Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಮುಖ್ಯವಾಗಿ ಈ ಕಾಯಿಲೆಗೆ ಹಸಿ ಸಾಸಿವೆ ತಿನ್ನೋದೇ ಮದ್ದು ಅಂತೆ … ಹಾಗಾದರೆ ಆ ಕಾಯಿಲೆ ಯಾವುದು ಗೊತ್ತ .

ಹಸಿ ಸಾಸಿವೆಯನ್ನು ಜಗಿದು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿವೆ ಎಂದು ಒಮ್ಮೆ ತಿಳಿದರೆ ನೀವು ಕೂಡ ಈ ಸಾಸಿವೆಯನ್ನು ತೆಗೆದು ತಿಂದು ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಿದೆ ಇದೇನು ಕಷ್ಟಕರವಾದ ಮನೆ ಮದ್ದು ಅಲ್ಲ ನೀವು ಅಡುಗೆ ಮಾಡುವಾಗ ಸಾಸಿವೆಯನ್ನು ಬಳಸುತ್ತಿರುತ್ತೀರಿ.

ಆಗ ಸ್ವಲ್ಪವೇ ಸ್ವಲ್ಪ ಸಾಸಿವೆಯನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಂಡು ಅದನ್ನು ಹಾಗೆಯೇ ಜಗಿದು ರಸವನ್ನು ನುಂಗುವುದರಿಂದ ಸುಲಭವಾಗಿ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು .

ದಿನ ಕಳೆದಂತೆ ಜನರು ಆಯುರ್ವೇದದ ಬಗ್ಗೆ ಅಥವಾ ನಮ್ಮ ಭಾರತ ದೇಶದಲ್ಲಿರುವ ಹಲವಾರು ಮಸಾಲಾ ಪದಾರ್ಥಗಳಾಗಲಿ ಅಥವಾ ಸೊಪ್ಪುಗಳಾಗಲಿ ಇವುಗಳಲ್ಲಿರುವ ಔಷಧೀಯ ಗುಣಗಳ ಬಗ್ಗೆ ಸ್ವಲ್ಪ ಕೂಡ ಮಾಹಿತಿಯನ್ನು ತಿಳಿದಿರುವುದಿಲ್ಲ .ಅಡುಗೆಯಲ್ಲಿ ಬಳಸುವಂತಹ ಸಾಸಿವೆ ಯಾಗಲಿ ಜೀರಿಗೆ ಯಾಗಲಿ ಇನ್ನು ಚಕ್ಕೆ ಲವಂಗ ಇಂತಹ ಪದಾರ್ಥಗಳನ್ನು ಯಾಕೆ ಬಳಸುತ್ತಿದ್ದೀವಿ.

ಅಥವಾ ಇದರಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಇದು ಆರೋಗ್ಯಕ್ಕೆ ಉತ್ತಮನೊ ಇಲ್ಲವೋ ಎಂಬುದು ಮಾತ್ರ ತಿಳಿದಿರುವುದಿಲ್ಲ ಸುಮ್ಮನೆ ಅದನ್ನು ಬಳಸಬೇಕು ರುಚಿಯನ್ನು ಹೆಚ್ಚಿಸುತ್ತದೆ ಅಂತ ಮಾತ್ರ ಈ ಮಸಾಲೆ ಪದಾರ್ಥಗಳನ್ನು ಬಳಸುತ್ತಿದ್ದಾರೆ ಅಷ್ಟೇ .

ಅಡುಗೆಯಲ್ಲಿ ಬಳಸುವಂತಹ ಸಾಸಿವೆಯ ಬಗ್ಗೆ ನಾವು ನೀವು ಕೇಳಿರುತ್ತೇವೆ ಈ ಸಾಸಿವೆ ಕಾಳುಗಳು ಚಿಕ್ಕದಾಗಿದ್ದರೂ ಇದರ ಕೀರ್ತಿ ಮಾತ್ರ ದೊಡ್ಡದು ಅಂತಾನೇ ಹೇಳಬಹುದು ಯಾಕೆ ಅಂದರೆ ಸಾಸಿವೆ ಕಾಳುಗಳಲ್ಲಿ ಆರೋಗ್ಯಕರ ಪ್ರಯೋಜನಗಳು ಇವೆ ಇನ್ನು ಈ ಕಾಳುಗಳು ಇಷ್ಟು ಚಿಕ್ಕದಾಗಿದ್ದರೂ ಕೂಡ ಇದರಲ್ಲಿ ಸಾಕಷ್ಟು ಉಪಯೊಗಗಳನ್ನು ನಾವು ಕಾಣಬಹುದಾಗಿದೆ .

ಸಾಸಿವೆ ಕಾಳಿನಲ್ಲಿ ಕ್ಯಾಲ್ಸಿಯಂ ಮೆಗ್ನಿಷಿಯಂ ಐರನ್ ಪೊಟಾಷಿಯಂ ವಿಟಮಿನ್ ಬಿ11 ಇಂತಹ ಸಾಕಷ್ಟು ಪ್ರಯೋಜನಗಳ ಉಳ್ಳ ವೈಟಮಿನ್ಗಳು ಪ್ರೊಟೀನ್ಸ್ ಗಳು ಸಾಸಿವೆ ಕಾಳಿನಲ್ಲಿ ಇವೆ .

ಪ್ರತಿ ದಿನ ಸಾಸಿವೆ ಕಾಳನ್ನು ಬಾಯಿಗೆ ಹಾಕಿಕೊಂಡು ಜಗಿದು ನುಂಗುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ ಹೌದು ರಕ್ತದಲ್ಲಿ ಇರುವಂತಹ ವಿಷಕಾರಿ ಅಂಶವನ್ನು ಹೊರಹಾಕಲು ಸಾಸಿವೆ ಕಾಳು ಸಹಾಯ ಮಾಡುತ್ತದೆ .

ಮೂಳೆಗೆ ಸಂಬಂಧಿಸಿದಂತಹ ಸಮಸ್ಯೆಗಳು ಕಾಡುತ್ತಿದ್ದರೆ ಅಂತಹವರು ಪ್ರತಿದಿನ ನಿಯಮಿತವಾಗಿ ಸಾಸಿವೆ ಕಾಳುಗಳನ್ನು ಜಗಿಯುತ್ತಾ ಬಂದರೆ ದೇಹಕ್ಕೆ ಕ್ಯಾಲ್ಷಿಯಂ ಮತ್ತು ಮೆಗ್ನೀಷಿಯಂ ಅಂಶವೂ ದೊರೆಯುವುದು ನಂತರ ಈ ಮೂಳೆ ರೋಗ ಸಮಸ್ಯೆ ಬೇಗಾನೆ ನಿವಾರಣೆಗೊಳ್ಳುತ್ತದೆ .

ಇದರ ಬದಲು ಕಾಲು ನೋವು ಅಥವಾ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಸಿವೆ ಕಾಳಿನ ಎಣ್ಣೆಯನ್ನು ಕೂಡ ಬಳಸಿ ಕಾಲನ್ನು ಮಸಾಜ್ ಮಾಡಿಕೊಳ್ಳುವುದರಿಂದ ಕೂಡ ಕಾಲು ನೋವು ಮಂಡಿ ನೋವಿನ ಸಮಸ್ಯೆ ನಿವಾರಣೆಗೊಳ್ಳುವುದು .

ಹೆಣ್ಣುಮಕ್ಕಳಲ್ಲಿ ಋತುಚಕ್ರದ ಸಮಯದಲ್ಲಿ ಬರುವಂತಹ ಹೊಟ್ಟೆ ನೋವಿನ ಸಮಸ್ಯೆಯನ್ನು ಸಾಸಿವೆ ಕಾಳು ನಿವಾರಿಸುತ್ತದೆ ಹಾಗೆ ಉದರ ಸಂಬಂಧಿ ಸಮಸ್ಯೆಯನ್ನು ಕೂಡ ಇದು ನಿವಾರಿಸುವುದರ ಜೊತೆಗೆ ಋತುಸ್ರಾವದಲ್ಲಿ ಆಗುವ ಹೊಟ್ಟೆ ನೋವನ್ನು ಕೂಡ ಶಮನಗೊಳಿಸಲು ಸಾಸಿವೆ ಕಾಳು ಸಹಾಯ ಮಾಡುತ್ತದೆ .

ಇದಿಷ್ಟು ಸಾಸಿವೆ ಕಾಳುಗಳನ್ನು ಜಗಿದು ತಿನ್ನುವುದರಿಂದ ಆಗುವಂತಹ ಆರೋಗ್ಯ ಪ್ರಯೋಜನಗಳು ಇದೀಗ ಸಾಸಿವೆ ಕಾಳುಗಳನ್ನು ಹೇಗೆ ತಿನ್ನಬೇಕು ಎಂಬುದನ್ನು ತಿಳಿಯೋಣ ಈ ಸಾಸಿವೆ ಕಾಳುಗಳನ್ನು ತಿನ್ನುವುದರಿಂದ ಎಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳು ಇದೆಯೋ ಇದನ್ನು ಹೆಚ್ಚು ಸೇವನೆ ಮಾಡುವುದರಿಂದ ಅಷ್ಟೇ ಅನಾರೋಗ್ಯ ಸಮಸ್ಯೆ ಕೂಡ ಕಾಡುತ್ತದೆ .

ಆದ್ದರಿಂದ ಪ್ರತಿದಿನ ಸಾಸಿವೆ ಕಾಳುಗಳನ್ನು ಬಳಸುವಾಗ ಸ್ವಲ್ಪವೇ ಸ್ವಲ್ಪ ಸಾಸಿವೆ ಕಾಳನ್ನು ಅಗಿದು ಜಗಿದು ನುಂಗಬೇಕು ಆಗ ಈ ಉತ್ತಮ ಆರೋಗ್ಯ ಪ್ರಯೋಜನಗಳನ್ನೂ ಪಡೆದುಕೊಳ್ಳಬಹುದು .

Leave a Reply

Your email address will not be published. Required fields are marked *