ಬೆಂಗಳೂರು ಎಂದರೆ ಕೇವಲ ಐಟಿ-ಬಿಟಿಗೆ ಸೀಮಿತವಾಗಿಲ್ಲ ಹಲವಾರು ವರ್ಷಗಳ ಹಿಂದೆ ಹೋದರೆ ಬೆಂಗಳೂರು ಕೂಡ ಒಂದು ಐತಿಹಾಸಿಕ ಹಿನ್ನೆಲೆ ಅಂತಹ ಒಂದು ಕ್ಷೇತ್ರ. ಆದರೆ ಸದ್ಯಕ್ಕೆ ನಮ್ಮ ಬೆಂಗಳೂರು ಯಾವುದೇ ಆಧ್ಯಾತ್ಮಿಕ ಚಿಂತನೆ ಹಾಗೂ ಆಧ್ಯಾತ್ಮಿಕ ಚಟುವಟಿಕೆ ಇರುವಂತಹ ಪ್ರದೇಶವಾಗಿದೆ.
ಆದರೆ ಇದರ ಇತಿಹಾಸವನ್ನು ನೋಡಿದರೆ ನಿಮಗೆ ಹಲವಾರು ಚಕಿತ ವನ್ನು ಉಂಟು ಮಾಡುವಂತಹ ದೇವಸ್ಥಾನಗಳು ಇಲ್ಲಿರುತ್ತವೆ. ಅದೇ ತರ ಇವತ್ತು ನಾವು ನಿಮಗೆ ಹೇಳುವಂತಹ ಈ ದೇವಸ್ಥಾನದ ಕುರಿತು ಹಲವಾರು ಚಮತ್ಕಾರಿ ವಿಷಯಗಳನ್ನು ಮಾಡುವಂತಹ ದೇವಸ್ಥಾನ ನಮ್ಮ ಬೆಂಗಳೂರಿನಲ್ಲಿ ಇದೆ ಎಂದರೆ ನಿಜವಾಗಲೂ ನಿಮಗೆ ಅಚ್ಚರಿ ಉಂಟುಮಾಡುತ್ತದೆ.
ಹಾಗಾದರೆ ಆ ದೇವಸ್ಥಾನದ ಹೆಸರಾದರೂ ಯಾವುದು ಹಾಗೂ ಆ ದೇವಸ್ಥಾನ ಎಲ್ಲಿ ಬರುತ್ತದೆ ಹಾಗೆ ಹೇಗೆ ಕೊಟ್ಟಿದ್ದಾರೆ ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ, ದಯವಿಟ್ಟು ಓದಿ. ಬೆಂಗಳೂರನ್ನು ಒಂದು ಕಾಲದಲ್ಲಿ ಕಲ್ಯಾಣಿ ನಗರ ಎಂದು ಕೂಡ ಕರೆಯುತ್ತಿದ್ದರು. ಅಂದರೆ ಹಲವಾರು ಜನರು ಬೆಂಗಳೂರಿನಲ್ಲಿ ಮದುವೆಯಾಗಿದ್ದರು ಇದರಿಂದ ಇದಕ್ಕೆ ಕಲ್ಯಾಣಿ ನಗರ ಎಂದು ಕರೆಯುತ್ತಿದ್ದರು.
ಹಾಗೆ ಬೆಂಗಳೂರಿನಲ್ಲಿ ಹಲವಾರು ದೇವಸ್ಥಾನಗಳು ಇರುವುದರಿಂದ ದೇವಸ್ಥಾನಗಳ ನಗರಿಯು ಕೂಡ ಆಗಿತ್ತು. ಹೀಗೆ ದೇವಸ್ಥಾನಗಳು ನಗರಿ ಎಂದು ಕರೆಸಿಕೊಳ್ಳುವ ಪಡುವ ಬೆಂಗಳೂರು ಒಂದು ವಿಚಿತ್ರ ಪವಾಡವನ್ನು ಮಾಡುವಂತಹ ಹಾಗೂ ಜನರಿಗೆ ಅತಿ ಹೆಚ್ಚು ಪರಿಚಯ ಇರುವಂತಹ ಗವಿ ಗಂಗಾಧರೇಶ್ವರ ದೇವಸ್ಥಾನ ಅದರಲ್ಲೂ ಹಲವಾರು ಸಾವಿರ ವರ್ಷಗಳ ಹಿಂದಿನ ಇತಿಹಾಸ ಉಳ್ಳಂತಹ ದೇವಸ್ಥಾನ ಬೆಂಗಳೂರಿನಲ್ಲಿ ಇದೆ ಎಂದರೆ ನಿಜವಾಗಲೂ ನಿಮ್ಮ ಊಹೆಗೂ ಕೂಡ ಬರದೆ ಇರುವಂತಹ ಪ್ರದೇಶ ಇದು.
ಬೆಂಗಳೂರಿನಲ್ಲಿ ಇರುವಂತಹ ಗವಿ ಗಂಗಾಧರೇಶ್ವರ ದೇವಸ್ಥಾನ ವನ್ನು ದೊಡ್ಡ ಬಂಡೆಯನ್ನು ಕೊರೆದು ಕಟ್ಟಲಾಗಿದೆ, ಈ ದೇವಸ್ಥಾನದಲ್ಲಿ ನೀವು ಶಿವನ ವಿಗ್ರಹ ಹಾಗೂ ನಂದಿಯ ವಿಗ್ರಹವನ್ನು ನೀವು ನೋಡಬಹುದಾಗಿದೆ. ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಇನ್ನೊಂದು ವಿಗ್ರಹವು ಕೂಡ ಆದರೆ ಅದಕ್ಕೆ ಹೆಸರಿಲ್ಲ ಆದರೆ ಇದಕ್ಕೆ ಮೂರು ತಲೆ ಎರಡು 7 ಕೈ ಹಾಗೂ ಮೂರು ಕಾಲಗಳು ಉಳ್ಳಂತಹ ಈ ವಿಗ್ರಹವನ್ನು ಪೂಜೆ ಮಾಡಿದರೆ ದೃಷ್ಟಿ ದೋಷ ಹೋಗುತ್ತದೆ ಎಂದು ಇಲ್ಲಿನ ಕೆಲವು ಹೇಳುತ್ತಾರೆ.
ಈ ದೇವಸ್ಥಾನದಲ್ಲಿ ವರ್ಷಕ್ಕೆ ಒಂದು ಸಾರಿ ಭರ್ಜರಿಯಾಗಿ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ, ಹಾಗೆ ಈ ದೇವಸ್ಥಾನದಲ್ಲಿ ಕಟ್ಟಿದಂತಹ ಪರಿಯನ್ನು ನೀವು ನೋಡುವುದಾದರೆ ಹಲವಾರು ವಿನ್ಯಾಸಕ ವಾಗಿ ಈ ದೇವಸ್ಥಾನವನ್ನು ಕಲ್ಲು ಬಂಡೆಯಿಂದ ಕೆತ್ತಲಾಗಿದೆ ಇರುವಂತಹ ಮನಮೋಹಕ ದೃಶ್ಯ ನಿಮ್ಮ ಕಣ್ಣನ್ನು ತುಂಬುತ್ತವೆ.
ಬೆಂಗಳೂರಿನಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯ ದಿನದಂದು ಶ್ರೀ ಗವಿಗಂಗಾಧರೇಶ್ವರ ಸ್ವಾಮಿಗೆ ಪೂಜೆಯನ್ನು ಮಾಡಲಾಗುತ್ತದೆ ಹಾಗೆ ದೊಡ್ಡ ರೀತಿಯಲ್ಲಿ ಜಾತ್ರೆಯನ್ನು ಕೂಡ ಮಾಡಲಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬಿದ್ದು ಅಲ್ಲಿಂದ ಎದುರುಗಡೆ ಇರುವಂತಹ ನಂದಿಯ ಕೊಂಬಿನ ಮೇಲೆ ಹಾದು ಹೋಗುತ್ತದೆ ಎಂದು ಇಲ್ಲಿನ ಜನರು ಕೂಡ ಹೇಳುತ್ತಾರೆ. ಈ ರೀತಿಯ ರಮಣೀಯವಾದ ದೃಶ್ಯವನ್ನು ನೋಡಲು ಭಕ್ತರು ಹಲವಾರು ಕಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಶ್ರೀ ಗವಿ ಗಂಗಾಧೇಶ್ವರ ಸ್ವಾಮಿ ಸನ್ನಿಧಿಗೆ ಬರುತ್ತಾರೆ.
ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಇತಿಹಾಸ ಹಿನ್ನೆಲೆಯನ್ನು ನೋಡಬೇಕಾದರೆ ಈ ದೇವಸ್ಥಾನವನ್ನು ಕಟ್ಟುವುದಕ್ಕೆ ಮುಖ್ಯವಾದ ಕಾರಣ ಇಲ್ಲಿ ಗೌತಮ ಮಹರ್ಷಿಗಳು ಹಲವಾರು ವರ್ಷಗಳ ಹಿಂದೆ ತಪಸ್ಸು ಮಾಡಿದರು ಎನ್ನುವ ಹಿನ್ನೆಲೆಯೂ ಕೂಡ ಇದೆ. ಹಾಗೆ ಇಲ್ಲಿನ ಶಿವಲಿಂಗಕ್ಕೆ ತ್ರಿಕಾಲ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ ಎನ್ನುವ ಉಲ್ಲೇಖ ಗಳು ಕೂಡ ಪುರಾಣದಲ್ಲಿ ಇವೆ. ಹೀಗಾಗಿ ಈ ಕ್ಷೇತ್ರವನ್ನು ಗೌತಮ ಕ್ಷೇತ್ರ ಎಂದೂ ಕೂಡ ಕೆಲವರು ಕರೆಯುತ್ತಾರೆ.
ಹಾಗೆ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮತ್ತೊಂದು ವಿಶೇಷ ಏನಪ್ಪಾ ಅಂದರೆ ಶಿವಲಿಂಗದ ಪಕ್ಕ ಶ್ರೀ ಪರ್ವತಿ ದೇವಿ ಕೂಡ ಇರುವುದನ್ನು ನೀವು ನೋಡಬಹುದಾಗಿದೆ. ಈ ದೇವಸ್ಥಾನದಲ್ಲಿ ಎರಡು ದೊಡ್ಡ ಸುರಂಗ ಮಾರ್ಗಗಳಿದ್ದು ಇಲ್ಲಿನ ಜನರ ಪ್ರಕಾರ ಒಂದು ಸುರಂಗ ಮಾರ್ಗವು ಕಾಶಿಗೆ ಹೋಗುತ್ತದೆ ಎಂದು ಕೆಲವರು ಹೇಳುತ್ತಾರೆ ಹಾಗೂ ನಂಬುತ್ತಾರೆ, ಹಾಗೂ ಇನ್ನೊಂದು ತುಮಕೂರು ರಸ್ತೆಯಲ್ಲಿ ಇರುವಂತಹ ಶಿವಗಂಗೆಗೆ ಹೋಗುತ್ತದೆ ಎಂದು ಕೆಲವರು ಹೇಳುತ್ತಾರೆ.
ಕೊನೆಯದಾಗಿ ಈ ಗುಹಾಂತರ ಶ್ರೀಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನವನ್ನು ಕೆಂಪೇಗೌಡರು ಆಧಾರ ಮಾಡಿದ್ದರು ಎಂದು ಕೆಲವು ಪುಸ್ತಕಗಳಲ್ಲಿ ಹಾಗೂ ಕೆಲವು ಪುರಾಣಗಳಲ್ಲಿ ಉಲ್ಲೇಖಗಳು ಮಾಡಬಹುದಾಗಿದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇನ್ನು ನೀವು ಲೈಕ್ ಮಾಡದಿದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಬಟನ್ ಅನ್ನು ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಸಪೋರ್ಟ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.