೆಗೆದುಕೊಳ್ಳಬೇಕು ನಂತರ ಇದನ್ನು ಮೂರು ರಸ್ತೆ ಇರುವ ರಸ್ತೆಗೆ ಹಾಕಿ ತಿರುಗಿ ನೋಡದೆ ಬರಬೇಕು. ಇನ್ನು ನಿಮ್ಮ ಮನೆಗೆ ದೃಷ್ಟಿದೋಷ ಆಗಬಾರದು ಎಂದರೆ ಪ್ರತಿ ಅಮವಾಸ್ಯೆಗೆ ಮನೆಯ ಮುಖ್ಯ ದ್ವಾರಕ್ಕೆ ಹಾಗೂ ವಾಹನಗಳಿಗೆ ನಿಂಬೆಹಣ್ಣು ಹಾಗೂ ಮೆಣಸಿನಕಾಯಿಯನ್ನು ದಾರದಲ್ಲಿ ಪೋಣಿಸಿ ಮುಖ್ಯದ್ವಾರಕ್ಕೆ ಕಟ್ಟಬೇಕು.

ಈ ರೀತಿಯಾಗಿ ಮಾಡುವುದರಿಂದ ಮನೆಗೆ ಆಗಿರುವ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಇನ್ನು ನೀವು ವ್ಯಾಪಾರ ಮಾಡುವ ಸ್ಥಳದಲ್ಲಿ ಒಂದು ಗಾಜಿನ ಕಪ್ನಲ್ಲಿ ನಿಂಬೆಹಣ್ಣನ್ನು ಹಾಕಿ ಇದ್ದರೆ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತದೆ. ನಾಲ್ಕು ದಿಕ್ಕುಗಳಿಗೂ ಒಂದು ನಿಂಬೆಹಣ್ಣನ್ನು ನಾಲ್ಕು ಭಾಗ ಮಾಡಿ ಇಡಬೇಕು ನಂತರ ಮರುದಿನ ಇವುಗಳನ್ನು ತೆಗೆದು ನದಿಗೆ ಹಾಕಬೇಕು ಈ ರೀತಿಯಾಗಿ ಮಾಡುವುದರಿಂದ ಎಲ್ಲಾ ದೃಷ್ಟಿದೋಷ ಹಾಗೂ ನರದೋಷ ದೂರ ಆಗುತ್ತದೆ. ಸ್ನೇಹಿತರೆ ಹಾಗಾದರೆ ಈ ಮಾಹಿತಿ ನಿಮಗೆ ತುಂಬಾ ಇಷ್ಟ ಆಗಿದೆ ಮತ್ತು ಉಪಯೋಗಕಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ. ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಶೇರ್ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ