ಯಾವುದೇ ಕಾಯಿಲೆ ಬರಬಾರದು ಹಾಗು ನಿಮ್ಮ ದೇಹ ಸದಾ ಕಾಲ ಆರೋಗ್ಯವಾಗಿ ಇರಬೇಕಾದರೆ ಇದನ್ನ ದಿನನಿತ್ಯ ಕುಡಿಯಿರಿ

420

ಪೂರ್ವಿಕರ ಕಾಲದಿಂದಲೂ ಕೂಡ ನೀವು ಗಮನಿಸಿರಬಹುದು ಹಿರಿತಲೆಗಳು ಅಂತ ಏನು ಹೇಳುತ್ತಾರೋ ಅವರುಗಳು ಎಷ್ಟೆಲ್ಲ ಗಟ್ಟಿಮುಟ್ಟಾಗಿರುತ್ತಾರೆ ಅನ್ನೋದನ್ನ , ನೀವು ಕೂಡ ಇಂದಿನ ದಿನಗಳಲ್ಲಿ ನಿಮ್ಮ ಮನೆಯಲ್ಲಿ ಅಜ್ಜ ಅಥವಾ ಅಜ್ಜಿ ಯಂದಿರು ಇತರೆ ನೋಡಿ ಅವರಿಗೆ ಅಷ್ಟು ಸುಲಭವಾಗಿ ಕಾಯಿಲೆಗಳು ಹತ್ತಿರ ಸುಳಿಯುವುದಿಲ್ಲ .

ಇದಕ್ಕೆ ಕಾರಣವೇನು ಅಂದರೆ ಅವರು ಅಂದಿನ ದಿನಗಳಲ್ಲಿ ತಿನ್ನುತ್ತಿದ್ದ ಆಹಾರ ಮತ್ತು ಅವರು ಪಾಲಿಸುತ್ತಿದ್ದ ಆ ಒಂದು ಆಹಾರದ ಕ್ರಮ .
ಇಂದಿನ ದಿನಗಳಲ್ಲಿ ಜನರು ರುಚಿಕರವಾದ ಆಹಾರವನ್ನು ಹುಡುಕುತ್ತ ಆಚೆ ಸಿಗುವಂತಹ ಜಂಕ್ ಫುಡ್ ಗಳನ್ನು ಅಥವಾ ಟೆಸ್ಟಿಂಗ್ ಸಾಲ್ಟ್ ಹಾಕಿ ಮಾಡಿರುವಂತಹ ಫಾಸ್ಟ್ ಫುಡ್ ನ್ನು ತಿನ್ನಲು ಇಷ್ಟಪಡುತ್ತಾರೆ .

ಆದರೆ ಈ ಎಲ್ಲಾ ಕೆಮಿಕಲ್ ಬಳಸಿ ಮಾಡಿರುವಂತಹ ಪದಾರ್ಥಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಎಷ್ಟೆಲ್ಲ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ಮಾತ್ರ ಯಾರೂ ಕೂಡ ಯೋಚಿಸಿರುವುದಿಲ್ಲ .

ನಿಮಗೆ ತಿಳಿದಿರಬಹುದು ಮನೆಯಲ್ಲಿ ಮಾಡುವಂತಹ ರಾಗಿ ಮುದ್ದೆಯನ್ನು ಈ ಒಂದು ಆಹಾರವನ್ನು ತಿನ್ನುವುದರಿಂದ ಎಷ್ಟೆಲ್ಲ ಆರೋಪಿ ಕರ ಪ್ರಯೋಜನವಿದೆ ಎಂಬುದನ್ನು ಮನೆಯಲ್ಲಿ ಪೋಷಕರು ಹೇಳುತ್ತಲೇ ಇರುತ್ತಾರೆ ಆದರೆ ಅದನ್ನು ಮಕ್ಕಳು ಮಾತ್ರ ಗಮನಿಸುವುದಿಲ್ಲ .

ರಾಗಿಯಿಂದ ಮಾಡಿರುವಂತಹ ಪದಾರ್ಥಗಳನ್ನು ತಿನ್ನುವುದರಿಂದ ಆರೋಗ್ಯ ತುಂಬಾನೇ ಚೆನ್ನಾಗಿರುತ್ತದೆ ಇದರ ಜೊತೆಗೆ ದೇಹವು ಕೂಡ ತಂಪಾಗಿರುತ್ತದೆ , ಯಾರು ರಾಗಿಯಿಂದ ಮಾಡಿದಂತಹ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಬರುತ್ತಾರೋ ಅವರ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯೇ ಆಗುತ್ತದೆ .

ರಾಗಿಯಿಂದ ಮಾಡುವಂತಹ ಮುದ್ದೆಯ ಬದಲು ಇಂದಿನ ದಿನದ ಮಕ್ಕಳು ರಾಗಿಯಿಂದ ಮಾಡಿದಂತಹ ಮಾಲ್ಟ್ ಅಂತ ಏನು ಹೇಳುತ್ತಾರೋ ಅದನ್ನು ಮಾಡಿ ಕುಡಿಯುವುದರಿಂದ ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಮತ್ತು ಒಂದು ರಾಗಿ ಮಾರ್ಟ್ ಮಾಡುವುದಕ್ಕೆ ಹೆಚ್ಚು ಸಮಯ ಕೂಡ ಬೇಕಾಗಿಲ್ಲ ಸುಲಭವಾಗಿ ಸ್ವಲ್ಪ ಸಮಯದಲ್ಲಿಯೇ ಈ ಒಂದು ರಾಗಿ ಮಾಲ್ಟ್ ಅನ್ನು ತಯಾರಿಸಿ ಕುಡಿಯಬಹುದು ಇದು ಬೆಳಗ್ಗೆ ಕುಡಿಯುವುದರಿಂದ ದಿನಕ್ಕೆ ಬೇಕಾಗಿರುವಷ್ಟು ಪೌಷ್ಟಿಕಾಂಶವನ್ನು ಈ ರಾಗಿ ನೀಡುತ್ತದೆ .

ರಾಗಿ ಮಾಲ್ಟ್ ಅಂದರೆ ಕೆಲವರು ಮುಖ ಸಣ್ಣಗೆ ಮಾಡಿಕೊಳ್ಳುತ್ತಾರೆ ಆದರೆ ನಾವು ಹೇಳುವ ಹಾಗೆ ಈ ರೀತಿ ರಾಗಿ ಮಾಲ್ಟನ್ನು ಮಾಡಿ ಕುಡಿಯಿರಿ ನಿಜಕ್ಕೂ ಒಂದು ಬೇರೆ ರೀತಿಯ ರುಚಿ ಸಿಗುವುದರ ಜೊತೆಗೆ ನಿಮಗೆ ರಾಗಿ ಮಾಲ್ಟ್ ಕುಡಿಯಲು ಬೇಸರವಾಗುವುದಿಲ್ಲ .
ಇದನ್ನು ಮಾಡುವ ವಿಧಾನವೂ ಮೊದಲಿಗೆ ಒಂದುವರೆ ಅಥವಾ ಎರಡು ಗ್ಲಾಸ್ ನೀರನ್ನು ಕುದಿಸಿ ನಂತರ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ನೀವು ನೀರನ್ನು ತೆಗೆದುಕೊಂಡಂತಹ ಗ್ಲಾಸ್ನಲ್ಲಿ ಅರ್ಧ ಗ್ಲಾಸ್ ರಾಗಿ ಹಿಟ್ಟನ್ನು ತೆಗೆದುಕೊಂಡು ಆ ನೀರಿನಲ್ಲಿ ಕಲಿಸಬೇಕು ನಂತರ ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕಲಕುತ್ತಾ ಇರಬೇಕು .

ಇದಿಷ್ಟು ಮಾಡಿದ ನಂತರ ರಾಗಿ ಮಾಲ್ಟ್ ರೆಡಿಯಾಗಿರುತ್ತದೆ , ಇದನ್ನು ಕುಡಿಯಲು ಎಲ್ಲರಿಗೂ ಸಾಮಾನ್ಯವಾಗಿ ಬೇಸರವಾಗುತ್ತದೆ ಯಾಕೆಂದರೆ ರುಚಿಯನ್ನು ಹುಡುಕುವ ನಾಲಿಗೆ ಸಪ್ಪೆ ಮಾಲ್ಟನ್ನು ಕುಡಿಯಬೇಕೆಂದರೆ ಬೇಸರವಾಗುತ್ತದೆ . ಇದೀಗ ರೆಡಿಯಾದಂತಹ ರಾಗಿ ಮಾಲ್ಟ್ ಅನ್ನು ೩ ಗ್ಲಾಸ್ ಗೆ ಹಾಕಿಕೊಳ್ಳಿ ೧ ಗ್ಲಾಸ್ಗೆ ಪೂರ್ತಿಯಾಗಿ ನಂತರ ಇನ್ನ ೨ ಉಳಿದ ಗ್ಲಾಸ್ಗೆ ಮುಕ್ಕಾಲು ಭಾಗ ಹಾಕಿಕೊಂಡು , ನಂತರ ಅದರಲ್ಲಿ ಒಂದು ಗ್ಲಾಸ್ಗೆ ಹಾಲು ಮತ್ತು ಜೇನು ತುಪ್ಪವನ್ನು ಬೆರೆಸಬೇಕು .

ಮತ್ತೊಂದು ಮುಕ್ಕಾಲು ಗ್ಲಾಸ್ಗೆ ಮೊಸರನ್ನು ಹಾಕಬೇಕು ಇನ್ನು ಉಳಿದ ಒಂದು ಗ್ಲಾಸ್ ರಾಗಿ ಮಾಲ್ಟ್ ಗೆ ಪೆಪ್ಪರ್ ಪೌಡರನ್ನು ಹಾಕಿ ಚಿಟಿಕೆ ಉಪ್ಪನ್ನು ಬೆರೆಸಿ ಕುಡಿಯುವುದರಿಂದ ನಿಜಕ್ಕೂ ರುಚಿ ಚೆನ್ನಾಗಿರುತ್ತದೆ .

LEAVE A REPLY

Please enter your comment!
Please enter your name here