Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಯುವಕರ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಬಳಿ ಅತ್ಯಂತ ದುಬಾರಿ ಕಾರುಗಳು ಇದ್ದವಂತೆ … ಹಾಗಾದ್ರೆ ಅವ್ರ ಬಳಿ ಇದ್ದ ಕಾರುಗಳೆಷ್ಟು ಗೊತ್ತ ….!!!

ಫ್ರೆಂಡ್ಸ್ ಇವತ್ತಿನ ದಿನಕ್ಕೆ ನಮ್ಮೆಲ್ಲರ ನೆಚ್ಚಿನ ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಹನ್ನೊಂದು ದಿನಗಳು ಕಳೆದಿದೆ. ಆದರೆ ಇವತ್ತಿಗೂ ಯಾರಿಗೂ ಕೂಡ ನಂಬಲು ಆಗುತ್ತಾ ಇಲ್ಲ ಪುನೀತ್ ಸರ್ ನಮ್ಮ ಜೊತೆ ಇಲ್ಲ ಎಂಬ ವಿಚಾರ. ಹೌದು ಫ್ರೆಂಡ್ಸ್ ನಟ ಪುನೀತ್ ಸರ್ ಅವರು ಇದ್ದಕ್ಕಿದ್ದ ಹಾಗೆ ನಮ್ಮನ್ನೆಲ್ಲಾ ಅಗಲಿದರು ಇಡೀ ಕರ್ನಾಟಕದ ಜನತೆ ಮಾತ್ರವಲ್ಲ ಹರ ರಾಜ್ಯದಲ್ಲಿಯೂ ಸಹ ನಟ ಪುನೀತ್ ಸರ್ ಅವರನ್ನ ಕಳೆದು ಕೊಂಡಿರುವ ವಿಚಾರಕ್ಕೆ ಹಲವು ಮಂದಿ ಮನನೊಂದಿದ್ದಾರೆ ಅಷ್ಟೇ ಅಲ್ಲ ಪರಭಾಷಾ ನಟ ನಟಿಯರು ಸಹ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ವಿಚಾರ ಕೇಳಿ ಮನನೊಂದಿದ್ದರು.

 

ಹೌದು ನಮ್ಮ ಪುನೀತ್ ಸರ್ ಅವರು ಪರಭಾಷೆಯಲ್ಲಿ ಅಭಿನಯ ಮಾಡಿಲ್ಲ ಆದರೂ ಸಹ ಪರಭಾಷೆಯಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಪುನೀತ್.ನಮ್ಮ ನಟ ಪುನೀತ್ ಸರ್ ಅವರು ಬರೀ ನಟ ಮಾತ್ರ ಅಲ್ಲ ಇವರು ನಿರ್ಮಾಪಕ ನಿರ್ದೇಶಕ ಹಾಡುಗಾರ ಡ್ಯಾನ್ಸಿಂಗ್ ಸ್ಟಾರ್ ಸಹ ಹೌದು ಇಂತಹ ಬಹುಮುಖ ಪ್ರತಿಭೆ ನಮ್ಮ ಜೊತೆ ಇಲ್ಲ ಅಂದರೆ ಯಾರೂ ಕೂಡ ಸಹಿಸಿಕೊಳ್ಳುವುದಿಲ್ಲ ಆದರೆ ಒಂದಂತೂ ಸತ್ಯ ಪುನೀತ್ ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು ಆದರೆ ಸದಾ ಪ್ರತಿಯೊಬ್ಬ ಅಭಿಮಾನಿಗಳ ಮನಸ್ಸಿನಲ್ಲಿ ಪುನೀತ್ ಸರ್ ಅವರು ಅಮರರಾಗಿರುತ್ತಾರೆ. ಈಗಾಗಲೇ ಸಾಕಷ್ಟು ಮಂದಿ ಪುನೀತ್ ಅವರು ಮಾಡಿದಂತಹ ಕೆಲಸವನ್ನು ಅಂದರೆ ನೇತ್ರದಾನ ಹಾಗೂ ಸಾಮಾಜಿಕ ಕಲ್ಯಾಣ ಇವನ್ನೆಲ್ಲ ತಮ್ಮ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡಿದ್ದಾರೆ

ಇದರಂತೆ ಸಮಾಜದಲ್ಲಿ ಪುನೀತ್ ಸರ್ ಅವರ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರನ್ನು ಸದಾ ಜೀವಂತವಾಗಿರುತ್ತಾರೆ ಅವರ ಅಭಿಮಾನಿಗಳು ಎಂದು ಹೇಳಬಹುದಾಗಿದೆ. ಎಲ್ಲದರಲ್ಲೂ ತಮ್ಮ ಅದ್ಭುತ ಕಲೆಯನ್ನು ಪ್ರದರ್ಶನ ಮಾಡಿದಂತಹ ನಟ ಪುನೀತ್ ರಾಜಕುಮಾರ್ ಅವರಿಗೆ ಕಾರ್ ಕ್ರೇಜ್ ಬಹಳ ಇತ್ತಂತೆ.ಹಾಗಾದರೆ ಅಪ್ಪು ಸರ್ ಅವರ ಬಳಿ ಎಷ್ಟೆಲ್ಲಾ ಕಾರ್ ಗಳು ಇವೆ ಎಂಬ ಮಾಹಿತಿ ಕೇಳಿದರೆ ನೀವು ಕೂಡ ಶಾಕ್ ಆಗ್ತಿರಾ ಇಷ್ಟೆಲ್ಲಾ ಐಷಾರಾಮಿ ಕಾರುಗಳನ್ನು ಹೊಂದಿದ್ದ ನಮ್ಮ ಪುನೀತ್ ಸರ್ ಅವರಿಗೆ ಕಾರುಗಳು ಅಂದರೆ ಪಂಚಪ್ರಾಣ ಇತ್ತಂತೆ. ಇವರ ಬಳಿ ಯಾವೆಲ್ಲಾ ಕಾರ್ಗಳು ಇವೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ. ಹೌದು ಫ್ರೆಂಡ್ಸ್ ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕಂದಿನಿಂದಲೂ ರಿಮೋಟ್ ಕಂಟ್ರೋಲ್ ಕಾರುಗಳೆಂದರೆ ಬಹಳ ಇಷ್ಟ ಇತ್ತು,

ಹೀಗಾಗಿ ಒಂದು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದನಂತರ ನಿನಗೆ ಏನ್ ಬೇಕು ಹೇಳು ನಾನು ಕೊಡಿಸುತ್ತೇನೆ ಎಂದು ಅಪ್ಪಾಜಿಯವರ ಅಣ್ಣಾವರು ಪುನೀತ್ ಅವರನ್ನ ಕೇಳಿದಾಗ ಹಿಂದೆ ಮುಂದೆ ಯೋಚನೆ ಮಾಡದೆ ನನಗೆ ರಿಮೋಟ್ ಕಾರ್ ಬೇಕು ಅಂತ ಹೇಳಿದರಂತೆ ಮತ್ತು ಹಠ ಹಿಡಿದಿದ್ದರಂತೆ ಪುನೀತ್.ಕಾರುಗಳ ಮೇಲೆ ಅಪಾರ ಪ್ರೀತಿ ಮತ್ತು ಕ್ರೇಜ್ ಹೊಂದಿದಂತಹ ಅಪ್ಪು ತಮ್ಮ ಜೀವಿತಾವಧಿಯಲ್ಲಿ ಬರೋಬ್ಬರಿ 9 ಕಾರುಗಳನ್ನು ಖರೀದಿಸಿದ್ದರು. ಹೌದು ನಿಸ್ಸಾನ್ ಜಿಟಿ ಆರ್, ಆರ್ ಡಿ ಆರ್.8, ಲ್ಯಾಂಬೋರ್ಗಿನಿ ಯೂರಸ್, ರೇಂಜ್ ರೋವರ್ ವ್ಯೂಗೋ, ವೋಲ್ವೋ ಎಕ್ಸ್ ಸಿ.90, ಟೊಯೋಟಾ ಫಾರ್ಚುನರ್,

ಮಿನಿ ಕೂಪರ್ ಕನ್ವರ್ಟಿಬಲ್, ಫೋರ್ಡ್ ಮತ್ತು ಆರ್ ಡಿ ಕ್ಯೂ ಸೆವೆನ್ ಇಷ್ಟೆಲ್ಲಾ ಕಾರುಗಳ ಒಟ್ಟು ಬೆಲೆ ಹತ್ತಾರು ಕೋಟಿಗಳು ಇಷ್ಟೆಲ್ಲಾ ಆಸ್ತಿಯ ಒಡೆಯನಾಗಿದ್ದ ಅಪ್ಪು ಇಂದು ನಮ್ಮೊಂದಿಗೆ ಇಲ್ಲದಿರುವುದನ್ನು ನೆನೆದರೆ ಹೃದಯ ಭಾರವಾಗುತ್ತದೆ ಕಣ್ಣು ತುಂಬಿ ಬರುತ್ತದೆ ನಿಜಕ್ಕೂ ಅಪ್ಪು ಅವರು ಸದಾ ಅಮರರಾಗಿರುತ್ತಾರೆ. ಹಾಗಾದರೆ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಯಾವ ಸಿನಿಮಾ ನಿಮಗೆ ಫೇವರಿಟ್ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ ಮತ್ತು ಪುನೀತ್ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಆಶಿಸೋಣ ಓಂ ಶಾಂತಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ