Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಾವಿನ ಎಲೆಯಿಂದ ಶುಗರ್ ಕಂಟ್ರೋಲ್ ಮಾಡುವ ಸಿಂಪಲ್ ವಿಧಾನ.. ಇದು ಪ್ರತೀಯೊಬ್ಬರಿಗೂ ತಲುಪುವಂತೆ ಆಗಬೇಕು

ಮಾವಿನ ಕಾಯಿ ಮಾವಿನ ಹಣ್ಣು ಇನ್ನು ಮಾವಿನ ಎಲೆ ಈ ಎಲ್ಲವೂ ಕೂಡ ಆರೋಗ್ಯವನ್ನು ವೃದ್ಧಿಸುತ್ತದೆ ಅಂತ ಹಾಗಾದರೆ ನಿಮಗೆ ಈ ಮಾವಿನ ಎಳೆಯ ಬಗ್ಗೆ ಪ್ರಯೋಜನಗಳು ತಿಳಿದಿಲ್ಲವಾದರೆ ತಪ್ಪದೇ ನಾವು ತಿಳಿಸುವಂತಹ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ

ಆ ನಂತರ ನಿಮಗೆ ತಿಳಿಯುತ್ತದೆ ಈ ಮಾವಿನ ಎಲೆಯಲ್ಲಿ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಅಡಗಿವೆ ಎಂದು ನೀವು ತಿಳಿಯದಂತಹ ಈ ಉಪಯುಕ್ತ ಮಾಹಿತಿ ನಿಜಕ್ಕೂ ನಿಮಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ .

ಹಣ್ಣುಗಳ ರಾಜ ಅಂತಾನೇ ಕರೆಯಲಾಗುತ್ತದೆ ಮಾವಿನ ಹಣ್ಣನ್ನು ಇನ್ನು ಈ ಮಾವಿನ ಕಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ ಮಾವಿನಕಾಯಿಯಿಂದ ಮಾಡಿದ ಚಟ್ನಿ ಮಾವಿನ ಕಾಯಿಯ ಉಪ್ಪಿನ ಕಾಯಿ ಎಲ್ಲವೂ ಕೂಡ ಬಾಯಿಯಲ್ಲಿ ನೀರನ್ನು ತರಿಸುತ್ತದೆ .

ಮಾವಿನ ಹಣ್ಣು ಅಥವಾ ಮಾವಿನ ಕಾಯಿ ಸೀಸನ್ ಆಗಿದ್ದರೂ ಕೂಡ ಈ ಮಾವಿನ ಹಣ್ಣಿನ ಸೀಸನ್ ಬಂದರೆ ಸಾಕು ಮಾವಿನ ಜಾತ್ರೆಯೇ ನಡೆಯುತ್ತದೆ ಎನ್ನುವ ಜನರು ಮಾವಿನ ಹಣ್ಣನ್ನು ತಿನ್ನಲು ಮುಗಿ ಬೀಳುತ್ತಾರೆ .ಮಾವಿನ ಹಣ್ಣನ್ನು ತಿನ್ನುವುದರಿಂದ ನಾನಾ ತರಹದ ಪ್ರಯೋಜನಗಳಿವೆ ಆದರೆ ಮಾವಿನ ಎಲೆಯಿಂದ ಏನೆಲ್ಲ ಪ್ರಯೋಜನ ಇದೆ ಅನ್ನೋದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ ಮಾವಿನ ಎಲೆ ಮಧುಮೇಹ ಯಿಂದ ಬಳಲುತ್ತಿರುವಂತಹ ವ್ಯಕ್ತಿಗಳಿಗೆ ಒಂದು ವರ ಅಂತಾನೇ ಹೇಳಿದರೆ ತಪ್ಪಾಗಲಾರದು .

ಹೌದು ಸ್ನೇಹಿತರೇ ಈ ಮಾವಿನ ಎಲೆಯನ್ನು ಸರಿಯಾದ ರೂಪದಲ್ಲಿ ಬಳಸಿದರೆ ಮಧುಮೇಹದಂತಹ ಸಮಸ್ಯೆಯನ್ನೇ ಪರಿಹರಿಸಿಕೊಳ್ಳಬಹುದಾಗಿದೆ ಅದು ಹೇಗೆ ಅಂತ ಹೇಳುವುದಾದರೆ ಈ ಎಲೆಯ ಪುಡಿಯನ್ನು ಸೇವಿಸುವುದರಿಂದ .

ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ನಂತರ ನೀರಿಗೆ ಬೆರೆಸಿ ಕುಡಿಯುವುದರಿಂದ ರಕ್ತದಲ್ಲಿ ಇರುವಂತಹ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರುತ್ತದೆ .

ಸ್ನಾನ ಮಾಡುವ ನೀರಿಗೆ ಈ ಎಲೆಯ ಪುಡಿಯನ್ನು ಬೆರೆಸಿ ಸ್ನಾನ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆ ದೂರವಾಗುತ್ತದೆ ಹಾಗೂ ಹೀಗೆ ಮಾವಿನ ಎಲೆಯ ಪುಡಿಯನ್ನು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮ ರೋಗ ಸಮಸ್ಯೆ ಕೂಡ ಕಡಿಮೆಯಾಗುತ್ತದೆ .

ಯಾರು ಬಿಕ್ಕಳಿಕೆಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಏನೇ ಮಾಡಿದರೂ ಈ ಬಿಕ್ಕಳಿಕೆ ಕಡಿಮೆಯಾಗುತ್ತಿಲ್ಲ ಅನ್ನುವುದಾದರೆ ಈ ಮಾವಿನ ಎಲೆಗಳನ್ನು ತೆಗೆದುಕೊಂಡು ಸುಮಾರು ಹತ್ತು ಎಲೆಗಳನ್ನು ನೀರಿನಲ್ಲಿ ಕುದಿಸಿ ಅದನ್ನು ಒಂದು ಗ್ಲಾಸ್ ಗೆ ಶೋಧಿಸಿ ಬಾಯನ್ನು ಮುಕ್ಕಳಿಸುವುದರಿಂದ ಬಿಕ್ಕಳಿಕೆ ಸಮಸ್ಯೆ ಬೇಗನೆ ಪರಿಹಾರಗೊಳ್ಳುತ್ತದೆ .

ಮಾವಿನ ಎಲೆಯ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಅಸ್ತಮಾ ಸಮಸ್ಯೆಯಿಂದ ನೆಮ್ಮದಿಯನ್ನು ಪಡೆದುಕೊಳ್ಳಬಹುದಾಗಿದೆ ಇನ್ನು ಈ ಎಲೆಯ ಕಷಾಯವನ್ನು ಮಾಡಿ ಕುಡಿಯುವುದರಿಂದ ಕೂಡ ಅಸ್ತಮಾ ಸಮಸ್ಯೆಯನ್ನು ದೂರವಿಡಬಹುದು .

ಹೀಗೆ ನಾನಾ ತರಹದ ಆರೋಗ್ಯ ಪ್ರಯೋಜನಗಳಿರುವ ಮಾವಿನ ಎಲೆಯ ಬಳಕೆಯನ್ನು ನೀವು ಕೂಡ ಮಾಡಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ .

ಇನ್ನು ಮಾವಿನ ಎಲೆಗಳಲ್ಲಿ ಔಷಧೀಯ ಗುಣ ಇರುವ ಕಾರಣದಿಂದಾಗಿ ಇದನ್ನು ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ತೋರಣ ಮಾಡಿ ಕಟ್ಟಲಾಗುತ್ತದೆ ಹೀಗೆ ಮಾವಿನ ಸೊಪ್ಪನ್ನು ಮನೆಗೆ ಹಬ್ಬದ ಸಮಯದಲ್ಲಿ ತೋರಣ ಮಾಡಿ ಕಟ್ಟುವುದರಿಂದ ಹಬ್ಬದ ಸಮಯದಲ್ಲಿ ಮನೆಯಲ್ಲಿ ಹೆಚ್ಚು ಸದಸ್ಯರು ಇರುತ್ತಾರೆ ಆಗ ಮನೆಗೆ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ ಈ ಮಾವಿನ ಎಲೆ .

Leave a Reply

Your email address will not be published. Required fields are marked *