ಜತ್ರನಾರೇಸ್ತು ಪೂಜ್ಯತೆ, ರಮಂತೆ ತತ್ವ ದೇವತಾಃ, ಒಂದು ಮಾತಿನ ಅರ್ಥ ಏನೆಂದರೆ ಎಲ್ಲಿ ನಾರಿಯನ್ನು ಪೂಜಿಸುತ್ತಾರೋ ಎಲ್ಲಿ ನಾರಿಯನ್ನು ಪೂಜನೀಯ ಭಾವದಿಂದ ಕಾಣುತ್ತಾರೆ ಎಲ್ಲಿ ನಾರಿಗೆ ಗೌರವವನ್ನು ನೀಡುತ್ತಾರೊ ಅಲ್ಲಿ ದೇವರುಗಳ ನೆಲೆ ಇರುತ್ತದೆ
ಹಾಗೆ ನಮ್ಮ ಸಂಪ್ರದಾಯದಲ್ಲಿ ನಮ್ಮ ಹಿಂದೂ ಸಂಪ್ರದಾಯದಲ್ಲಿ ನಾವು ಹೆಣ್ಣಿಗೆ ಪೂಜನೀಯ ಭಾವದಿಂದ ಆಕೆಯನ್ನು ಗೌರವಿಸುತ್ತೇವೆ ಹೆಣ್ಣನ್ನು ಪೂಜಿಸುವುದರಿಂದ ನಮಗೆ ದೇವರ ಸಕಲ ಆಶೀರ್ವಾದವೂ ಕೂಡ ದೊರೆಯುತ್ತದೆ
ಮತ್ತು ನಮ್ಮ ಜೀವನದಲ್ಲಿ ನಾವು ಉನ್ನತ ಸ್ಥಾನಕ್ಕೆ ಏರಬೇಕಾದರೆ ನಾವು ಮೊದಲನೆಯದಾಗಿ ಹೆಣ್ಣನ್ನು ಗೌರವಿಸಬೇಕು ಹೆಣ್ಣನ್ನು ಸಂತೋಷದಿಂದ ನೋಡಿಕೊಳ್ಳಬೇಕು.
ಹೆಣ್ಣು ಮಕ್ಕಳು, ಹೌದು ಹೆಣ್ಣು ಮಕ್ಕಳು ನಮ್ಮ ತಾಯಿಯಾಗಿರುತ್ತಾಳೆ, ತಂಗಿ ಅಕ್ಕ ಹೆಂಡತಿಯ ಸ್ಥಾನವನ್ನು ಕೂಡಾ ತುಂಬುವ ಹೆಣ್ಣು, ನಮ್ಮ ಜೀವನದಲ್ಲಿ ಪರಿಪೂರ್ಣತೆಯನ್ನು ನೀಡುವುದೇ ಈ ಹೆಣ್ಣೇ ಆಗಿರುತ್ತಾಳೆ
ಈಕೆಗೆ ಯಾವುದೇ ಹಣದ ಆಸೆ ಇರುವುದಿಲ್ಲ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುವ ಈ ಹೆಣ್ಣಿಗೆ ಆಕೆ ತಾಯಿಯಾಗಿರಲಿ ಸಹೋದರಿಯಾಗಿರಲಿ ಅಥವಾ ಹೆಂಡತಿಯ ಆಗಿರಲಿ ಆಕೆಯನ್ನು ದುಡ್ಡಿನಿಂದ ಖುಷಿ ಪಡಿಸುವ ಮನೋಭಾವ ನಿಮ್ಮದು ಇದ್ದರೆ ಅದು ತಪ್ಪು.
ಯಾಕೆ ಅಂತೀರಾ ನೀವು ಕೋಟಿ ಹಣವನ್ನು ಖರ್ಚು ಮಾಡಿ ನಿಮ್ಮ ತಾಯಿಗೆ ಅಥವಾ ಸಹೋದರಿಗೆ ಅಥವಾ ಹೆಂಡತಿಗೆ ಉಡುಗೊರೆಯನ್ನು ನೀಡಬಹುದು ಆದರೆ ಆ ಒಂದು ಖುಷಿ ಕ್ಷಣಿಕ ಮಾತ್ರ
ಆದರೆ ನಿಮ್ಮ ಅಮೂಲ್ಯ ವಾದ ಸಮಯವನ್ನು ಆಕೆ ನಿಮ್ಮಿಂದ ಅಪೇಕ್ಷೆ ಮಾಡುತ್ತಿರುತ್ತಾಳೆ ಒಂದು ಸಮಯವನ್ನು ನೀವು ನಮ್ಮವರಿಗಾಗಿ ನೀಡಿ ಆಗ ನಿಮ್ಮವರು ಅದಕ್ಕಿಂತ ಹೆಚ್ಚು ಸಮಯವನ್ನು ನಿಮಗೆ ನೀಡುತ್ತಾರೆ ಹೆಚ್ಚು ಪ್ರೀತಿ ಅನ್ನು ನಿಮಗಾಗಿ ನೀಡುತ್ತಾರೆ.
ನೀವು ಉಡುಗೊರೆಯನ್ನು ನೀಡಿದರೆ ಅದು ಮನೆಯಲ್ಲಿ ಶೋಕಿಗಾಗಿ ಶೋಕೇಸ್ ಸೇರಿರುತ್ತದೆ ಆದರೆ ನಿಮ್ಮ ಸಮಯವನ್ನು ನೀಡಿದರೆ ನಿಮ್ಮ ಪ್ರೀತಿಯನ್ನು ನೀಡಿದರೆ ಅವರು ಆ ಒಂದು ಸಮಯವನ್ನು ನಿಮ್ಮ ಜೊತೆ ಕಳೆದಂತಹ ಸನ್ನಿವೇಶಗಳನ್ನು ಸಮಯವನ್ನ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ.
ಹಾಗಾಗಿ ನೀವು ನಿಮ್ಮವರನ್ನು ಉಡುಗೊರೆ ಕೊಟ್ಟ ಖುಷಿ ಪಡಿಸಿದರೆ ಸಾಲದು ನಿಮ್ಮ ಸಮಯವನ್ನು ನೀಡಬೇಕು ನಿಮ್ಮ ಪ್ರೀತಿಯನ್ನು ನೀಡಬೇಕು ಆಗಲೇ ನಿಮ್ಮವರು ನೆಮ್ಮದಿಯಿಂದ ಇರುತ್ತಾರೆ ಖುಷಿಯಿಂದ ಇರುತ್ತಾರೆ, ಎಷ್ಟೇ ಕಷ್ಟ ಬಂದರೂ ಕೂಡ ಆ ಒಂದು ಕಷ್ಟವನ್ನು ಕೂದಲಿನ ಎಳೆಯನ್ನು ತುಂಡು ಮಾಡಿದಷ್ಟೇ ಸುಲಭ ಆಗಿರುತ್ತದೆ ಆ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದು.
ಆದ ಕಾರಣ ನಮ್ಮವರಿಗಾಗಿ ಅಂದರೆ ನಿಮ್ಮ ತಾಯಿಗಾಗಿ ಸಹೋದರಿಗಾಗಿ ಅಥವಾ ಹೆಂಡತಿಗಾಗಿ ನಿಮ್ಮ ಸಮಯವನ್ನು ನೀಡಿ ಸಾಕು ನಿಮ್ಮ ಪ್ರೀತಿಯನ್ನು ನೀಡಿ ಸಾಕು, ಯಾಕೆ ನಿಮ್ಮ ಜೀವನದಲ್ಲಿ ನೀವು ಉನ್ನತ ಸ್ಥಾನಕ್ಕೆ ಇರುವುದಿಲ್ಲ ಅನ್ನೋದನ್ನ ನೀವೇ ಕಾಣಬಹುದು ಮತ್ತು ಮನೆಯಲ್ಲಿ ಶಾಂತಿ ನೆಮ್ಮದಿ ಕೂಡ ನೆಲೆಸಿರುತ್ತದೆ ನಿಮ್ಮ ಜೀವನ ಹಸನಾಗಿರುತ್ತದೆ.
ಎಷ್ಟು ಕೋಟಿ ಖರ್ಚು ಮಾಡಿದರೂ ಸಿಗದೇ ಇರುವ ಖುಷಿ ನಮ್ಮವರಿಗಾಗಿ ನೀವು ಕಳೆದಂತಹ ಕೇವಲ ಒಂದು ಗಂಟೆಯ ಸಮಯ ಕೋಟಿ ನೀಡಿದರೂ ಸಿಗದಂತಹ ಖುಷಿ ನೆಮ್ಮದಿ ಪ್ರೀತಿ ಅದರಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಸಿಕ್ಕಿರುತ್ತದೆ.
ಹಾಗಾದರೆ ನೀವು ನಿಮ್ಮ ಅರಿವಿಗಾಗಿ ಏನಾದರೂ ಮಾಡಬೇಕು ಅಂತಿದ್ದರೆ ಇಂದೇ ನಿಮ್ಮ ಒತ್ತಡದ ಜೀವನದ ನಡುವೆ ಸ್ವಲ್ಪ ಸಮಯವನ್ನು ಮಾಡಿಕೊಂಡು ನಮ್ಮವರಿಗಾಗಿ ನಿಮ್ಮವರ ಜೊತೆ ಕಳೆಯಿರಿ ಇದು ನಿಮಗೆ ಮರೆಯಲಾಗದ ಆನಂದವನ್ನು ತಂದು ನೀಡುತ್ತದೆ