Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ರುದ್ರಾಕ್ಷಿ ಮಾಲೆಯನ್ನು ಹಾಕಿಕೊಳ್ಳುವುದರಿಂದ ನಮ್ಮ ಆರೋಗ್ಯದ ಮೇಲೆ ಬೀಳುವ ಪರಿಣಾಮಗಳು ಏನು ಇನ್ನು ಸಂಪೂರ್ಣ ವಿವರ ಇಲ್ಲಿದೆ

ರುದ್ರಾಕ್ಷಿ ಮಣಿಯ ಉಪಯೋಗಗಳು ಏನು ಅನ್ನೋದನ್ನು ಈ ದಿನದ ಮಾಹಿತಿಯಲ್ಲಿ ತಿಳಿಯೋಣ ರುದ್ರಾಕ್ಷಿ ಮಣಿ ಅಂದ ಕೂಡಲೇ ಒಂದು ಪೂಜ್ಯನೀಯ ಭಾವನೆ ನಮ್ಮಲ್ಲಿ ಹುಟ್ಟುತ್ತದೆ ಹಾಗೂ ಈ ರುದ್ರಾಕ್ಷಿ ಮಣಿಯನ್ನು ಹೆಚ್ಚಾಗಿ ಸಾಧು ಸಂತರುಗಳು ಹಾಗೆ ಸನ್ಯಾಸಿಗಳು ಹೆಚ್ಚಾಗಿ ಬಳಸುತ್ತಾರೆ .

ಹಾಗೆಯೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ರುದ್ರಾಕ್ಷಿ ಮಳಿಗೆ ಒಂದು ವಿಶೇಷವಾದ ಸ್ಥಾನವೂ ಕೂಡ ಕೊಡಲಾಗಿದೆ .
ರುದ್ರಾಕ್ಷಿ ಮಣಿ ಅಂದ ಕೂಡಲೇ ನಮಗೆ ನೆನಪಿಗೆ ಬರುವುದು ಈಶ್ವರ ದೇವ ಹೌದು ಈಶ್ವರನ ದೇವಾಲಯದಲ್ಲಿ ನಾವು ಈ ರುದ್ರಾಕ್ಷಿ ಮಣಿಗಳನ್ನು ಹೆಚ್ಚಾಗಿ ನೋಡಬಹುದಾಗಿದ್ದು ಈಶ್ವರ ಲಿಂಗದ ಜೊತೆ ರುದ್ರಾಕ್ಷಿ ಮಣಿಯನ್ನು ಕೂಡ ಪೂಜೆ ಮಾಡಲಾಗುತ್ತದೆ .

ಕೆಲವರು ಈ ರುದ್ರಾಕ್ಷಿ ಮಣಿಯನ್ನು ಮನೆಯಲ್ಲಿ ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದು ಕೂಡ ಉಂಟು , ರುದ್ರಾಕ್ಷಿ ಮಾಣಿಯಲ್ಲಿ ನಾವು ಸಾಕಷ್ಟು ವಿಧದ ಮಣಿಗಳನ್ನು ನೋಡಬಹುದಾಗಿದ್ದು ಇದನ್ನು ಪೂಜಿಸುವುದರಿಂದ ಸಾಕಷ್ಟು ಉಪಯೋಗಗಳು ಕೂಡ ಇವೆ ಎಂದರೆ ತಪ್ಪಾಗಲಾರದು .

ರುದ್ರಾಕ್ಷಿ ಮಣಿಯನ್ನು ಪೂಜೆ ಮಾಡುವುದಕ್ಕೆ ಮಾತ್ರ ಬಳಸಬೇಕು ಅನ್ನುವ ವಾಡಿಕೆ ಇದೆ ಅಂತ ಕೆಲವರು ನಂಬಿರುತ್ತಾರೆ ಆದರೆ ಈ ರುದ್ರಾಕ್ಷಿ ಮಣಿಗಳನ್ನು ಕೇವಲ ಪೂಜೆ ಮಾಡುವುದಕ್ಕೆ ಮಾತ್ರ ಅಲ್ಲದೇ ಆರೋಗ್ಯವನ್ನು ವೃದ್ಧಿಸಿ ಕೊಳ್ಳುವುದರಲ್ಲಿ ಕೂಡ ಬಳಸಬಹುದಾಗಿದೆ .

ಹಾಗಾದರೆ ರುದ್ರಾಕ್ಷಿ ಮಣೆಯಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಆಗುವುದು ಅನ್ನೋದನ್ನು ತಿಳಿಯೋಣ ಈ ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ . ರುದ್ರಾಕ್ಷಿ ಮನೆಗಳನ್ನು ಮಾಲೆಯ ರೀತಿ ಹಾಕಿಕೊಳ್ಳುವುದರಿಂದ ದೇಹಕ್ಕೆ ತಂಪು ಹಾಗೂ ಇದು ಹೃದಯದ ಆರೋಗ್ಯವನ್ನು ವರ್ಧಿಸುತ್ತದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದೆ .

ರುದ್ರಾಕ್ಷಿ ಮಣಿಗಳನ್ನು ಧರಿಸಿಕೊಳ್ಳುವುದರಿಂದ ಇದು ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ ಹಾಗೂ ರಕ್ತ ಶುದ್ಧೀಕರಣದಲ್ಲಿ ಕೂಡ ಈ ರುದ್ರಾಕ್ಷಿ ಮಣಿ ತುಂಬಾನೇ ಉಪಯುಕ್ತವಾಗಿದೆ . ರುದ್ರಾಕ್ಷಿ ಮಣಿಯನ್ನು ಪ್ರಸರಣೆ ವೇಳೆಯಲ್ಲಿ.

ಅಂದರೆ ಮಂತ್ರ ಹೇಳುವಾಗ ರುದ್ರಾಕ್ಷಿ ಮಣಿ ಮಾಲೆಯನ್ನು ಎಣಿಸುತ್ತಾ ಇತರೆ ಅದರಿಂದ ಉತ್ತಮ ಪ್ರಯೋಜನಗಳು ದೊರೆಯುವುದು ಇದು ಬೆರಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಈ ರೀತಿ ರುದ್ರಾಕ್ಷಿ ಮನೆಗಳನ್ನು ಎಣಿಸುವುದರಿಂದ ನಮ್ಮ ಮೆದುಳಿಗೂ ಕೂಡಾ ಒಳ್ಳೆಯದು ಅಂದರೆ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ .

ರುದ್ರಾಕ್ಷಿ ಮಣಿಯ ಮಾಲೆಯನ್ನು ಬಳಸಿ ಮಂತ್ರವನ್ನು ಪಠಿಸುವುದರಿಂದ ಏಕಾಗ್ರತೆಯನ್ನು ಕೂಡ ಹೆಚ್ಚು ಮಾಡುತ್ತದೆ ಈ ರುದ್ರಾಕ್ಷಿ ಮಣಿ .
ಆದುದರಿಂದ ರುದ್ರಾಕ್ಷಿ ಮಣಿಯನ್ನು ಕೇವಲ ಪೂಜೆ ಮಾಡುವುದರಲ್ಲಿ ಮಾತ್ರ ಬಳಸದೆ ಆರೋಗ್ಯ ವೃದ್ಧಿಸಿಕೊಳ್ಳುವುದರಲ್ಲಿ ಕೂಡ ಬಳಸಬಹುದು ಎಂಬುದನ್ನು ಈ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳಬಹುದಾಗಿದೆ .

ಇನ್ನು ರುದ್ರಾಕ್ಷಿ ಮಣಿಯನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ನೆಲೆಸುತ್ತದೆ ಮತ್ತು ರುದ್ರಾಕ್ಷಿ ಮಣಿಯನ್ನು ಧರಿಸುವುದರಿಂದ ಕೂಡ ನಮ್ಮ ದೇಹ ತಂಪಾಗುವುದರ ಜೊತೆಗೆ ಮಿದುಳು ವಿಕಾಸಗೊಳ್ಳುತ್ತದೆ ಏಕಾಗ್ರತೆ ಹೆಚ್ಚುತ್ತದೆ .

ನಮ್ಮ ಹಿರಿಯರು ನಂಬುವ ಹಾಗೆ ರುದ್ರಾಕ್ಷಿ ಮಣಿಯನ್ನು ಧರಿಸಿದರೆ ಮಾಂಸಾಹಾರಿ ಪದಾರ್ಥಗಳನ್ನು ತಿನ್ನಬಾರದು ಅಂತ , ಹಿರಿಯರು ಏನೇ ಮಾಡಿದರೂ ಕೂಡ ಅದಕ್ಕೆ ಒಂದು ಕಾರಣವಿರುತ್ತದೆ ರುದ್ರಾಕ್ಷಿ ಮಣಿ ಶಿವನ ಸ್ವರೂಪವಾದ ಕಾರಣದಿಂದಾಗಿ ಮಾಂಸ ಪದಾರ್ಥಗಳನ್ನು ತಿನ್ನುವುದು ಒಳಿತಲ್ಲ ಎಂಬ ಕಾರಣದಿಂದಾಗಿ ರುದ್ರಾಕ್ಷಿ ಮಣಿ ಧರಿಸಿದಾಗ ಮಾಂಸ ಪದಾರ್ಥಗಳನ್ನು ತಿನ್ನಬಾರದು ಎಂಬ ರೂಢಿಯನ್ನು ಮಾಡಿದ್ದರೂ ಮಾಡಿರಬಹುದು .

Leave a Reply

Your email address will not be published. Required fields are marked *