Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲವಂಗದಿಂದ ಈ ಕೆಲಸ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗಿ ಒಂದೇ ತಿಂಗಳಲ್ಲಿ ಹಣ ಬರಲು ಶುರುವಾಗುತ್ತದೆ..!

ಅಡುಗೆ ಮನೆಯಲ್ಲಿರುವ ಲವಂಗದ ನಿಮ್ಮ ಅದೃಷ್ಟವನ್ನು ಬದಲಿಸುವ ಶಕ್ತಿ ಇದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮ ಕಷ್ಟಗಳನ್ನು ದೂರಮಾಡುವ ಶಕ್ತಿಯನ್ನು ಹೊಂದಿದೆ ಈ ಲವಂಗ.

ಹಾಗೆಯೇ ಲವಂಗ ದಿಂದ ಮಾಡುವ ಕೆಲವು ಉಪಾಯಗಳು ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಸಹ ನೀಡುತ್ತದೆ. ಮೊದಲು ಎರಡು ಲವಂಗವನ್ನು ತೆಗೆದುಕೊಳ್ಳಿ ನಂತರ ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ.

ಆನಂತರ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ. ನಂತರ ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಲವಂಗ ಸುರಕ್ಷಿತವಾಗಿರುವಂತೆ ಅದನ್ನು ಸುರಕ್ಷಿತ ಸ್ಥಳದಲ್ಲಿ ಇಡಿ. ಇದನ್ನು ಯಾರಿಗೂ ಕೂಡ ಹೇಳಬೇಡಿ.

ಈ ಕೆಲಸವನ್ನು ಮಾಡುವಾಗ ಮಾತನಾಡಬಾರದು. ನಂತರ ಅದರ ಪರಿಣಾಮ ನಿಮಗೆ ತಿಳಿಯುತ್ತದೆ.ಕೆಲವೇ ದಿನಗಳಲ್ಲಿ ನಿಮ್ಮ ಎಲ್ಲಾ ಕಷ್ಟಗಳು ದೂರವಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಅದಲ್ಲದೆ ಪ್ರತಿದಿನ ದೇವರಿಗೆ ಆರತಿಯನ್ನು ಬೆಳಗುವ ವೇಳೆ ದೀಪಕ್ಕೆ ಒಂದು ಲವಂಗವನ್ನು ಹಾಕಿ ಬೆಳಗಬೇಕು. ಇದು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಲವಂಗ ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಿ ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಜೀವನದಲ್ಲಿ ನೆಮ್ಮದಿ ನೆಲೆಸುವಂತೆ ನೋಡಿಕೊಳ್ಳುತ್ತದೆ. ಶನಿವಾರ ಅಥವಾ ಭಾನುವಾರ ಸಂಜೆ ಐದು ಲವಂಗ, ಮೂರು ಕರ್ಪೂರ ಹಾಗು ಮೂರು ಏಲಕ್ಕಿಯನ್ನು ದೀಪಕ್ಕೆ ಹಾಕಿ ಅದರ ಹೊಗೆಯನ್ನು ಮನೆಯ ಎಲ್ಲಾ ಕೋಣೆಗೆ ತೋರಿಸಿ.

ನಂತರ ಅದನ್ನು ಮುಖ್ಯದ್ವಾರದ ಬಳಿ ಇಡಿ. ಇದರಿಂದ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿ ಯು ದೂರವಾಗುತ್ತದೆ.ಯಾವುದಾದರೂ ಮುಖ್ಯ ಕೆಲಸಕ್ಕೆ ಹೋಗುತ್ತಿದ್ದರೆ, ಮನೆಯಿಂದ ಹೊರಗೆ ಹೋಗುವ ಮೊದಲು ಲವಂಗವನ್ನು ಬಾಯಿಯಲ್ಲಿ ಹಾಕಿಕೊಳ್ಳಿ ನಂತರ ಇಷ್ಟದೇವತೆಯನ್ನು ನೆನೆಯುತ್ತ ಕೆಲಸ ಮಾಡಿ.

ಇದು ಸರಳ ಉಪಾಯ ವಾದರೂ ಇದರ ಶಕ್ತಿ ಅಪಾರ. ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಹಾಗೂ ಕೊಟ್ಟ ಹಣ ವಾಪಸ್ ಬರದೆ ಇದ್ದರೆ, ಲವಂಗದಿಂದ ಈ ಕೆಲಸವನ್ನು ಮಾಡಿದರೆ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ಕೆಲವರಿಗೆ ನೂರು ರುಪಾಯಿ ಸಂಪಾದನೆ ಇದ್ದರೆ ಅವರಿಗೆ ಖರ್ಚು ಅದರ ದುಪ್ಪಟ್ಟು ಇರುತ್ತದೆ. ಒಂದು ಶುಕ್ರವಾರದ ದಿನ ನೀವು ವಿಶೇಷವಾಗಿ 6 ಲವಂಗಗಳನ್ನು ತೆಗೆದುಕೊಳ್ಳಬೇಕು.

ನೆನಪಿರಲಿ ಸ್ನೇಹಿತರೆ ಆರು ಎಂದರೆ ಶುಕ್ರ ಅದಕ್ಕಾಗಿ ಆರು ಲವಂಗವನ್ನು ತೆಗೆದುಕೊಳ್ಳಬೇಕು.ಲವಂಗವನ್ನು ನೀವು ಮಲಗುವ ಮುಂಚೆ ದೇವರ ಮನೆಯಲ್ಲಾದರೂ ಸರಿ ಅಥವಾ ಅಡುಗೆ ಮನೆಯಲ್ಲಿ ಆದರೂ ಸರಿ 6 ಲವಂಗವನ್ನು ನಿಮ್ಮ ಎರಡು ಕೈಯಿಂದ ಹಿಡಿದುಕೊಳ್ಳಬೇಕು.

ತಾಯಿ ಲಕ್ಷ್ಮಿದೇವಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು. ಅದಾದ ನಂತರ ಈ ಆರು ಲವಂಗವನ್ನು ಅರಿಶಿಣದ ಬಟ್ಟೆತನ್ನು ತೆಗೆದುಕೊಂಡು ಕೈಯಲ್ಲಿರುವ ಲವಂಗವನ್ನು ಅರಿಶಿನ ಬಟ್ಟೆಗೆ ಕಟ್ಟಬೇಕು. ತದನಂತರ ನೀವು ಮಲಗುವ ದಿಂಬಿನ ಕೆಳಗೆ ಅದನ್ನು ಇಟ್ಟುಕೊಂಡು ಮಲಗಬೇಕು.

ಈ ರೀತಿ ಮಾಡಿದರೆ ನಿಮಗೆ ಮಹಾಲಕ್ಷ್ಮಿ ಅನುಗ್ರಹವಾಗುತ್ತದೆ. ತದನಂತರ ಆ ಗಂಟನ್ನು ಅಂದರೆ ಮಾರನೆಯ ದಿನ, ಅಂದರೆ ಶನಿವಾರದ ದಿನ ತೆಗೆದುಕೊಂಡು ಹೋಗಿ ವಿಶೇಷವಾಗಿ ಅರಳಿ ಮರಕ್ಕೆ ಕಟ್ಟಿ ಬರಬೇಕು.

ಹೋಗುವಾಗ ಮತ್ತು ಬರುವಾಗ ಯಾರ ಜೊತೆಯಲ್ಲೂ ಕೂಡ ಮಾತನಾಡಬಾರದು.ಕಟ್ಟುವಾಗ ನಿಮ್ಮ ಮನೆ ದೇವರ ನೆನೆಸಿಕೊಂಡು ನಮ್ಮ ಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಿಕೊಂಡು ಅರಳಿ ಮರಕ್ಕೆ ಕಟ್ಟಬೇಕು.

ಹೀಗೆ ಮಾಡಿದರೆ ನಿಮ್ಮ ಕಷ್ಟವಲ್ಲ ದೂರವಾಗಿ ನೀವು ಕೊಟ್ಟ ಹಣ ವಾಪಸ್ ಬರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ .ಎಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಈ ಮಾಹಿತಿಯನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *