ಮಹಿಳೆ ತಾಯಿ, ಅಕ್ಕ,ತಂಗಿ, ಹೆಂಡತಿ ಹೀಗೆ ಹಲವ ಪಾತ್ರಗಳನ್ನು ಒಮ್ಮೆಲೇ ನಿಭಾಯಿಸುವ ಶಕ್ತಿಯನ್ನು ಹೊಂದಿರುತ್ತಾಳೆ, ಅವಳ ತಾಳ್ಮೆಯನ್ನು ಭೂಮಿ ತಾಯಿಗೆ ಹೋಲಿಕೆ ಮಾಡಲಾಗುತ್ತದೆ,
ಇನ್ನು ಶಾಸ್ತ್ರ ಹಾಗು ಧರ್ಮದಲ್ಲಿ ಮಹಿಳೆಯರಿಗೆ ಅಪಾರ ಗೌರವ ಹಾಗು ಬೆಳೆಯನ್ನ ನೀಡಲಾಗಿದೆ, ಪುರಾಣದಲ್ಲೂ ಹಾಗು ವೇದ ಗ್ರಂಥ ಗೀತೆಗಳಲ್ಲೂ ಹೆಣ್ಣಿಗೆ ಉತ್ತಮ ಸ್ಥಾನವನ್ನ ಕೊಟ್ಟಿದ್ದಾರೆ.
ಇನ್ನು ಮನೆಯಲ್ಲಿ ಯಾರೇ ಇದ್ದರು, ಒಂದು ಹೆಣ್ಣು ಇದ್ದಂತೆ ಆಗುವುದಿಲ್ಲ, ಹೆಣ್ಣಿದ್ದರೆ ಆ ಮನೆಯಲ್ಲಿ ಬೆಳವಣಿಗೆ ಇರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ, ಆಕೆ ಹತ್ತು ಹಲವು ಜವಾಬ್ದಾರಿಗಳನ್ನ ತನ್ನ ಹೆಗಲ ಮೇಲೆ ಹೊತ್ತು ಕಾಯುತ್ತಿರುತ್ತಾಳೆ, ಮನೆಯ ಪುರುಷರು ಎಷ್ಟೇ ಸಂಪಾದನೆ ಮಾಡಲಿ ಅಥವಾ ಮಕ್ಕಳು ಎಷ್ಟೇ ಓದಲಿ ಬುದ್ದಿವಂತರಾದರು ಮನೆಯ ಮಹಿಳೆಗೆ ಗೌರವವನ್ನು ಸೂಚಿಸ ಬೇಕು.
ಶಕ್ತಿ ದೇವತೆಗಳಿಗೆ ಹೋಲಿಕೆ ಮಾಡುವ ಈ ಮಹಿಳೆಯರ ಕೂದಲನ್ನ ಯಾವುದೇ ಕಾರಣಕ್ಕೂ ಹಿಡಿದು ಎಳೆಯ ಬಾರದು, ಹಾಗೆ ಮಾಡಿದರೆ ಸಕಲ ದಾರಿದ್ರ್ಯ ಸುತ್ತಿಕೊಳ್ಳುತ್ತದೆ, ಉದಾಹರಣೆಗೆ ರಾಮಾಯಣದಲ್ಲಿ ಸೀತೆಯ ಜೇಡ್ ಇಡಿದ ರಾವಣ ಹಾಗು ಮಹಾ ಭಾರತದಲ್ಲಿ ದ್ರೌಪತಿಯ ಕೂದಲನ್ನು ಹಿಡಿದು ಎಳೆದಾಡಿದ ಕೌರವರ ಪಾಡನ್ನು ನಾವು ಬಹಳ ಚೆನ್ನಾಗಿಯೇ ತಿಳಿದ್ದಿದೇವೆ.
ಆದುದ್ದರಿಂದ ಮಹಿಳೆಯ ಕೂದಲನ್ನ ಯಾರು ಜೋರಾಗಿ ಹಿಡಿದು ಎಳೆಯ ಬಾರದು ಹಾಗು ಸ್ತ್ರೀಯರಿಗೆ ಸಲ್ಲ ಬೇಕಾದ ಸಕಲ ಗೌರವವನ್ನ ನೀಡಿ ಸತ್ಕರಿಸ ಬೇಕು, ಮನೆಯಲ್ಲಿನ ಹೆಣ್ಣು ನಗುತ್ತ ಇದ್ದಾರೆ ಮಾತ್ರ ಮನೆಯ ಏಳಿಗೆಯಾಗುವುದು ಹಾಗು ಲಕ್ಷ್ಮಿ ನೆಲೆಸುವುದು.
ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.