ರಾಕ್ಷಸ ಮಗುವಿನ ಅಸಲಿ ರಹಸ್ಯ ಬಯಲು.ತಾಯಿಯ ಕರುಳನ್ನೇ ತಿಂದಿತ್ತಾ ಮಗು… ಇದರ ರಹಸ್ಯ ತಿಳಿಯಿರಿ …

5391

ಇತ್ತೀಚೆಗಷ್ಟೇ ಒಂದು ದಿನಪತ್ರಿಕೆ ಆರ್ಟಿಕಲ್ ಒಂದನ್ನು ಪ್ರಕಟ ಮಾಡಿತ್ತು ಅದೇನೆಂದರೆ ರಕ್ಕಸ ಮಾದರಿಯ ಮಗು ಹುಟ್ಟಿದೆ ಅದು ಹನ್ನೊಂದು ದಿನದಲ್ಲಿ ತನ್ನ ತಾಯಿ ಮತ್ತು ಅದನ್ನು ಡೆಲಿವರಿ ಮಾಡಿಸಿದಂತಹ ನರ್ಸ್ ಅನ್ನು ಬಲಿ ತೆಗೆದುಕೊಂಡಿದೆ ನಂತರ ಆ ಮಗುವನ್ನು ಹದಿನಾಲ್ಕು ಇಂಜೆಕ್ಷನ್ ಗಳನ್ನು ಕೊಟ್ಟು ಸಾಗಿಸಲಾಗಿತ್ತು ಎಂದು .

ಈ ಒಂದು ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು ಇದರ ಜೊತೆಗೆ ಈ ಮಗುವಿನ ಫೋಟೊ ಕೂಡ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿತ್ತು ಆದರೆ ಯಾರೂ ಕೂಡ ಯೋಚಿಸಿಲ್ಲ ಈ ಒಂದು ವಿಚಾರ ಅದೆಷ್ಟು ನಿಜ ಅದೆಷ್ಟು ಸುಳ್ಳು ಅಂತ ಅದರ ಬಗ್ಗೆ ನಾವಿಂದು ನಿಮಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸುತ್ತೇವೆ ತಪ್ಪದೇ ಮಾಹಿತಿಯನ್ನು ಪೂರ್ತಿಯಾಗಿ ಓದಿ .

ಮತ್ತು ಇದನ್ನು ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಇನ್ನೂ ಈ ರೀತಿಯ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜನ್ನು ತಪ್ಪದೇ ಲೈಕ್ ಮಾಡಿ ಮತ್ತು ಶೇರ್ ಮಾಡಿ . ನಾವು ಪ್ರಪಂಚದಲ್ಲಿ ಏನೇ ನಡೆದರೂ ಕೂಡ ಅದನ್ನು ದಿನಪತ್ರಿಕೆಯ ಸಹಾಯದಿಂದ ತಿಳಿದುಕೊಳ್ಳುತ್ತೇವೆ ಮತ್ತು ನಾವು ಅಂದುಕೊಂಡಿರುತ್ತೇವೆ.

ದಿನಪತ್ರಿಕೆಯಲ್ಲಿ ಬರುವಂತಹ ಎಲ್ಲ ವಿಚಾರಗಳು ಕೂಡ ನಿಜವಾದದ್ದು ಅಂತ ಆದರೆ ಇತ್ತೀಚೆಗೆ ಈ ಒಂದು ವಿಷಯ ವೈರಲ್ ಆದ ಮೇಲೆ ದಿನಪತ್ರಿಕೆಗಳನ್ನು ಕೂಡಾ ನಂಬುವಂತಿಲ್ಲ ಅನ್ನು ಒಂದು ಪಾಠ ಕಳೆದಂತಾಗಿದೆ ಯಾಕೆ ಅಂದರೆ ಇತ್ತೀಚೆಗಷ್ಟೇ ಪ್ರಕಟವಾಗಿದ್ದ ಒಂದು ದಿನಪತ್ರಿಕೆಯಲ್ಲಿ ರಕ್ಕಸ ಮಗುವಿನ ಬಗ್ಗೆ ವಿಚಾರವೊಂದನ್ನು ಬರೆಯಲಾಗಿತ್ತು ಆದರೆ ಇದು ಶುದ್ಧ ಸುಳ್ಳು ಅಂತ ತಿಳಿದ ಮೇಲೆ ದಿನಪತ್ರಿಕೆಯ ಮೇಲೆ ಇದ್ದಂತಹ ಒಂದು ನಂಬಿಕೆಯ ಭಾವನೆ ಕಡಿಮೆಯಾಗಿ ಬಿಟ್ಟಿತ್ತು .

ಅಸ್ಸಾಂ ರಾಜ್ಯದಲ್ಲಿ ನಡೆದಂತಹ ಈ ಒಂದು ಘಟನೆ ಈ ವರ್ಷ ಒಂದು ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು ಆದರೆ ಈ ಒಂದು ವಿಚಾರ ಶುದ್ಧ ಸುಳ್ಳು ಯಾಕೆಂದರೆ ಈ ಘಟನೆ ನಡೆದದ್ದು ಮೂರು ವರುಷ ಹಿಂದೆ ಅಂದರೆ 2016 ರಲ್ಲಿ ಮತ್ತು ಈ ಒಂದು ಘಟನೆ ನಡೆದದ್ದು ಅಸ್ಸಾಂ ರಾಜ್ಯದಲ್ಲಿ .

ಪ್ರಪಂಚದಲ್ಲಿ ಪ್ರತಿದಿನ ಸಾಕಷ್ಟು ಮಂದಿ ಹುಟ್ಟುತ್ತಲೇ ಇರುತ್ತಾರೆ ಸಾಯುತ್ತಲೇ ಇರುತ್ತಾರೆ ಮತ್ತು ಹುಟ್ಟುವಾಗ ಎಲ್ಲರೂ ಕೂಡ ಚೆನ್ನಾಗಿಯೇ ಹುಟ್ಟುವುದಿಲ್ಲ ಕೆಲವರು ಕೆಲವೊಂದು ಸಮಸ್ಯೆಗಳನ್ನು ಹೊತ್ತುಕೊಂಡು ಹುಟ್ಟಿರುತ್ತಾರೆ ಆದರೆ ಅದು ಆ ಮಗುವಿನ ತಪ್ಪಲ್ಲ . ಅಸ್ಸಾಂ ನ ಒಂದು ದಂಪತಿಗೆ ಈ ಮಗು ಜನಿಸಿತ್ತು ಅದರೆ ಹುಟ್ಟಿದಾಗಲೇ ಒಂದು ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಇದು ಹುಟ್ಟಿತ್ತು , ಆದರೆ ಎರಡೇ ದಿನಕ್ಕೆ ಈ ಮಗು ಉಳಿಯಲಿಲ್ಲ.

ಮತ್ತು ಈ ಚರ್ಮ ರೋಗದ ಸಮಸ್ಯೆಯಿಂದ ಹುಟ್ಟಿದರೆ ಬದುಕುವ ಸಾಧ್ಯತೆಗಳು ಹೆಚ್ಚಿರುತ್ತದೆ ಆದರೆ ಈ ಚರ್ಮ ರೋಗ ಸಮಸ್ಯೆಗೆ ಯಾವುದೇ ರೀತಿಯ ಔಷಧಿ ಅಥವಾ ಚಿಕಿತ್ಸೆ ಇರುವುದಿಲ್ಲ . ಅಮೆರಿಕದಲ್ಲಿ ಇದ್ದಂತಹ ಒಬ್ಬ ಮಹಿಳೆಗೆ ಈ ರೀತಿಯ ಒಂದು ಚರ್ಮರೋಗ ಸಮಸ್ಯೆ ಇತ್ತು ಆದರೆ ಆಕೆ ಚಿಕಿತ್ಸೆ ಸಿಗದೆ ಈಗಲೂ ಕೂಡ ಆ ಸಮಸ್ಯೆ ಇಂದ ಬಳಲುತ್ತಾ ಇದ್ದಾರೆ .

ನಾನು ಈ ಮಾಹಿತಿಯಲ್ಲಿ ನಿಮಗೆ ತಿಳಿಸಲು ಹೊರಟಿರುವುದು ಏನು ಅಂದರೆ ಯಾವುದೇ ವಿಚಾರವಾಗಲಿ ಒಂದು ಪತ್ರಿಕೆಯಲ್ಲಿ ಪ್ರಕಟವಾಗುವಾಗ ಅದನ್ನು ಎಷ್ಟು ಸರಿ ಅಥವಾ ಎಷ್ಟು ಸುಳ್ಳು ಅನ್ನೋದನ್ನು ಒಮ್ಮೆ ಪರಿಗಣಿಸಿ ನಂತರ ಆ ಒಂದು ವಿಚಾರವನ್ನು ವೈರಲ್ ಮಾಡಿ ಅಂತ ಧನ್ಯವಾದಗಳು .

LEAVE A REPLY

Please enter your comment!
Please enter your name here