Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ವಿಶ್ವದ ಅಪಾಯಕಾರಿ ಕೆಟ್ಟ ಆಹಾರಗಳ ಬಗ್ಗೆ ಕೇಳಿದ್ದೀರಾ … ನಿಮಗೆ ಗೊತ್ತೇ ಇರದ ವಿಚಿತ್ರ ಮಾಹಿತಿ …

ನಮ್ಮ ಭಾರತ ದೇಶದಲ್ಲಿ ನಾವು ಸಾಮಾನ್ಯವಾಗಿ ಕಾಣಬಹುದು ಮಾಂಸಾಹಾರಿಗಳು ಕುರಿ ಕೋಳಿ ಮೀನು ಮಾಂಸಗಳನ್ನು ತಿನ್ನುವುದನ್ನು ಆದರೆ ಪ್ರಪಂಚದಲ್ಲಿ ಹಲವಾರು ದೇಶಗಳಲ್ಲಿ ವಿಚಿತ್ರವಾದ ಪ್ರಾಣಿಗಳನ್ನು ಜೀವಜಂತುಗಳನ್ನು ತಿನ್ನುವ ರೂಢಿಗಳನ್ನು ಮಾಡಿಕೊಂಡಿದ್ದಾರೆ .

ಹಾಗಾದರೆ ಬನ್ನಿ ಪ್ರಪಂಚದ ಹತ್ತು ವಿಚಿತ್ರ ಆಹಾರ ಪದಾರ್ಥಗಳನ್ನು ನಾವು ಈ ದಿನದ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ನಂತರ ನಿಮ್ಮ ಮಿತ್ರರೊಂದಿಗೆ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ .

ಇದೀಗ ಪ್ರಪಂಚದೆಲ್ಲೆಡೆ ಹೆಚ್ಚು ಆತಂಕಕಾರಿ ಆಗಿರುವಂತಹ ಒಂದು ಚರ್ಚೆ ಏನು ಅಂದರೆ ಅದು ಕೋರನ ವೈರಸ್ ಹಾಗೆಯೇ ಈ ಕರೋನಾ ವೈರಸ್ ಬರುವುದಕ್ಕೆ ಹೆಚ್ಚು ಸಂಶೋಧನೆಗಳು ತಿಳಿಸುವುದೇನೆಂದರೆ ಹಸಿ ಮಾಂಸವನ್ನು ತಿನ್ನುವುದರಿಂದ ಹಾಗೆ ಹಾವುಗಳು ಬಾವಲಿಗಳನ್ನು ತಿನ್ನುವುದರಿಂದ ಕೂಡ ಈ ಕರೋನಾ ವೈರಸ್ ಬಂದಿದೆ ಅಂತ ಕೂಡ ಕೆಲ ಸಂಶೋಧನೆಗಳು ಹೇಳಿವೆ .

ಈಗ ತಿಳಿಯೋಣ ವಿಶ್ವದ ಹತ್ತು ಕೆಟ್ಟ ಆಹಾರಗಳನ್ನು ಮೊದಲಿಗೆ ಫ್ರೂಟ್ ಬ್ಯಾಟ್ ಸೂಪ್ ಹೌದು ಇದನ್ನು ಥಾಯ್ಲೆಂಡ್ನಲ್ಲಿ ಹೆಚ್ಚಾಗಿ ಸೇವಿಸುತ್ತಾರೆ , ನಾವು ಸಾಮಾನ್ಯವಾಗಿ ಟೊಮೇಟೊ ಸೂಪನ್ನು ಕುಡಿದರೆ ಈ ಥಾಯ್ಲೆಂಡ್ನ ಜನ ಬಾವುಲಿಯನ್ನು ಸೂಪ್ ರೀತಿ ಮಾಡಿ ಕುಡಿಯುತ್ತಾರೆ ಹಾಗೆ ಈ ದೇಶದಲ್ಲಿ ಇದಕ್ಕಾಗಿ ಸ್ಪೆಷಲ್ ಮಾರ್ಕೆಟ್ ಕೂಡ ಇರುವುದನ್ನು ನಾವು ಕಾಣಬಹುದಾಗಿದೆ .

ಎರಡನೆಯದ್ದು ಲೈವ್ ಫ್ರಾಕ್ ಶಮಿ ಅಂದರೆ ಕಪ್ಪೆ ಮಾಂಸವನ್ನು ತೆಗೆದುಕೊಂಡು ಅದರಿಂದ ಈ ಒಂದು ಪದಾರ್ಥವನ್ನು ತಯಾರಿಸಿಕೊಂಡು ತಿನ್ನುತ್ತಾರೆ ನಮ್ಮ ಭಾರತ ದೇಶದಲ್ಲಿ ಕಪ್ಪೆಗಳು ಅಂದರೆ ಹೆದರುತ್ತಾರೆ ಆದರೆ ಚೀನಾ ದೇಶದಲ್ಲಿ ಬದುಕಿದ್ದ ಕಪ್ಪೆಯನ್ನೇ ಕತ್ತರಿಸಿ ತಿನ್ನುವ ಜನರಿದ್ದಾರೆ .

ಸ್ಕಾರ್ಪಿಯನ್ ಸೂಪ್ ಹೌದು ಚೇಳುಗಳಿಂದ ಮಾಡುವಂತಹ ಈ ಒಂದು ಸೂಪನ್ನು ಚೀನಾದವರು ಕುಡಿಯುತ್ತಾರೆ ಹಾಗೆ ಈ ಒಂದು ಚೇಳಿನಿಂದ ಕಬಾಬ್ ಅನ್ನು ಕೂಡ ಮಾಡಿಕೊಂಡು ತಿಂತಾರೆ ಈ ಜನ ಹಾಗೆ ಪ್ರಪಂಚದ ತುಂಬಾ ದೇಶದಲ್ಲಿ ಈ ಚೇಳನ್ನು ಆಹಾರದ ರೀತಿಯಲ್ಲಿ ಸೇವಿಸುತ್ತಾರೆ .

ಹ್ಯುಮನ್ ಬ್ರೆಡ್ ಇದನ್ನು ಕೇಳಿದರೆ ನಿಮಗೆ ಆಶ್ಚರ್ಯ ಅನಿಸುತ್ತದೆ ಆದರೆ ನಾವು ಸಾಮಾನ್ಯವಾಗಿ ಬಳಸುವಂತಹ ಬ್ರೆಡ್ಡನ್ನು ಇವರು ಮನುಷ್ಯರ ಆಕಾರದಲ್ಲಿ ಮೇಕಪ್ ಮಾಡಿ ತಿನ್ನುತ್ತಾರೆ ನಿಜಕ್ಕೂ ನೆನೆಸಿಕೊಂಡರೆ ಭಯಂಕರ ಅನಿಸುತ್ತದೆ . ಬಾಲುಟ್ ಅಂದರೆ ಮೊಟ್ಟೆ ಇದರಲ್ಲೆನಿದೆ ವಿಶೇಷ ಅಂತ ಅನ್ಕೋಬೇಡಿ ಇನ್ನೇನು ಎರಡು ಮೂರು ದಿನಗಳಲ್ಲಿ ಮರಿ ಮಾಡುವಂಥ ಮೊಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಆಹಾರವನ್ನು ತಯಾರಿಸಿಕೊಂಡು ತಿನ್ನುತ್ತಾರೆ ಪ್ರಪಂಚದೆಲ್ಲೆಡೆ ಹಲವು ದೇಶಗಳ ಜನರು .

ಲೈವ್ ಆಕ್ಟೋಪಸ್ ಹೌದು ನಮ್ಮ ಭಾರತ ದೇಶದಲ್ಲಿ ಬೋಂಡಾಗಳನ್ನು ಹೇಗೆ ನಾವು ಚಟ್ನಿಯ ಜೊತೆ ತಿನ್ನುತ್ತೇವೊ ಹಾಗೆ ಚೀನಾದ ಜನರು ಈ ಲೈವ್ ಆಕ್ಟೋಪಸ್ ಅನ್ನು ಚಟ್ನಿಯೊಂದಿಗೆ ತಿನ್ನುತ್ತಾರಂತೆ.ಶಿಪ್ ಹೆಡ್ ಫುಡ್ ನಮ್ಮ ಭಾರತ ದೇಶದಲ್ಲಿಯೂ ಕೂಡ ಕುರಿಯನ್ನು ತಿನ್ನುತ್ತಾರೆ ಆದರೆ ಆ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನುತ್ತಾರೆ ಆದರೆ ಚೀನಾದ ಜನರು ಈ ಕುರಿಯ ತಲೆಯನ್ನು ಕಟ್ ಮಾಡದೇ ಬೇಯಿಸಿ ಹಾಗೇ ತಿನ್ನುತ್ತಾರೆ .

ಡಾಗ್ ಚೀನಾದವರು ನಾಯಿಗಳನ್ನು ತಿನ್ನುತ್ತಾರೆ ಎಂಬ ಮಾಹಿತಿ ನೀವು ಈಗಾಗಲೇ ತಿಳಿದಿದ್ದೀರಿ ಇದಕ್ಕಾಗಿ ಚೀನಾದಲ್ಲಿ ಒಂದು ಮಾರುಕಟ್ಟೆಯೇ ಇದೆ ಹಾಗೆಯೇ ಮಾಂಸಕ್ಕಾಗಿ ಚೀನಾ ದೇಶದ ಜನರು ನಾಯಿಗಳನ್ನು ಸಾಕುವುದು ಕೂಡ ಉಂಟು .
ವಾರ್ಮ್ ಫುಡ್ ನಮ್ಮ ಜನರು ಗೊಬ್ಬರದ ಹುಳು ಅಂದರೆ ಅಸಹ್ಯ ಪಡುತ್ತಾರೆ ಆದರೆ ಪ್ರಪಂಚದಲ್ಲಿ ಹಲವು ದೇಶದ ಜನರು ತುಂಬಾ ಹುಳುಗಳನ್ನು ವಿಧವಿಧವಾಗಿ ತಿನ್ನುತ್ತಾರೆ .

ಸ್ನೇಕ್ ಚೀನಾದವರು ತಿನ್ನುವುದಕ್ಕಾಗಿಯೇ ಹಾವುಗಳನ್ನು ಸಾಕುತ್ತಾರೆ ಹಾಗೆಯೇ ಈ ಹಾವುಗಳನ್ನು ಬದುಕಿದ್ದಾಗಲೇ ಕತ್ತರಿಸಿ ತಿನ್ನುತ್ತಾರೆ ಎಂಥ ಮಂದಿ ಅಲ್ವಾ .ಇಂತಹ ಬೇಯಿಸದೆ ಇರುವಂತಹ ಮಾಂಸಗಳನ್ನು ತಿನ್ನುವುದರಿಂದಲೇ ಕರೋನಾ ಅಂತಹ ಮಹಾಮಾರಿ ವೈರಸ್ಗಳು ಬರುತ್ತವೆ ಆದರೆ ಇದನ್ನೆಲ್ಲ ತಿನ್ನುವಂತಹ ಜನರು ತಿಂದು ಇಂತಹ ವೈರಸ್ ಗಳನ್ನು ಬರೆಸಿಕೊಂಡು ಬೇರೆಯವರ ಪ್ರಾಣವನ್ನು ತೆಗೆಯುತ್ತಾರೆ .

Leave a Reply

Your email address will not be published. Required fields are marked *