Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವುದೇ ಕಾರಣಕ್ಕೂ ಮನೆಯಲ್ಲಿ ನೀವು ಗುರುವಾರದ ದಿವಸ ಈ ರೀತಿಯ ಕೆಲಸಗಳನ್ನು ಮಾಡಬಾರದು ಅಪ್ಪಿ ತಪ್ಪಿ ಮಾಡಿದ್ರೆ ನಿಮ್ಮ ಜೀವನವೇ ಸರ್ವನಾಶವಾಗಿ ಬಿಡುತ್ತೆ …!!!

ಗುರುವಾರ ಈ ಮೂರು ತಪ್ಪುಗಳನ್ನು ಮಾಡುವುದರಿಂದ ನೀವು ಜೀವನದಲ್ಲಿ ತುಂಬಾ ಕಷ್ಟವನ್ನು ಎದುರಿಸುತ್ತಿರಿ ಹುಷಾರಾಗಿರಿ ಈ 3 ತಪ್ಪುಗಳನ್ನು ಮಾಡಬೇಡಿ.
ಹಾಯ್ ಸ್ನೇಹಿತರೆ ವಾರದ ಎಲ್ಲಾ ದಿನಗಳು ವಿಶೇಷವಾದ ದಿನಗಳಾಗಿವೆ. ಒಂದೊಂದು ದಿನಕ್ಕೂ ಒಂದೊಂದು ದೇವರ ವಿಶೇಷತೆ ಇದೆ. ಎಲ್ಲಾ ದಿನವೂ ಶುಭವಾಗಿ ಇರಲಿ ಎಂದು ನಾವು ಬಯಸುತ್ತೇವೆ. ಸೋಮವಾರ ಶಿವನ ವಿಶೇಷತೆ ಮಂಗಳವಾರ ಗೌರಿಯ ವಿಶೇಷತೆ ಹೀಗೆ ಎಲ್ಲಾ ದಿನಗಳಿಗೂ ಅದರದ್ದೇ ಆದ ವಿಶೇಷತೆಯಿದೆ. ಗುರುವಾರವೂ ಕೂಡ ತುಂಬಾ ವಿಶೇಷವಾದ ದಿನ.

ಗುರು ಗ್ರಹ ತುಂಬಾ ಚೆನ್ನಾಗಿದ್ದರೆ ಎಂತಹ ಕಷ್ಟಗಳ ಕೂಡ ಮಂಜಿನಂತೆ ಕರಗುತ್ತವೆ. ಜೀವನದಲ್ಲಿ ನಮಗೆ ಮುಂದೆ ಗುರಿ ಇರಬೇಕು ಹಾಗೆ ಹಿಂದೆ ಗುರುವಿನ ಅನುಗ್ರಹ ಇರಬೇಕು ಎಂಬ ಮಾತು ಎಷ್ಟು ಅರ್ಥವನ್ನು ಕೊಡುತ್ತದೆ. ಯಾವುದೇ ಮನುಷ್ಯನಿಗೆ ಒಂದು ಗುರಿ ಅನ್ನುವುದು ಇದ್ದರೆ ಆ ಮನುಷ್ಯ ಜೀವನದಲ್ಲಿ ಸೋಲಲು ಆಗುವುದಿಲ್ಲ ಹಾಗೆಯೇ ಅವರಿಗೆ ಗುರುವಿನ ಆಶೀರ್ವಾದವಿದ್ದರೆ ಯಾವ ಸಂಕಷ್ಟವು ಬರುವುದಿಲ್ಲ. ನಿಮ್ಮ ಜಾತಕದಲ್ಲಿ ಗುರು ಗ್ರಹ ಪ್ರಬಲವಾಗಿದ್ದರೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ ನೀವು ಮಾಡುವ ಕೆಲಸದಲ್ಲಿ ತುಂಬಾ ಲಾಭ ಇರುತ್ತದೆ ಹಾಗೆಯೇ ನಿಮ್ಮ ಜೀವನ ನಿಮ್ಮ ನೆಮ್ಮದಿ ಶಾಂತಿ ಸಮಾಧಾನದಿಂದ ಕೂಡಿರುತ್ತದೆ ದಾಂಪತ್ಯದಲ್ಲಿ ನೀವು ತುಂಬಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತೀರಾ

ಹಾಗೆಯೇ ಮಕ್ಕಳ ಸಮಸ್ಯೆಯೂ ನಿಮಗೆ ಇರುವುದಿಲ್ಲ. ಆದರೆ ನಿಮ್ಮ ಜಾತಕದಲ್ಲಿ ಗುರುಗ್ರಹದ ವಕ್ರದೃಷ್ಟಿ ಇದ್ದರೆ ಅಂದರೆ ದುರ್ಬಲವಾಗಿದ್ದರೆ ನೀವು ತುಂಬಾ ನೋವು ಸಂಕಷ್ಟಗಳನ್ನು ಎದುರಿಸುತ್ತಿರಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ನೆಮ್ಮದಿ ಇರುವುದಿಲ್ಲ ನೀವು ಸದಾ ಸೋಲನ್ನು ಅನುಭವಿಸುತ್ತೀರಿ ದಾಂಪತ್ಯದಲ್ಲಿ ನಿಮಗೆ ವಿರಸ ತುಂಬಿರುತ್ತದೆ ಯಾವುದೇ ಖುಷಿ ನೆಮ್ಮದಿ ನಿಮ್ಮ ಜೀವನದಲ್ಲಿ ಇರುವುದಿಲ್ಲ. ಹಾಗಾದರೆ ಈ ಗುರುಗ್ರಹದ ವಕ್ರದೃಷ್ಟಿಗೆ ನಾವು ಮಾಡಿಕೊಳ್ಳುವ ಪರಿಹಾರಗಳೇನು ಗುರುವಾರ ನಾವು ಏನು ಮಾಡಬೇಕು ಏನು ಮಾಡಬಾರದು ಎಂದು ಈ ಮಾಹಿತಿಯಲ್ಲಿ ನಾನು ನಿಮಗೆ ಸರಳವಾಗಿ ತಿಳಿಸುತ್ತೇನೆ.

ಶುಕ್ರವಾರ ಹೇಗೆ ಹಣಕ್ಕೆ ವಿಶೇಷತೆ ಕೊಡುತ್ತೇವೆ ಹಾಗೆ ಗುರುವಾರ ಸಹ ನಾವು ಹಣದ ವ್ಯವಹಾರವನ್ನು ಮಾಡಬಾರದು. ಗುರುವಾರ ನೀವೇನಾದರೂ ಈ ಮೂರು ತಪ್ಪುಗಳನ್ನು ಮಾಡಿದರೆ ನೀವು ಸದಾ ಕಷ್ಟದಿಂದ ಇರ್ತೀರಾ. ನೀವು ಮಾಡುವ ಕೆಲಸಗಳು ಕೂಡ ನಿಮ್ಮ ಗ್ರಹದ ಕೋಪಕ್ಕೆ ಕಾರಣವಾಗುತ್ತವೆ. ಎಲ್ಲಾ ದಿನಗಳು ಎಲ್ಲಾ ಕೆಲಸಕ್ಕೂ ಸೂಕ್ತವಲ್ಲ ಕೆಲವೊಂದು ಕೆಲಸವನ್ನು ಒಂದೊಂದು ದಿನ ಮಾಡಬಾರದು ಹಾಗೆಯೇ ಕೆಲವೊಂದು ಕೆಲಸವನ್ನು ಅದೇ ದಿನದಂದು ಮಾಡಬೇಕು ಎಂಬ ಶಾಸ್ತ್ರ ಇದೆ. ಹಾಗಾದರೆ ಮೊದಲನೆಯ ತಪ್ಪು ಯಾವುದೆಂದರೆ ಗುರುವಾರ ಮಹಿಳೆಯರು ತಲೆ ಸ್ನಾನ ಮಾಡಬಾರದು

ಹಾಗೆ ಅವರು ತಲೆಕೂದಲನ್ನು ಕಟ್ ಮಾಡಿಕೊಳ್ಳಬಾರದು ಹೀಗೆ ಮಾಡುವುದರಿಂದ ನೀವು ತುಂಬಾ ಕಷ್ಟಕ್ಕೆ ಸಿಲುಕುತ್ತೀರಿ. ಮಹಿಳೆಯರಲ್ಲಿ ಗುರು ಗ್ರಹ ಪ್ರಬಲ ಆಗಿದ್ದರೆ ಗಂಡನ ಆರೋಗ್ಯ ಕೆಲಸದಲ್ಲಿ ಹೆಚ್ಚಿನ ಲಾಭ ಇರುತ್ತದೆ ಹಾಗೆ ಮಕ್ಕಳ ವಿದ್ಯಾಭ್ಯಾಸದಲ್ಲಿ ತುಂಬಾ ಯಶಸ್ಸು ದೊರಕುತ್ತದೆ. ಹಾಗಾಗಿ ಮಹಿಳೆಯರು ಗುರುಗ್ರಹದ ವಕ್ರ ದೃಷ್ಟಿಯನ್ನು ಬೀಳಿಸಿ ಕೊಳ್ಳಬಾರದು. ಗುರುವಾರ ಭಾರವಾದ ಬಟ್ಟೆ ಅಂದರೆ ಹಾಸಿಗೆ ದಿಂಬು ಮುಂತಾದ ವಸ್ತುಗಳನ್ನು ತೊಳೆಯಬಾರದು ಹೀಗೆ ಮಾಡುವುದರಿಂದ ಕೂಡ ನೀವು ಗುರುಗ್ರಹದ ವಕ್ರ ದೃಷ್ಟಿಯನ್ನು ಪಡೆಯುತ್ತೀರಾ.

ಇನ್ನು ಮೂರನೆಯದಾಗಿ ಮನೆಯ ಸ್ವಚ್ಛತೆಯನ್ನು ಗುರುವಾರ ಜಾಸ್ತಿ ಮಾಡಬಾರದು ಹೀಗೆ ಮಾಡಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತದೆ ಗುರುವಾರ ಅತಿ ಹೆಚ್ಚು ಮನೆ ತೊಳೆಯುವುದು ಕಸ ಗುಡಿಸುವುದು ಮಾಡುವುದರಿಂದ ಗುರುವಿನ ಅನುಗ್ರಹ ನಿಮಗೆ ಸಿಗುವುದಿಲ್ಲ. ಈ ಮೂರು ತಪ್ಪುಗಳನ್ನು ನೀವು ಗುರುವಾರ ಯಾವತ್ತು ಮಾಡಬೇಡಿ. ಹಾಗಾದರೆ ಗುರುವಾರ ಏನು ಮಾಡಬೇಕು ಎಂಬುದನ್ನು ಈಗ ನೋಡಿ ಗುರುವಾರ ನಾರಾಯಣನನ್ನು ಪೂಜಿಸಿ ವಿಷ್ಣುಸಹಸ್ರನಾಮವನ್ನು ಓದಬೇಕು ಹಾಗೆ ಗುರುವಾರ ರಾಯರ ಪೂಜೆಯನ್ನು ಮಾಡಬೇಕು ಭಕ್ತಿಯಿಂದ ಪೂಜೆ ಮಾಡಿ ವರಗಳನ್ನು ನೀವು ಬೇಡಿಕೊಳ್ಳಬೇಕು

ಗುರುವಿನ ಆಶೀರ್ವಾದ ನಿಮ್ಮ ಮೇಲೆ ಸದಾ ಇದ್ದರೆ ನೀವು ಜೀವನದಲ್ಲಿ ಅಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಿರಿ. ನಿಮಗೆ ನೋವು ಕಷ್ಟ ಎಂಬುದು ಇರುವುದಿಲ್ಲ ಗುರುವಿನ ಒಳ್ಳೆಯ ಪ್ರಭಾವ ನಿಮ್ಮ ಮೇಲೆ ಇದ್ದರೆ ನೀವು ಸಾಕಷ್ಟು ಲಾಭವನ್ನು ಗಳಿಸುತ್ತೀರಾ. ಆದರೆ ಯಾವುದೇ ಕಷ್ಟಗಳು ಬಂದರೂ ನೀವು ಧೈರ್ಯಗೆಡದೆ ಪರಿಶ್ರಮದಿಂದ ಕೆಲಸವನ್ನು ಮಾಡಬೇಕು ಹಾಗೆಯೇ ನೀವು ಇಂತಹ ಪರಿಹಾರಗಳನ್ನು ಮಾಡಬೇಕು ಒಂದಲ್ಲ ಒಂದು ದಿನ ಸಮಯ ನಿಮ್ಮ ಮೇಲೆ ಸದಾ ಒಳ್ಳೆಯ ಆಶೀರ್ವಾದವನ್ನು ಕೊಡುತ್ತದೆ. ನಂಬಿಕೆಯಿಂದ ದೇವರನ್ನು ಪೂಜಿಸಿ. ಹಾಗಾದರೆ ಈ ಮಾಹಿತಿಯಲ್ಲಿ ಗುರುವಾರ ಮಾಡಬಾರದ ಮೂರು ತಪ್ಪುಗಳ ಬಗ್ಗೆ ನಿಮಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಈ ಮಾಹಿತಿ ಇಷ್ಟ ಆಗಿದ್ದರೆ ಸ್ನೇಹಿತರಿಗೆ ತಿಳಿಸಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ