ರಜನಿಕಾಂತ್ ಅವರ ಸ್ಥಾನವನ್ನು ಭವಿಷ್ಯದಲ್ಲಿ ತುಂಬುವ ಏಕೈಕ ಪ್ರತಿಭಾವಂತ ನಟ ಕನ್ನಡದಲ್ಲಿ ಇದ್ದಾರೆ ಅಂತೆ ನೋಡಿ … ಬೇರೆ ಯಾರೂ ಅಲ್ಲ ಇವರೇ ನೋಡಿ ನಮ್ಮ ಕನ್ನಡದ ಹೀರೋ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಸಾಧನೆ ಸಿನಿಮಾ

ಮೊದಲು ತಮ್ಮ ಜೀವನವನ್ನು ಬಸ್ ಕಂಡಕ್ಟರ್ ಕೆಲಸ ಮಾಡಿ ಸಾಗಿಸುತ್ತಾ ಇದ್ದ ಈ ನಟ ಇದೀಗ ವಿಶ್ವವೇ ತಿರುಗಿ ನೋಡುವ ಹಾಗೆ ಸ್ಟಾರ್ ಆಗಿ ಬೆಳೆದಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಯಾರ ಬಗ್ಗೆ ಎಂದು ನಿಮಗೆ ತಿಳಿದಿದೆ ಅಲ್ವಾ ಅವರೇ ನಮ್ಮೆಲ್ಲರ ಫೇವರಿಟ್ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೌದು ಭಾರತ ದೇಶದೆಲ್ಲೆಡೆ ಮಾತ್ರವಲ್ಲ ಇಡೀ ವಿಶ್ವದೆಲ್ಲೆಡೆ ಇವರು ತಮ್ಮದೇ ಆದ ಛಾಪು ಮೂಡಿಸಿರುವ ನಟ ಆಗಿದ್ದಾರೆ ಮತ್ತು ಪ್ರಭಾವಶಾಲಿ ನಟರಾಗಿರುವ ಇವರು ತಮಿಳು ಚಿತ್ರರಂಗದಲ್ಲಿ ಅಭಿನಯ ಮಾಡುವ ಮೂಲಕ ಜನಪ್ರಿಯ ನಟರಾಗಿದ್ದಾರೆ. ತಮ್ಮದೇ ಆದ ವಿಭಿನ್ನ ಸ್ಟೈಲ್ ತಮ್ಮದೇ ಆದ ವಿಭಿನ್ನ ಲುಕ್ ಆಟಿಟ್ಯೂಡ್ ಇವೆಲ್ಲವೂ ರಜನಿಕಾಂತ್ ಅವರಿಗೆ ಅವರೇ ಸಾಟಿ ಎಂಬುದನ್ನು ತಿಳಿಸುತ್ತದೆ.

ಹೌದು ರಜನಿ ಅವರು ಬೆಂಗಳೂರಿನ ಬಡಕುಟುಂಬದಲ್ಲಿ ಜನಿಸಿದರು ಇವರು ತಮ್ಮ ಹೊಟ್ಟೆಪಾಡಿಗಾಗಿ ಕಾರ್ಪೆಂಟರ್ ಕೆಲಸ ಮಾಡುತ್ತಾ ಇದ್ದರು ಅನಂತರ ಬೆಂಗಳೂರು ಪಟ್ಟಣಕ್ಕೆ ಬಂದು ಕಂಡಕ್ಟರ್ ಕೆಲಸ ಮಾಡುತ್ತ ಜೀವನ ಸಾಗಿಸುತ್ತಾ ಇದ್ದರು ಅಂದು ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಾ ಇದ್ದ ಈ ವ್ಯಕ್ತಿ ಇದೀಗ ಇಡೀ ವಿಶ್ವವೇ ತಿರುಗಿ ನೋಡುವ ಹಾಗೆ ಜನಪ್ರಿಯಗಳಿಸಿದ ನಟರಾಗಿದ್ದಾರೆ ಅಂದರೆ ಇದು ಬೇರೆ ಅವರಿಗೆಲ್ಲಾ ಸ್ಫೂರ್ತಿದಾಯಕ ವಿಚಾರವಾಗಿದೆ ಅಂತಾನೇ ಹೇಳಬಹುದು.ರಜನಿ ಅವರು ಕಂಡಕ್ಟರ್ ಕೆಲಸ ಮಾಡುವಾಗಲೆ ನಾಟಕಗಳಲ್ಲಿಯೂ ಕೂಡ ನಟನೆ ಮಾಡುತ್ತಿದ್ದರು. ನಂತರ ಸಿನಿಮಾ ಮೇಲಿನ ಆಸಕ್ತಿ ಹೆಚ್ಚಾಗಿ ಇವರು ಮದ್ರಾಸಿಗೆ ಹೋಗಿ ನಟನೆಯಲ್ಲಿ ಡಿಪ್ಲೊಮಾ ಸಹ ಮಾಡಿದರು ಆ ಬಳಿಕ 1975ರಲ್ಲಿ ಕೆ ಬಾಲಚಂದಿರ್ ನಿರ್ದೇಶನದ ಅಪೂರ್ವ ರಾಗಂಗಳ್ ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದು ಕಮಲ್ ಹಾಸನ್ ನಾಯಕರಾಗಿದ್ದ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಜನಿ ನಂತರ ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿದರು.

ಕನ್ನಡ ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದರು ರಜನಿ, ತಮಿಳಿನಲ್ಲಿ ಶಾಶ್ವತ ನೆಲೆ ಕಂಡರು. ಸೂಪರ್ ಸ್ಟಾರ್ ಎಂಬ ಪಟ್ಟ ಸಹ ಅಲಂಕರಿಸಿದರು. ಇದೀಗ ಈ ಸ್ಥಾನವನ್ನು ತುಂಬಬಲ್ಲ ನಟ ನಮ್ಮ ಕನ್ನಡದಲ್ಲಿ ಸಿಕ್ಕಿದ್ದಾರೆ. ಹೌದು ರಜನಿಕಾಂತ್ ಅವರ ಸ್ಥಾನ ತುಂಬುವುದು ಎಂಬ ಮಾತು ಅಷ್ಟು ಸುಲಭವಲ್ಲಾ. ಯಾಕೆಂದರೆ ರಜನಿ ಎಂದರೆ ಒಂದು ಅದ್ಭುತ ಹಾಗೂ ದಂತಕಥೆ. ಇಂತಹ ನಟರ ಸ್ಥಾನ ಅಲಂಕರಿಸುವುದು ಎಂದರೆ ಬಾಯಲ್ಲಿ ಹೇಳುವಷ್ಟು ಸುಲಭವಲ್ಲ. ಆದರೆ ಇದೀಗ ಭಾರತೀಯ ಸಿನಿ ಪಂಡಿತರು ಹೇಳಿರುವ ಪ್ರಕಾರ, ರಜನಿ ಸ್ಥಾನವನ್ನು ತುಂಬುವ ಪ್ರತಿಭಾವಂತ ನಟ ಕನ್ನಡದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.ಹೌದು ಅಚ್ಚರಿ ಎನಿಸಬಹುದು ಆದರೆ ಇದು ಸತ್ಯ ಆ ನಟ ಕನ್ನಡ ಇಂಡಸ್ಟ್ರಿ ಅಲ್ಲಿ ಯಾರ ಸಹಾಯವಿಲ್ಲದೆ ಬೆಳೆದು ಬಂದವರು ಏನು ಮೊದ ಮೊದಲು ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಅನಂತರ ಮೊಗ್ಗಿನ ಮನಸು ಎಂಬ ಸಿನಿಮಾ ಮೂಲಕ ತೆರೆಮೇಲೆ ಕಾಣಿಸಿಕೊಂಡು ಅಪಾರ ಅಭಿಮಾನಿಗಳನ್ನ ಗಳಿಸಿ ಒಂದೊಂದೇ ಹೆಜ್ಜೆಯನ್ನು ಇಟ್ಟು ಇದೀಗ ನ್ಯಾಷನಲ್ ಸ್ತಾರ್ ಆಗಿರುವ ನಟ ಯಶ್ ಅವರು.

ಇವರು ಇಂತಹ ನಟ ಅಂದರೆ ಇವರು ಅಭಿನಯ ಮಾಡುತ್ತಿದ್ದಾರೆ ಇವರ ಕಣ್ಗಳು ಸಹ ಮಾತನಡುತ್ತ ಇದ್ದುವು ಕಣ್ಗಳಲಿ ಆಕರ್ಷಣೆ ಮಾಡುವ ಪ್ರತಿಭೆಯನ್ನು ಯಶ್ ಹೊಂದಿದ್ದರು ಇವರು ಒಂದೇ ಒಂದು ಸೂಪರ್ ಯಶಸ್ಸಿಗಾಗಿ ಯಶ್ ಕಾಯುತ್ತಿದ್ದರು. ಆ ಸಮಯದಲ್ಲಿಯೇ ಇವರಿಗೆ ಒಳ್ಳೆಯ ಬ್ರೇಕ್ ನೀಡಿದ್ದು ಕಿರಾತಕ ಸಿನಿಮಾ. ಹಳ್ಳಿ ಸೊಗಡಿನ ಪೋಲಿ ಹುಡುನ ತರಲೇ ತಮಾಷೆ ಸಿನಿಮಾ ಇದಾಗಿದ್ದು ಯಶ್ ಗೆ ದೊಡ್ಡ ಬ್ರೇಕ್ ತಂದುಕೊಟ್ಟಿತು. ನಂತರ ಯಶ್ ಮುಟ್ಟಿದ್ದೇಲ್ಲಾ ಚಿನ್ನವೇ. ಹೌದು ರಾಜಹುಲಿ ಡ್ರಾಮಾ ಲಕ್ಕಿ ರಾಮಾಚಾರಿ ಮಾಸ್ಟರ್ ಪೀಸ್ ಸಂತೂ ಹೀಗೆ ಸಾಲು ಸಾಲು ಸಿನಿಮಾಗಳನ್ನು ನೀಡುತ್ತಾ ಬಂದರೂ. ತದನಂತರ ಬಂದಿದ್ದೇ ಕೆಜಿಎಫ್. ಈ ಸಿನಿಮಾ ಯಾವ ರೀತಿ ಜಾದೂ ಮಾಡಿತ್ತು ಎಂದರೆ ಯಶ್ ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆದುಕೊಂಡು ಹೋಗಿ ನಿಲ್ಲಿಸ್ಸಿದ್ದು ಕನ್ನಡಕ್ಕೆ ಕನ್ನಡಿಗರಿಗೆ ಕನ್ನಡ ಚಲನಚಿತ್ರರಂಗಕ್ಕೆ ಹೆಮ್ಮೆ ತಂದಿದೆ.

ಸದ್ಯ ಇದೀಗ ವಿಶ್ವಾದ್ಯಂತ ರಾಕಿ ಭಾಯ್ ಹೆಸರು ಎಲ್ಲೆಡೆ ಕೇಳಿಬರುತ್ತಿದೆ ಕೆಜಿಎಫ್ ಪಾರ್ಟ್ 2ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ರಾಕಿಂಗ್ ಸ್ಟಾರ್ ಈಗ ಸೂಪರ್ ಸ್ಟಾರ್ ಆಗಿದ್ದಾರೆ. ಅವರ ಖ್ಯಾತಿ ಹೇಗಿದೆ ಎಂದರೆ ರಜನಿಕಾಂತ್ ಅವರನ್ನು ಹೊರೆತು ಪಡಿಸಿದರೆ, ಹೆಚ್ಚು ಫ್ಯಾನ್ ಬೇಸ್ ಹಾಗೂ ಫೇಮ್ ಹೊಂದಿರುವ ನಟ ಎಂದರೆ ಅದು ಯಶ್ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ರಜನಿ ಅವರಂತೆಯೇ ರಾಕಿ ಭಾಯ್ ಜೀವನವಿದ್ದು ಈ ಎಲ್ಲವನ್ನು ಗಮನಿಸಿದ ಸಿನಿ ಪಂಡಿತರು ರಜನಿಕಾಂತ್ ಸ್ಥಾನವನ್ನು ತುಂಬಬಲ್ಲ ನಟ ಅಂದರೆ ಯಶ್ ಎಂದು ಹೇಳುತ್ತಿದ್ದಾರೆ ಹಾಗಾದರೆ ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

Leave a Reply

Your email address will not be published. Required fields are marked *