ಮಾಟ ಮಂತ್ರದಿಂದ ಹೊರಗೆ ಬರಬೇಕು ಎಂದರೆ ಉಪ್ಪಿನಿಂದ ಹೀಗೆ ಮಾಡಿ ಸಾಕು ಶತ್ರುಗಳು ಎಷ್ಟೇ ಮಾಟ ಮಂತ್ರ ಮಾಡಿಸಿದ್ರೂ ನಿಮಗೆ ತಾಗಲ್ಲ …!!!

114

ನಮಸ್ಕಾರ ಸ್ನೇಹಿತರೇ ,ಮನುಷ್ಯನ ಬುದ್ದಿ ಒಂದಲ್ಲ ಒಂದು ಸಮಯಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ .ಈ ಸಮಾಜದಲ್ಲಿ ಹೇಗೆ ಎಂದರೆ ಒಬ್ಬರ ಏಳಿಗೆಯನ್ನು ಇನ್ನೊಬ್ಬರು ಸಹಿಸುವುದಿಲ್ಲ .ಹಾಗಾಗಿ ಒಬ್ಬರ ಏಳಿಗೆಯನ್ನು ಸಹಿಸದೆ ಕೆಲವರು ಮಾಟ ಮಂತ್ರಗಳ ಮೊರೆ ಹೋಗುತ್ತಾರೆ . ಈ ರೀತಿ ಏನಾದ್ರು ನಿಮಗೆ ಯಾರಾದ್ರೂ ಮಾಟ ಮಂತ್ರ ಮಾಡಿಸಿದ್ದರೆ ಅದನ್ನು ಕೇವಲ ಉಪ್ಪಿನಿಂದ ಪರಿಹಾರ ಮಾಡಿಕೊಳ್ಳಬಹುದು . ಹೇಗೆ ಎನ್ನುವುದನ್ನು ಸಂಪೂರ್ಣವಾಗಿ ಈ ಮಾಹಿತಿಯಲ್ಲಿ ತಿಳಿದಿಕೊಳ್ಳೋಣ .ನಿಮಗೆಲ್ಲರಿಗೂ ನಾನು ಈ ದಿನದ ಮಾಹಿತಿಯಲ್ಲಿ ಒಂದು ವಿಶೇಷವಾದ ಮಾಹಿತಿಯನ್ನು ಉಪಯುಕ್ತವಾದ ವಿಚಾರವನ್ನು ತಿಳಿಸಿಕೊಡುತ್ತೇನೆ, ಅದೇನೆಂದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು ಕೂಡ ಬಲಿಯಾಗುತ್ತಿರುವಂತಹ ಮಾಟ ಮಂತ್ರಗಳಿಗೆ ಒಳಗಾಗದೆ ಇರುವ ಹಾಗೆ, ಅದರ ಪ್ರಭಾವ ನಮ್ಮ ಮೇಲೆ ಆಗದೇ ಇರುವ ಹಾಗೆ ಮಾಡಬೇಕಾದರೆ ಏನನ್ನು ಮಾಡಬೇಕು .

ಈ ಮಾಟ ಮಂತ್ರ ಪ್ರಯೋಗವಾಗಿ ಇದ್ದರೆ ಅದಕ್ಕಾಗಿ ಯಾವ ಪರಿಹಾರವನ್ನು ಕೈಗೊಳ್ಳಬೇಕು ಅನ್ನುವುದರ ಜೊತೆಗೆ ಮನೆಯಲ್ಲಿ ಹೆಣ್ಣು ಮಕ್ಕಳು ಯಾವ ಸುಲಭ ಪರಿಹಾರವನ್ನು, ಈ ಒಂದು ವಿಚಾರದ ವಿರುದ್ಧವಾಗಿ ಕೈಗೊಳ್ಳಬಹುದು ಎಂಬುದನ್ನು ತಿಳಿಸಿಕೊಡುತ್ತೇನೆ ತಪ್ಪದ ಸಂಪೂರ್ಣ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಶೇರ್ ಮಾಡಿ.ಸಮಾಜದಲ್ಲಿ ಅನೇಕ ಜನರು ಒಬ್ಬರು ಬೆಳೆಯುತ್ತಿದ್ದಾರೆ ಎಂದರೆ ಅವರ ವಿರುದ್ಧವಾಗಿ ಹೊಟ್ಟೆಕಿಚ್ಚು ಪಡುವವರು ಹೆಚ್ಚಾಗಿಯೇ ಇರುತ್ತಾರೆ ಒಬ್ಬರು ಬೆಳೆಯುತ್ತಿದ್ದಾರೆ ಅಂದರೆ ಅದನ್ನು ಕಂಡು ಖುಷಿ ಪಡುವವರಿಗೆಂದೇ ಹಿಂದಿಯಲ್ಲಿ ಶಾಪ ಹಾಕುವವರೇ ಹೆಚ್ಚು ಜನ ಇರುತ್ತಾರೆ, ಇನ್ನು ಕೆಲವರಂತೂ ಒಬ್ಬರ ಏಳಿಗೆಯನ್ನು ಕಂಡು, ಅದನ್ನು ಸಹಿಸದೇ ಮಾಟ ಮಂತ್ರ ಪ್ರಯೋಗಗಳಿಗೆ ಮುಂದಾಗಿ ಬಿಡುತ್ತಾರೆ.

ಕೆಲವರು ಹಣಕ್ಕಾಗಿ ಮಾಟ ಮಂತ್ರ ಪ್ರಯೋಗದ ಮೊರೆ ಹೋಗುತ್ತಾರೆ ಇನ್ನು ಕೆಲವರು ಆಸ್ತಿ ಅಂತಸ್ತಿಗಾಗಿ ಇನ್ನು ಕೆಲವರು ಹೆಣ್ಣಿಗಾಗಿ ಹೀಗೆ ಅನೇಕ ವಿಚಾರಗಳಿಗಾಗಿ ಮಾಟ ಮಂತ್ರಕ್ಕೆ ಮೊರೆ ಹೋಗುವ ಜನರು ಇದರಲ್ಲಿ ಇತ್ತೀಚಿನದಿನಗಳಲ್ಲಿ ವಿದ್ಯಾವಂತರು ಕೂಡ ಈ ಒಂದು ದಾರಿಯನ್ನು ಹಿಡಿದಿದ್ದಾರೆ, ಇಂತಹ ಒಂದು ಸಮಸ್ಯೆ ಎದುರಾದಾಗ ಅದನ್ನು ಸುಲಭವಾಗಿ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಈ ಮಾಹಿತಿಯಲ್ಲಿ.ಮಾಟ ಮಂತ್ರ ಪ್ರಯೋಗವಾದರೆ ಪ್ರತಿದಿನ ಸ್ನಾನ ಮಾಡುವಂತಹ ನೀರಿಗೆ ಒಂದೇ ಒಂದು ಹರಳಿನ ಉಪ್ಪನ್ನು ಅಂದರೆ ಕಲ್ಲು ಉಪ್ಪನ್ನು ಬೆರೆಸಿ ಆ ನೀರಿನಲ್ಲಿ ಸ್ನಾನವನ್ನು ಮಾಡಬೇಕು, ಈ ರೀತಿ ಕಲ್ಲುಪ್ಪನ್ನು ನೀರಿಗೆ ಬೆರೆಸಿ ಸ್ನಾನವನ್ನು ಮಾಡುವುದರಿಂದ ನಿಮ್ಮ ಮೇಲೆ ಆದಂತಹ ಮಾಟ ಮಂತ್ರ ಪ್ರಯೋಗಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ, ಇಲ್ಲವಾದರೆ ನೀವು ಪ್ರತಿದಿನ ಸ್ನಾನ ಮಾಡುವಂತಹ ನೀರಿಗೆ ಒಂದು ಹರಳು ಪನ್ನ ಹಾಕಿ ಸ್ನಾನ ಮಾಡುವುದರಿಂದ ಕೂಡ ನಿಮ್ಮ ಮೇಲೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳ ಪ್ರಭಾವ ಆಗುವುದಿಲ್ಲ ಅಂತ ಕೂಡ ಹೇಳಲಾಗುತ್ತದೆ.

ಇದು ಒಂದು ಪರಿಹಾರವಾದರೆ ನೀವು ಮಾಡಬಹುದಾದ ಮತ್ತೊಂದು ಪರಿಹಾರವೆಂದರೆ ಮನೆಗೆ ಮಾಟ ಮಂತ್ರ ಪ್ರಯೋಗವಾಗಿ ಇದ್ದರೆ ಅಥವಾ ಇನ್ನು ಮುಂದಿನ ದಿನಗಳಲ್ಲಿ ಇಂತಹ ಒಂದು ತೊಂದರೆ ಎದುರಾಗಬಾರದೆಂದರೆ, ಮನೆಯ ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ  ಕೂಡಲೇ ಯಾರ ಬಳಿಯೂ ಮಾತನಾಡದೆ ಒಂದು ಪರಿಹಾರವನ್ನು ಮಾಡಬೇಕೋ ಆ ಒಂದು ಕೆಲಸವೇನು ಅಂದರೆ ಕಲ್ಲುಪ್ಪನ್ನು ಒಂದು ಹಿಡಿ ತೆಗೆದುಕೊಂಡು ಸಿಂಹ ದ್ವಾರದ ಮುಂದೆ ನಿಂತು ಮನೆಗೆ ದೃಷ್ಟಿಯನ್ನು ತೆಗೆದು ಯಾರು ಓಡಾಡದೇ ಇರುವಂತಹ ಜಾಗದಲ್ಲಿ ಅದನ್ನು ಹಾಕಬೇಕು.

ಈ ರೀತಿಯ ಪರಿಹಾರವನ್ನು ಪ್ರತಿದಿನ ಮಾಡುವುದಕ್ಕೆ ಸಾಧ್ಯವಾಗದೇ ಇದ್ದರೂ ವಾರದಲ್ಲಿ ಮೂರು ಅಥವಾ ನಾಲ್ಕು ದಿನಗಳಾದರೂ ಮಾಡುವುದರಿಂದ, ಮನೆಗೆ ಯಾವ ಕೆಟ್ಟ ಶಕ್ತಿಗಳು ಕೂಡ ತಗುಲುವುದಿಲ್ಲ ಮತ್ತು ಆ ಮನೆಯ ಮೇಲೆ ಆಗಿರುವಂತಹ ಮಾಟ ಮಂತ್ರಗಳ ಪ್ರಯೋಗವೂ ಕೂಡ ಕಡಿಮೆಯಾಗುತ್ತಾ ಬರುತ್ತದೆ. ಈ ಒಂದು ಪರಿಹಾರವನ್ನು ಸುಲಭ ಪರಿಹಾರವನ್ನು ಮಾಡಿ ಕೆಟ್ಟ ಶಕ್ತಿಗಳ ಪ್ರಭಾವವನ್ನು ತೊಳೆದು ಹಾಕಿ .ನೋಡಿದ್ರಲ್ಲಾ ಸ್ನೇಹಿತರೇ, ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ಕಾಮೆಂಟ್ ಮೂಲಕ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here