Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮೂಲವ್ಯಾಧಿಯಿಂದ ಬಳಲುತ್ತಿದ್ದೀರಾ ಹಾಗಾದರೆ ,ಒಂದು ಲೋಟ ಇದನ್ನು ಈ ರೀತಿಯಾಗಿ ಮಾಡಿಕೊಂಡು ಕುಡಿದರೆ ನಿಮಗೆ ಮೂಲವ್ಯಾಧಿಯಿಂದ ಮುಕ್ತಿ ಸಿಗುತ್ತದೆ ಮತ್ತೆ ಮೂಲವ್ಯಾಧಿ ನಿಮ್ಮನ್ನು ಜನ್ಮದಲ್ಲಿ ಕಾಡುವುದಿಲ್ಲ!!!!

ಸ್ನೇಹಿತರೆ ಈಗಿನ ಕಾಲದಲ್ಲಿ ತುಂಬಾ ಜನರು ನಾನಾ ತರದ ರೋಗಗಳಿಂದ ಬಳಲುತ್ತಿರುತ್ತಾರೆ. ಆದರೆ ಕೆಲವೊಂದು ರೋಗಗಳಿಗೆ ಇಂದಿಗೂ ಕೂಡ ಔಷಧಿಗಳು ಲಭ್ಯವಿಲ್ಲ.

ಖಾಯಿಲೆಗಳು ಮನುಷ್ಯನಿಗೆ ಹಲವಾರು ಕಾರಣಗಳಿಂದ ಬರುತ್ತವೆ. ದೇಹದ ತಾಪಮಾನ ಜಾಸ್ತಿಯಾದಾಗ ಹೊಸ ಹೊಸ ಖಾಯಿಲೆಗಳು ಉಂಟಾಗುತ್ತದೆ.ಅದರಲ್ಲಿ ಅಂತಹದೇ ಅಂದರೆ ದೇಹದ ತಾಪಮಾನ ಜಾಸ್ತಿ ಆದಾಗ ಬರುವಂತಹ ಕಾಯಿಲೆ ಎಂದರೆ ಅದು ಮೂಲವ್ಯಾಧಿ.

ಮೂಲವ್ಯಾಧಿ ಎಂಬುವ ರೋಗ ಮನುಷ್ಯನ ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಇಲ್ಲವೇ ದೇಹದ ತಾಪಮಾನ ಜಾಸ್ತಿಯಾದಾಗ ಬರುತ್ತದೆ. ಮೂಲವ್ಯಾಧಿ ಎಂದರೆ ಗುದನಾಳದ ಅಭಿದಮನಿಗಳು ದಪ್ಪವಾಗಿ ಹೊಸೆದು ಹಗ್ಗದಂತೆ ಊದಿಕೊಂಡಿರುವ ಅಂತಹ ಸ್ಥಿತಿ.

ಇದಕ್ಕೆ ಮತ್ತೊಂದು ಹೆಸರೇನು ಎಂದರೆ ಮೂಳೆರೋಗ.ಗುದನಾಳದ ಕೆಳಭಾಗದಲ್ಲಿ ಪೊರೆಯ ಅಡಿಯಲ್ಲಿರುವ ಅಭಿದಮನಿ ಗಳಿಗೆ ಅನೇಕ ಸಂದರ್ಭಗಳಲ್ಲಿ ಮಲದ್ವಾರದ ಚರ್ಮದ ಅಡಿಯಲ್ಲಿರುವ ಅಭಿದಮನಿಗಳೊಂದಿಗೆ ಸಂಪರ್ಕವಿರುತ್ತದೆ.

ಊದಿಕೊಂಡಿರುವ ಅಭಿದಮನಿಗಳಿಂದ ಸುಲಭವಾಗಿ ರಕ್ತಸ್ರಾವ ನಗುವುದರಿಂದ ಇದಕ್ಕೆ ಅಭಿಧಮನಿ ಗೊಂಚಲು ಎಂದು ಕರೆಯುತ್ತಾರೆ.ಹೌದು ಸ್ನೇಹಿತರೆ ಈ ಮೂಲವ್ಯಾಧಿಯನ್ನು ಮನೆಯಲ್ಲಿ ಸಿಗುವಂತಹ ಪದಾರ್ಥಗಳಿಂದ ಶಾಶ್ವತವಾಗಿ ಬರದಂತೆ ನೋಡಿಕೊಳ್ಳಬಹುದು.

ಇಂದಿನ ಮಾಹಿತಿಯಲ್ಲಿ ಮೂಲವ್ಯಾಧಿಗೆ ಶಾಶ್ವತ ಪರಿಹಾರ ತಿಳಿಸುತ್ತೇನೆ. ಹಿಂದಿನ ಕಾಲದಲ್ಲಿ ಹಿರಿಯರಿಗೆ ಮಾತ್ರ ಈ ಸಮಸ್ಯೆ ಕಂಡುಬರುತ್ತಿತ್ತು. ಆದರೆ ಈಗಿನ ದಿನಮಾನಗಳಲ್ಲಿ ಎಲ್ಲರಿಗೂ ಈ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ.

ಮೂಲವ್ಯಾಧಿ ಸಮಸ್ಯೆಯು ಹೇಗೆ ಶುರುವಾಗುತ್ತದೆ ಎಂದರೆ ಅಧಿಕ ಭಾರ ಎತ್ತುವುದು, ಮಲಬದ್ಧತೆ ಆಹಾರದ ಅಲರ್ಜಿ, ನಾರಿನ ಅಂಶ ಕಡಿಮೆ ಇರುವ ಆಹಾರಗಳನ್ನು ತಿನ್ನುವುದರಿಂದ,ಮತ್ತು ಹೆಚ್ಚಾಗಿ ಕುಳಿತುಕೊಂಡು ಕೆಲಸ ಮಾಡುವುದರಿಂದ ದೇಹದ ತಾಪಮಾನ ಜಾಸ್ತಿಯಾಗಿ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ.

ಸ್ನೇಹಿತರೆ ಇನ್ನೂ ಹೇಳುವ ಮನೆಮದ್ದನ್ನು ನೀವು ಸರಿಯಾಗಿ ಪಾಲಿಸಿದರೆ ಈ ಮನೆಮದ್ದಿನಿಂದ ನಿಮ್ಮ ಅಮೂಲ್ಯವಾದ ಆರರಿಂದ ಎಂಟು ಎಂಟು ದಿನದ ಒಳಗಡೆ ಕಮ್ಮಿ ಮಾಡಿಕೊಳ್ಳಬಹುದು.

ಸ್ನೇಹಿತರೆ ನಿಮ್ಮ ಮನೆ ಮದ್ದಿಗೆ ಮೊದಲು ಬೇಕಾಗಿರುವಂತಹ ನಿಂಬೆಹಣ್ಣು. ನಂತರ ಚಕ್ಕೆ ಇವೆರಡು ಮುಖ್ಯವಾಗಿ ಮನೆಮದ್ದಿಗೆ ಬೇಕಾಗಿದೆ. ಮೊದಲು ನಿಂಬೆಹಣ್ಣನ್ನು ಅರ್ಧ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ.

ಮೂಲವ್ಯಾಧಿಗೆ ಮುಖ್ಯ ಕಾರಣ ಎಂದರೆ ದೇಹದಲ್ಲಿನ ಡಿಹೈಡ್ರೇಶನ್,ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಕ್ಯಾಲ್ಸಿಯಂ ಪೊಟಾಸಿಯಂ ಸತ್ವಗಳು ಹೆಚ್ಚಾಗಿರುವುದರಿಂದ ಮೂಲವ್ಯಾಧಿಯನ್ನು ಕಮ್ಮಿ ಮಾಡುವುದರಲ್ಲಿ ನಿಂಬೆಹಣ್ಣು ಸಹಾಯಕವಾಗಿದೆ.

ನಿಂಬೆಹಣ್ಣು ಆಂಟಿಆಕ್ಸಿಡೆಂಟ್ ಆಗಿದ್ದು, ಮೂಲವ್ಯಾಧಿಗೆ ಒಳ್ಳೆಯ ಮನೆಮದ್ದಾಗಿ ಕೆಲಸ ಮಾಡುತ್ತದೆ. ಹಾಗೆಯೇ ಶರೀರದಲ್ಲಿರುವ ಅಂತಹ ಉಷ್ಣತೆಯನ್ನು ಕಡಿಮೆ ಮಾಡುವುದಕ್ಕೆ ಸಹಾಯಕವಾಗಿದೆ ನಿಂಬೆಹಣ್ಣು.

ನಂತರ ಒಂದು ಗ್ಲಾಸ್ ನೀರನ್ನು ತೆಗೆದುಕೊಳ್ಳಬೇಕು. ನಿಂತರ ನಿಂಬೆಹಣ್ಣಿನ ರಸವನ್ನು ಗ್ಲಾಸ್ ನೀರಿಗೆ ಹಿಂಡಿ ಕೊಳ್ಳಬೇಕು. ನಂತರ ಚಕ್ಕೆಯನ್ನು ಫುಲ್ ಪುಡಿಮಾಡಿಕೊಂಡು ಒಂದು ಕಾಲು ಚಮಚದಷ್ಟು ಪುಡಿಯನ್ನು ಗ್ಲಾಸ್ ನೀರಿಗೆ ಹಾಕಬೇಕು.

ಸಾಮಾನ್ಯವಾಗಿ ಚಕ್ಕೆ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಆದರೆ. ಚಕ್ಕೆಯ ಮೇಲೆ ಭಾಗದಲ್ಲಿ ಇರುವಂತಹ ಪದರಗಳಲ್ಲಿ ಅನೇಕ ಔಷಧೀಯ ಗುಣಗಳನ್ನು ಈ ಚಕ್ಕೆಯು ಹೊಂದಿದೆ. ಇದು ನಮ್ಮ ಶರೀರದಲ್ಲಿರುವ ಅಂತಹ ಬ್ಯಾಕ್ಟೀರಿಯಾಗಳನ್ನು ಹಾಗೂ ಫಂಗಸ್ ಗಳನ್ನು ಹೊಡೆದು ಓಡಿಸುವುದರಲ್ಲಿ ಸಹಕಾರಿಯಾಗಿದೆ.

ಮುಖ್ಯವಾಗಿ ಇದು ನಮ್ಮ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದು ಒಂದು ಔಷಧೀಯ ರೀತಿಯಾಗಿ ಕೆಲಸ ಮಾಡುತ್ತದೆ.ಇದು ಮುಖ್ಯವಾಗಿ ಮಲಬದ್ಧತೆ ,ಆಸಿಡಿಟಿಗೆ ಒಂದು ಒಳ್ಳೆಯ ಹೋಂ ರೆಮಿಡಿ ಆಗಿ ಕೆಲಸ ಮಾಡುತ್ತದೆ.

ಈ ನೀರನ್ನು ಅಂದರೆ ಈ ಮಿಶ್ರಣ ಮಾಡಿದಂತಹ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ನೀರು ತೆಗೆದುಕೊಳ್ಳಬೇಕು. ಹೀಗೆ ಸತತವಾಗಿ 7 ದಿನಗಳ ಕಾಲ ಈ ಮಿಶ್ರಣವನ್ನು ತೆಗೆದುಕೊಂಡರೆ ನಿಮ್ಮ ಮೂಲವ್ಯಾಧಿಗೆ ಶಾಶ್ವತವಾಗಿ ಪರಿಹಾರ ಸಿಗುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿಗೆ ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ