ನಮ್ಮ ಭಾರತ ದೇಶದಲ್ಲಿ ರೈಲು ಮಾರ್ಗವು ಹೆಚ್ಚಾಗಿಯೇ ಇದೆ ಹಾಗೂ ಈ ರೈಲುಗಳಲ್ಲಿ ಪ್ರಯಾಣಿಸುವಂತಹ ಜನರು ಕೂಡ ಜಾಸ್ತಿನೇ ಇದ್ದರೆ ಹಾಗೂ ಸಾಮಾನ್ಯ ಜನರು ಮಾತ್ರವಲ್ಲದೆ ಶ್ರೀಮಂತರು ಕೂಡ ಈ ರೈಲಿನಲ್ಲಿ ಪ್ರಯಾಣ ಮಾಡುವುದಕ್ಕೆ ಇಷ್ಟಪಡುತ್ತಾರೆ .
ರೈಲು ಪ್ರಯಾಣ ಅತ್ಯಂತ ಸೇಫ್ ಪ್ರಯಾಣ ಆಗಿರುವುದು ಈ ಕಾರಣದಿಂದಾಗಿ ರೈಲು ಪ್ರಯಾಣ ಮಾಡುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ ಹಾಗೆಯೇ ಸುಸ್ತಿಲ್ಲ ಕಡಿಮೆ ಖರ್ಚಿನಲ್ಲಿ ನಾವು ಅಂದುಕೊಂಡಂತಹ ಸ್ಥಳಗಳಿಗೆ ತಲುಪಲು ಸುಲಭ ಮಾರ್ಗವೂ ಕೂಡ ರೈಲು ಪ್ರಯಾಣವು .
ಇನ್ನು ರಾತ್ರಿ ಸಮಯದಲ್ಲಿ ಕೂಡ ಈ ರೈಲು ಚಲಿಸುತ್ತವೆ.
ಹಾಗೂ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಹೊರ ರಾಜ್ಯಗಳಿಗೆ ರೈಲುಗಳು ಹೆಚ್ಚಾಗಿ ಹೋಗುತ್ತವೆ , ಹಾಗಾದರೆ ಈ ರೈಲುಗಳನ್ನು ರಾತ್ರಿ ಸಮಯದಲ್ಲಿ ಲೋಕೋ ಪೈಲೆಟ್ ಗಳು ಹೇಗೆ ಓಡಿಸುತ್ತಾರೆ ಅವರಿಗೆ ನಿದ್ರೆ ಬರಲ್ಲ ಅಂತ ಕೆಲವರು ಅಂದು ಕೊಳ್ಳುತ್ತಿರುತ್ತಾರೆ ಕೆಲವರಿಗೆ ಈ ವಿಚಾರ ಸಂಶಯದಲ್ಲಿ ಕೂಡ ಇರುತ್ತದೆ .
ಈ ಒಂದು ಪ್ರಶ್ನೆಗೆ ನಾವು ಈ ಮಾಹಿತಿಯಲ್ಲಿ ನಿಮಗೆ ಉತ್ತರವನ್ನು ತಿಳಿಸಿಕೊಡುತ್ತವೆ ಅವರು ಸ್ನೇಹಿತರ ರಾತ್ರಿ ಸಮಯದಲ್ಲಿ ಲೋಕೊಪೈಲಟ್ಗಳು ರೈಲುಗಳನ್ನು ಚಲಾಯಿಸುವುದಕ್ಕೆ ಕಷ್ಟ ಏನು ಆಗುತ್ತದೆ ರಾತ್ರಿ ಸಮಯದಲ್ಲಿ ಎಲ್ಲರೂ ಕೂಡ ರೈಲಿನಲ್ಲಿ ಮಲಗಿರುತ್ತಾರೆ ಆದರೆ ಲೋಕೋಪೈಲೆಟ್ ಗಳು ಮಾತ್ರ ಜನರ ಸೇಫ್ ಜರ್ನಿ ಗಾಗಿ ರಾತ್ರಿಯೆಲ್ಲಾ ನಿದ್ರೆಗೆ ಟು ರೈಲನ್ನು ಚಲಾಯಿಸುತ್ತಾರೆ .
ರಾತ್ರಿ ಸಮಯದಲ್ಲಿ ರೈಲನ್ನು ಚಲಾಯಿಸುವಂತಹ ಲೋಕೋ ಪೈಲೆಟ್ಗಳಿಗೆ ಬೆಳಿಗ್ಗೆ ಸಮಯದಲ್ಲಿ ನಿದ್ರಿಸಬೇಕು ಎಂದು ಹೇಳಲಾಗಿರುತ್ತದೆ ಹಾಗೂ ಯಾವುದೇ ರೀತಿಯ ಆಯಾಸ ವಾಗುವಂತಹ ಕೆಲಸಗಳನ್ನು ಆ ಲೋಕೋ ಪೈಲೆಟ್ಗಳು ಮಾಡಬಾರದು ಅಂತ ಕೂಡ ಹೇಳಿರುತ್ತಾರೆ .
ಈ ಲೋಕೋ ಪೈಲೆಟ್ಗಳು ರಾತ್ರಿಯೆಲ್ಲ ಎಚ್ಚರವಿರಲು ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ ಈ ರೀತಿ ಕೆಲವೊಂದು ಅಭ್ಯಾಸ ಗಳೊಂದಿಗೆ ಲೋಕೊಪೈಲಟ್ಗಳು ರಾತ್ರಿ ವೇಳೆ ಸುರಕ್ಷಿತವಾಗಿ ರೈಲನ್ನು ಚಲಾಯಿಸುತ್ತಾರೆ ಹಾಗೂ ಜನರನ್ನು ಜೋಪಾನವಾಗಿ ಅವರ ಸ್ಥಳಕ್ಕೆ ಬಿಡುತ್ತಾರೆ .
ಯಾವ ವ್ಯಕ್ತಿಯೇ ಆಗಿರಲಿ ಬೆಳಕೇ ಎಷ್ಟೇ ನಿದ್ರಿಸಿದ್ದರು ಕೂಡ ರಾತ್ರಿಯ ಸಮಯದಲ್ಲಿ ಎರಡರಿಂದ ಐದು ಗಂಟೆಗಳ ಒಳಗೆ ನಿದ್ರೆ ಬಂದೇ ಬರುತ್ತದೆ ಆ ಸಮಯದಲ್ಲಿ ಲೋಕೊಪೈಲಟ್ಗಳು ಏನು ಮಾಡುತ್ತಾರೆ ಅಂದರೆ ಸಾಮಾನ್ಯವಾಗಿ ರೈಲನ್ನು ಕೂತು ಚಲಾಯಿಸುವಂತಹ ಲೋಕೋ ಪೈಲೆಟ್ಗಳು ನಿದ್ರೆ ಬಂದಾಗ ನಿಂತು ರೈಲನ್ನು ಚಲಾಯಿಸುತ್ತಾರೆ .
ಇನ್ನು ಈ ಸಮಯದಲ್ಲಿ ಲೋಕೋ ಪೈಲೆಟ್ಗಳು ನಿದ್ರೆ ಬಂದಾಗ ಟ್ರೈ ಸ್ನ್ಯಾಕ್ಸ್ ಗಳನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ ಜೊತೆಗೆ ಇವರು ಕೆಲಸಕ್ಕೆ ಬರುವಾಗ ಕ್ಲಾಸ್ ಗಳಲ್ಲಿ ಟೀ ಅಥವಾ ಕಾಫಿಯನ್ನು ಕೊಂಡ್ಯೊದುತ್ತಿರುತ್ತಾರೆ .
ನಿದ್ರೆ ಬರದ ಹಾಗೆ ಲೋಕೋಪೈಲೆಟ್ ಗಳು ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ ಇನ್ನು ಕೆಲವರು ನಿದ್ರೆ ಹೋಗಲಾಡಿಸಿ ಕೊಳ್ಳುವುದಕ್ಕಾಗಿ ಕೆಲವೊಂದು ಕೆಟ್ಟ ಚಟಗಳಿಗೆ ಮೊರೆ ಹೋಗುತ್ತಾರೆ ಅದೇನೆಂದರೆ ಧೂಮಪಾನವನ್ನು ಮಾಡುವುದು ಹೌದು ಈ ರೀತಿ ಮಾಡುವುದರಿಂದ ಕೂಡ ಲೋಕೋ ಪೈಲೆಟ್ಗಳು ನಿದ್ರೆಯನ್ನು ಹೋಗಲಾಡಿಸಿಕೊಳ್ಳುತ್ತಾರೆ.
ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳುತ್ತಾರೆ ಹೌದು ಸ್ನೇಹಿತರ ನಿದ್ರೆ ಬಂದಾಗ ಲೋಕೊಪೈಲಟ್ಗಳು ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳುವ ಮುಖಾಂತರ ನಿದ್ರೆಯನ್ನು ಹೋಗಲಾಡಿಸಿಕೊಳ್ಳುತ್ತಾರೆ.
ಈ ವಿಚಾರವನ್ನು ಸುಮಾರು ಆರು ಜನ ಲೋಕೋಪೈಲೆಟ್ಗಳ ಅನುಭವದ ಮಾತುಗಳ ಮೇಲೆ ಈ ವಿಚಾರಗಳನ್ನು ಪರಿಗಣಿಸಲಾಗಿದೆ ನಿಮಗೆ ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಶುಭ ದಿನ ಶುಭವಾಗಲಿ ಹಾಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ .