ಮಹಾ ಪವಾಡ ಮಾಡುವಂತಹ ವೈಷ್ಣವಿ ದೇವಿ ಈಗ ಕರ್ನಾಟಕಕ್ಕೆ ಬಂದಿದ್ದಾರಂತೆ ಒಮ್ಮೆ ಓದಿ

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಾವು ಕರೆಯುವ ವೈಷ್ಣವಿ ದೇವಿ, ತ್ರಿಕೂಟ, ಮಾತಾ ರಾಣಿ ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಅಂತಹ ಹಾಗೂ ಮಹಾ ಪವಾಡವನ್ನು ಮಾಡುವಂತಹ ವೈಷ್ಣವಿ ದೇವಿ ಇರುವುದು ಪ್ರಸ್ತುತ ಜಮ್ಮು-ಕಾಶ್ಮೀರದ ತ್ರಿಕೂಟ ಪರ್ವತ  ಶ್ರೇಣಿಗಳಲ್ಲಿ. ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಇಡಿ ಉತ್ತರ ಪ್ರದೇಶವು ಈ ಮಾತೆಯನ್ನು ತುಂಬಾ ಪೂಜೆ ಮಾಡುವುದು. ದೇಶದಲ್ಲಿ ಅನೇಕ ಭಕ್ತರು ಈ ವೈಷ್ಣವಿ ದೇವಿಗೆ ಪೂಜೆ ಮಾಡುತ್ತಾರೆ ಹಾಗೆ ಇಲ್ಲಿಗೆ ಬಂದು ಹೋಗುತ್ತಾರೆ.

ಜಮ್ಮು-ಕಾಶ್ಮೀರದಲ್ಲಿ ಇರುವಂತಹ ಈ ವೈಷ್ಣವಿ ದೇವಿ ಮಂದಿರ ತುಂಬಾ  ಹಳೆಯದಾಗಿದ್ದು. ಈ ವೈಷ್ಣವಿ ದೇವಿಯ ಮಾತ್ಮ ಏನಪ್ಪಾ ಅಂದರೆ ಮಹಾಕಾಳಿ, ಲಕ್ಷ್ಮಿ ಸರಸ್ವತಿ ಹಾಗೂ ದುರ್ಗಾದೇವಿಯ ಒಂದೇ ರೂಪವನ್ನು ಹೊಂದು ವೈಷ್ಣವಿ ದೇವಿ ಆಗಿ ಇಲ್ಲಿ ನೆಲೆಸಿದ್ದಾಳೆ. ಈ ದೇವಿಯನ್ನು ನೋಡಲು ಹಲವಾರು ಕಡೆಯಿಂದ ಭಕ್ತರು ಬರುತ್ತಾರೆ ಅಲ್ಲಿ  ಬೀಳುವಂತಹ ಹಿಮಪಾತವನ್ನು ಅಂಜದೆ ಅಳುಕದೆ ಈ ದೇವಿಯನ್ನು ನೋಡಲು ಸಾವಿರಾರು ಜನರು ದೇಶದ ಮೂಲೆ ಮೂಲೆಯಿಂದ ಬರುತ್ತಾರೆ. ಆದರೆ ಈ ಸ್ಥಳವನ್ನು ನೀವು ತಲುಪಬೇಕಾದರೆ ಸಾವಿರಾರು ರುಪಾಯಿ ಹಣವನ್ನು ಹರಿಸಬೇಕಾಗುತ್ತದೆ. ಹಾಗೆಯೇ ವೃದ್ಧರು ಹಾಗೂ ಒಂದು ಚಿಕ್ಕ ಚಿಕ್ಕ ಮಕ್ಕಳು ಇಲ್ಲಿಗೆ ಬರಲು ತುಂಬಾ ಕಷ್ಟವಾಗುತ್ತದೆ. ಇನ್ನು ಮುಂದೆ ನೀವು ವೈಷ್ಣವಿ ದೇವಿಯನ್ನು ನೋಡಲು ಉತ್ತರ ಭಾರತಕ್ಕೆ ಹೋಗಿ ಚಳಿಯಲ್ಲಿ ನಡೆದು ಜಮ್ಮು-ಕಾಶ್ಮೀರವನ್ನು  ತಲುಪುವ ಮುನ್ನ ನಮ್ಮದೇ ರಾಜ್ಯದಲ್ಲಿ ಇರುವ ದೇವಿಯನ್ನು ಸಹ ದರ್ಶನ ಭಾಗ್ಯ ಪಡೆಯಿರಿ. ದಕ್ಷಿಣ ಭಾರತದ ಅತಿ ದೊಡ್ಡ ವೈಷ್ಣವಿ ಮಂದಿರವನ್ನು ಸದ್ಯಕ್ಕೆ ಕರ್ನಾಟಕದಲ್ಲಿ ಇದೆ. ಅದು ಎನ್ನುವ ವಿಷಯಕ್ಕೆ ಮುಂದೆ ಓದಿ.

ಕರ್ನಾಟಕದ ಗುಲ್ಬರ್ಗದಲ್ಲಿ ವೈಷ್ಣವಿ ದೇವಿಯ ಮಂದಿರವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ದೇವಿಯ ಮಂದಿರವನ್ನು  ಕಟ್ಟಿಸುತ್ತಿರುವ ಅಂತಹ ಜಾಗದಲ್ಲಿ ಜಮ್ಮುವಿನ ವೈಷ್ಣವಿ ದೇವಿ ಇರುವಂತಹ ಸ್ಥಳ ಹಾಗೆ ಇದು ಕೂಡ ಇದೆ. ಇದಕ್ಕೆ ನೂರಾರು ಕೋಟೆಯನ್ನು ವೆಚ್ಚ ಮಾಡಿ ಈ ದೇವಿಯ ದೇವಸ್ಥಾನವನ್ನು ಕಟ್ಟೆಸಲಾಗುತ್ತಿದೆ. ಈ ದೇವಿಯನ್ನು ಜಮ್ಮು-ಕಾಶ್ಮೀರದಲ್ಲಿ ಹೇಗೆ ಪೂಜಿಸುತ್ತಾರೋ ಇಲ್ಲಿ ಕೂಡ ಅಮ್ಮನನ್ನು ಹಾಗೆ ಪೂಜಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಕೆಲವರು ಈ ದೇವಸ್ಥಾನ ಕಟ್ಟುವುದಕ್ಕೆ ಆಕ್ಷೇಪ ಪಡಿಸಿದ್ದಾರೆ. ಏಕೆಂದರೆ ದೇವಸ್ಥಾನವನ್ನು ಕೃತಕವಾಗಿನಿರ್ಮಿಸುವುದರಿಂದ ಅಲ್ಲಿ ಭಕ್ತಿ ಎನ್ನುವುದು ಇರುವುದಿಲ್ಲ ಎನ್ನುವುದು ಕೆಲವರ ವಾದ. ಹಾಗೆಯೇ ನಮ್ಮ ಕರ್ನಾಟಕದಲ್ಲಿ  ಪುರಾತನ ದೇವಸ್ಥಾನಗಳು ಹಲವಾರು ಇವೆ ಅವುಗಳನ್ನು ಜೀರ್ಣೋದ್ಧಾರ ಮಾಡಿ ಬೆಳೆಸುವುದು ಮುಖ್ಯ ಅನ್ನುವುದು ಕೆಲವರ ವಾದ ಹಾಗೂ ನನ್ನ ವಾದ ಕೂಡ.  ನಿಮ್ಮ ವಾದ ಏನು ಎಂದು ಕಾಮೆಂಟ್ ಗಳ ಮುಖಾಂತರ ತಿಳಿಸಿಕೊಡಿ.

Leave a Reply

Your email address will not be published. Required fields are marked *