ಪ್ರತಿಯೊಬ್ಬರಿಗೂ ಕೂಡ ಕೂದಲಿನ ಬಗ್ಗೆ ಕಾಳಜಿ ಇದ್ದೇ ಇರುತ್ತದೆ ಅದರಲ್ಲಿಯು ಇಂದಿನ ದಿನಗಳಲ್ಲಿ ಧೂಳು ಪ್ರದೂಷಣೆ ಮಾಲಿನ್ಯ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಓಡಾಡುವುದರಿಂದ ಇದು ಕೂದಲುಗಳನ್ನು ಡ್ಯಾಮೇಜ್ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಆದ ಕಾರಣ ವಾರಕ್ಕೊಮ್ಮೆ ಕೂದಲಿಗೆ ಮೊಟ್ಟೆಯನ್ನು ಹಚ್ಚಿಕೊಳ್ಳುವುದರಿಂದ ಏನೆಲ್ಲ ಲಾಭ ದೊರೆಯುತ್ತದೆ ಗೊತ್ತಾ, ಹಾಗಾದರೆ ಮೊಟ್ಟೆಯನ್ನು ಕೂದಲಿಗೆ ಹಚ್ಚುವುದರಿಂದ ಯಾವೆಲ್ಲ ಪ್ರಯೋಜನಗಳು ಆಗುತ್ತದೆ .
ಯಾವ ಲಾಭಗಳು ಕೂದಲಿಗೆ ದೊರೆಯುತ್ತದೆ ಅಂತ ನೋಡೋಣ ಇಂದಿನ ಮಾಹಿತಿಯಲ್ಲಿ, ನೀವು ಕೂಡ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ .ನಿಮಗೂ ಕೂಡ ಈ ಒಂದು ಟಿಪ್ ಇಷ್ಟ ಆದಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿಯನ್ನು ಹೆಚ್ಚು ಶೇರ್ ಮಾಡಿ.
ಮೊಟ್ಟೆಯನ್ನು ಕೂದಲಿಗೆ ಹಚ್ಚಿಕೊಳ್ಳುತ್ತಾರೆ ಅನ್ನೋ ವಿಚಾರ ನಮಗೆ ಗೊತ್ತಿರುತ್ತದೆ, ಆದರೆ ಕೂದಲಿಗೆ ಮೊಟ್ಟೆಯನ್ನು ಹಚ್ಚಿದಾಗ ಏನಾಗುತ್ತದೆ ಯಾವ ಬದಲಾವಣೆ ಕೂದಲಿನಲ್ಲಿ ಕಂಡುಬರುತ್ತದೆ ಹಾಗೆ ಕೂದಲಿಗೆ ಏನೆಲ್ಲ ಲಾಭಗಳು ದೊರೆಯುತ್ತದೆ ಅನ್ನುವ ವಿಚಾರ ಅಷ್ಟಾಗಿ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ.
ನಾನು ಆ ಮಾಹಿತಿಯನ್ನು ನಿಮಗೆ ಈ ದಿನ ತಿಳಿಸಿಕೊಡುತ್ತೇನೆ. ಕೆಲವರು ಕೂದಲಿಗೆ ಮೊಟ್ಟೆಯನ್ನು ಹಚ್ಚಬೇಕೆಂದರೆ ಮುಖ ಮುರಿಯುತ್ತಾರೆ ಆದರೆ ಸ್ವಲ್ಪ ಸಮಯದವರೆಗೂ ಈ ಮೊಟ್ಟೆಯ ವಾಸನೆಯನ್ನು ತಡೆದುಕೊಳ್ಳುವುದರಿಂದ ಕೂದಲ ಬೆಳವಣಿಗೆ ಉತ್ತಮವಾಗಿ ಆಗುತ್ತದೆ ಕೂದಲುದುರುವ ಸಮಸ್ಯೆ ದೂರ ಆಗುತ್ತದೆ.
ಮೊಟ್ಟೆಯ ಬಿಳಿಭಾಗವನ್ನು ಕೂದಲಿಗೆ ಹಚ್ಚುತ್ತಾ ಬಂದಲ್ಲಿ ಇದು ಕೂದಲುದುರುವ ಸಮಸ್ಯೆಯನ್ನು ದೂರ ಮಾಡುತ್ತದೆ, ಇದರಲ್ಲಿರುವ ಉತ್ತಮವಾದ ಪೋಷಕಾಂಶಗಳು ಪ್ರೊಟೀನ್ಸ್ ಕೂದಲಿಗೆ ನ್ಯೂಟ್ರಿಷನ್ ರೀತಿ ಕೆಲಸ ಮಾಡುತ್ತದೆ ಇದರಿಂದ ಕೂದಲುಗಳು ಬಲಗೊಳ್ಳುತ್ತದೆ ಆಗ ಕೂದಲು ತುಂಡಾಗುವ ಸಾಧ್ಯತೆಗಳು ಕೂಡ ಕಡಿಮೆ ಇರುತ್ತದೆ ಮತ್ತು ಕೂದಲುದುರುವ ಸಮಸ್ಯೆ ಕೂಡ ನಿಧಾನವಾಗಿ ಕಡಿಮೆಯಾಗುತ್ತದೆ.
ಮೊಟ್ಟೆಯ ಬಿಳಿ ಭಾಗದಲ್ಲಿರುವ ಪ್ರೊಟೀನ್ಸ್ ಸ್ಕಾಲ್ಪ್ ಗಳನ್ನು ಬಲಗೊಳಿಸುವುದರೊಂದಿಗೆ ಕೂದಲು ಉದುರುವ ಸಮಸ್ಯೆಯನ್ನು ದೂರ ಮಾಡುತ್ತಾ ಬರುತ್ತದೆ, ಹೀಗೆ ಕೂದಲು ಬಲಗೊಂಡಾಗ ಅದು ಉದುರುವ ಸಾಧ್ಯತೆಗಳು ಕೂಡ ಕಡಿಮೆ ಇರುತ್ತದೆ.
ನಮ್ಮ ಹೆಣ್ಣುಮಕ್ಕಳು ಕೂದಲನ್ನು ಸ್ಟ್ರೇಟ್ನಿಂಗ್ ಮಾಡಿಸಿಕೊಳ್ಳುವುದಕ್ಕೆ ಸ್ಮೂತ್ ಮತ್ತು ಶೈನಿ ಮಾಡಿಸಿಕೊಳ್ಳುವುದಕ್ಕೆ ಪಾರ್ಲರ್ಗೆ ಹೋಗಿ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ ಆದರೆ ವಾರಕ್ಕೊಮ್ಮೆ ಕೂದಲುಗಳಿಗೆ ಮೊಟ್ಟೆಯ ಬಿಳಿ ಭಾಗದಿಂದ ಹಾರೈಕೆ ಮಾಡುವುದರಿಂದ ಕೂದಲುಗಳು ನಿಧಾನವಾಗಿ ಶೈನಿ ಮತ್ತು ಸ್ಮೂತ್ ಆಗುತ್ತಾ ಬರುತ್ತದೆ ಇದರಿಂದ ಪಾರ್ಲರ್ನ ಅವಶ್ಯಕತೆಯೇ ಇರುವುದಿಲ್ಲ.
ಕೂದಲು ಕವಲೊಡೆಯುವುದು ಅಂತ ಕೇಳಿರುತ್ತೇವೆ ನಮಗೆ ಈ ಅನುಭವ ಕೂಡ ಆಗಿರುತ್ತದೆ, ಈ ರೀತಿ ಕೂದಲುಗಳು ಸ್ಪ್ಲಿಟ್ ಆಗುವುದಕ್ಕೆ ಕಾರಣವೇನು ಅಂದರೆ ಸ್ಕಾಲ್ಪ್ ಗಳು ಡ್ರೈ ಆಗುವುದರಿಂದ, ಸ್ಕ್ಯಾಲ್ಪ್ ಗಳು ಡ್ರೈ ಆದಾಗ ಕೂದಲು ಕವಲೊಡೆಯುವುದು ಸಹಜ, ಆದರೆ ಮೊಟ್ಟೆಯನ್ನು ಕೂದಲಿಗೆ ಹಚ್ಚುತ್ತಾ ಬರುವುದರಿಂದ ಈ ರೀತಿ ಕವಲು ಹೊಡೆದಿರುವ ಕೂದಲಿನ ಸಮಸ್ಯೆ ಕೂಡ ದೂರವಾಗುತ್ತದೆ.
ಕೂದಲಿಗೆ ಏನೂ ಮಾಡದೆ ಅದು ಬೆಳೆಯಬೇಕು ಅಂದರೆ ಹೇಗೆ ನಾವೇ ಉದಾಹರಣೆಗೆ ತಿನ್ನುವ ಆಹಾರದಲ್ಲಿ ಪೋಷಕಾಂಶ ಇಲ್ಲದೇ ಇರುವ ಆಹಾರವನ್ನು ಸೇವಿಸುತ್ತಾ ಬಂದಾಗ ನಮ್ಮಲ್ಲಿ ಶಕ್ತಿಯೆ ಇರುವುದಿಲ್ಲ ಅದೇ ರೀತಿಯಲ್ಲಿ ನಮ್ಮ ಕೂದಲು ಕೂಡ ನಾವು ಅದಕ್ಕೆ ಆರೈಕೆ ಮಾಡದೆ ಇದ್ದಾಗ ಅವುಗಳು ಡ್ಯಾಮೇಜ್ ಆಗುತ್ತದೆ, .
ಯಾವಾಗ ಕೂದಲಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚುತ್ತ ಅದು ಕೂದಲಿಗೆ ನರೀಶ್ ಮಾಡುತ್ತದೆ, ಇದರಿಂದ ಕೂದಲು ದಪ್ಪವಾಗಿ ಬೆಳೆಯುವುದರ ಜೊತೆಗೆ ರೇಷ್ಮೆಯಂತೆ ಕೂದಲು ಬೆಳೆಯುವುದಕ್ಕು ಸಹಾಯ ಮಾಡುತ್ತದೆ.