Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವಿಶ್ವದಲ್ಲಿ ಇರುವಂತಹ ಏಕೈಕ ಜೀವಂತ ಶಿವಲಿಂಗ ಎಲ್ಲಿದೆ ಗೊತ್ತಾ … ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ !!!!

ಪುರಾಣದಲ್ಲಿ ಉಲ್ಲೇಖವಾಗಿರುವ ಈ ಒಂದು ಶಿವಲಿಂಗದ ಕಥೆಯನ್ನು ತಿಳಿದುಕೊಳ್ಳುವುದರ ಜೊತೆಗೆ ಈ ಶಿವಲಿಂಗವು ಜೀವಂತ ಶಿವಲಿಂಗವಾಗಿ ಈಗಲೂ ಕೂಡ ಜನರಿಗೆ ಆಶೀರ್ವದಿಸುತ್ತಿರುವ ಒಂದು ವಿಸ್ಮಯಕಾರಿ ಘಟನೆಯನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.

ಹೌದು ವರ್ಷಕ್ಕೆ ಒಂದು ಇಂಚು  ಬೆಳೆಯುತ್ತಿರುವ ಈ ಜೀವಂತ ಶಿವಲಿಂಗದ ಬಗ್ಗೆ ತಿಳಿದರೆ ನೀವು ಕೂಡಾ ಶಾಕ್ ಆಗ್ತೀರಾ ಹಾಗೆ ಈ ಒಂದು ಜೀವಂತ ಶಿವಲಿಂಗವು ಇರುವುದಾದರೂ ಎಲ್ಲಿ ಹಾಗೆ ಇದು ಈ ರೀತಿ ಬೆಳೆಯುವುದಕ್ಕೆ ಕಾರಣವೇನು.

ಇಲ್ಲಿ ನಡೆಯುತ್ತಿರುವ ಅಚ್ಚರಿ ಏನು ಎಂಬುದನ್ನು ತಿಳಿಯುವುದಕ್ಕಾಗಿ ಇಂದಿನ ಲೇಖನವನ್ನು ತಪ್ಪದೆ ತಿಳಿಯಿರಿ ಹಾಗೂ ಬೇರೆಯವರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

ಅಷ್ಟಕ್ಕೂ ಈ ಜೀವಂತ ಶಿವಲಿಂಗ ಇರುವುದಾದರೂ ಎಲ್ಲಿ ಅಂದರೆ ಮಧ್ಯಪ್ರದೇಶದ ಕುಜರಾಹು ಗೆ ಸೇರಿದ ಒಂದು ಪ್ರದೇಶದಲ್ಲಿದೆ ದೇವಾಲಯದ ಗರ್ಭಗುಡಿಯಲ್ಲಿರುವ ಶಿವಲಿಂಗವು ಪುರೋಹಿತರ ಪ್ರಕಾರ ಮತ್ತು ಆರ್ಕಿಯಾಲಜಿ ಆಫ್ ಇಂಡಿಯಾದ ಪ್ರಕಾರ ವರುಷಕ್ಕೊಮ್ಮೆ ಒಂದು ಇಂಚು ಬೆಳೆಯುತ್ತಿದೆ.

ಪ್ರತಿ ಶಿವರಾತ್ರಿಯ ದಿನದಂದು ಶಿವಲಿಂಗದ ಎತ್ತರವನ್ನು ಅಳತೆ ಮಾಡಲಾಗುತ್ತದೆ, ಪ್ರಸ್ತುತ ವರ್ಷದ ಶಿವಲಿಂಗದ ಎತ್ತರವೂ ಎಷ್ಟಿದೆ ಅಂದರೆ 9 ಅಡಿ ಆಗಿದೆ.

ಆರ್ಕಿಯಾಲಜಿ ಅಧಿಕಾರಿಗಳು ಊಹಿಸಿದ ಹಾಗೆ ಈ ಶಿವಲಿಂಗವು ಭೂಮಿಯ ಮೇಲೆ ಹೇಗೆ ಎರಡು ದಿಕ್ಕಿನಲ್ಲಿಯೂ ಬೆಳೆಯುತ್ತಿದೆಯೋ ಭೂಮಿಯೊಳಗೆ ಕೂಡ ಇದೇ ಆಕಾರದಲ್ಲಿ ಬೆಳೆಯುತ್ತಿದೆ ಎಂದು ಹೇಳಲಾಗಿದೆ.

ಈ ರೀತಿಯಾಗಿ ಪವಾಡವನ್ನು ಜರುಗಿಸುತ್ತಿರುವ ಈ ಜೀವಂತ ಶಿವಲಿಂಗದ ಹಿಂದೆಯೂ ಕೂಡ ಒಂದು ಪುರಾಣ ಕಥೆಯಿದೆ ಅದೇನು ಅಂತ ಹೇಳ್ತೀನಿ ಕೇಳಿ.

ಒಮ್ಮೆ ಈಶ್ವರನು ಪಾಂಡವರ ಯುಧಿಷ್ಠಿರನಿಗೆ ಅಂದರೆ ಧರ್ಮರಾಯನಿಗೆ ತನ್ನ ಬಳಿ ಇರುವ ಅಪರೂಪದ ಮಣಿಯದ ಮರ್ಕಟ ಮಣಿಯನ್ನು ನೀಡುತ್ತಾರೆ .

ತಾನು ಸ್ವರ್ಗ ವಾಸಿಯಾಗುವಾಗ ಮರ್ಕಟ ಮಣಿಯನ್ನು ಮಾತಂಗ ಖುಷಿಗೆ ಸಮರ್ಪಿಸುತ್ತಾರೆ. ಈ ರೀತಿ ಖುಷಿಯೂ ತಪಸ್ಸು ಮಾಡುವಂತಹ ಸಮಯದಲ್ಲಿ ಈ ಒಂದು ಮಣಿಯನ್ನು ಹರ್ಷಾ ರಾಜವರ್ಮನಿಗೆ ನೀಡುತ್ತಾರೆ.

ರಾಜ ವರ್ಮನು ತನಗೆ ನೀಡಿದ ಮರ್ಕಟ ಮಣಿಯನ್ನು ಭೂಮಿಯೊಳಗೆ ಹೂತಿಡುತ್ತಾರೆ, ಹೀಗೆ ತಾನು ಹೂತಿಟ್ಟ ಮಣಿಯ ಬಗ್ಗೆ ಯಾರಿಗೂ ರಾಜನು ಸುಳಿವು ನೀಡಿರುವುದಿಲ್ಲ .

ಹಾಗೆ ಒಮ್ಮೆ ಯುದ್ಧದಲ್ಲಿ ಪ್ರಾಣವನ್ನು ಬಿಡುತ್ತಾನೆ ರಾಜನು, ಈ ಒಂದು ಮಣಿಯು ಭೂಮಿಯೊಳಗೆ ಉಳಿದುಬಿಡುತ್ತದೆ ನಂತರ ಸ್ವತಃ ಶಿವನೇ ಸ್ವಯಂಭುವಾಗಿ ಈ ಮಣಿಯ ಮೇಲೆ ಬೆಳೆಯುತ್ತಾರೆ, ಈ ಒಂದು ಶಿವಲಿಂಗವೇ ಇದೀಗ ಅಚ್ಚರಿ ಅನ್ನು ಸೃಷ್ಟಿಸುತ್ತ ಇರುವ ಪವಾಡವನ್ನು ಜರುಗಿಸುತ್ತ ಇರುವ ಶಿವಲಿಂಗ ಆಗಿದೆ.

ಪ್ರತಿ ವರ್ಷದ ಕಾರ್ತಿಕ ದಲ್ಲಿ ಮತ್ತು ಶಿವರಾತ್ರಿಯ ದಿನದಂದು ಇಲ್ಲಿ ವಿಶೇಷವಾದ ಪೂಜೆ ಜರುಗುತ್ತದೆ ನೀವು ಒಮ್ಮೆ ಈ ಶಿವಲಿಂಗ ದರ್ಶನವನ್ನು ಪಡೆದು ಶಿವನ ಆಶೀರ್ವಾದವನ್ನು ಪಡೆದುಕೊಂಡು ಬನ್ನಿ ಹಾಗೇ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಓಂ ನಮಃ ಶಿವಾಯ ಎಂದು ಕಾಮೆಂಟ್ ಮಾಡಿ.

ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ಇನ್ನೂ ಇಂತಹ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯುವುದಕ್ಕಾಗಿ ಉಪಯುಕ್ತ ವಿಚಾರಗಳನ್ನು ತಿಳಿದುಕೊಳ್ಳ ಬೇಕಾದರೆ ತಪ್ಪದೇ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ಲೈಕ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *