Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ರಾತ್ರಿ ಊಟ ಆದ ನಂತರ ತಿಂದ ಎಂಜುಲು ಪಾತ್ರೆಗಳನ್ನು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ತೊಳೆಯಬೇಡಿ ಹಾಗೆ ತೊಳೆದರೆ ನಿಮ್ಮ ಮನೆಯಲ್ಲಿ ಕಷ್ಟಗಳು ತಪ್ಪಿದ್ದಲ್ಲ !!!

ಮನೇಲಿ ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಾ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಯಾಕೆಂದರೆ ಕೆಲವರು ಅವರಿಗೆ ತಿಳಿಯದೆಯೇ ಕೆಲವೊಂದು ತಪ್ಪುಗಳನ್ನು ಮಾಡುತ್ತಾ ಇರುತ್ತಾರೆ ಅದೇ ರೀತಿಯಲ್ಲಿ ಮಹಿಳೆಯರು ಈ ವಿಚಾರಗಳಲ್ಲಿ ನಿರ್ಲಕ್ಷ್ಯ ಮಾಡಿ ಮನೆಗೆ ಈ ರೂಪದಲ್ಲಿ ದಾರಿದ್ರ್ಯವನ್ನು ಸ್ವಾಗತ ಮಾಡುತ್ತಾ ಇರುತ್ತಾರೆ. ಹಾಗಾದರೆ ನಮ್ಮ ಹೆಣ್ಣುಮಕ್ಕಳು ಮರೆತಿರುವ ಆ ಕೆಲವೊಂದು ಪದ್ಧತಿಗಳು ಯಾವುವು

ಮತ್ತು ನಾವು ಪಾಲಿಸಲೆ ಬೇಕಾಗಿರುವ ಆ ಕೆಲವೊಂದು ವಿಚಾರಗಳೇನು ಎಂಬುದನ್ನು ತಿಳಿಸುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ. ಈ ಉಪಯುಕ್ತ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವುದನ್ನು ಮರೆಯದಿರಿ ನಮ್ಮ ಸಂಪ್ರದಾಯವನ್ನು ಉಳಿಸಿ ಬೆಳಸಿ ಹಾಗೂ ಪ್ರತಿಯೊಬ್ಬರಿಗೂ ತಿಳಿಸಿ.ಇನ್ನು ಮನೆಯಲ್ಲಿ ಹೆಣ್ಣುಮಕ್ಕಳು ಈ ಸಮಯದಲ್ಲಿ ಪಾತ್ರೆಗಳನ್ನು ತೊಳೆಯಲು ಬಾರದು ಹೌದು ಸಾಮಾನ್ಯವಾಗಿ ಹೆಣ್ಣುಮಕ್ಕಳು ರಾತ್ರಿ ಊಟವಾದ ಬಳಿಕ ಎಲ್ಲ ಪಾತ್ರೆಗಳನ್ನು ಸಿಂಕ್ ಅಥವಾ 1ಟಬ್ ಒಳಗೆ ಹಾಕಿ ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸುತ್ತಾರೆ

ಆದರೆ ನಮ್ಮ ಪೂರ್ವಜರು ಹೇಳುವುದೇನು ಅಂದರೆ ಈ ಎಂಜಲು ಪಾತ್ರೆಗಳನ್ನು ರಾತ್ರಿಯೇ ಸ್ವಚ್ಛಪಡಿಸಿ ಇಡಬೇಕು ಮತ್ತು ಅಡುಗೆ ಮನೆಯು ಕೂಡ ರಾತ್ರಿಯೆ ಸ್ವಚ್ಛಪಡಿಸಿ ಹೆಣ್ಣುಮಕ್ಕಳು ಮಲಗಬೇಕು.ಯಾಕೆಂದರೆ ರಾತ್ರಿ ಸಮಯದಲ್ಲಿ ಲಕ್ಷ್ಮೀದೇವಿಯು ಸಂಚಾರ ಮಾಡುವಾಗ ಅಡುಗೆ ಮನೆಯೂ ಕೊಳಕಾಗಿದ್ದರೆ ಅಲ್ಲಿ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಅಂತ ಹೇಳ್ತಾರೆ. ಇನ್ನು ಇದೊಂದು ನಮ್ಮ ಪದ್ದತಿ ಆಗಿರುತ್ತದೆ.

ಇದಕ್ಕೆ ವೈಜ್ಞಾನಿಕವಾದ ಕಾರಣವನ್ನು ಹೇಳಬೇಕೆಂದರೆ ಎಂಜಲು ಪಾತ್ರೆ ಇದ್ದರೆ ಅಲ್ಲಿ ಬ್ಯಾಕ್ಟೀರಿಯಾಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆಗ ಅದೇ ಅಡುಗೆ ಮನೆಯಲ್ಲಿ ಅಡುಗೆ ಮಾಡಿದಾಗ ಬ್ಯಾಕ್ಟೀರಿಯಾ ಗಳ ಪ್ರಭಾವದಿಂದ ಆಹಾರ ಕೆಡುವ ಸಾಧ್ಯತೆ ಇರುತ್ತದೆ ಇದರಿಂದ ಆರೋಗ್ಯ ಕೂಡ ಕೆಡುತ್ತದೆ.ಮನೆಯಲ್ಲಿ ರಾತ್ರಿ ಊಟ ಮಾಡಿದ ನಂತರ ಅನ್ನದ ಪಾತ್ರೆ ಖಾಲಿ ಮಾಡಬಾರದು ಹೌದು ಹಿರಿಯರು ಹೇಳ್ತಾರೆ ಈ ಒಂದು ಮಾತನ್ನು, ಮನೆಯಲ್ಲಿ ಅನ್ನದ ಪಾತ್ರೆ ಖಾಲಿ ಮಾಡಬಾರದು ಇದರಿಂದ ಮನೆಯಲ್ಲಿ ಧಾನ್ಯಗಳ ಕೊರತೆಯಾಗಬಹುದು ಅಂತ.

ಆದರೆ ಇದರ ಹಿಂದಿರುವ ವೈಜ್ಞಾನಿಕ ವಾದ ಕಾರಣ ಅಂದರೆ ನಾವು ರಾತ್ರಿ ಊಟ ಮಾಡಿದ ನಂತರ 1ಹಿಡಿಯಷ್ಟು ಅನ್ನವನ್ನು ಉಳಿಸಿ ಮಲಗಿದರೆ ನಂತರ ಮಾರನೇ ದಿವಸ ಪ್ರಾಣಿ ಪಕ್ಷಗಳಿಗೆ ನೀಡುವುದರಿಂದ ಅವುಗಳ 1ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಇದರ ಜತೆಗೆ ಪ್ರಕೃತಿಯಲ್ಲಿ ಅವುಗಳಿಗೂ ಕೂಡ ಸಮಭಾಗ ನೀಡಿದಂತಾಗುತ್ತದೆ.ನಮ್ಮ ಪದ್ಧತಿಯ ಪ್ರಕಾರ ಸಂಜೆ ಸಮಯದಲ್ಲಿ ಮಲಗುವುದಾಗಲಿ ಅಥವಾ ಊಟ ಮಾಡುವುದಾಗಲಿ ಮಾಡಬಾರದು. ಏನೋ ಮನೆಯಲ್ಲಿ ಹೆಣ್ಣುಮಕ್ಕಳು ಯಾವ ಸಮಯದಲ್ಲಿ ಅಂದರೆ ಆ ಸಮಯದಲ್ಲಿ ಮಲಗುವುದು ಮತ್ತು ಬೆಳಿಗ್ಗೆ ತಡವಾಗಿ ಎದ್ದೇಳುವುದು ರಾತ್ರಿ ತಡವಾಗಿ ಮಲಗೋದು

ಈ ರೀತಿಯ ಹೆಣ್ಣುಮಕ್ಕಳ ನಡವಳಿಕೆಯಿಂದ ಕೂಡ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಯಾವ ಮನೆಯಲ್ಲಿ ಸ್ತ್ರೀ ಬೆಳಗಿನ ಜಾವ ಎದ್ದು ಮನೆಯಿಂದ ಶುಚಿಗೊಳಿಸುತ್ತಾಳೆ ಮನೆಯ ಬಾಗಿಲನ್ನು ತೆರೆದಿರುತ್ತಾಳೆ ಅಂತಹ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ 1ಪಾಸಿಟಿವ್ ಎನರ್ಜಿ ಅಂದರೆ ಸಕಾರಾತ್ಮಕ ಶಕ್ತಿ ಅಂತಹ ಮನೆಗಳಲ್ಲಿ ನೆಲೆಸಿರುತ್ತದೆ ಅಂತ ಹೇಳಲಾಗುತ್ತದೆ ಆದ ಕಾರಣ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಈ ಕೆಲವೊಂದು ವಿಚಾರಗಳಲ್ಲಿ ನಿರ್ಲಕ್ಷ್ಯವನ್ನು ತೋರದೆ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಪದ್ಧತಿ ಗಳನ್ನ ಯಾವತ್ತಿಗೂ ಪಾಲಿಸದೆ ಇರಬಾರದು.

Leave a Reply

Your email address will not be published. Required fields are marked *