ಕನಸು ಎಂಬುದು ಮನುಷ್ಯನ ಜೀವನದಲ್ಲಿಒಂದು ಅದ್ಭುತವಾದ ಸನ್ನಿವೇಶ ವಾಗಿರುತ್ತದೆ ಹಾಗೆ ಈ ಕನಸು ಮನಸ್ಸಿನ ಭಾವನೆಗಳ ಪ್ರತೀಕವಾಗಿರುತ್ತವೆ ನಾವು ಏನನ್ನು ಯೋಚಿಸಿ ಮಲಗಿರುತ್ತೇವೆ ಅದು ನಮ್ಮ ಕನಸಿನಲ್ಲಿ ಮರುಕಳಿಸುತ್ತದೆ ಹಾಗೆ ನಮ್ಮ ಮನಸ್ಸಿನ ಸ್ಥಿತಿಯನ್ನು ಕನಸು ತಿಳಿಸುತ್ತದೆ .

ನಮ್ಮ ಕನಸು ಕೆಲವೊಮ್ಮೆ ಮುಂದೆ ಆಗುವಂತಹ ಒಳ್ಳೆಯದ್ದನ್ನು ಅಥವಾ ಕೆಟ್ಟದ್ದನ್ನು ಮುಂಚೆಯೇ ಕನಸಿನ ಮುಖಾಂತರ ತಿಳಿಸುತ್ತಿರುತ್ತದೆ , ಆದ್ದರಿಂದ ಈ ಕನಸುಗಳನ್ನು ಅರಿತು ನಾವು ಮುಂದೆ ಸಾಗುವುದು ಒಳ್ಳೆಯದು .

ಇದೀಗ ನಿಮಗೆ ಅನಿಸಬಹುದು ಕಂಡ ಕನಸು ನೆನಪೇ ಇರುವುದಿಲ್ಲ ಅದು ಹೇಗೆ ನಮ್ಮ ಮುಂದಿನ ದಿನಗಳ ಭವಿಷ್ಯವನ್ನು ಅಥವಾ ಯಾವುದೋ ಸೂಚನೆಯನ್ನು ತಿಳಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಂತ .

ನಾವು ರಾತ್ರಿ ಮಲಗಿದ್ದ ವೇಳೆ ಕಂಡ ಕನಸು ಪೂರ್ತಿಯಾಗಿ ನೆನಪಿಗೆ ಬರುವುದಿಲ್ಲ ಆದರೆ ಕನಸಿನಲ್ಲಿ ಕಣ್ಣ ಕೆಲವೊಂದು ವಸ್ತುಗಳು ಅಥವಾ ಕೆಲವೊಂದು ಪದಾರ್ಥಗಳು ನೆನಪಿನಲ್ಲಿ ಇರುತ್ತದೆ ಕನಸು ಪೂರ್ತಿಯಾಗಿ ಸ್ಪಷ್ಟನೆಯಿಂದ ಇರದಿದ್ದರೂ ಕೂಡ ಕನಸಿಗೆ ಬಂದಂತಹ ವಸ್ತುಗಳು ಮಾತ್ರ ಸ್ವಲ್ಪ ಸ್ವಲ್ಪ ನೆನಪಿನಲ್ಲಿ ಇರುತ್ತದೆ .

ಹೀಗೆ ನಮ್ಮ ಹಿರಿಯರು ಹೇಳಿರುವ ಪ್ರಕಾರ ಕನಸಿನಲ್ಲಿ ಕೆಲವೊಂದು ವಸ್ತುಗಳು ಬಂದರೆ ಅದು ಶುಭ ಸೂಚನೆಯನ್ನು ಮತ್ತು ಕೆಟ್ಟ ಸೂಚನೆಯನ್ನು ತಿಳಿಸುತ್ತದೆ ಅಂತ , ಹಾಗಾದರೆ ಈ ದಿನದ ಮಾಹಿತಿಯಲ್ಲಿ ನಾವು ತಿಳಿಯೋಣ ಕನಸಿನಲ್ಲಿ ಕೆಲವೊಂದು ವಸ್ತುಗಳ ಬಂದರೆ ಯಾವ ಸೂಚನೆಯನ್ನು ನೀಡುತ್ತದೆ ಎಂದು .

ನಾವು ಮಲಗಿದಾಗ ನಮ್ಮ ಕನಸಿನಲ್ಲಿ ಅಡಿಕೆ ಆನೆ ದೇವಸ್ಥಾನದ ಕಳಸ ಅಥವಾ ತೆಂಗಿನ ಕಾಯಿ ಕನಸಿಗೆ ಬಂದರೆ ಅದು ಶುಭ ಸೂಚನೆಯನ್ನು ತಿಳಿಸುತ್ತಿರುತ್ತದೆ ಆಕೆಯೇ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಕೂಡ ಇದು ಸೂಚನೆ ನೀಡುತ್ತಿರುತ್ತದೆ .
ಅಡಿಕೆ ಆನೆ ತೆಂಗಿನಕಾಯಿ ಕಳಸಾ ಇವೆಲ್ಲವೂ ಲಕ್ಷ್ಮಿಯ ಸ್ವರೂಪವಾಗಿದ್ದು ಈ ವಸ್ತುಗಳು ಕನಸಿನಲ್ಲಿ ಬಂದರೆ ಲಕ್ಷ್ಮಿ ನಿಮಗೆ ಒಲಿಯಲಿದ್ದಾಳೆ ಎಂಬುದನ್ನು ಸೂಚನೆ ನೀಡುತ್ತಿರುತ್ತದೆ ಈ ಕನಸು .

ಕನಸಿನಲ್ಲಿ ಮದುವೆ ಅಕ್ಷತೆ ಮೂಗುತ್ತಿ ಬಳೆಗಳು ಏನಾದರೂ ಕನಸಿನಲ್ಲಿ ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಜರುಗುತ್ತವೆ ಎಂಬುದು ಕನಸು ಸೂಚಿಸುತ್ತಿರುತ್ತದೆ . ನಿಮ್ಮ ಕನಸಿನಲ್ಲಿ ಮನೆ ದೇವರು ಕಾಣಿಸಿಕೊಂಡರೆ ನೀವು ಯಾವುದೇ ಸಂಕಷ್ಟದಲ್ಲಿ ಒಳಗಾಗಿದ್ದರೆ ಆ ಸಂಕಷ್ಟಗಳು ಶೀಘ್ರವೇ ಪರಿಹಾರಗೊಳ್ಳಲಿದೆ ಎಂಬುದನ್ನು ನಿಮ್ಮ ಕನಸು ಸೂಚನೆ ನೀಡುತ್ತಾ ಇರುತ್ತದೆ ಹಾಗೂ ನಿಮ್ಮ ಮೇಲೆ ನಿಮ್ಮ ಮನೆಯ ದೇವರ ಆಶೀರ್ವಾದವಿದೆ ಎಂಬುದನ್ನು ಕೂಡ ದೇವರು ಈ ರೀತಿಯಲ್ಲಿ ತೋರುತ್ತಿರುತ್ತಾರೆ .

ಕನಸಿನಲ್ಲಿ ಲಕ್ಷ್ಮೀ ವೆಂಕಟೇಶ್ವರ ದೇವರು ಕಾಣಿಸಿಕೊಂಡಲ್ಲಿ ನಿಮ್ಮ ಜೀವನದಲ್ಲಿ ಏನೇ ತೊಂದರೆಗಳು ಇದ್ದರೂ ಏನೇ ಕಷ್ಟಗಳು ಇದ್ದರೂ ಪರಿಹಾರಗೊಂಡು ನಿಮಗೆ ಅದೃಷ್ಟ ದಿನಗಳು ಪ್ರಾರಂಭವಾಗಲಿದೆ ಎಂಬುದನ್ನು ಇದು ಸೂಚಿಸುತ್ತಿರುತ್ತದೆ .ಹಾಗೆಯೇ ನಿಮ್ಮ ಕನಸಿನಲ್ಲಿ ಹಣ್ಣುಗಳು ಕಾಣಿಸಿಕೊಂಡರೆ ಅದು ಕೂಡ ಶುಭದ ಸಂಕೇತ ಇನ್ನು ನಿಮ್ಮ ಕನಸಿನಲ್ಲಿ ತೊಟ್ಟಿಲು ಕಾಣಿಸಿಕೊಂಡರೆ ನಿಮ್ಮ ಮನೆಯಲ್ಲಿ ಯಾರಾದರೂ ತಾಯಿಯಾಗಲಿದ್ದಾರೆ ಎಂಬುದನ್ನು ಕೂಡ ಇದು ಸೂಚಿಸುತ್ತಿರುತ್ತದೆ .

ಕನಸು ಎಂಬುದು ನಮ್ಮ ಮನಸ್ಸಿನ ಭಾವನೆಯಾಗಿರುತ್ತದೆ ಆ ಮನಸ್ಸು ಕನಸಿನ ಮುಖಾಂತರ ಕೆಲವೊಂದು ಸೂಚನೆಯನ್ನು ತಿಳಿಸುತ್ತಿರುತ್ತದೆ .ಕನಸುಗಳನ್ನು ಅರಿತು ನಿಮ್ಮ ಜೀವನದಲ್ಲಿ ನೀವು ಮುನ್ನಡೆಯಿರಿ ಹಾಗೂ ನೀವು ಕಂಡಂತಹ ಎಲ್ಲಾ ಒಳ್ಳೆಯ ಕನಸುಗಳು ನನಸಾಗಲಿ ಶುಭ ದಿನ ಶುಭವಾಗಲಿ ಹಾಗೂ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ .

LEAVE A REPLY

Please enter your comment!
Please enter your name here