ನೀವು ತಿನ್ನುವ ಆಹಾರ ಅದರಲ್ಲಿ ನೀವು ಮಾಡುವ ಅನ್ನ ಕೆಂಪಾಗುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳು ಪ್ರಭಾವ ಇದೆ.
ಹಾಯ್ ಸ್ನೇಹಿತರೆ ಮನೆಯಲ್ಲಿ ದುಷ್ಟಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳು ಇದ್ದರೆ ಏನೆಲ್ಲ ತೊಂದರೆ ಆಗುತ್ತದೆ ಎಂದು ಈ ಮಾಹಿತಿಯಲ್ಲಿ ತಿಳಿದುಕೊಳ್ಳಿ. ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ನೀವು ಮಾಡುವ ಅನ್ನ ಕೆಂಪಾಗಿ ಕಾಣುತ್ತಿದ್ದರೆ ಇದು ನಿಮ್ಮ ಮನೆಯಲ್ಲಿ ವಾಮಾಚಾರ ಆಗಿದೆ ದುಷ್ಟಶಕ್ತಿಗಳ ಪ್ರಭಾವವಿದೆ ಎಂದು ಮುನ್ಸೂಚನೆ ನೀಡುತ್ತದೆ. ದುಷ್ಟಶಕ್ತಿಗಳು ನಿಮ್ಮ ಮನೆಯಲ್ಲಿ ಇದ್ದರೆ ನೀವು ಆರೋಗ್ಯವಂತರಾಗಿರಲು ಸಾಧ್ಯವಿಲ್ಲ. ಇನ್ನು ನಿಮ್ಮ ಮನೆಗೆ ಯಾರಾದರೂ ವಾಮಾಚಾರ ಮಾಡಿಸಿದ್ದಾರೆ ಮನೆಯಲ್ಲಿ ವ್ಯಕ್ತಿಗಳು ಊಟಮಾಡುವಾಗ ಜಗಳಗಳಾಗುತ್ತವೆ
ನಂತರ ಹಿರಿಯ ನಾಗರಿಕರು ಅನಾರೋಗ್ಯದಿಂದ ಬಳಲುತ್ತಾರೆ. ವಾಮಾಚಾರ ಆದವರು ಮನೆಯಲ್ಲಿ ಇರುವವರನ್ನು ನಂಬುವುದಿಲ್ಲ. ಹಾಗೂ ಅವರು ಊಟ ಮಾಡಲು ಹೋದಾಗ ಅವರಿಗೆ ಊಟ ಸೇರುವುದಿಲ್ಲ. ಅಂದರೆ ಸಾಕ್ಷಾತ್ ಅನ್ನಪೂರ್ಣೆ ಸಹ ಇವರ ಹತ್ತಿರ ಇರಲು ಬಯಸುವುದಿಲ್ಲ ಎಂದರ್ಥ. ಹಾಗಾದರೆ ಈ ವಾಮಾಚಾರವನ್ನು ಯಾರು ಮಾಡುತ್ತಾರೆ ಎಂದು ತಿಳಿಯೋಣ. ಸ್ನೇಹಿತರೆ ಇಂತಹ ಕಾರ್ಯಗಳನ್ನು ಕೆಟ್ಟ ಕಾರ್ಯಗಳನ್ನು ಬೇರೆ ಯಾರೂ ಮಾಡುವುದಿಲ್ಲ ನಿಮ್ಮ ಜೊತೆ ಇರುವವರು ಅಥವಾ ನಿಮ್ಮ ಹಿತಶತ್ರುಗಳು ಇಂತಹದಕ್ಕೆ ಮುಂದಾಗುತ್ತಾರೆ. ಒಳ್ಳೆಯದನ್ನು ಮಾಡಲು ಆಗದಿದ್ದರೂ ಪರವಾಗಿಲ್ಲ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವ ನಮ್ಮಲ್ಲಿ ಇರಬಾರದು. ನಮ್ಮ ಜೊತೆ ಇದ್ದೆ ನಮಗೆ ಬೆನ್ನಿಗೆ ಚೂರಿ ಹಾಕುವ ಮನುಷ್ಯರಿದ್ದಾರೆ. ಮುಂದೆ ಹೊಗಳಿ ಹಿಂದೆ ತೆಗಳುವವರಿಗಿಂತ ನಮ್ಮ ತಪ್ಪನ್ನು ತಿದ್ದುವವರು ನಿಜವಾದ ಸ್ನೇಹಿತರು.
ಹಾಗಾದರೆ ಈ ವಾಮಾಚಾರವನ್ನು ನೀವು ಹೇಗೆ ತಡೆಯಬೇಕು ಎಂಬುದನ್ನು ಹೇಳುತ್ತೇನೆ. ನೀವು ಯಾರದಾದರೂ ಮನೆಗೆ ಹೋದಾಗ ಅಥವಾ ನಿಮ್ಮ ಹಿತಶತ್ರುಗಳ ಮನೆಗೆ ಹೋದಾಗ ಊಟಕ್ಕೆ ನೀಡಿದ ಆಹಾರವನ್ನು ಪೂರ್ತಿಯಾಗಿ ತಿನ್ನಬೇಕು ಒಂದು ವೇಳೆ ಅವರ ಮನೆಯಲ್ಲಿ ತಲೆ ಬಾಚಿಕೊಂಡರೆ ಒಂದು ಕೂದಲೆಳೆಯನ್ನು ಸಹ ಅವರ ಮನೆಯಲ್ಲಿ ಬಿಡಬಾರದು. ಈ ರೀತಿಯಾಗಿ ಮಾಡುವುದರಿಂದ ಅವರಿಗೆ ವಾಮಾಚಾರ ಮಾಡುವುದು ಕಷ್ಟ ಆಗುತ್ತದೆ. ಬೇರೆಯವರ ಮನೆಗೆ ಹೋದಾಗ ನಾವು ನಮ್ಮ ಜಾಗೃತಿಯಿಂದ ಇರಬೇಕು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಹಾಗಾದರೆ ಮನೆಯಲ್ಲಿ ಕೆಂಪು ಅನ್ನ ಆದರೆ ನೀವು ತಕ್ಷಣ ನಿಮ್ಮ ಮನೆಯ ಹತ್ತಿರ ಇರುವ ಯಾರಾದರೂ ಗುರು ಹಿರಿಯರ ಸಲಹೆ ತೆಗೆದುಕೊಳ್ಳಬೇಕು. ಹಾಗೂ ವಾಮಾಚಾರವನ್ನು ದೂರ ಮಾಡಿಕೊಳ್ಳುವ ವಿಧಾನ ಹಾಗೂ ತಂತ್ರಗಳನ್ನು ನೀವು ಅಳವಡಿಸಿಕೊಳ್ಳಬೇಕು.
ಮನೆಯಲ್ಲಿ ದುಷ್ಟ ಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿದ್ದರೆ ಅನ್ನ ಕೆಂಪಾಗಲು ಪ್ರಾರಂಭವಾಗುತ್ತದೆ. ಆದಷ್ಟು ನೀವು ಅಮಾವಾಸೆ ಮಾಡುವಾಗ ಮನೆಗೆ ನಿಂಬೆಹಣ್ಣಿನಿಂದ ದೃಷ್ಟಿ ತೆಗೆಯಬೇಕು. ವಾಮಾಚಾರ ಆದ ವ್ಯಕ್ತಿ ಮನೆಯಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸುತ್ತಾನೆ ಸೇರುವುದಿಲ್ಲ ಆರೋಗ್ಯವಂತರಾಗಿರುವುದಿಲ್ಲ. ಅವರು ಎಷ್ಟೇ ಹಾಸ್ಪಿಟಲ್ಗೆ ಹೋಗಿ ಬಂದರು ಎಲ್ಲಾ ನಾರ್ಮಲ್ ಇದ್ದರೂ ಸಹ ಅವರಿಗೆ ತೊಂದರೆಗಳು ಕಾಡುತ್ತಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿರುವವರು ಅವರನ್ನು ಅರ್ಥಮಾಡಿಕೊಂಡು ಮೊದಲು ಅವರು ವಾಮಾಚಾರದಿಂದ ಹೊರಗೆ ಬರುವಂತೆ ಮಾಡಬೇಕು ಇಲ್ಲವಾದರೆ ಅವರು ಮ’ರಣ ಹೊಂದಬಹುದು.
ನೀವು ಕೂಡ ಬೇರೆಯವರಿಗೆ ವಾಮಾಚಾರ ಮಾಡಿಸುವುದನ್ನು ಕಲಿಯಬೇಡಿ ಇದು ಯಾರಿಗೂ ಒಳ್ಳೆಯದಲ್ಲ. ಸ್ನೇಹಿತರೆ ಇಂತಹ ಮುನ್ಸೂಚನೆಗಳು ನಿಮಗೆ ತಿಳಿದಾಗ ತಕ್ಷಣ ಪರಿಹಾರ ಕಂಡುಕೊಳ್ಳಿ. ಈಗಿನ ಯುಗದಲ್ಲಿ ಎಲ್ಲದಕ್ಕೂ ಪರಿಹಾರಗಳಿವೆ ಎಲ್ಲ ಜ್ಯೋತಿಷ್ಯರು ಇಂತಹ ತೊಂದರೆಗಳಿಗೆ ಪರಿಹಾರ ನೀಡುತ್ತಾರೆ. ಸ್ನೇಹಿತರೆ ಹಾಗಿದ್ದರೆ ಈ ಒಂದು ಮುಖ್ಯವಾದ ವಿಚಾರ ನಿಮಗೆ ಇಷ್ಟ ಆಗಿದೆ ಎಂದು ನಾನು ಭಾವಿಸುತ್ತೇನೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ .ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ