ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸಿರಬೇಕು ಎಂದರೆ ನಾವು ಅದಕ್ಕೆ ಅನೇಕ ರೀತಿಯ ಪ್ರಯತ್ನಗಳನ್ನು ಪಡುತ್ತೇವೆ ದುಡಿಯುವುದು ಎಷ್ಟು ಮುಖ್ಯವೋ ಅದಕ್ಕೆ ಲಕ್ಷ್ಮೀಕಟಾಕ್ಷ ಕೂಡ ನಮಗೆ ದೊರೆಯುವುದು ಅಷ್ಟೇ ಮುಖ್ಯ ಅಲ್ಲವೇ.
ಈ ಲಕ್ಷ್ಮೀ ಕಟಾಕ್ಷ ನಮಗೆ ಒಮ್ಮೆ ದೊರೆಯಿತು ಎಂದರೆ ಯಾವಾಗಲೂ ನಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಅದಕ್ಕೆ ಕೆಲವೊಂದು ಪೂಜೆ ಪುನಸ್ಕಾರಗಳನ್ನು ಮಾಡಿದರೆ ಖಂಡಿತವಾಗಿಯೂ ಲಕ್ಷ್ಮೀ ಯಾವುದೇ ಕಾರಣಕ್ಕೂ ನಮ್ಮ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯ ಎಂಬುದು ಇಲ್ಲ
ಅದು ಹೇಗೆ ಆ ಪೂಜಾ ವಿಧಾನ ಯಾವುದು ಎಂಬುದರ ಬಗ್ಗೆ ಈ ದಿನ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ.
ಈ ಪೂಜೆ ಆರಂಭ ಮಾಡುವ ಮೊದಲು ಏನು ಮಾಡಬೇಕು ಗೊತ್ತೆ ನಿಮ್ಮ ಮನೆಯ ಅಂಗಳ ಅಂದರೆ ಮನೆಯ ಹೊರಗಡೆ ಬಾಗಿಲು ಎಲ್ಲವನ್ನೂ ತೊಳೆದು ಅರಿಶಿಣ ಕುಂಕುಮ ಇಟ್ಟು ಅದಕ್ಕೆ ಹೂವನ್ನು ಮುಡಿಸಿ ಬಾಗಿಲಿಗೆಲ್ಲ ತೋರಣವನ್ನು ಕಟ್ಟಿ ಶುಭ್ರವಾಗಿ ಅಲಂಕಾರ ಮಾಡಬೇಕು
ಅದಾದ ನಂತರ ದೇವರ ಮನೆಗೆ ಬಂದು ಲಕ್ಷ್ಮಿ ಫೋಟೋವನ್ನ ಒರೆಸಿ ಅದಕ್ಕೂ ಕೂಡ ಕುಂಕುಮವನ್ನ ಇಡಬೇಕು ಅದಾದ ನಂತರ ನಿಮ್ಮ ಮನೆಯಲ್ಲಿ ಇರುವ ಬೇರೆ ಫೋಟೋಗಳನ್ನ ಒರೆಸಿ ಅದಕ್ಕೂ ಕೂಡ ಅರಿಶಿಣ ಕುಂಕುಮ ಎಲ್ಲವನ್ನೂ ಇಡಬೇಕು ಅದಾದ ನಂತರ ಲಕ್ಷ್ಮೀಗೆ ಮತ್ತು ನಿಮ್ಮ ಮನೆಯ ಕುಲ ದೇವರ ಫೋಟೊಗೆ ಬಿಳಿ ಬಣ್ಣದ ಹೂಗಳನ್ನು ಇಡುವುದು ಒಳ್ಳೆಯದು
ಏಕೆಂದರೆ ಲಕ್ಷ್ಮಿಗೆ ಬಿಳಿ ಹೂವು ತುಂಬಾ ಶ್ರೇಷ್ಠ ಅದಾದ ನಂತರ ನೀವು ದೇವರ ಕೋಣೆಯಲ್ಲಿ ಕುಳಿತು ಪೂಜೆಯನ್ನು ಆರಂಭಿಸಬೇಕು ನಿಮ್ಮ ಮನಸ್ಸಿನಲ್ಲಿರುವ ಇಚ್ಛೆಯನ್ನು ಅರಿತು ಪೂಜೆಯನ್ನು ಆರಂಭಿಸಬೇಕು. ಈ ಪೂಜೆ ಮಾಡುವಂತಹ ಸಂದರ್ಭದಲ್ಲಿ ಮತ್ತೊಂದು ವಿಶೇಷವಾದ ವಿಷಯವನ್ನು ನೀವು ಗಮನದಲ್ಲಿಡಬೇಕು ಅದೇನು ಎಂದರೆ ಈ ಪೂಜೆ ಮಾಡುವಂತಹ ಸಂದರ್ಭದಲ್ಲಿ ಗೋಧಿಯ ಹಿಟ್ಟಿನಿಂದ ಮಾಡಿದ ಅಂತಹ ಇಪ್ಪತ್ತೊಂದು ಉಂಡೆಗಳನ್ನ ತಯಾರು ಮಾಡಿ ಇಟ್ಟುಕೊಳ್ಳಬೇಕು.
ಆ ಉಂಡೆಗಳನ್ನ ಲಕ್ಷ್ಮಿ ಫೋಟೋದ ಮುಂದೆ ಅರ್ಚನೆ ರೀತಿಯಲ್ಲಿ ಮಾಡಬೇಕು ಅದು ಹೇಗೆ ಎಂದರೆ ಒಂದು ಉಂಡೆ ತೆಗೆದುಕೊಂಡು ಅದನ್ನು ನಿಮ್ಮ ಹೃದಯದ ಎಡಭಾಗದ ಹತ್ತಿರ ಇಟ್ಟು ಓಂ ಗಮಂ ಕ್ಲಿಮ್ ಎಂಬ ಶ್ಲೋಕವನ್ನು ಹೇಳಿ ಇಪ್ಪತ್ತೊಂದು ಉಂಡೆಗಳನ್ನು ಕೂಡ ಇದೇ ರೀತಿ ನಿಮ್ಮ ಎದೆಯ ಭಾಗದ ಹತ್ತಿರ ಪ್ರಾರ್ಥನೆ ಮಾಡಿಕೊಂಡು ಈ ಶ್ಲೋಕವನ್ನು ಹೇಳಿ
ಅ ಲಕ್ಷ್ಮಿ ಫೋಟೋದ ಮುಂದೆ ಇಡಬೇಕು ಅದಾದ ನಂತರ ನಿಮ್ಮ ಮನೆಯಲ್ಲಿ ಇರುವ ದಾರಿದ್ರ್ಯ ದೂರವಾಗಿ ಲಕ್ಷ್ಮಿ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನೆಲಸುತ್ತಾಳೆ ಎಂಬುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಈ ಪೂಜೆಯನ್ನು 9 ದಿನ ಅಥವಾ ಹನ್ನೊಂದು ದಿನ ಅಥವಾ ಇಪ್ಪತ್ತೊಂದು ದಿನ ಮಾಡಿದರೆ ತುಂಬಾ ಒಳ್ಳೆಯದು ಈ ವಿಧಾನವನ್ನು ಮಾಡುವುದು ಸ್ವಲ್ಪ ಕಷ್ಟ.
ಏಕೆಂದರೆ ಗೋಧಿ ಉಂಡೆಗಳನ್ನ ಮಾಡಿಕೊಳ್ಳುವುದು ಸ್ವಲ್ಪ ನಿಮಗೆ ತೊಂದರೆ ಅನಿಸಬಹುದು ಅದನ್ನು ಹೊರತುಪಡಿಸಿ ಇನ್ನೆಲ್ಲಾ ಕೂಡ ನೀವು ದಿನ ನಿತ್ಯ ಪೂಜೆ ಮಾಡಿದ ರೀತಿಯಲ್ಲೇ ಇರುತ್ತದೆ ಆದರೆ ಸ್ವಲ್ಪ ಕಟ್ಟುನಿಟ್ಟಾಗಿ ಈ ಪೂಜೆಯನ್ನು ಮಾಡಬೇಕು ಅದಾದ ನಂತರ ಖಂಡಿತವಾಗಿಯೂ ನಿಮಗೆ ಇದರಿಂದ ಅದೃಷ್ಟ ಖುಲಾಯಿಸುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹ ಇಲ್ಲ. ಒಮ್ಮೆ ಪ್ರಯತ್ನಪಟ್ಟು ನೋಡಿ ಫಲಿತಾಂಶ ನಿಮಗೇ ತಿಳಿಯುತ್ತದೆ ಅದಾದ ನಂತರ ಬೇರೆಯವರಿಗೂ ತಿಳಿಸಿ ಧನ್ಯವಾದ.