Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಯಾವುದೇ ಕಾರಣಕ್ಕೂ ಈ ಒಂದು ಮರದ ನೆರಳು ನಿಮ್ಮ ಮನೆಯ ಮೇಲೆ ಬೀಳಬಾರದು ಬಿದ್ದರೆ ನಿಮ್ಮ ಮನೆಗೆ ವೃಕ್ಷ ದೋಷಗಳು ಉಂಟಾಗುತ್ತವೆ ಹಾಗಾದ್ರೆ ಅದನ್ನು ಪರಿಹಾರ ಮಾಡಿಕೊಳ್ಳುವುದು ಹೇಗೆ ಗೊತ್ತಾ !!!

ಛಾಯಾ ದೋಷ ಈ ರೀತಿ ಕೇಳಿದ್ದೀರಾ ಹೌದು ಛಾಯಾ ದೋಷ ಅಂದರೆ ಇದು ಮನೆಗೆ ಉಂಟಾಗುವಂತಹ ಒಂದು ದೋಷ. ಇದರಿಂದ ಮನೆಯಲ್ಲಿ ನಾನಾ ತರಹದ ಸಮಸ್ಯೆಗಳು ಉಂಟಾಗುತ್ತದೆ. ಮನೆಯಲ್ಲಿ ಪದೇಪದೇ ಉಂಟಾಗುವ ಕಿರಿಕಿರಿ ಆಗಿರಲಿ ಅಥವಾ ಗಂಡ ಹೆಂಡತಿಯ ನಡುವಿನ ಕಲಹ ಇನ್ನೂ ಅನಾರೋಗ್ಯ ಸಮಸ್ಯೆಗಳು, ಹೀಗೆ ಇಂತಹ ಸಮಸ್ಯೆಗಳು ಮನೆಯಲ್ಲಿ ಪದೇಪದೇ ಎದುರಾಗುತ್ತಲೆ ಇರುತ್ತದೆ. ಇದಕ್ಕೆಲ್ಲ ಒಂದು ಕಾರಣ ಈ ದೋಷ ಕೂಡ ಇರಬಹುದು. ಛಾಯಾ ದೋಷಗಳಲ್ಲಿ ಕೂಡ ಕೆಲವೊಂದು ವಿಧವು ಇರುತ್ತದೆ, ಈ‌ ಮಾಹಿತಿಯಲ್ಲಿ ನಿಮಗೆ ಇದರ ಬಗ್ಗೆ ಸಾಮಾನ್ಯ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ನೀವು ಕೂಡ ತಿಳಿದು ನಿಮಗೂ ಕೂಡ ಇಂತಹ ದೋಷಗಳು ಕಾಡುತ್ತಿರಬಹುದ ಎಂದು ಪರೀಕ್ಷಿಸಿಕೊಳ್ಳಿ ಮತ್ತು ಅದಕ್ಕೆ ತಕ್ಕ ಪರಿಹಾರಗಳನ್ನು ಸಹ ಮಾಡಿಕೊಳ್ಳಿ.

ವೃಕ್ಷ ದೋಷ ಅಂದರೆ ಮೊದಲನೆಯದಾಗಿ ವೃಕ್ಷ ದೋಷ, ಇದರ ಅರ್ಥ ಏನು ಅಂದರೆ ಮನೆಯ ಸುತ್ತಮುತ್ತ ಯಾವುದಾದರೂ ಅಂದರೆ ಮನೆಯ ಬಳಿ ಯಾವುದೆ ಮರ ಇದ್ದರೂ ಕೂಡ, ಆ ಮರದ ನೆರಳು ಸುಮಾರು 1:00 ಗಳಿಂದ 3 ಗಂಟೆಯವರೆಗೂ ಆ ವೃಕ್ಷದ ಛಾಯೆ ಎಂದರೆ ನೆರಳು ಮನೆಯ ಮೇಲೆ ಬೀಳುತ್ತದೆ ಎಂದು ನೀವು ನೋಡಬೇಕು. ಮರದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ ಅದನ್ನು ವೃಕ್ಷ ಛಾಯಾ ದೋಷ ಅಂತ ಕರೆಯುತ್ತಾರೆ. ಇದರಿಂದ ಮನೆಯಲ್ಲಿ ಹಲವು ತರಹದ ಸಮಸ್ಯೆಗಳು ಉಂಟಾಗುತ್ತದೆ.

ಸುಮಾರು 1:00 ಗಳಿಂದ 3 ಗಂಟೆಯವರೆಗೆ ಮನೆಯ ಬಳಿ ಯಾವುದಾದರೂ ದೇವಸ್ಥಾನ ಇದ್ದರೆ, ಅದರ ಗೋಪುರದ ನೆರಳು ಮನೆಯ ಮೇಲೆ ಬೀಳುತ್ತಿದ್ದರೆ ಅದರಿಂದ ಕೂಡ ದೋಷ ಉಂಟಾಗುತ್ತದೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಹೋಗದೆ ಇರುವುದು ಅನಾರೋಗ್ಯ ಸಮಸ್ಯೆ ಉಂಟಾಗುವುದು ಇಂತಹ ಸಮಸ್ಯೆಗಳು ಮನೆಯಲ್ಲಿ ಉಂಟಾಗುತ್ತದೆ ಇದನ್ನು ನೀಡ ಛಾಯಾ ದೋಷ ಎಂದು ಕರೆಯುತ್ತಾರೆ.

ಇನ್ನು ಪಕ್ಕದ ಮನೆಯಿಂದ, ಮಧ್ಯಾಹ್ನದ ಸಮಯದಲ್ಲಿ ಸಂಪಿನಿಂದ ನೀರು ಹೊರ ಬರುತ್ತಿದ್ದಾರೆ, ಆ ನೀರು ನಿಮ್ಮ ಮನೆ ಬಳಿ ಬಂದು ನಿಂತರೆ. ಇದರಿಂದ ಕೂಡ ನಿಮ್ಮ ಮನೆಗೆ ದೋಷ ಉಂಟಾಗುತ್ತದೆ ಈ ರೀತಿ ದೋಷಕ್ಕೆ ಭವನ ದೋಷ ಎಂದು ಕರೆಯುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ನಿಮ್ಮ ಪಕ್ಕದ ಮನೆಯ ಛಾಯೆ ನಿಮ್ಮ ಮನೆಯ ಮೇಲೆ ಬೀಳುತ್ತಿದ್ದರು ಸಹ, ಇದರಿಂದ ಕೂಡ ದೋಷ ಉಂಟಾಗುತ್ತದೆ ಈ ರೀತಿ ಛಾಯಾ ದೋಷಕ್ಕೆ ಪರಿಹಾರ ಶಾಸ್ತ್ರದಲ್ಲಿ ಪರಿಹಾರವಿದೆ ಅದೇನೆಂದರೆ ಮನೆಯ ಮುಂದೆ 9 ಇಂಚಿನ ಅಗಲದ ಮತ್ತು 9 ಇಂಚಿನ ಉದ್ದದ ಸ್ವಸ್ತಿಕ್ ಮನೆಯ ಮುಂದೆ ಬಿಡಿಸಬೇಕು ಅಥವಾ ಹಾಕಬೇಕು, ಈ ರೀತಿ ಸ್ವಸ್ತಿಕ್ ಚಿಹ್ನೆ ಅನ್ನು ಮನೆಯ ಮುಂದೆ ಹಾಕುವುದರಿಂದ ಮನೆಗೆ ಯಾವ ದೋಷ ಆಗುವುದಿಲ್ಲ.

ನಿಮ್ಮ ಮನೆಯಲ್ಲಿಯೂ ಸಹ ಈ ರೀತಿ ದೋಷ ಕಾಡುತ್ತಿದ್ದರೆ ಸ್ವಯ ಸ್ವಸ್ತಿಕ್ ಚಿಹ್ನೆಯನ್ನು ಮನೆಯ ಮುಂದೆ ಹಾಕಿ. ಇದರಿಂದ ಯಾವ ದೋಷಗಳು ಕೂಡ‌ ಮನೆಗೆ ಯಾವ ಕೆಡುಕನ್ನು ಮಾಡುವುದಿಲ್ಲ, ಮನೆಗೆ ಎಲ್ಲವೂ ಕೂಡ ಒಳಿತಾಗುತ್ತದೆ. ಈ ಸುಲಭ ಪರಿಹಾರವನ್ನು ಮಾಡಿ ಮನೆಯಲ್ಲಿ ಉಂಟಾಗುವ ನಾನಾತರಹದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ