ಮೂಳೆಗಳಲ್ಲಿ ಏನಾದ್ರು ಈ ರೀತಿಯ ಕಟ್ ಕಟ್ ಎನ್ನುವ ಶಬ್ದ ಬರುತ್ತಿದ್ದರೆ ತಕ್ಷಣ ಈ ಪದಾರ್ಥಗಳನ್ನು ತಿನ್ನಿ ಒಂದು ವಾರದಲ್ಲೇ ನಿಮ್ಮ ಮೂಳೆಗಳ ಸಮಸ್ಯೆ ಪರಿಹಾರವಾಗುತ್ತದೆ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮೂಳೆಗಳಿಂದ ಕಟ್ ಕಟ್ ಶಬ್ದ ಬರುತ್ತಾ ಇದ್ದರೆ ಅದರಲ್ಲಿಯೂ ನಿಮಗೆ ಇನ್ನೂ ವಯಸ್ಸೇ ಆಗಿಲ್ಲ ಆದರೂ ಕೂಡ ಮೂಳೆಗಳಿಂದ ಈ ರೀತಿ ಶಬ್ದ ಬರುತ್ತಿದೆ ಅಂದರೆ, ನೀವು ಅದಕ್ಕಾಗಿ ಚಿಂತಿಸುವ ಅಗತ್ಯ ಇಲ್ಲ,ಯಾಕೆ ಅಂದರೆ ಈ ರೀತಿ ಮೂಳೆಗಳಲ್ಲಿ ಕಟ್ ಕಟ್ ಶಬ್ದ ಬರುವುದಕ್ಕೆ ಮುಖ್ಯ ಕಾರಣ ಅಂದರೆ ಮೂಳೆಗಳ ಸಂಧಿಯಲ್ಲಿ ವಾಯು ಅಂದರೆ ಗಾಳಿಯ ಗುಳ್ಳೆಗಳು ಉಂಟಾಗುವ ಕಾರಣದಿಂದಾಗಿ ಈ ರೀತಿ ಮೂಳೆಗಳಿಂದ ಕಟ್ ಕಟ್ ಎಂಬ ಶಬ್ದ ಬರುತ್ತದೆ.ಹಾಗಾದರೆ ಈ ರೀತಿ ಮೂಳೆಗಳಿಂದ ಕಟ್ ಕಟ್ ಶಬ್ದ ಬರುವುದಕ್ಕೆ ಮಾಡಬೇಕಾಗಿರುವ ಪರಿಹಾರಗಳೇನು ಮನೆಯಲ್ಲಿಯೇ ಇದಕ್ಕೆ ಏನಿದೆ ಪರಿಹಾರ ಎಂಬುದನ್ನು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ.

ಗ್ಯಾಸ್ಟ್ರಿಕ್ ಅಸಿಡಿಟಿ ಈ ವಾಯು ಸಮಸ್ಯೆಯಿಂದ ಉಂಟಾಗುವಂತಹ ತೊಂದರೆಗಳಿಗೆ ಅನಾರೋಗ್ಯ ಸಮಸ್ಯೆಗಳಿಗೆ ಮುಖ್ಯ ಪರಿಹಾರ ಯಾವುದು ಅಂದರೆ ನಾವು ಸರಿಯಾದ ಸಮಯಕ್ಕೆ ಊಟವನ್ನು ಮಾಡುವುದೇ ಪರಿಹಾರ ಹಾಗೂ ಪೌಷ್ಟಿಕ ಉಳ್ಳ ಆಹಾರವನ್ನು ಸೇವಿಸುವುದು ಪರಿಹಾರವಾಗಿರುತ್ತದೆ.ಆದರೆ ಯಾರು ತಾನೇ ಇತ್ತೀಚಿನ ದಿನಗಳಲ್ಲಿ ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತಾ ಇದ್ದರೆ ಹೊಟ್ಟೆ ತುಂಬುವಷ್ಟು ಊಟ ಮಾಡಿ ನಾಲಿಗೆಗೆ ರುಚಿ ಸಿಕ್ಕರೆ ಸಾಕು ಅದೇ ಒಂದು ಉತ್ತಮವಾದ ಆಹಾರ ಅದನ್ನೇ ನಾವು ಇನ್ನು ಮುಂದಿನ ದಿನಗಳಲ್ಲಿ ಪಾಲಿಸಿಕೊಂಡು ಹೋಗುತ್ತೇವೆ.ಆದರೆ ಇಂತಹ ಆಹಾರ ಪದ್ಧತಿಯು ನಮ್ಮ ಆರೋಗ್ಯಕ್ಕೆ ಲಾಭಗಳನ್ನು ನೀಡುವುದಿಲ್ಲ ಇದರ ಬದಲು ಇನ್ನು ನಮ್ಮನ್ನು ಅನಾರೋಗ್ಯ ಪೀಡಿತರನ್ನಾಗಿ ಮಾಡಿಸುತ್ತದೆ ಅಷ್ಟೇ.

ಆದ ಕಾರಣ ನೀವು ಅಸಿಡಿಟಿ ಸಮಸ್ಯೆ ಬಂದರೆ ಅದನ್ನು ಮೊದಲು ಪರಿಹರಿಸಿಕೊಳ್ಳಿ ಅದನ್ನು ನಿರ್ಲಕ್ಷಿಸುತ್ತಾ ಹೋದಂತೆ ನಿಮ್ಮ ಅನಾರೋಗ್ಯ ಸಮಸ್ಯೆ ಹೆಚ್ಚಾಗುವುದರ ಜೊತೆಗೆ ಬೇರೆ ರೀತಿಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆಇನ್ನು ಮಾಹಿತಿಗೆ ಬರುವುದಾದರೆ ಈ ಮೂಳೆಗಳಿಂದ ಬರುವಂತಹ ಕಟ್ ಕಟ್ ಶಬ್ದಕ್ಕೆ ಪರಿಹಾರವನ್ನು ಕೂಡ ಹೇಳ್ತೇವೆ, ಇದನ್ನು ನೀವು ಪಾಲಿಸುತ್ತಾ ಬನ್ನಿ ಸಾಕು ಕೇವಲ ಮೂರ್ನಾಲ್ಕು ದಿನಗಳಲ್ಲಿಯೆ ಇಂತಹ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ಬಿಡುತ್ತದೆ.

ಕಡಲೆಕಾಳು ಹೌದು ನೀವು ರಾತ್ರಿ ಎರಡರಿಂದ ಮೂರು ಚಮಚ ಕಡಲೆ ಕಾಳುಗಳನ್ನು ಅರ್ಧ ಕಪ್ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ನೀರನ್ನ ಮೊದಲು ಸೇವಿಸಿ ನಂತರ ಕಾಳುಗಳನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತದೆ ಮತ್ತು ಇದರಲ್ಲಿರುವ ಹೇರಳವಾದ ನಾರಿನಾಂಶ ಪ್ರೊಟೀನ್ ಮತ್ತು ಕ್ಯಾಲ್ಶಿಯಂ ಅಂಶವೂ ಮೂಳೆಗಳನ್ನು ಬಲಪಡಿಸುತ್ತದೆ.ಮೆಂತೆ ಕಾಳು ಹೌದು ನೆನೆಸಿಟ್ಟ ಮೆಂತೆಯನ್ನು ಮಾರನೆ ದಿವಸ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು, ಇದರಿಂದ ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ ಮತ್ತು ವಾಯುಯಿಂದ ಬರುವಂತಹ ಸಮಸ್ಯೆಯನ್ನು ಪರಿಹರಿಸುತ್ತದೆ, ಹಾಗೆಯೇ ಈ ಮೆಂತೆ ಕಾಳುಗಳಲ್ಲಿ ಇರುವ ಅಂಶವೂ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಲಿನಲ್ಲಿ ಅರಿಶಿಣವನ್ನು ಮಿಶ್ರಿತ ಮಾಡಿ ಕುಡಿಯಬೇಕು ಆಯುರ್ವೇದದಲ್ಲಿ ಗೋಲ್ಡನ್ ಮಿಲ್ಕ್ ಅಂತ ಕರೆಯುವ ಈ ಅರಿಶಿಣದ ಹಾಲ್ನ ರಾತ್ರಿ ಮಲಗುವ ಮುನ್ನ ಸೇವಿಸಬೇಕು ಇದರಿಂದ ಅರಿಶಿನದಲ್ಲಿ ಇರುವ ಆ್ಯಂಟಿ ಆಕ್ಸಿಡೆಂಟ್ ಗುಣವೂ ಆರೋಗ್ಯವನ್ನು ಅಭಿವೃದ್ಧಿ ಮಾಡುವುದಲ್ಲದೆ ಈ ಮೂಳೆಯಿಂದ ಬರುವಂತಹ ಕಟ್ ಕಟ್ ಶಬ್ದವನ್ನು ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.ಮೂಳೆಗಳಲ್ಲಿ ಉಂಟಾಗುತ್ತಿರುವ ತ ಕಟ್ ಕಟ್ ಶಬ್ದ ನಿವಾರಣೆಗಾಗಿ, ಈ ಒಂದು ಪರಿಹಾರವನ್ನು ಪಾಲಿಸಿ ನಿಮ್ಮ ಸಮಸ್ಯೆಗಳು ಬೇಗನೆ ನಿವಾರಣೆಯಾಗುತ್ತದೆ ಧನ್ಯವಾದ.

Leave a Reply

Your email address will not be published. Required fields are marked *