Categories
ಉಪಯುಕ್ತ ಮಾಹಿತಿ

ವಿಚಿತ್ರ ಅಭ್ಯಾಸಗಳನ್ನು ಹೊಂದಿರುವ ಕೊಳಕು ಜನರ ಬಗ್ಗೆ ನಿಮಗೆ ಕೆಲವೊಂದು ಮಾಹಿತಿ …

ಹವ್ಯಾಸ ಎಂದರೆ ಮನುಷ್ಯ ಬಿಡುವಿನ ಸಮಯದಲ್ಲಿ ಯಾವ ಕೆಲಸವನ್ನು ಮಾಡಲು ಇಚ್ಛಿಸುತ್ತಾನೆ ಅದೇ ಅವನಿಗೆ ಹವ್ಯಾಸವಾಗಿ ಬಿಡುತ್ತದೆ ನಮ್ಮ ಹವ್ಯಾಸಗಳು ಯಾವಾಗಲೂ ಕೂಡ ನಮಗೆ ಉತ್ತಮ ಹಾದಿಯನ್ನು ತೋರಿಸುವಂತಿರಬೇಕು ಆದರೆ ಆ ಹವ್ಯಾಸಗಳು ನಮಗೆ ಕೆಡುಕನ್ನುಂಟು ಮಾಡುವ ಹಾಗೆ ಇರಬಾರದು .

ಕೆಟ್ಟ ಹವ್ಯಾಸಗಳಿಗೆ ಅಥವಾ ಕೆಟ್ಟ ಚಟಗಳಿಗೆ ಬೇಗಾನೆ ನಾವು ಅಡಿಯಿಟ್ಟಾಗ ಬಿಡುತ್ತೇವೆ ಆದರೆ ಒಳ್ಳೆಯ ಅಭ್ಯಾಸಗಳನ್ನು ಒಳ್ಳೆಯ ರೂಢಿಗಳನ್ನು ನಾವು ಅಳವಡಿಸಿಕೊಳ್ಳಲು ಸಾಕಷ್ಟು ಸಮಯವನ್ನು ಕೂಡ ತೆಗೆದುಕೊಳ್ಳುತ್ತೇವೆ . ಈ ಭೂಮಿ ಮೇಲೆ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಕೂಡ ಒಂದು ವಿಭಿನ್ನವಾದ ಹವ್ಯಾಸವನ್ನು ನಾವು ನೋಡಬಹುದಾಗಿದೆ.

ಹಾಗೆಯೇ ನಾವು ಈ ದಿನದ ಮಾಹಿತಿಯಲ್ಲಿ ಹೇಳಲು ಹೊರಟಿರುವಂತೆ ವಿಚಾರವನ್ನು ಕೇಳಿದರೆ ನಿಮಗೂ ಕೂಡ ವಿಚಿತ್ರ ಎನಿಸುವುದರ ಜತೆಗೆ ಆಶ್ಚರ್ಯ ಅಂತನೂ ಕೂಡ ಅನಿಸುತ್ತದೆ ಇಂತಹ ಹವ್ಯಾಸಗಳಲ್ಲಿ ರೂಢಿಸಿಕೊಂಡಿರುತ್ತಾರೆ ಜನರು ಅಂತ ಹಾಗಾದರೆ ಬನ್ನಿ ಆ ಹವ್ಯಾಸಗಳು ಉಳ್ಳ ಜನರು ಯಾರು ಅವರು ರೂಢಿಸಿಕೊಂಡಿ ರುವಂತಹ ಆ ಹವ್ಯಾಸಗಳಾದ ಏನು ಅನ್ನೋದನ್ನು ತಿಳಿಯೋಣ .

ಮೊದಲಿಗೆ ಸುಮತಿ ಇವರು ನಮ್ಮ ಭಾರತ ದೇಶಕ್ಕೆ ಸೇರಿದವರು ಇವರಿಗೆ ಈಗ ಸುಮಾರು ಎಪ್ಪತ್ಮೂರು ವರುಷಗಳು ಇವರು ತಮ್ಮ ಹದಿನೇಳನೆಯ ವರುಷದಿಂದ ಒಂದು ಹವ್ಯಾಸವನ್ನು ರೂಢಿಸಿಕೊಂಡಿದ್ದರು ಅದೇನೆಂದರೆ ಮಣ್ಣನ್ನು ತಿನ್ನುವಂತಹ ಹವ್ಯಾಸ ಈಗಲೂ ಕೂಡ ಇವರಲ್ಲಿ ನಾವು ಈ ಹವ್ಯಾಸವನ್ನು ಕಾಣಬಹುದಾಗಿದೆ .

ಮಣ್ಣನ್ನು ತಿನ್ನುವಂತಹ ವಸುಮತಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಹಾಗೆಯೇ ಮತ್ತೊಂದು ವಿಚಾರವೇನೆಂದರೆ ಇವರು ಇಲ್ಲಿಯವರೆಗೂ ಒಂದು ಬಾರಿಯೂ ಆಸ್ಪತ್ರೆಗೆ ಹೋಗಿಲ್ಲವಂತೆ ಈ ವಯಸ್ಸಿನಲ್ಲಿಯೂ ಇವರು ಕೆಲಸ ಮಾಡುವುದು ಅಚ್ಚರಿಯ ವಿಚಾರವೇ ಹೌದು .

ಎರಡನೆಯದು ಬ್ಯಾಂಡೇಜ್ ಕೆವಿನ್ ಇವರು ಅಮೆರಿಕದವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಮಾಡಿಸಿಕೊಂಡಂತಹ ಕೆವಿನ್ ಅವರಿಗೆ ಈಗಲೂ ಕೂಡ ಬ್ಯಾಂಡೇಜ್ ಕಟ್ಟಿಕೊಳ್ಳುವಂತಹ ಹವ್ಯಾಸ ಆದರೆ ಅವರಿಗೆ ಯಾವ ಸಮಸ್ಯೆ ಕೂಡ ಆಗಿಲ್ಲ ಆದರೆ ಇವರಿಗೆ ಬ್ಯಾಂಡೇಜ್ ಕಟ್ಟಿಕೊಳ್ಳುವಂತಹ ಹವ್ಯಾಸ ಇದೆ .

ಈ ಒಂದು ಹವ್ಯಾಸದಿಂದ ಇವರಿಗೆ ಒಬ್ಬ ಗರ್ಲ್ಫ್ರೆಂಡ್ ಕೂಡಾ ಸಿಕ್ಕಿದ್ದರೂ ಆದರೆ ನಿಜ ಸಂಗತಿ ತಿಳಿದ ಮೇಲೆ ಅವರು ಇದನ್ನೆಲ್ಲ ಬಿಟ್ಟುಬಿಡು ಎಂದು ಹೇಳಿದರೂ ಕೂಡ ಅವರು ಈ ಹವ್ಯಾಸವನ್ನು ಬಿಡಲಿಲ್ಲ ಹಾಗೆಯೇ ಇವರಿಗೆ ಯಾಕೆ ಈ ಹವ್ಯಾಸ ಇಷ್ಟ ಎಂದರೆ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಬ್ಯಾಂಡೇಜ್ ಹಾಕಿಕೊಂಡಾಗ ಜನರು ಇವರನ್ನು ಮಾತನಾಡಿಸುವ ರೀತಿ ಹಾಗೂ ಅವರು ತೋರಿಸಿದಂತಹ ಪ್ರೀತಿ ಇವರಿಗೆ ಇಷ್ಟ ಆಗಿತ್ತಂತೆ ಅದಕ್ಕಾಗಿ ಇವರು ಹೀಗೆ ಈ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ .

ಮೂರನೆಯದ್ದು ಪೌಲ್ ಯಾರೋ ಇವರು ಲಂಡನ್ ಅವರು , ಒಮ್ಮೆ ಒಂದು ಟಿವಿ ಚಾನಲ್ ನಲ್ಲಿ ಲೈವ್ ನ್ಯೂಸ್ನಲ್ಲಿ ಇವರ ಸ್ನೇಹಿತರು ಇವರನ್ನು ನೋಡಿದರು ಆದರೆ ಹೀಗೆ ಒಂದು ಬಾರಿಯಲ್ಲ ಲೈವ್ ನ್ಯೂಸ್ಗಳಲ್ಲಿ ಇವರು ಸುಮಾರು ನೂರು ಬಾರಿ ಕಂಡಿದ್ದಾರಂತೆ ಹಾಗಾದರೆ ಇವರದ್ದು ಎಂತಹ ವಿಚಿತ್ರವಾದ ಹವ್ಯಾಸ ಅಲ್ವಾ .

ನಾಲ್ಕನೆಯವರು ಮಾರ್ಗರೆಟ್ ನಾವು ನಮ್ಮ ಭಾರತ ದೇಶದ ಕೇರಳದ ದಿಶಾ ಅವರ ಹೆಸರನ್ನು ಕೇಳಿದ್ದೇವೆ ಇವರು ಜೇನುಗಳನ್ನು ಹೇಗೆ ಸಾಕಾಣಿಕೆ ಮಾಡಬೇಕೆಂದು ತಿಳಿಸಿ ಹೇಳುತ್ತಾರೆ ಆದರೆ ಮಾರ್ಗರೆಟ್ ಎಂಬುವವರು ಜೇನಿನಿಂದ ಕಚ್ಚಿಸಿಕೊಳ್ಳುವಂತಹ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ ಇವರು ಚಿಕ್ಕಂದಿನಲ್ಲಿದ್ದಾಗ ಒಮ್ಮೆ ಜೇನು ಕಚ್ಚಿತಂತೆ ಆ ನೋವು ಇಷ್ಟವಾಗಿ ಈಗಲೂ ಕೂಡ ಇವರು ಜೇನುಗಳಿಂದ ಕಚ್ಚಿಸಿಕೊಳ್ಳುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ .

ಐದನೆಯದು ಮೈಕಲ್ ಕಾರ್ ಎಂಬುವವರು ಮೈಕಲ್ ಅವರು ೧೯೭೭ರಲ್ಲಿ ಒಂದು ಬೇಸ್ ಬಾಲ್ ಗೆ ಪೇಂಟಿಂಗ್ ಮಾಡಿದ್ದರು ಅಂದಿನಿಂದ ಅವರಿಗೆ ಆ ಒಂದು ಬಾಲ್ಗೆ ಪೇಂಟಿಂಗ್ ಮಾಡುವಂತಹ ಹವ್ಯಾಸ ಈಗಲೂ ಕೂಡ ಇವರು ಆ ಬೇಸ್ ಬಾಲ್ಗೆ ಬಣ್ಣವನ್ನು ಹಚ್ಚುತ್ತಾರೆ ಈ ರೀತಿ ಇವರ ಈ ಹವ್ಯಾಸಕ್ಕೆ ಗಿನ್ನಿಸ್ ವರ್ಡ್ ರೆಕಾರ್ಡ್ ಪ್ರಶಸ್ತಿ ಕೂಡ ದೊರೆತಿದೆ ಹಾಗೆ ವಿಶೇಷತೆ ಏನೆಂದರೆ ಈ ಬಾಲ್ ನ ತೂಕ ಇದೀಗ ಸುಮಾರು ಒಂದು ಟನ್ ಅಂತೆ .

Leave a Reply

Your email address will not be published. Required fields are marked *