ಮನೆಯಲ್ಲಿ ಎಣ್ಣೆಯನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ಇವತ್ತಿನ ಈ ಮಾಹಿತಿಯಲ್ಲಿ ನಾನು ತಿಳಿಸಿಕೊಡುತ್ತೇನೆ. ಕುದುರೆ ಬೆಳೆಯುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವಲ್ಲಿ ಎಣ್ಣೆ ಸಹಾಯಕಾರಿಯಾಗಿದೆ.
ಇವತ್ತಿನ ಎಣ್ಣೆಯನ್ನು ರೆಡಿ ಮಾಡಲು ಮೊದಲನೇಯದಾಗಿ, ಕರಿಬೇವನ್ನು ಉಪಯೋಗಿಸಬೇಕು , ಏಳರಿಂದ ಎಂಟು ಕರಿಬೇವನ್ನು ಕಡ್ಡಿಗಳನ್ನು ತೆಗೆದುಕೊಳ್ಳಬೇಕು. ನಂತರ 1 ಕಪ್ಪಿನಷ್ಟು ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಬೇಕು.
ಮನೆಯಲ್ಲಿ ಮಾಡಿದ ಕೊಬ್ಬರಿ ಎಣ್ಣೆಯನ್ನು ಆಯ್ದುಕೊಳ್ಳಬೇಕು. ಆನಂತರ ಕಾಲು ಕಪ್ಪಿನಷ್ಟು ಹರಳೆಣ್ಣೆಯನ್ನು ತೆಗೆದುಕೊಳ್ಳಬೇಕು.ನಂತರ ಎರಡು ಚಮಚದಷ್ಟು ಮೆಂತೆ ಕಾಳುಗಳನ್ನು ತೆಗೆದುಕೊಳ್ಳಬೇಕು.
ಇವಿಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಳ್ಳಬೇಕು. ಸ್ನೇಹಿತರೆ ಇದಿಷ್ಟು ಪದಾರ್ಥಗಳನ್ನು ಉಪಯೋಗಿಸಿಕೊಂಡು ಎಣ್ಣೆಯನ್ನು ಹೇಗೆ ತಯಾರಿಸುವುದು ಎಂದು ನಿಮಗೆ ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ.
ಮೊದಲನೆಯದಾಗಿ ನಾವು ಒಂದು ಕಾವಲಿಯನ್ನು ಬಿಸಿ ಮಾಡಿಕೊಳ್ಳಬೇಕು. ಅದರಲ್ಲಿ ಬಿಸಿಯಾದ ನಂತರ ಮೆಂತೆಯನ್ನು ಹಾಕಬೇಕು. ಅದನ್ನು ಹಾಕಿದ ನಂತರ ಚೆನ್ನಾಗಿ ಅದನ್ನು ಹುರಿಯಬೇಕು. ಕಂದುಬಣ್ಣ ಬರುವವರೆಗೆ ಅದನ್ನು ಹುರಿದುಕೊಳ್ಳಬೇಕು.
ಮೆಂತೆಕಾಳು ಕಂದು ಬಣ್ಣ ಬಂದ ನಂತರ ಕರಿಬೇವಿನ ಎಲೆಗಳನ್ನು ಮಿಶ್ರಣ ಮಾಡಿಕೊಂಡು ಅದನ್ನು ಕೂಡ ಸ್ವಲ್ಪ ಹೊತ್ತು ಹುರಿದುಕೊಳ್ಳಬೇಕು .ಅದಾದ ನಂತರ ಅದನ್ನು ತಣ್ಣಗಾಗಲು ಬಿಡಬೇಕು. ಮಿಶ್ರಣ ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿನಲ್ಲಿ ಹಾಕಿಡಬೇಕು.
ನಂತರ ಅದನ್ನು ಪುಡಿ ಮಾಡಿಕೊಳ್ಳಬೇಕು. ಕರಿಬೇವಿನ ಎಲೆಗಳನ್ನು ತುಂಬಾ ಹಳೆಯ ಕಾಲದಿಂದಲೂ ಕೂಡ ಕೂದಲಿನ ಸಮಸ್ಯೆಗೆ ಉಪಯೋಗಿಸಿಕೊಳ್ಳಲಾಗುತ್ತದೆ.
ಕರಿಬೇವು ಕೂದಲು ಬೆಳೆಯುವುದಕ್ಕೆ ಸಹಾಯಮಾಡುತ್ತದೆ. ತಲೆಹೊಟ್ಟು ಕೂಡ ಕಡಿಮೆ ಮಾಡುತ್ತದೆ.ಹಾಗೂ ಚಿಕ್ಕವಯಸ್ಸಿನಲ್ಲಿ ಕೂಡ ಕೂದಲು ಬೆಳ್ಳಗಾಗುವುದನ್ನು ತಡೆಯುತ್ತದೆ.ಹಾಗೆಯೇ ಕಾವಲಿಯನ್ನು ಬಿಸಿ ಮಾಡಲು ಮಾಡಲು ಇಡಬೇಕು.
ಅದರಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಕಬೇಕು, ಕೊಬ್ಬರಿಎಣ್ಣೆ ಎನ್ನುವುದು ನಮಗೆ ಕೂದಲು ಬೆಳೆಯುವುದಕ್ಕೆ ಸಹಾಯಕಾರಿಯಾಗಿದೆ.ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುವ ಹಾಗೆ ಮಾಡುತ್ತದೆ.
ಇದರಲ್ಲಿ ಇರುವ ವಿಟಮಿನ್ಸ್ ಗಳು ನಮ್ಮ ಕೂದಲಿಗೆ ಪೋಷಣೆಯನ್ನು ನೀಡುತ್ತದೆ. ನಂತರ ಹರಳೆಣ್ಣೆಯನ್ನು ಮಿಶ್ರಣ ಮಾಡಿಕೊಳ್ಳಬೇಕು. ಇದು ಕೂಡ ನಮ್ಮ ಕೂದಲಿನ ಬೆಳವಣಿಗೆಗೆ ತುಂಬಾ ಸಹಾಯಕಾರಿಯಾಗಿದೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಅಂಟಿ ಸಂಘಸ್ ಪ್ರಾಪರ್ಟೀಸ್ ಗಳು ಇರುತ್ತವೆ.
ಈ ಎರಡು ಎಣ್ಣೆಗಳನ್ನು ಹಾಕಿದ ನಂತರ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ನಂತರ ಮೆಂತ್ಯದ ಕಾಳು ಮತ್ತು ಕರಿಬೇವಿನ ಎಲೆಯ ಮಿಶ್ರಣಗಳನ್ನು ಈ ಎಣ್ಣೆಗೆ ಮಿಶ್ರಣ ಮಾಡಬೇಕು.
ಈ ಪೌಡರನ್ನು ಎಣ್ಣೆಗೆ ಹಾಕಿದ ನಂತರ ಸ್ವಲ್ಪ ಹೊತ್ತು ಬಿಸಿ ಮಾಡಿ ಕೊಳ್ಳಬೇಕು.ಕರಿಬೇವು ಮತ್ತು ಮೆಂತೆಯಲ್ಲಿ ಇರುವ ಅಂಶಗಳಲ್ಲಿ ಚೆನ್ನಾಗಿ ಎಣ್ಣೆ ಜೊತೆ ಮಿಶ್ರಣ ಆಗಬೇಕು. ಆನಂತರ ಇದನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಬೇಕು.ನಂತರ ಎಣ್ಣೆಯನ್ನು ಸೋಸಿಕೊಳ್ಳಬೇಕು.
ಅದನ್ನು ಸಹಿಸಿಕೊಳ್ಳಲು ಒಂದು ಕಾಟನ್ ಟವೆಲ್ಲನ್ನು ತೆಗೆದುಕೊಳ್ಳಬೇಕು. ನಂತರ ಟವೆಲ್ ನಲ್ಲಿ ಹಾಕಿಕೊಂಡು ಸೋಸಿಕೊಳ್ಳಬೇಕು. ಎಣ್ಣೆಯನ್ನು ಸೋಸಿದ ನಂತರ ಒಂದು ಗಾಜಿನ ಬಟ್ಟಲಲ್ಲಿ ಸ್ಟೋರ್ ಮಾಡಿಕೊಳ್ಳಬೇಕು. ಗಾಜಿನ ಬಾಟಲಿಯಲ್ಲಿ ಹಾಕಿದರೆ ತುಂಬಾ ದಿನ ಚೆನ್ನಾಗಿರುತ್ತದೆ. ಈ ಎಣ್ಣೆಯನ್ನು ಮೂರು ತಿಂಗಳ ಕಾಲ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.
ಎಣ್ಣೆನು ನೀವು ಕೂದಲ ಬುಡಕ್ಕೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿಕೊಳ್ಳಬೇಕು. ವಾರದಲ್ಲಿ ಮೂರು ಬಾರಿ ಎಣ್ಣೆಯನ್ನು ಹಚ್ಚಬೇಕು. ಎಣ್ಣೆಯನ್ನು ರಾತ್ರಿ ಹಚ್ಚಿಕೊಂಡು ಬೆಳಿಗ್ಗೆ ತಲೆ ಸ್ನಾನವನ್ನು ಮಾಡಬೇಕು ಅಥವಾ ಎರಡು ಗಂಟೆ ನಂತರ ತಲೆಸ್ನಾನ ಮಾಡಬಹುದು.
ಮೂರು ವಾರಗಳಲ್ಲಿ ಫಲಿತಾಂಶ ಸಿಗುತ್ತದೆ.ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ಲೈಕ್ ಮಾಡಿ ಮತ್ತು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.