ಯಾವಾಗಾದ್ರೂ ನೀವು ಶ್ರೀಕೃಷ್ಣ ಪರಮಾತ್ಮ ರಾಧೆಯನ್ನು ಪ್ರೀತಿಸಿದರೂ ಮದುವೆ ಆಗಲಿಲ್ಲ ಯಾಕೆ ಎನ್ನುವುದನ್ನು ಯಾವಾಗಾದ್ರೂ ಯೋಚಿಸಿದ್ದೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ದ್ವಾರಕಾ ರಾಜನಾಗಿದ್ದ ಕೃಷ್ಣನು ಯಾಕೆ ರಾಧೆಯನ್ನು ಮದುವೆಯಾಗಲಿಲ್ಲ ರುಕ್ಮಿಣಿಯನ್ನು ವರಿಸಿದ್ದು ಯಾಕೆ. ಇದೊಂದು ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಕೂಡ ಕಾಡುತ್ತಾ ಇರುತ್ತದೆ ಹಾಗಾದರೆ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.ಯಾಕೆ ಕೃಷ್ಣನು ರಾಧೆಯನ್ನು ಬಿಟ್ಟು ರುಕ್ಮಿಣಿಯನ್ನು ವರಿಸಿದರು ಈ ಹಿಂದೆ ಏನಿದೆ ಪೌರಾಣಿಕ ಕಥೆ ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಕೊನೆಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.ಶ್ರೀವಿಷ್ಣು ಭೂಮಿ ಮೇಲೆ ಪದೇ ಪದೇ ಅವತಾರಗಳನ್ನು ಎತ್ತಿ ಅನೇಕ ಪವಾಡಗಳನ್ನು ಅಚ್ಚರಿಯನ್ನು ಸೃಷ್ಟಿಸಿದ್ದಾರೆ ಹಾಗೆ ಶ್ರೀ ವಿಷ್ಣುವಿನ ಪತ್ನಿಯಾದ ಲಕ್ಷ್ಮೀಯು ಕೂಡ ಭೂಮಿ ಮೇಲೆ ಅವತಾರವನ್ನೇತ್ತಿ ತನ್ನ ಪತಿಯ ಧರ್ಮ ಕಾರ್ಯಗಳಲ್ಲಿ ಸಹಾಯ ಮಾಡಿದ್ದಾರೆ.

ಹೀಗೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣನ ಅವತಾರವನ್ನು ಎತ್ತಿ ಭೂಮಿಗಿಳಿದ ವಿಷ್ಣು ಅನೇಕ ಪವಾಡಗಳನ್ನೇ ಸೃಷ್ಟಿ ಮಾಡಿದ್ದಾರೆ, ಹೀಗೆ ಕೃಷ್ಣನು ಭೂಮಿ ಮೇಲೆ ಅವತಾರವನ್ನು ಎತ್ತಿ ಬಂದಾಗ ಲಕ್ಷ್ಮೀದೇವಿಯು ಕೂಡ ವಿದರ್ಭ ದೇಶದ ವಿಶ್ಮಕ ರಾಜನ ಮಗಳಾಗಿ ಹುಟ್ಟಿ ಬರುತ್ತಾರೆ.ಈ ವಿಚಾರವನ್ನು ತಿಳಿದ ವಿಶ್ಮಕ ರಾಜನು ಬಹಳ ಸಂತೋಷದಿಂದ ಇದ್ದರು. ರಾಜನು ತನ್ನ ಮಗಳಿಗೆ ರುಕ್ಮಿಣಿ ಎಂಬ ನಾಮಕರಣವನ್ನು ಮಾಡಿದ್ದರು. ಈ ವಿಚಾರವು ರಾಕ್ಷಸರಿಗೆ ತಿಳಿದು ಪೂತಾನಿ ಎಂಬ ರಾಕ್ಷಸಿಯ ಲಕ್ಷ್ಮಿ ಅವತಾರದಲ್ಲಿ ಇರುವ ರುಕ್ಮಿಣಿಯನ್ನು ಕೊಳ್ಳುವುದಕ್ಕೆ ಯತ್ನಿಸಿ ಒಮ್ಮೆ ಅರಮನೆಗೆ ವೇಷ ಧರಿಸಿ ಬರುತ್ತಾಳೆ.ಹಾಲು ಕುಡಿಸಲು ಪ್ರಯತ್ನ ಮಾಡಿದ ರಾಕ್ಷಸಿ ಕೊನೆಗೆ ಪ್ರಯತ್ನ ಮಾಡಿ ಸಾಕಾಗಿ ಬಿಡುತ್ತಾಳೆ, ಕೊನೆಗೆ ಮಗು ಅಳುತ್ತಿರುವುದನ್ನು ಕೇಳಿಸಿ ಅರಮನೆಯಲ್ಲಿರುವ ಸಖಿಯರು ಓಡಿ ಬರುತ್ತಾರೆ.

ಆಗ ಪೂತಾನಿ ರುಕ್ಮಿಣಿಯನ್ನು ಎತ್ತುಕೊಂಡು ಹೊಗುತ್ತಾಳೆ, ಅರಮನೆಯ ಸೈನಿಕರು ಎಷ್ಟೇ ರುಕ್ಮಿಣಿಯನ್ನು ಕಾಪಾಡಲು ಯತ್ನಿಸಿದರೂ ಅದು ಆಗುವುದಿಲ್ಲ ಕೊನೆಗೆ ರುಕ್ಮಿಣಿಯನ್ನು ಪಾರು ಮಾಡುವ ಕೆಲಸವನ್ನು ಕೈಬಿಡುತ್ತಾರೆ.ಕೊನೆಗೆ ರುಕ್ಮಿಣಿಯ ತನ್ನನ್ನು ಕಾಪಾಡಿಕೊಳ್ಳುವುದಕ್ಕಾಗಿ ತನ್ನ ತೂಕವನ್ನು ಹೆಚ್ಚು ಮಾಡಿಕೊಳ್ಳುತ್ತಾಳೆ ಎಷ್ಟು ಅಂದರೆ ಆ ರಾಕ್ಷಸಿ ಮಗುವನ್ನು ಎತ್ತಿಕೊಳ್ಳಲು ಸಾಧ್ಯವಾಗಬಾರದು ಅಷ್ಟು ಹೆಚ್ಚಿಸಿಕೊಳ್ಳುತ್ತಾರೆ.ತೂಕ ಹೆಚ್ಚಾದ ಮಗುವನ್ನು ರಾಕ್ಷಸಿ ಒಂದು ಪ್ರದೇಶದಲ್ಲಿರುವ ಕೆರೆಯಲ್ಲಿರುವ ಕಮಲದ ಮೇಲೆ ಬೀಳಿಸುತ್ತಾಳೆ ರಾಕ್ಷಸಿ ನಂತರ ಮಥುರಾದ ಬರ್ಸಾನಾ ಎಂಬ ದಂಪತಿಗಳು ಮಗುವನ್ನು ಕಂಡು ಆ ಮಗುವನ್ನು ತೆಗೆದುಕೊಂಡು ಹೋಗಿ ಹಾಕಿಕೊಳ್ಳುತ್ತಾರೆ ಅದಕ್ಕೆ ರಾಧಾ ಎಂಬ ಹೆಸರನ್ನು ಕೂಡ ಇಡುತ್ತಾರೆ. ಅಂದಿನಿಂದ ರುಕ್ಮಿಣಿಯೂ ರಾಧೆಯಾಗಿ ತನ್ನ ಬಾಲ್ಯವನ್ನು ಕಳೆಯುತ್ತಾಳೆ.

ರುಕ್ಮಿಣಿಯೂ ರಾಧೆಯಾದ ನಂತರ ದೊಡ್ಡವಳಾಗಿ ಕೃಷ್ಣನನ್ನು ಪ್ರೇಮಿಸುತ್ತಾಳೆ, ಮಥುರಾದಲ್ಲಿರುವ ರಾಧೆಯೇ ರುಕ್ಮಿಣಿ ಎಂಬ ಸತ್ಯವನ್ನು ತಿಳಿದ ನಂತರ ವಿದರ್ಭ ದೇಶದ ವಿಶ್ವಕ ರಾಜನು ತನ್ನ ಮಗಳನ್ನು ಕರೆದುಕೊಂಡು ಅರಮನೆಗೆ ಹೋಗುತ್ತಾನೆತನ್ನ ಮಗಳ ಪ್ರೇಮದ ವಿಚಾರವನ್ನು ತಿಳಿದರೂ ವಿಶ್ವಕ ರಾಜನು ಕೃಷ್ಣನಿಗೆ ತನ್ನ ಮಗಳನ್ನು ಮದುವೆ ಮಾಡಿ ಕೊಡಲಿಲ್ಲ ಯಾಕೆ ಅಂದರೆ ದ್ವಾರಕ್ಕೂ ವಿಶ್ವಕ ರಾಜನ ಶತ್ರು ದೇಶವಾಗಿತ್ತು ಆದ ಕಾರಣ ಈ ರಾಜನು ಕೃಷ್ಣನಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸುತ್ತಾನೆ.ಆದರೆ ರುಕ್ಮಿಣಿಯನ್ನು ಎತ್ತೊಯ್ದು ಕೃಷ್ಣನೇ ಮದುವೆಯಾಗುತ್ತಾನೆ. ಇಲ್ಲಿ ರುಕ್ಮಿಣಿಯೆ ರಾಧೆ ರಾಧೆಯೆ ರುಕ್ಮಿಣಿ. ಎಲ್ಲಿಯವರೆಗೂ ರುಕ್ಮಿಣಿಯ ಹೆಸರಿರುತ್ತದೆಯೊ ಅಲ್ಲಿ ರಾಧೆಯ ಉಲ್ಲೇಖ ವಿರುವುದಿಲ್ಲ ಎಲ್ಲಿ ರಾಧೆಯ ಉಲ್ಲೇಖವಿರುತ್ತದೆ.ಅಲ್ಲಿ ರುಕ್ಮಿಣಿಯ ಉಲ್ಲೇಖವಿರುವುದಿಲ್ಲ. ಇದು ಶ್ರೀಕೃಷ್ಣನು ರಾಧೆಯನ್ನು ವರಿಸದೇ ಇರುವುದಕ್ಕೆ ಕಾರಣ. ಹಾಗಾದರೆ ಈ ಕಾರಣವೂ ಸರಿಯೋ ತಪ್ಪೋ ಎಂಬುದನ್ನು ನೀವು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *